HOME » NEWS » Tech » BIKES UNDER 1 5 LAKH BIKE FOR STUDENTS HG

Bikes: 1.5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತೆ ಈ ಬೈಕ್​ಗಳು

ಕಾಲೇಜು ಹುಡುಗರಿಗೆ ಇಷ್ಟವಾಗುವ ಮತ್ತು ಕೈಗೆಟಕುವ ದರದಲ್ಲಿರುವ ಬೈಕ್​ಗಳ ಕುರಿತು ಮಾಹಿತಿ ಇಲ್ಲಿ ನೀಡಲಾಗಿದೆ. ವಿವಿಧ ಕಂಪನಿಗಳ ಮತ್ತು 1.5 ಲಕ್ಷ ರೂಕ್ಕಿಂತ ಕಡಿಮೆ ಬೆಲೆಗೆ ದೊರಕುವ ಬೈಕ್​ಗಳ ಮಾಹಿತಿ ನೀಡಲಾಗಿದೆ

news18-kannada
Updated:January 13, 2021, 10:07 PM IST
Bikes: 1.5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತೆ ಈ ಬೈಕ್​ಗಳು
Yamah MT 15
  • Share this:
ಯುವಕರಿಗೆ ಸ್ಕೂಟರಿಗಿಂತ ಬೈಕಿನ ಮೇಲೆ ಹೆಚ್ಚು ವ್ಯಾವೋಹ. ಅವರಲ್ಲಿ ಅನೇಕರು ಸ್ಪೋರ್ಟ್ಸ್​​ ಬೈಕ್​ಗಳನ್ನು ಇಷ್ಟ ಪಡುತ್ತಾರೆ. ಇನ್ನು ಕೆಲವರು ಕಮ್ಮೂಟರ್​​, ಕ್ಲಾಸಿಕ್ ಬೈಕ್​ಗಳನ್ನು ಖರೀದಿಸಿ ಸುಮ್ಮನಾಗುತ್ತಾರೆ. ಅದರಲ್ಲೂ ಕಾಲೇಜು ಹುಡುಗರಂತೂ ಹೊಸ ಬೈಕ್​ ಮಾರುಕಟ್ಟೆಗೆ ಬಂದರೆ ಸಾಕು ಅದರ ಕುರಿತು ತಿಳಿದುಕೊಂಡು ಖರೀದಿಸುತ್ತಾರೆ. ಒಟ್ಟಿನಲ್ಲಿ ಹುಡುಗಿಯರಿಂತ ಹುಡುಗರಿಗೆ ಬೈಕ್​ ಅಂದರೆ ತುಂಬಾ ಇಷ್ಟ.

ಅದರಂತೆ ಕಾಲೇಜು ಹುಡುಗರಿಗೆ ಇಷ್ಟವಾಗುವ ಮತ್ತು ಕೈಗೆಟಕುವ ದರದಲ್ಲಿರುವ ಬೈಕ್​ಗಳ ಕುರಿತು ಮಾಹಿತಿ ಇಲ್ಲಿ ನೀಡಲಾಗಿದೆ. ವಿವಿಧ ಕಂಪನಿಗಳ ಮತ್ತು 1.5 ಲಕ್ಷ ರೂಕ್ಕಿಂತ ಕಡಿಮೆ ಬೆಲೆಗೆ ದೊರಕುವ ಬೈಕ್​ಗಳ ಮಾಹಿತಿ ನೀಡಲಾಗಿದೆ.

HERO ಎಕ್ಸ್​ಟ್ರಿಮ್​ 160ಆರ್​:

ಹಿರೋ ಕಂಪನಿಯ ಎಕ್ಸ್​ಟ್ರಿಮ್​ 160ಆರ್​ ಬೈಕ್​ ವಿ ವಿನ್ಯಾಸದ ಎಲ್​ಇಡಿ ಹೆಡ್​ಲ್ಯಾಂಪ್​ ಹೊಂದಿದೆ.  ಇದರಲ್ಲಿ  ವೈಡ್​ ಹ್ಯಾಂಡಲ್​ಬಾರ್, ಮಸ್ಕ್ಯುಲರ್​​ ಪೆಟ್ರೋಲ್​ ಟ್ಯಾಂಕ್​, ಎಂಜಿನ್​ ಬೆ, ಎಲ್​ಇಡಿ ಟೈಲ್​ಲೈಟ್​​, ಇಂಡಿಕೇಟರ್​ ನೀಡಲಾಗಿದೆ. ಬಿಎಸ್​6 ಎಂಜಿನ್​ ಹೊಂದಿರುವ ಈ ಬೈಕ್​ 15ಬಿಹೆಚ್​ಪಿ ಮತ್ತು 14 ಎನ್​ಎಮ್​ ಪೀಕ್​ಟಾರ್ಕ್​ ಉತ್ಪಾದಿಸುತ್ತದೆ. ಇನ್ನು ಈ ಬೈಕಿನ ಬೆಲೆ 1.05 ಲಕ್ಷ ರೂ ಆಗಿದೆ.

ರಿವೋಲ್ಟ್​​​ ಆರ್​ವಿ400:

ರಿವೋಲ್ಟ್​ ಕಂಪನಿ ಆರ್​ವಿ400 ಹೆಸರಿನ ಎಲೆಕ್ಟ್ರಿಕ್​ ಬೈಕ್​​​ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.  ನೂತನ ಬೈಕ್​​​ 3.24 ಬ್ಯಾಟರಿ ಪ್ಯಾಕ್​ ಹೊಂದಿದ್ದು, 3ಕೆಎಮ್​ ರೇಟೆಡ್​ ಮೋಟಾರ್​ ಅಳವಡಿಲಾಗಿದೆ, 170ಎನ್​ಎಮ್​​ ಪೀಕ್​ ಟಾರ್ಕ್​​​​​ ಉತ್ಪಾದಿಸುತ್ತದೆ.

ರಿವೋಲ್ಟ್​​​ ಆರ್​ವಿ400​ ಒಂದು ಬಾರಿ ಚಾರ್ಜ್​ ಮಾಡಿದರೆ 150 ಕಿ.ಮೀ ಮೈಲೇಜ್​ ನೀಡುತ್ತದೆ. 85 ಕಿ.ಮೀ ಟಾಪ್​ ಸ್ಪೀಡ್​​ ಹೊಂದಿದೆ. ಇದರಲ್ಲಿ ಡಿಜಿಟಲ್​ ಇನ್ಟ್ರೂಮೆಂಟ್​​  ಕ್ಲಸ್ಟರ್​​ ಆಯ್ಕೆಯನ್ನು ನೀಡಿದೆ. ಇನ್ನು ಈ ಸ್ಕೂಟರ್​ ಬೆಲೆ 1,08,999 ರೂ ಇರಲಿದೆ.TVS​​ ಅಪಾಚಿ ಆರ್​ಟಿಆರ್​ 200 4ವಿ: 

ಈ ಬೈಕ್​ 197.75 ಸಿಸಿ ಆಯಿಲ್​-ಕೂಲ್ಡ್​​ ಎಂಜಿನ್​ ಹೊಂದಿದ್ದು, 20.5 ಬಿಹೆಚ್​ಪಿ ಮತ್ತು 17 ಎನ್​ಎಮ್​ ಪೀಕ್​​ ಟಾರ್ಕ್​ ಉತ್ಪಾದಿಸುತ್ತದೆ. ಸ್ಪೋರ್ಟ್ಸ್​​, ಅರ್ಬನ್​​, ರೈನ್​ ಎಂಬ ಮೂರು ಮೋಡ್​ ಅನ್ನು ಇದರಲ್ಲಿ ನೀಡಲಾಗಿದೆ. ಈ ಬೈಕ್​ ಬೆಲೆ 1.31 ಲಕ್ಷ ರೂ ಆಗಿದೆ.

KTM​ 125 ಡ್ಯೂಕ್​:

ಆಸ್ಟ್ರೇಲಿಯನ್​ ಕಂಪನಿ ಸಿದ್ಧಪಡಿಸಿದ ಕೆಟಿಎಮ್​ 125 ಡ್ಯೂಕ್​ ಬೈಕ್​ ಲಿಕ್ವಿಡ್​ ಕೂಲ್ಡ್​ ಎಂಜಿನ್​ ಹೊಂದಿದ್ದು,  14 ಬಿಹೆಚ್​ಪಿ ಮತ್ತು 12 ಎನ್​ಎಮ್​​ ಮತ್ತು ಸಿಕ್ಸ್​ ಸ್ಪೀಡ್​ ಟ್ರಾನ್ಸ್​ಮಿಷನ್​ಹೊಂದಿದೆ. ಎಲ್​ಸಿಡಿ ಇನ್ಟ್ರುಮೆಂಟ್​​ ಕ್ಲಸ್ಟರ್​​ ಹೊಂದಿರುವ ಈ ಬೈಕ್​ ಟೆಕ್​​​ಮೀಟರ್​, ಪೆಟ್ರೋಲ್​ ಲೆವೆಲ್​, ಸಮಯ ಮತ್ತು ಸ್ಪೀಡ್​  ಬಗ್ಗೆ ಡಿಸ್​ಪ್ಲೇಯಲ್ಲಿ ತೋರಿಸುತ್ತದೆ. ಈ ಬೈಕಿನ ಬೆಲೆ 1.42 ಲಕ್ಷ ರೂ ಆಗಿದೆ.

ಯಮಹಾ MT-15:

155ಸಿಸಿ ಲಿಕ್ವಿಡ್​ ಕೂಲ್ಡ್​ ಎಂಜಿನ್​, ಸಿಂಗಲ್​ ಸಿಲಿಂಡರ್​ ಎಂಜಿನ್​ ಹೊಂದಿದೆ. ಸಿಕ್ಸ್​ ಸ್ಪೀಡ್​ ಮ್ಯಾನುಯೆಲ್​ ಗೇರ್​ ಬಾಕ್ಸ್​  ಜೊತೆಗೆ ಎಲ್​ಇಡಿ ಪ್ರೊಜೆಕ್ಟರ್​ ಹೆಡ್​ಲ್ಯಾಂಡ್​​ ಇದರಲ್ಲಿದೆ.  ಈ ಬೈಕಿನ ಬೆಲೆ 1.44 ಲಕ್ಷ ರೂ ಆಗಿದೆ.
Published by: Harshith AS
First published: January 13, 2021, 10:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading