Bill Gates ಮಗಳ ಮದುವೆ.. ಕುದುರೆ ಸವಾರಿ ಹೋಗುತ್ತಿದ್ದ ಗೆಳೆಯನನ್ನು ವರಿಸಿದ ಜೆನಿಫರ್ ಗೇಟ್ಸ್!

Bill Gates daughter Jennifer Marriage: ಬಿಲ್ ಗೇಟ್ಸ್ ಮತ್ತು ಮೆಲಿಂಡಾ, ಈ ವರ್ಷ ತಮ್ಮ ದೀರ್ಘ ಕಾಲದ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆಯುವ ಘೋಷಣೆ ಮಾಡಿದ್ದರು. ಆ ಕುರಿತು ಸ್ವತಃ ಬಿಲ್ ಗೇಟ್ಸ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

ಜೆನಿಫರ್ ಗೇಟ್ಸ್-ನಯೆಲ್ ನಾಸರ್

ಜೆನಿಫರ್ ಗೇಟ್ಸ್-ನಯೆಲ್ ನಾಸರ್

  • Share this:
    Jennifer with Nayel Nassar: ಬಿಲ್‍ಗೇಟ್ಸ್ (Bill Gates) ಮತ್ತು ಮೆಲಿಂಡಾ ಗೇಟ್ಸ್ (Melinda Gates) ಅವರ ಮಗಳು ಜೆನಿಫರ್ ಗೇಟ್ಸ್ (Jeniffer Gates), ತನ್ನ ಕುದುರೆ ಸವಾರಿಯ ಗೆಳೆಯ ನಯೆಲ್ ನಾಸರ್ (Nayel Nassar) ಅವರನ್ನು ಶನಿವಾರ ಅಮೆರಿಕದ ನ್ಯೂಯಾರ್ಕ್‍ನ ವೆಸ್ಟ್‌ಚೆಸ್ಟರ್ ಕೌಂಟಿಯಲ್ಲಿ ವಿವಾಹವಾದರು. ಈ ಜೋಡಿ ಅತ್ಯಂತ ಸರಳ ಸಮಾರಂಭದಲ್ಲಿ ವಿವಾಹದ ಪ್ರತಿಜ್ಞಾ ವಿಧಿಗಳನ್ನು ವಿನಿಮಯ ಮಾಡಿಕೊಂಡಿತು ಎಂದು ವರದಿಗಳು ತಿಳಿಸಿವೆ. 2020ರಲ್ಲಿ ಜೆನಿಫರ್ ಮತ್ತು ನಯೆಲ್ ಅವರ ನಿಶ್ಚಿತಾರ್ಥವನ್ನು ಘೋಷಿಸಲಾಗಿತ್ತು , ಅದಾದ ಒಂದು ವರ್ಷದ ಬಳಿಕ ಈ ಜೋಡಿ ಮದುವೆಯ ಬಂಧನದಲ್ಲಿ ಒಂದಾಗಿದೆ.

    ದಿ ಡೈಲಿ ಮೇಲ್ ವರದಿಯ ಪ್ರಕಾರ, ಜೆನಿಫರ್ ಗೇಟ್ಸ್ ತಮ್ಮ ಮದುವೆಯಲ್ಲಿ , ಖ್ಯಾತ ವಸ್ತ್ರ ವಿನ್ಯಾಸಕಿ ವೆರಾ ವಾಂಗ್ ವಿನ್ಯಾಸ ಮಾಡಿರುವ ಸುಂದರವಾದ ಗೌನ್ ಧರಿಸಿದ್ದರು. ಜೆನಿಫರ್ ಪೋಷಕರಾದ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಜೊತೆಯಾಗಿ ವಿವಾಹದ ವೇದಿಕೆಗೆ ಕರೆದುಕೊಂಡು ಬಂದರು. ಜೆನಿಫರ್ ಮತ್ತು ನಯೆಲ್ ಮದುವೆಯ ಆಹ್ವಾನಿತ ಪಟ್ಟಿಯಲ್ಲಿ 300 ಮಂದಿ ಅತಿಥಿಗಳು ಇದ್ದರು ಎಂದು ವರದಿಗಳು ತಿಳಿಸಿವೆ.

    2020ರ ಜನವರಿ 30 ರಂದು ಜೆನ್ನಿಫರ್ , ಇನ್‍ಸ್ಟಾಗ್ರಾಂನಲ್ಲಿ ನಯೆಲ್ ನಾಸರ್ ಜೊತೆಗೆ ತನ್ನ ನಿಶ್ಚಿತಾರ್ಥವನ್ನು ಘೋಷಿಸಿದ್ದಳು. ಆ ಸಂದರ್ಭದಲ್ಲಿ ”ನಯೆಲ್ ನಾಸರ್ ನೀವೊಬ್ಬ ಅಪರೂಪದ ವ್ಯಕ್ತಿ. ಕಳೆದ ವಾರ ಅತ್ಯಂತ ಅರ್ಥಪೂರ್ಣವಾದ ಸ್ಥಳಗಳಲ್ಲಿ ನಿಮ್ಮೊಂದಿಗೆ ಕಳೆದ ಕ್ಷಣಗಳಲ್ಲಿ ನಾನು ಸಂಪೂರ್ಣವಾಗಿ ಕಳೆದು ಹೋಗಿದ್ದೆ. ನಿಮ್ಮೊಂದಿಗೆ ಸೇರಿ ಕಲಿಯುವ, ಬೆಳೆಯುವ, ನಗುವ ಮತ್ತು ಪ್ರೀತಿಸುವ ದಿನಗಳಿಗಾಗಿ ಇನ್ನು ಕಾಯುವುದು ನನ್ನಿಂದ ಸಾಧ್ಯವಿಲ್ಲ. ಹೌದು , ಇದು ಹೆಚ್ಚಾಯಿತು” ಎಂದು ಬರೆದುಕೊಂಡಿದ್ದಾರೆ.

    Read Also: Viral Story: ಇಲ್ನೋಡಿ.. ಈ ಮಹಿಳೆ ಜನ್ಮ ನೀಡಿದ ಮಗುವಿನ ತೂಕ ಕೇಳಿದರೆ ನೀವು ಬೆಚ್ಚಿ ಬೀಳ್ತೀರಾ!

    ಜೆನ್ನಿಫರ್ ಒಬ್ಬರೇ ಅಲ್ಲ, ನಯೆಲ್ ಕೂಡ , ಜೆನ್ನಿಫರ್ ಜೊತೆಗಿನ ನಿಶ್ಚಿತಾರ್ಥವನ್ನು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು. “ನಾನು ಈಗ ವಿಶ್ವದ ಅತ್ಯಂತ ಅದೃಷ್ಟಶಾಲಿ (ಮತ್ತು ಸಂತೋಷದ) ವ್ಯಕ್ತಿ ಎಂದು ಅನಿಸುತ್ತಿದೆ” ಎಂದು ನಯೆಲ್ ನಾಸೆರ್ ಬರೆದುಕೊಂಡಿದ್ದರು. ಬಹಳ ಸಮಯದಿಂದ ಒಬ್ಬನೊಬ್ಬರು ಬಲ್ಲ ಜೆನಿಫರ್ ಮತ್ತು ನಯೆಲ್ , ಕುದುರೆ ಸವಾರಿಯ ಸಂದರ್ಭದಲ್ಲಿ ಪರಿಚಿತರಾಗಿದ್ದರು. ನಯೆಲ್ ಈಜಿಪ್ಟ್ ಮೂಲದವರಾಗಿದ್ದು, ಕುವೈಟ್‍ನಲ್ಲಿ ಬೆಳೆದಿದ್ದಾರೆ.






    ತಮ್ಮ ಸಂಬಂಧ ಮತ್ತು ನಿಶ್ಚಿತಾರ್ಥದ ಬಗ್ಗೆ ಸಾಮಾಜಿಕ ಜಾಲದಲ್ಲಿ ಮುಕ್ತವಾಗಿ ಪೋಸ್ಟ್‌ಗಳನ್ನು ಮಾಡಿದ್ದ ಜೆನಿಫರ್ ಮತ್ತು ನಯೆಲ್ , ತಮ್ಮ ಮದುವೆಯ ಯಾವುದೇ ಫೋಟೋಗಳನ್ನು ಇದುವರೆಗೆ ಹಂಚಿಕೊಂಡಿಲ್ಲ. ದ ಡೇಲಿ ಮೇಲ್‍ನ ವರದಿಯ ಪ್ರಕಾರ, ಈ ವಿವಾಹದಲ್ಲಿ ಜೆನಿಫರ್‌ಗೆ 9 ಮಂದಿ ಬ್ರೈಡ್ಸ್‌ಮೇಡ್‍ಗಳನ್ನು ಹೊಂದಿದ್ದರು. ಅಷ್ಟೇ ಅಲ್ಲ, ವಿವಾಹ ಸಮಾರಂಭದಲ್ಲಿ, ದ ಲಯನ್ ಕಿಂಗ್‍ನ ಎಲ್ಟೊನ್ ಜಾನ್ ಅವರ ಹಾಡು, ಕ್ಯಾನ್ ಯು ಫೀಲ್ ದ ಲವ್ ಟುನೈಟ್ ಹಾಡಿಗೆ ತಮ್ಮ ತಂದೆ ಬಿಲ್‍ಗೇಟ್ಸ್ ಜೊತೆ ಹೆಜ್ಜೆ ಹಾಕಿದರು.

    Read Also: Smartphones: ಈ ವಾರ ಮಾರುಕಟ್ಟೆಗೆ ಬರಲಿರುವ ಸ್ಮಾರ್ಟ್​ಫೋನ್​ಗಳಿವು!

    ಬಿಲ್ ಗೇಟ್ಸ್ ಮತ್ತು ಮೆಲಿಂಡಾ, ಈ ವರ್ಷ ತಮ್ಮ ದೀರ್ಘ ಕಾಲದ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆಯುವ ಘೋಷಣೆ ಮಾಡಿದ್ದರು. ಆ ಕುರಿತು ಸ್ವತಃ ಬಿಲ್ ಗೇಟ್ಸ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
    First published: