1 ಲಕ್ಷದ ಸ್ಮಾರ್ಟ್​ಫೋನನ್ನು ಕೇವಲ 8 ಸಾವಿರಕ್ಕೆ ಖರೀದಿಸಿ! ಫ್ಲಿಪ್​ಕಾರ್ಟ್​ನ ಈ ಆಫರ್​ ಮಿಸ್​ ಮಾಡ್ಬೇಡಿ

Flipkart Big Saving Days Sale 2021: ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಝೆಡ್​ ಫ್ಲಿಪ್​ 3 ಸ್ಮಾರ್ಟ್​ಫೋನ್​ ಬಲು ದುಬಾರಿಯಾಗಿದೆ. ಇದ ಮಾರುಕಟ್ಟೆ ಬೆಲೆ 99,999 ರೂ ಆಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು 11% ರಿಯಾಯಿತಿಗೆ ಖರೀದಿಸುವ ಅವಕಾಶವನ್ನು ನೀಡಿದೆ.

ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್ ಡೇಸ್​

ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್ ಡೇಸ್​

 • Share this:
  Flipkart Big Saving Days Sale 2021: ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ(Flipkart) ಡಿಸೆಂಬರ್ 16 ರಿಂದ ಬಿಗ್ ಸೇವಿಂಗ್ ಡೇಸ್ ಸೇಲ್ (Big savings days sales) ನಡೆಸುತ್ತಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಂದ ಹಿಡಿದು ಗೃಹುಪಯೋಗಿ ವಸ್ತುಗಳವರೆಗೆ ಅನೇಕ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ. ಕೆಲವು ಬ್ರಾಂಡೆಡ್​ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಿದೆ. ದುಬಾರಿ ಬೆಲೆಯ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಝೆಡ್​ ಫ್ಲಿಪ್​ 3 (Samsung Galaxy Z Flip3 5G) ಸ್ಮಾರ್ಟ್‌ಫೋನ್ ಅನ್ನು ಕೇವಲ 7,417 ಕ್ಕೆ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ.

  Samsung Galaxy Z Flip 3

  ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಝೆಡ್​ ಫ್ಲಿಪ್​ 3 ಸ್ಮಾರ್ಟ್​ಫೋನ್​ ಬಲು ದುಬಾರಿಯಾಗಿದೆ. ಇದ ಮಾರುಕಟ್ಟೆ ಬೆಲೆ 99,999 ರೂ ಆಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು 11% ರಿಯಾಯಿತಿಗೆ ಖರೀದಿಸುವ ಅವಕಾಶವನ್ನು ನೀಡಿದೆ. ಅಂದರೆ  ಗ್ರಾಹಕರು 88,999 ರೂ.ಗೆ ಖರೀದಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೆ, ಕೇವಲ 7, 417 ರೂ.ಗೆ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಝೆಡ್​ ಫ್ಲಿಪ್​ 3 ಸ್ಮಾರ್ಟ್​ಫೋನ್​ ಅನ್ನು ಮನೆಗೆ ಕೊಂಡೊಯ್ಯುವ ಅವಕಾಶ ಮಾಡಿಕೊಟ್ಟಿದೆ.

  ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಡ್​ ಡೇಸ್​ ಸೇಲ್ ಮೂಲಕ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಝೆಡ್​ ಫ್ಲಿಪ್​ 3 ಸ್ಮಾರ್ಟ್​ಫೋನನ್ನು ಕೇವಲ  7,417 ರೂಪಾಯಿಗಳ ನೋ-ಕಾಸ್ಟ್ EMI ಆಯ್ಕೆಯನ್ನು ಪಡೆಯುವ ಅವಕಾಶವನ್ನು ತೆರೆದಿಟ್ಟಿದೆ. ಅಂದರೆ, ಮೊದಲಿಗೆ ಕೇವಲ 7,417 ರೂಪಾಯಿಗಳನ್ನು ಪಾವತಿಸಿದ ಮೇಲೆ ಮುಂದಿನ 12 ಕ್ಕೆ ಈ ಸ್ಮಾರ್ಟ್‌ಫೋನ್ ಅನ್ನು ಮನೆಗೆ ತರಬಹುದಾಗಿದೆ. ಇನ್ನು ಈ ಸ್ಮಾರ್ಟ್​ಫೋನ್​ ಖರೀದಿಸಿದ ನಂತರ ಪ್ರತಿ ತಿಂಗಳಿಗೆ ಇಎಮ್​ಐ ಆಯ್ಕೆಯ ಮೂಲಕ 7,417 ರೂ ಪಾವತಿಸಬೇಕಾಗುತ್ತದೆ. ಆದರೆ ಸ್ಮಾರ್ಟ್​ಫೋನ್​ ಖರೀದಿಯ ಮೇಲೆ ಯಾವುದೇ ಪ್ರಕ್ರಿಯೆ ಶುಲ್ಕ ಅಥವಾ ಬಡ್ಡಿ ವೆಚ್ಚ ಇರುವುದಿಲ್ಲ.

  ಇಎಮ್​ಐ ಆಯ್ಕೆಯಲ್ಲಿ Samsung Galaxy Z Flip3 ಅನ್ನು ಖರೀದಿಸಲು ಬಯಸದಿದ್ದರೂ ಸಹ, ಅದನ್ನು ಅಗ್ಗವಾಗಿ ಮನೆಗೆ ತೆಗೆದುಕೊಂಡು ಹೋಗಬಹುದು. 99,999  ರೂ ಬದಲಿಗೆ, ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 88,999 ರೂ.ಗೆ ಸಿಗಲಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, 5% ಅಂದರೆ 4,100 ರೂ ಕ್ಯಾಶ್‌ಬ್ಯಾಕ್ ಸಿಗಲಿದೆ. ಈ ಡೀಲ್‌ನಲ್ಲಿ ಒಳಗೊಂಡಿರುವ ಪ್ರಿಪೇಯ್ಡ್ ಆಫರ್‌ ಜೊತೆಗೆ ಯಾವುದೇ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ 7 ಸಾವಿರ ರೂ ಸಿಗಲಿದೆ. ತ್ವರಿತ ರಿಯಾಯಿತಿ ಲಭ್ಯವಿದ್ದು, ಈ ಕಾರಣದಿಂದಾಗಿ ಫೋನ್‌ನ್ನು 77,899 ರೂ.ಗೆ ಕೊಂಡೊಯ್ಯಬಹುದು.

  ಇದನ್ನು ಓದಿ: Flipkart Big Saving Days 2021: ಕೇವಲ 10 ಸಾವಿರಕ್ಕೆ ಖರೀದಿಸಿ Mi 40 ಇಂಚಿನ ಸ್ಮಾರ್ಟ್​ಟಿವಿ!

  ಈ ಡೀಲ್ ನಲ್ಲಿ ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ. ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಖರೀದಿಸಿದರೆ, 15,450 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಈ ಕೊಡುಗೆಯ ಸಂಪೂರ್ಣ ಪ್ರಯೋಜನವನ್ನು ಪಡೆದ ನಂತರ, ಫೋನ್‌ನ ಬೆಲೆ 62,449 ರೂ.ಗೆ ಇಳಿಯುತ್ತದೆ.

  ಇದನ್ನು ಓದಿ: Flipkart Big Saving Days: ಸ್ಮಾರ್ಟ್​ಫೋನ್​, ಸ್ಮಾರ್ಟ್​ಟಿವಿಗಳ ಮೇಲೆ ಭರ್ಜರಿ ರಿಯಾಯಿತಿ​

  ಸ್ಯಾಮ್‌ಸಂಗ್‌ನ ಈ 5G ಸ್ಮಾರ್ಟ್‌ಫೋನ್ 8GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. Qualcomm Snapdragon 888 ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸ್ಮಾರ್ಟ್‌ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ, ಇದರಲ್ಲಿ ಎರಡೂ 12MP ಸೆನ್ಸಾರ್​ ನೀಡಲಾಗಿದೆ. ಅಲ್ಲದೆ, ಮುಂಭಾಗದ ಕ್ಯಾಮೆರಾ 10MP ಆಗಿದೆ. 6.7-ಇಂಚಿನ ಪೂರ್ಣ HD + ಡೈನಾಮಿಕ್ AMOLED 2x ಡಿಸ್ಪ್ಲೇಯೊಂದಿಗೆ, 3,300mAh ಬ್ಯಾಟರಿಯನ್ನು ಅಳವಡಿಸಿಕೊಂಡಿದೆ. ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಝೆಡ್​ ಫ್ಲಿಪ್​ 3 ಸ್ಮಾರ್ಟ್​ಫೋನ್​ ಒಂದು ವರ್ಷದ ವಾರಂಟಿ ಜೊತೆಗೆ ಇನ್-ಬಾಕ್ಸ್ ಬಿಡಿಭಾಗಗಳಿಗೆ ಆರು ತಿಂಗಳುಗಳ ವ್ಯಾರಂಟಿ ನೀಡಲಾಗಿದೆ.
  Published by:Harshith AS
  First published: