ಕುಸಿತ ಕಂಡ Bitcoin ಮೌಲ್ಯ: ಟಾಪ್ ಕ್ರಿಪ್ಟೋ ಕರೆನ್ಸಿಗಳ ಬೆಲೆ ಹೇಗಿದೆ?

ಕ್ರಿಪ್ಟೋದಲ್ಲಿ ಭರ್ಜರಿ ಸ್ಪರ್ಧೆಯನ್ನೊಡ್ಡುತ್ತಿರುವ ಈಥರ್ ಹಾಗೂ ಬಿಟ್‌ಕಾಯಿನ್ ಈ ವಾರ ಯಾವ ರೀತಿ ತಮ್ಮ ಪ್ರದರ್ಶನ ತೋರಲಿದೆ ಎಂಬುದರ ಮೇಲೆ ಇವುಗಳ ಸಾಮರ್ಥ್ಯವನ್ನು ಅಳೆಯಬಹುದಾಗಿದೆ. ಜಾಗತಿಕ ಕ್ರಿಪ್ಟೋ ಮಾರುಕಟ್ಟೆಯು $2.12 ಟ್ರಿಲಿಯನ್‌ನಷ್ಟು ವಹಿವಾಟು ನಡೆಸಿದ್ದು ಕಳೆದ 24 ಗಂಟೆಯಲ್ಲಿ 0.94% ನಷ್ಟು ಹೆಚ್ಚಳ ಕಂಡುಕೊಂಡಿದೆ.

Bitcoin

Bitcoin

  • Share this:
ಅತಿದೊಡ್ಡ ಪರಿಣಾಮಕಾರಿ ಕರೆನ್ಸಿ ಎಂದೇ ಖ್ಯಾತಿವೆತ್ತಿರುವ ಬಿಟ್‌ಕಾಯಿನ್ 0.88 % ರಷ್ಟು ಕುಸಿತ ಕಂಡು 44,873.44 ಡಾಲರ್‌ ಮೌಲ್ಯದಲ್ಲಿ ವಹಿವಾಟು ನಡೆಸುತ್ತಿದೆ. ಬಿಟ್‌ಕಾಯಿನ್ ವಿಶ್ವಾದ್ಯಂತ ಅನುಕೂಲಕರವಾದ ಪ್ರಗತಿ ಕಂಡುಕೊಂಡಿದ್ದು ಜೂನ್‌ನಲ್ಲೇ 65,000 ಡಾಲರ್‌ ತಲುಪಿದ್ದು ಅತ್ಯುನ್ನತ ಗರಿಷ್ಠ ಮಟ್ಟ ಎಂಬ ಖ್ಯಾತಿ ಪಡೆದುಕೊಂಡಿದೆ. ಜಾಗತಿಕ ಮಟ್ಟದಲ್ಲಿ ವ್ಯವಹಾರಿಕ ಖ್ಯಾತಿ ಗಳಿಸಿರುವ ಬಿಟ್‌ಕಾಯಿನ್‌ನ ಪ್ರತಿಸ್ಪರ್ಧಿ ಎಂದೆನಿಸಿರುವ ಎಥೆರಿಯಮ್ 0.07% ಇಳಿಕೆಯಲ್ಲಿ 3,283.92 ಡಾಲರ್‌ನಲ್ಲಿ ವಹಿವಾಟು ನಡೆಸಿದೆ.

ಒಂದು ರೀತಿಯಲ್ಲಿ ನೋಡುವುದಾದರೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಕೊಳ್ಳುವ ಲಕ್ಷಣ ಪ್ರದರ್ಶಿಸಿರುವ ಕ್ರಿಪ್ಟೋ ಮಾರುಕಟ್ಟೆಯು ಕ್ರಿಪ್ಟೋ ವ್ಯಾಪಾರಿಗಳು ಹಾಗೂ ಹೂಡಿಕೆದಾರರಿಗೆ ಬೆಂಬಲ ನೀಡುವಂತಿದೆ. ಇದಕ್ಕೆ ಸಾಕ್ಷಿಯಾಗಿರುವುದು ಬಿಟ್‌ಕಾಯಿನ್ ಪಡೆದುಕೊಂಡ ಬೆಂಬಲವಾಗಿದೆ ಎನ್ನಬಹುದು.

ಕ್ರಿಪ್ಟೋದಲ್ಲಿ ಭರ್ಜರಿ ಸ್ಪರ್ಧೆಯನ್ನೊಡ್ಡುತ್ತಿರುವ ಈಥರ್ ಹಾಗೂ ಬಿಟ್‌ಕಾಯಿನ್ ಈ ವಾರ ಯಾವ ರೀತಿ ತಮ್ಮ ಪ್ರದರ್ಶನ ತೋರಲಿದೆ ಎಂಬುದರ ಮೇಲೆ ಇವುಗಳ ಸಾಮರ್ಥ್ಯವನ್ನು ಅಳೆಯಬಹುದಾಗಿದೆ. ಜಾಗತಿಕ ಕ್ರಿಪ್ಟೋ ಮಾರುಕಟ್ಟೆಯು $2.12 ಟ್ರಿಲಿಯನ್‌ನಷ್ಟು ವಹಿವಾಟು ನಡೆಸಿದ್ದು ಕಳೆದ 24 ಗಂಟೆಯಲ್ಲಿ 0.94% ನಷ್ಟು ಹೆಚ್ಚಳ ಕಂಡುಕೊಂಡಿದೆ. ವಾರಾಂತ್ಯದಲ್ಲಿ ವ್ಯಾಪಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿದ್ದರಿಂದ ವ್ಯಾಪಾರ ಮೌಲ್ಯಗಳು ಕುಸಿದಿರುವುದೂ ಇಲ್ಲಿ ಗಮನಾರ್ಹ ಅಂಶವಾಗಿದೆ. ಆಲ್ಟ್‌ಕಾಯಿನ್ ಪ್ರಾಬಲ್ಯದಲ್ಲಿ ಮಾರುಕಟ್ಟೆ ಬಂಡವಾಳವು ಹೆಚ್ಚಾಗಿದ್ದರೂ ಬಿಟ್‌ಕಾಯಿನ್ ಪ್ರಾಬಲ್ಯವು ಸ್ವಲ್ಪ ಮಟ್ಟಿಗೆ ಕುಸಿದಿದೆ ಎಂದು ಮುಡ್ರೆಕ್ಸ್- ಎ ಗ್ಲೋಬಲ್ ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಎಡುಲ್ ಪಟೇಲ್ ತಿಳಿಸಿದ್ದಾರೆ.

Read Also ⇒ ಟೈರ್, ಡ್ರಮ್ ಮರುಬಳಸಿ Furniture ಮಾಡಿ 1 ಕೋಟಿ ಗಳಿಸ್ತಿದ್ದಾನೆ.. ಎಲ್ಲಾ YouTube ಮಾಯೆ!

ಈ ನಡುವೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಫೈನಾನ್ಶಿಯಲ್ ಟೈಮ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಟ್‌ಕಾಯಿನ್‌ಗಳ ಮೇಲೆ ಹೂಡಿಕೆ ಮಾಡುವ ಕುರಿತು ಅಪಾಯಗಳ ಬಗ್ಗೆ ಕಾಳಜಿ ವಹಿಸಬೇಕೆಂದು ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ್ ದಾಸ್ ಎಚ್ಚರಿಕೆ ನೀಡಿದ್ದು ಕೇಂದ್ರ ಬ್ಯಾಂಕ್ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋ ಕರೆನ್ಸಿಗಳ ಕುರಿತು ಗಂಭೀರ ಹಾಗೂ ಪ್ರಮುಖ ಪರಿಶೀಲನೆಗಳನ್ನು ಮುಂದುವರೆಸಿದೆ ಎಂದು ತಿಳಿಸಿದ್ದಾರೆ.

Read Also ⇒ OnlyFans | ಶಿಕ್ಷಕ ವೃತ್ತಿಗೆ ಗುಡ್​ಬಾಯ್​ ಹೇಳಿ ಓನ್ಲಿಫ್ಯಾನ್ಸ್​ನಲ್ಲಿ ಖಾತೆ ತೆರೆದಳು; ಈಗ ತಿಂಗಳ ಸಂಬಳ ಎಣಿಸೋಕೆ ಆಗುತ್ತಿಲ್ಲವಂತೆ!

ಜಾಗತಿಕವಾಗಿ ಕ್ರಿಪ್ಟೋ ಮಾರುಕಟ್ಟೆ ಬಂಡವಾಳವು $2.07 ಟ್ರಿಲಿಯನ್ ಆಗಿದ್ದು ಹಿಂದಿನ ದಿನಕ್ಕಿಂತ 0.25% ಹೆಚ್ಚಳ ಕಂಡಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟಾರೆ ಕ್ರಿಪ್ಟೋ ಮಾರುಕಟ್ಟೆ ಮೌಲ್ಯವನ್ನು ಲೆಕ್ಕಹಾಕಿದಾಗ 0.49%ನಷ್ಟು ಇಳಿಕೆಯಲ್ಲಿ 110.17 ಬಿಲಿಯನ್ ಡಾಲರ್ ವಹಿವಾಟು ನಡೆಸಿದೆ. DeFiಯ ಪ್ರಸ್ತುತ ಮೌಲ್ಯವು 18.22 ಬಿಲಿಯನ್ ಡಾಲರ್ ಆಗಿದ್ದು ಈ ಮೌಲ್ಯವು 24 ಗಂಟೆಯಲ್ಲಿನ ಒಟ್ಟು ಕ್ರಿಪ್ಟೋ ಮಾರುಕಟ್ಟೆಯ 16.54% ಆಗಿದೆ. ಇನ್ನು ಸ್ಥಿರ ನಾಣ್ಯಗಳ ಪರಿಮಾಣವು ಈಗ 85.17 ಬಿಲಿಯನ್ ಡಾಲರ್‌ ಆಗಿದ್ದು ಇದು ಒಟ್ಟು ಕ್ರಿಪ್ಟೋ ಮಾರುಕಟ್ಟೆಯ 77.31% ಮೌಲ್ಯಮಾಪನವಾಗಿದೆ.

ಅತ್ಯುನ್ನತ ಕ್ರಿಪ್ಟೋ ಕರೆನ್ಸಿಗಳು ಹಾಗೂ ಅವುಗಳ ಇಂದಿನ ಧಾರಣೆಗಳನ್ನು ನೋಡೋಣ.

ಬಿಟ್ ಕಾಯಿನ್ $ 44,873.44 ಅಥವಾ (-0.88%) 24 ಗಂಟೆಗಳಲ್ಲಿ ಬದಲಾವಣೆ

ಎಥೆರಿಯಮ್ $ 3,283.92or (-0.07%) 24 ಗಂಟೆಗಳಲ್ಲಿ ಬದಲಾವಣೆ

ಕಾರ್ಡಾನೊ $ 2.46 ಅಥವಾ (-4.86%) 24 ಗಂಟೆಗಳಲ್ಲಿ ಬದಲಾವಣೆ

ಬಿನಾನ್ಸ್ ಕಾಯಿನ್ $ 405.73 ಅಥವಾ (+0.92%) 24 ಗಂಟೆಗಳಲ್ಲಿ ಬದಲಾವಣೆ

ಟೆಥರ್ $ 1.00 ಅಥವಾ (-0.02%) 24 ಗಂಟೆಗಳಲ್ಲಿ ಬದಲಾವಣೆ

XRP $ 1.09 ಅಥವಾ (+1.93%) 24 ಗಂಟೆಗಳಲ್ಲಿ ಬದಲಾವಣೆ

ಸೋಲಾನಾ $ 159.63 ಅಥವಾ (-9.58%) 24 ಗಂಟೆಗಳಲ್ಲಿ ಬದಲಾವಣೆ

Dogecoin $ 0.2432 ಅಥವಾ (+0.85%) 24 ಗಂಟೆಗಳಲ್ಲಿ ಬದಲಾವಣೆ

USD ಕಾಯಿನ್ $ 1.00 ಅಥವಾ (+0.00%) 24 ಗಂಟೆಗಳಲ್ಲಿ ಬದಲಾವಣೆ

ಪೋಲ್ಕಡೋಟ್ $ 28.02 ಅಥವಾ (-19.47%) 24 ಗಂಟೆಗಳಲ್ಲಿ ಬದಲಾವಣೆ

ಯೂನಿಸ್ವಾಪ್ $ 22.69 ಅಥವಾ (+0.90%) 24 ಗಂಟೆಗಳಲ್ಲಿ ಬದಲಾವಣೆ

ಚೈನ್ ಲಿಂಕ್ $ 28.46 ಅಥವಾ (+6.40%) 24 ಗಂಟೆಗಳಲ್ಲಿ ಬದಲಾವಣೆ

ಬಿಟ್‌ಕಾಯಿನ್ ಕ್ಯಾಶ್ $ 632.32 ಅಥವಾ (0.54%) 24 ಗಂಟೆಗಳಲ್ಲಿ ಬದಲಾವಣೆ
First published: