Smartphones: ಈ ಸ್ಮಾರ್ಟ್​ಫೋನ್​ಗಳು ಜನವರಿ 4ರಿಂದ ಕಾರ್ಯನಿರ್ವಹಿಸುದಿಲ್ಲ! ಮುಂದೇನು ಗತಿ?

BlackBerry: ಕಂಪನಿಯು ಈಗ ಬ್ಲ್ಯಾಕ್‌ಬೆರಿ ಓಎಸ್, 7.1 ಓಎಸ್, ಪ್ಲೇಬುಕ್ ಓಎಸ್ 2.1 ಸರಣಿ ಮತ್ತು ಬ್ಲ್ಯಾಕ್‌ಬೆರಿ 10 ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಬೆಂಬಲವನ್ನು ನಿಲ್ಲಿಸಲಿದೆ ಎಂದು ಕಂಪನಿಯು ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ.

ಸ್ಮಾರ್ಟ್​ಫೋನ್

ಸ್ಮಾರ್ಟ್​ಫೋನ್

  • Share this:
    ಒಂದು ಕಾಲದಲ್ಲಿ ಬ್ಲ್ಯಾಕ್‌ಬೆರಿ (BlackBerry) ಸ್ಮಾರ್ಟ್​ಫೋನ್ (Smartphone)​ ಭಾರಿ ಜನಪ್ರಿಯತೆ ಪಡೆದಿತ್ತು. 2000ರ ದಶಕದ ಆರಂಭದಲ್ಲಿ ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ಗಳ ಜನರ ಬೇಡಿಕೆಯ ಮೂಲಕ ಮಾರುಕಟ್ಟೆಯಲ್ಲಿ (Market) ತನ್ನದೇ ಆದ ಸ್ಥಾನ ಪಡೆದಿತ್ತು. ಆದರೆ ಆ ಬಳಿಕ ಮಾರುಕಟ್ಟೆ ಪೈಪೋಟಿ ಮತ್ತು ವಿವಿಧ ಕಂಪನಿಗಳ ಸ್ಮಾರ್ಟ್​ಫೋನ್​ಗಳ ಎದುರು ಬ್ಲ್ಯಾಕ್‌ಬೆರಿ ಕೊಂಚ ಹಿಂದೆ ಉಳಿಯಿತು. ಆದರೂ ಕಂಪನಿಯು ಇಲ್ಲಿಯವರೆಗೆ ಬ್ಲ್ಯಾಕ್‌ಬೆರಿ ಹಳೆಯ ಸ್ಮಾರ್ಟ್‌ಫೋನ್‌ಗೆ ಬೆಂಬಲವನ್ನು ನೀಡುತ್ತಾ ಬಂದಿದೆ. ಆದರೀಗ ಹಳೆಯ ಸ್ಮಾರ್ಟ್‌ಫೋನ್‌ನಲ್ಲಿ (Old Smartphone) ಬೆಂಬಲವನ್ನು ನಿಲ್ಲಿಸಲು ಮುಂದಾಗಿದೆ. ಅಂದಹಾಗೆಯೇ ಹಳೆಯ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುವ ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ.

    ಹಳೆಯ ಮಾದರಿಗಳಗೆ ಬೆಂಬಲ ನೀಡದ ಬ್ಲ್ಯಾಕ್‌ಬೆರಿ:

    ಕಂಪನಿಯು ಈಗ ಬ್ಲ್ಯಾಕ್‌ಬೆರಿ ಓಎಸ್, 7.1 ಓಎಸ್, ಪ್ಲೇಬುಕ್ ಓಎಸ್ 2.1 ಸರಣಿ ಮತ್ತು ಬ್ಲ್ಯಾಕ್‌ಬೆರಿ 10 ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಬೆಂಬಲವನ್ನು ನಿಲ್ಲಿಸಲಿದೆ ಎಂದು ಕಂಪನಿಯು ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ಕಂಪನಿಯು ಇವುಗಳನ್ನು ಬಳಸುವ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ಸಾಫ್ಟ್‌ವೇರ್‌ಗಳಿಗೆ ಅಪ್‌ಡೇಟ್ ಮಾಡುವುದನ್ನು ನಿಲ್ಲಿಸುತ್ತಿದೆ ಎಂದಿದೆ.

    ಜನವರಿಯಿಂದ ಕಾರ್ಯ ಸ್ಥಗಿತ

    ಆದರೆ ಈ ಸಾಧನಗಳ ವಾಹಕ ಅಥವಾ ವೈ-ಫೈ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿನ ಕರೆಗಳು, ಸೆಲ್ಯುಲಾರ್ ಡೇಟಾ, SMS ಮತ್ತು ತುರ್ತು ಕರೆಗಳಂತಹ ಮೂಲಭೂತ ಕಾರ್ಯಗಳನ್ನು ಬಳಸಲು ಸಾಧ್ಯವಾದರು ಮುಂದಿನ ದಿನಗಳಲ್ಲಿ  ಇದು ಕಡಿಮೆಯಾಗುತ್ತಾ ಬರಬಹುದು. ಕಂಪನಿಯು ಜನವರಿ 4, 2022 ರಿಂದ ಈ ಮಾದರಿಗಳ ಬೆಂಬಲವನ್ನು ಅಧಿಕೃತವಾಗಿ ನಿಲ್ಲಿಸುವುದಾಗಿ ತಿಳಿಸಿದೆ.

    ಕಂಪನಿಯು ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುವ ತನ್ನ ಸಾಧನಗಳನ್ನು ಸ್ಪಷ್ಟಪಡಿಸಿದೆ. ಭವಿಷ್ಯದಲ್ಲಿ ಬೇರೆ ರೀತಿಯಲ್ಲಿ ಬೆಂಬಲವನ್ನು ಪಡೆಯುವುದನ್ನು ಮುಂದುವರಿಸಲಿದೆ. ಸದ್ಯ ಕಂಪನಿಯು ಬ್ಲ್ಯಾಕ್‌ಬೆರಿ ಓಎಸ್, 7.1 ಓಎಸ್, ಪ್ಲೇಬುಕ್ ಓಎಸ್ 2.1 ಸೀರೀಸ್ ಮತ್ತು ಬ್ಲ್ಯಾಕ್‌ಬೆರಿ 10 ನಂತಹ ಕೆಲವು ಮೂಲಭೂತ ಸೇವೆಗಳು ಇನ್ನು ಮುಂದೆ ಬೆಂಬಲಿಸುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸಿದೆ, ಇದರಿಂದ ಕರೆಗಳು, SMS, ತುರ್ತು ಕರೆಗಳಂತಹ ಸೌಲಭ್ಯಗಳನ್ನು ಈ ಸಾಧನಗಳ ಮೂಲಕ ಆಫ್ ಆಗಲಿದೆ

    2007 ರಲ್ಲಿ ಆ್ಯಪಲ್ ಖಂಡಿತವಾಗಿಯೂ ಸ್ಮಾರ್ಟ್‌ಫೋನ್ ಉದ್ಯಮವನ್ನು ಬದಲಾಯಿಸಿದಾಗ, ಆ್ಯಪಲ್ ಉದ್ಯಮದ ಮೇಲೆ ಅಂತಹ ಪ್ರಭಾವ ಬೀರುತ್ತದೆ ಎಂದು ಅನೇಕ ಸ್ಮಾರ್ಟ್‌ಫೋನ್ ತಯಾರಕರು ನಂಬಿರಲಿಲ್ಲ.

    ಇದನ್ನು ಓದಿ: WhatsApp: ವಾಟ್ಸ್‌ಆ್ಯಪ್ ವಂಚನೆಯ ಜಾಲದಿಂದ ನಿಮ್ಮನ್ನು ನೀವು ಸಂರಕ್ಷಿಸಿಕೊಳ್ಳುವುದು ಹೇಗೆ..?

    2007, ನವೆಂಬರ್ ತಿಂಗಳಿನಲ್ಲಿ, ಬ್ಲ್ಯಾಕ್‌ಬೆರಿ ಸಂಸ್ಥಾಪಕ ಮೈಕ್ ಲಜಾರಿಡಿಸ್, 'ನೀವು Apple iPhone ನ ಟಚ್‌ಸ್ಕ್ರೀನ್‌ನಲ್ಲಿ ವೆಬ್ ಕೀಬೋರ್ಡ್‌ನಲ್ಲಿ ಟೈಪ್ ಮಾಡಲು ಪ್ರಯತ್ನಿಸಿ' ಎಂದು ಹೇಳಿದರು. ಆದರೆ ಇದು ಇದು ಒಂದು ಸವಾಲಾಗಿತ್ತು. ಏ

    ಸ್ಮಾರ್ಟ್‌ಫೋನ್‌ಗಳು ಜಗತ್ತನ್ನು ಬದಲಾಯಿಸಿದವು

    ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳು ಮತ್ತು ಐಫೋನ್ ಜಗತ್ತನ್ನು ಬದಲಾಯಿಸಿದವು. ಐಫೋನ್‌ನ ಪರಿಚಯದ ನಂತರ, ಬ್ಲ್ಯಾಕ್‌ಬೆರಿ ಮಾರುಕಟ್ಟೆ ಮೌಲ್ಯವು ಗಮನಾರ್ಹವಾಗಿ ಕುಸಿಯಿತು ಮತ್ತು ಅಂತಿಮವಾಗಿ ಕಂಪನಿಯು ಅದರ ಪ್ರಸ್ತುತತೆಯನ್ನು ಕಳೆದುಕೊಂಡಿತು.

    ಸ್ಯಾಮ್‌ಸಂಗ್ ಮತ್ತು ಇತರ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಉಳಿಯಲು ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳಿಗೆ ಬದಲಾಯಿಸಿದಾಗ, ಬ್ಲ್ಯಾಕ್‌ಬೆರಿ ತನ್ನ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಮುಂದುವರಿಸಲು ನಿರ್ಧರಿಸಿತು ಮತ್ತು ಆ ಹೊತ್ತಿಗೆ ಹಿಂತಿರುಗಲು ತುಂಬಾ ತಡವಾಗಿತ್ತು. ಆದರೆ ಇದೀಗ ಜನವರಿ 4 ರಿಂದ ಕೆಲವು ಮಾಡೆಲ್​ಗಳನ್ನು ಬ್ಲಾಕ್​ಬೆರಿ ಕೊನೆಗೊಳಿಸುತ್ತಿದೆ.

    ಇದನ್ನು ಓದಿ: Dating App: 2021ರಲ್ಲಿ ಭಾರತೀಯರಿಗೆ ಬಂಬಲ್ ಡೇಟಿಂಗ್ ಆ್ಯಪ್ ಎಷ್ಟೆಲ್ಲಾ ಉಪಯೋಗಕ್ಕೆ ಬಂದಿದೆ ಗೊತ್ತಾ?

    ಹಾಗಾಗಿ ಬ್ಲಾಕ್​ಬೆರಿ ಬಳಸುವವರು ಹಳೆಯ ಫೋನಿನಲ್ಲಿರುವ ಡೇಟಾವನ್ನು ಬದಲಾಯಿಸಿಕೊಳ್ಳುವುಉ ಉತ್ತಮ. ಒಂದು ವೇಳೆ ಹೀಗೆ ಮಾಡದೇ ಇದ್ದರೆ ಮತ್ತೆ ಡೇಟಾ ಟ್ರಾನ್ಸ್​ಫರ್​ ಮಾಡುವುದು ಕಷ್ಟದ ಕೆಲಸವಾಗಲಿದೆ. ಹಾಗಾಗಿ ಬ್ಲ್ಯಾಕ್‌ಬೆರಿ ಬಳಕೆದಾರರು ಬೇಗನೇ ಡೇಟಾ ಸೇವ್​ ಮಾಡಿಟ್ಟುಕೊಳ್ಳುವುದು ಉತ್ತಮ.

    ಬ್ಲಾಕ್​ಬೆರಿ ಫೋನಿಗೆ ಬದಲಾಗಿ ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್​ಗಳ ಸ್ಮಾರ್ಟ್​ಫೋನ್​ಗಳು ಮಾರಾಟಕ್ಕೆ ಸಿಗುತ್ತಿವೆ. ಅದರಲ್ಲಿ ಉತ್ತಮ ಕಾರ್ಯನಿರ್ವಹಿಸುವ ಆಯ್ಕೆಯ ಫೋನ್​ ಖರೀದಿಸಿದರೆ ಈ ಸಮಸ್ಯೆಯನ್ನು ಹೋಗಲಾಡಿಸಬಹುದಾಗಿದೆ.
    Published by:Harshith AS
    First published: