ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ (Telecom Companies). ಇತರೆ ಕಂಪೆನಿಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಹೊಸ ಹೊಸ ಪ್ಲ್ಯಾನ್ಗಳನ್ನು ಒಂದಲ್ಲೊಂದು ಕಂಪೆನಿ ಹೊಸ ಹೊಸ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸುತ್ತಾ ಇರುತ್ತದೆ. ಈ ಮಧ್ಯೆ ದೇಶದ ಟೆಲಿಕಾಂ ಕಂಪೆನಿಗಳಲ್ಲಿ ನಂಬರ್ ಒನ್ ಎಂದು ಗುರುತಿಸಿಕೊಂಡಿರುವ ಜಿಯೋ (Jio) ಇತ್ತೀಚೆಗೆ ಕಡಿಮೆ ಬೆಲೆಯ ರೀಚಾರ್ಜ್ ಬೆಲೆಯನ್ನು ಪರಿಚಯಿಸಿತ್ತು. ಅದೇ ರೀತಿ ಇದಕ್ಕೆ ಪ್ರತಿಸ್ಪರ್ಧಿಯಾಗಿರುವ ಏರ್‌ಟೆಲ್ ಸಹ ಹೊಸ ರೀತಿಯ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸುತ್ತಲೇ ಇದೆ. ಇದೀಗ ಏರ್‌ಟೆಲ್ (Airtel) ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಕಳೆದ ಬಾರಿ ತನ್ನ ರೀಚಾರ್ಜ್ ಬೆಲೆಯನ್ನು (Recharge Price Hike) ಹೆಚ್ಚು ಮಾಡುವುದಾಗಿ ಹೇಳಿತ್ತು, ಆದರೆ ಈಗ ಈ ಕ್ರಮವನ್ನು ಕೈಗೊಂಡಿದೆ.
ಏರ್‌ಟೆಲ್ ಇದೀಗ ತನ್ನ ಪ್ರೀಪೇಯ್ಡ್ ಪ್ಲ್ಯಾನ್ನ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಸದ್ಯ ಈ ಕ್ರಮ ಕೆಲ ನಗರಗಳಲ್ಲಿ ಮಾತ್ರ ಕೈಗೊಂಡಿದ್ದು, ಕೆಲವೇ ದಿನಗಳಲ್ಲಿ ದೇಶದೆಲ್ಲೆಡೆ ಹೆಚ್ಚಾಗುವ ನಿರೀಕ್ಷೆಯಿದೆ.
57% ರಷ್ಟು ಏರಿಕೆ
ಭಾರ್ತಿ ಏರ್‌ಟೆಲ್ ಇತ್ತೀಚೆಗೆ, ಬೇಸ್ ಪ್ರಿಪೇಯ್ಡ್ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ. ಈ ಮೂಲಕ ಬೆಲೆಯಲ್ಲಿ 57 ಶೇಕಡಾದಷ್ಟು ಹೆಚ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಇದು ಏರ್‌ಟೆಲ್ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಏರ್‌ಟೆಲ್ ಕಂಪೆನಿಯು ಇತ್ತೀಚೆಗೆ ಕೆಲವೊಂದು ರೀಚಾರ್ಜ್ ಬೆಲೆಯಲ್ಲಿ ಸ್ವಲ್ಪ ಏರಿಕೆ ಮಾಡಿತ್ತು. ಇದೀಗ ಮತ್ತೆ ಪ್ರೀಪೇಯ್ಡ್ ಯೋಜನೆಗಳ ಬೆಲೆಯನ್ನು ಏರಿಕೆ ಮಾಡಿದೆ.
ಇದನ್ನೂ ಓದಿ: ಐಫೋನ್ 14 ಮೇಲೆ ಫ್ಲಿಪ್ಕಾರ್ಟ್ನಲ್ಲಿ ಬಂಪರ್ ಆಫರ್! ಈ ಸೇಲ್ ಮುಂದೆಂದೂ ಬರಲಿಕ್ಕಿಲ್ಲ
ದೇಶದ ಎಲ್ಲಾ ವಲಯದಲ್ಲಿ ಬೆಲೆ ಏರಿಕೆ
ಏರ್‌ಟೆಲ್ ಇತ್ತೀಚೆಗೆ ದೇಶದ ಎಲ್ಲಾ ವಲಯಗಳಲ್ಲಿ ತನ್ನ ರೀಚಾರ್ಜ್ ಪ್ಲಾನ್ನ ಬೆಲೆಯನ್ನು ಹೆಚ್ಚಿಸಿದೆ. ಇದೀಗ ಮತ್ತೆ 22 ವಲಯಗಳಲ್ಲಿ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯ ಬೆಲೆಯು 57 ಪ್ರತಿಶತದಷ್ಟು ಹೆಚ್ಚಾಗಿದೆ. ಏರ್‌ಟೆಲ್ ಕಂಪೆನಿಯ ಸರಾಸರಿ ಆದಾಯವನ್ನು ಹೆಚ್ಚಿಸಲು ಕಂಪೆನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಬಹುದು. ಇನ್ಮುಂದೆ ಏರ್‌ಟೆಲ್ ಪ್ರೀಪೇಯ್ಡ್ ಯೋಜನೆಗಳು 200 ರೂಪಾಯಿಗಿಂದ ಹೆಚ್ಷೇ ಇರುತ್ತದೆ.
ಕಳೆದ ನವೆಂಬರ್‌ನಲ್ಲಿ ಏರಿಕೆ
ಏರ್‌ಟೆಲ್ ಕಂಪೆನಿಯು ಕಳೆದ ನವೆಂಬರ್‌ನಲ್ಲಿ ಮೊದಲ ಬಾರಿಗೆ ರೀಚಾರ್ಜ್ ಬೆಲೆಯನ್ನು ಹೆಚ್ಚಿಸಿತು. ಈ ಬೆಲೆ ಏರಿಕೆ ನಿರ್ಧಾರ ಒಡಿಶಾ, ಹರಿಯಾಣದಂತಹ ವಲಯಗಳಲ್ಲಿ ಮಾತ್ರ ಅಳವಡಿಸಲಾಗಿದೆ. ನಂತರ ಈ ಬೆಲೆ ಏರಿಕೆಯನ್ನು ಇತರ ವಲಯಗಳಿಗೂ ವಿಸ್ತರಿಸಲಾಯಿತು. ಈ ಸಂದರ್ಭದಲ್ಲಿ ಏರ್‌ಟೆಲ್ ಗ್ರಾಹಕರ ಮೇಲೆ ಬಹಳಷ್ಟು ಪ್ರಭಾವ ಬೀರಿತ್ತು. ಇಲ್ಲಿಯವರೆಗೆ ಮೂಲ ಪ್ರಿಪೇಯ್ಡ್ ಯೋಜನೆಯು ರೂ. 99 ಆಗಿತ್ತು. ಆದರೆ ಈಗ ಎಲ್ಲಾ ವಲಯಗಳಲ್ಲಿ ಮೂಲ ಪ್ರಿಪೇಯ್ಡ್ ಪ್ಲಾನ್ ಬೆಲೆ ರೂ. 155ಕ್ಕೆ ಹೆಚ್ಚಾಗಿದೆ.
ಏರ್ಟೆಲ್ನ 155 ರೂಪಾಯಿ ಯೋಜನೆ
ಏರ್ಟೆಲ್ನ ಈ 155 ರೂಪಾಯಿ ಯೋಜನೆಯಲ್ಲಿ ಗ್ರಾಹಕರು 1 ಜಿಬಿ ಡೇಟಾವನ್ನು ಪಡೆಯಬಹುದು. ಜೊತೆಗೆ 300 ಎಸ್ಎಮ್ಎಸ್ ಮಾಡುವ ಸೌಲಭ್ಯವೂ ದೊರೆಯಲಿದೆ. ಇನ್ನು ಯಾವುದೇ ನೆಟ್ವರ್ಕ್ಗೂ ಅನಿಯಮಿತ ವಾಯ್ಸ್ ಕಾಲ್ ಮಾಡುವ ಸೌಲಭ್ಯ ದೊರೆಯಲಿದೆ.
ಈ ಮಧ್ಯೆ ಜಿಯೋ ರೀಚಾರ್ಜ್ನಲ್ಲಿ ಮತ್ತೆ ಇಳಿಕೆ
ಟೆಲಿಕಾಂ ದೈತ್ಯ ಕಂಪೆನಿಯಾಗಿರುವ ಜಿಯೋ ಕಡಿಮೆ ವೆಚ್ಚದ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುವಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಇದೀಗ 100 ರೂ.ಗಿಂತ ಕಡಿಮೆ ವೆಚ್ಚದ ಯೋಜನೆಗಳನ್ನು ಜಿಯೋ ಪರಿಚಯಿಸಿದ್ದು, ಆ ಯೋಜನೆಯ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ