ಸ್ಮಾರ್ಟ್ಫೋನ್ಗಳು (Smartphones) ಇಂದಿನ ದಿನದಲ್ಲಿ ಪ್ರತಿಯೊಬ್ಬರರಿಗೂ ಅಗತ್ಯ ಸಾಧನವಾಗಿಬಿಟ್ಟಿದೆ. ಇನ್ನು ಕೆಲವೊಂದು ಕಂಪೆನಿಗಳು ತನ್ನದೇ ಆದ ಮಾದರಿಯಲ್ಲಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬಹಳಷ್ಟು ಗ್ರಾಹಕರನ್ನು ಹೊಂದಿದೆ. ಇದೀಗ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕ ಕಂಪೆನಿಗಳಲ್ಲಿ ಒಂದಾಗಿರುವ ರೆಡ್ಮಿ ಕಂಪೆನಿ (Redmi Company) ಇದೀಗ ತನ್ನ ಬ್ರಾಂಡ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಈ ಬಗ್ಗೆ ಇತ್ತೀಚೆಗ ಕೆಲದಿನಗಳ ಹಿಂದೆ ಶಿಯೋಮಿ ಕಂಪೆನಿ (Xiaomi Company) ತನ್ನ ಬ್ರಾಂಡ್ನಿಂದ ಬಜೆಟ್ ಬೆಲೆಯ ಮೊಬೈಲ್ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಅದೇ ರೀತಿ ಇದೀಗ ಆ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಜನಪ್ರಿಯ ಸ್ಮಾರ್ಟ್ಫೊನ್ ತಯಾರಕ ಕಂಪೆನಿಯಾಗಿರುವ ಶಿಯೋಮಿ ಕಂಪೆನಿಯಿಂದ ಇದೀಗ ರೆಡ್ಮಿ 12ಸಿ ಎಂಬ ಸ್ಮಾರ್ಟ್‌ಫೋನ್ ಲಾಂಚ್ ಆಗಿದೆ. ಈ ಸ್ಮಾರ್ಟ್‌ಫೋನ್ ಆರಂಭದಲ್ಲಿ ಭಾರೀ ಅಗ್ಗದಲ್ಲಿ ದೊರೆಯುತ್ತಿದ್ದು, ಕೆಲವೇ ದಿನಗಳಲ್ಲಿ ಖರೀದಿ ಮಾಡಬಹುದಾಗಿದೆ.
ಡಿಸ್ಪ್ಲೇ ವಿನ್ಯಾಸ
ರೆಡ್ಮಿ 12ಸಿ ಸ್ಮಾರ್ಟ್‌ಫೋನ್ ವಿಶೇಷವಾಗಿ 1650 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 6.71 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 20.6:9 ರಚನೆಯ ಅನುಪಾತವನ್ನು ಒಳಗೊಂಡಿದೆ.
ಇದನ್ನೂ ಓದಿ: Electricity Bill: ಬೇಸಿಗೆಯಲ್ಲಿ ಎಸಿ ಬಳಸುವಾಗ ಈ ಟಿಪ್ಸ್ ಫಾಲೋ ಮಾಡಿದ್ರೆ, ಕರೆಂಟ್ ಬಿಲ್ ಬಗ್ಗೆ ಚಿಂತೆನೇ ಇರಲ್ಲ
ಪ್ರೊಸೆಸರ್ ಸಾಮರ್ಥ್ಯ
ಇನ್ನು ಈ ಸ್ಮಾರ್ಟ್ಫೋನ್ನ ಪ್ರೊಸೆಸರ್ ಸಾಮರ್ಥ್ಯದ ಬಗ್ಗೆ ಹೇಳುವುದಾದ್ರೆ, ಇದು ಮಿಡಿಯಾಟೆಕ್ ಹಿಲಿಯೋ G85 ಎಸ್ಓಸಿ ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು, ಇದು ಆಂಡ್ರಾಯ್ಡ್ 12 ಆಧಾರಿತ MIUI 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಎರಡು ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ಸ್ ಮತ್ತು ಮೂರು ವರ್ಷಗಳ ಸೆಕ್ಯುರಿಟಿ ಅಪ್ಡೇಟ್ ಅನ್ನು ಸಹ ಪಡೆದಿದೆ. ಹಾಗೆಯೇ 4ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.
ಕ್ಯಾಮೆರಾ ಫೀಚರ್ಸ್
ರೆಡ್ಮಿ 12ಸಿ ಸ್ಮಾರ್ಟ್‌ಫೋನ್ ವಿಶೇಷವಾಗಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ರಿಯರ್ ಕ್ಯಾಮೆರಾ ಮೂಲಕ ಪ್ರತಿ ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ (fps) 1080p ವರೆಗಿನ ವಿಡಿಯೋ ರೆಕಾರ್ಡ್ ಮಾಡಬಹುದು ಎಂದು ಕಂಪೆನಿ ಹೇಳಿದೆ.
ಬ್ಯಾಟರಿ ಸಾಮರ್ಥ್ಯ
ರೆಡ್ಮಿ 12ಸಿ ಸ್ಮಾರ್ಟ್‌ಫೋನ್ 10W ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 5000mAh ಸಾಮರ್ಥ್ಯ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದೆ.
ಬೆಲೆ ಮತ್ತು ಲಭ್ಯತೆ
ಈ ರೆಡ್ಮಿ 12C ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದೇ ಸ್ಟೋರೇಜ್ ಮಾದರಿಯಲ್ಲಿ ಇಂಡೋನೇಷ್ಯಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಅಲ್ಲಿ ಇದರ 4ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ವೇರಿಯಂಟ್ ಆಯ್ಕೆಗೆ IDR 1,599,000. ಅಂದರೆ ಭಾರತದಲ್ಲಿ ಅಂದಾಜು 8,500 ರೂಪಾಯಿಯಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಶ್ಯಾಡೋ ಬ್ಲಾಕ್, ಸೀ ಬ್ಲೂ, ಮಿಂಟ್ ಗ್ರೀನ್ ಮತ್ತು ಲ್ಯಾವೆಂಡರ್ ಕಲರ್‌ಗಳ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಇನ್ನು ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪೆನಿ ಹೇಳಿದೆ.
ಫೋಲ್ಡಬಲ್ ಸ್ಮಾರ್ಟ್‌ಫೋನ್
ಒಪ್ಪೋ ಕಂಪೆನಿಯಿಂದ ಒಂದು ಮಹತ್ತರವಾದ ಘೋಷಣೆಯಾಗಿತ್ತು. ಅದೇ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು, ಅದೇ ರೀತಿ ಈ ಸ್ಮಾರ್ಟ್‌ಫೋನ್ ಕೆಲವು ದಿನಗಳ ಹಿಂದೆ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಆಗಿತ್ತು. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರಲಿಲ್ಲ. ಇದೀಗ ಭಾರತೀಯ ಗ್ರಾಹಕರಿಗೆ ಕಂಪೆನಿ ಗುಡ್ ನ್ಯೂಸ್ ನೀಡಿದೆ.
ಒಪ್ಪೋ ಕಂಪೆನಿಯಿಂದ ಇತ್ತೀಚೆಗ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದ ಒಪ್ಪೋ ಫೈಂಡ್ ಎನ್2 ಫ್ಲಿಪ್ ಸ್ಮಾರ್ಟ್‌ಫೋನ್ ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಒಪ್ಪೋ ಫೈಂಡ್ ಎನ್2 ಫ್ಲಿಪ್ ಬೆಲೆ ಯುರೋಪ್‌ನಲ್ಲಿ EUR 849 ಆಗಿದೆ. ಇನ್ನು ಭಾರತದಲ್ಲಿ ಈ ಫೋನಿನ ಆರಂಭಿಕ ವೇರಿಯಂಟ್ ಬೆಲೆ 80,000 ರೂಪಾಯಿಗಳ ಆಸುಪಾಸಿನಲ್ಲಿ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ