ಬಿಡುಗಡೆಯ ಹಿಂದಿನ ದಿನವೇ ಬ್ಲಾಕ್​ಬೆರಿ ಕೀ2 ಚಿತ್ರ ಲೀಕ್​!


Updated:June 6, 2018, 5:28 PM IST
ಬಿಡುಗಡೆಯ ಹಿಂದಿನ ದಿನವೇ ಬ್ಲಾಕ್​ಬೆರಿ ಕೀ2 ಚಿತ್ರ ಲೀಕ್​!

Updated: June 6, 2018, 5:28 PM IST
ನ್ಯೂಯಾರ್ಕ್​: ಬ್ಲಾಕ್​ಬೆರಿ ಸಂಸ್ಥೆಯ ಸ್ಮಾರ್ಟ್​ಫೋನ್​ ಭಾರತದಲ್ಲಿ ಹೆಚ್ಚು ಪ್ರಚಾರದಲ್ಲಿ ಇರದೇ ಇರಬಹುದು ಆದರೆ ಹೊರ ದೇಶದಲ್ಲಿ ಇನ್ನೂ ತನ್ನ ಪ್ರಾಬಲ್ಯವನ್ನು ಕಾಪಾಡಿಕೊಂಡು ಬಂದಿದೆ. ಇದೀಗ ತನ್ನ ನೂತನ ಮೊಬೈಲ್​ ಕೀ2ವ​ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದ ಬೆನ್ನಲ್ಲೇ ಆನ್​ಲೈನ್​ನಲ್ಲಿ ಇದರ ಚಿತ್ರಗಳು ವೈರಲ್​ ಆಗಿದೆ.

ನಾಳೆ (ಜೂ.7)ರಂದು ಕೀ2​ ಮೊಬೈಲ್​ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪನಿ ಸಿದ್ಧತೆ ನಡೆಸಿತ್ತು, ಆದರೆ ಇದರ ಬೆನ್ನಲ್ಲೇ ಲೀಕ್​ ಮಾಂತ್ರಿಕ ಎಂದೇ ಖ್ಯಾತಿ ಪಡೆದಿರುವ ಇವಾನ್​ ಬ್ಲಾಸ್​ ಮೊಬೈಲ್​ನ ಹಿಂಬದಿ ಮತ್ತು ಸಂಪೂರ್ಣ ಚಿತ್ರಣವನ್ನು ಟ್ವಿಟರ್​ನಲ್ಲಿ ಲೀಕ್​ ಮಾಡಿದ್ದಾರೆ. ಮೆಟಲ್​ ಫ್ರೇಮ್​ ಒಳಗೊಂಡ ಕೀ2 ಮೊಬೈಲ್​ ನಿರೀಕ್ಷೆಯಂತೆ ಡ್ಯುಯಲ್​ ಕ್ಯಾಮೆರಾ ಹೊಂದಿದೆ.ಕಳೆದ ವರ್ಷ ಬಿಡುಗಡೆಯಾಗಿದ್ದ ಕೀಒನ್​ ಮೊಬೈಲ್​ನಂತೆಯೇ ಡಿಸೈನ್​ ಹೊಂದಿರುವ ಈ ಮೊಬೈಲ್​ನಲ್ಲಿ ಹೇಳುವಂತಹ ದೊಡ್ಡಮಟ್ಟದ ಬದಲಾವಣೆಯನ್ನು ಮಾಡಲಾಗಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಚಿತ್ರದಲ್ಲಿ ಆಂತರಿಕ ವೈಶಿಷ್ಟ್ಯಗಳ ಕುರಿತು ಯಾವುದೇ ಮಾಹಿತಿಯನ್ನು ಸ್ಪಷ್ಟಪಡಿಸಿಲ್ಲ.

ಬಲ್ಲ ಮೂಲಗಳ ಪ್ರಕಾರ ಮತ್ತು ಆ್ಯಂಡ್ರಾಯ್ಡ್​ ಪೊಲೀಸ್​ ವರದಿ ಪ್ರಕಾರ ಈ ಮೊಬೈಲ್​ ಸ್ನ್ಯಾಪ್​ ಡ್ರಾಗನ್​ 660 ಚಿಪ್​ಸೆಟ್​ ಹೊಂದಿದ್ದು, 6GB RAM ಮೆಮೊರಿ ವ್ಯವಸ್ಥೆಯಿದೆ ಎಂದು ಹೇಳಲಾಗಿದೆ.
First published:June 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...