ಸಾಮನ್ಯವಾಗಿ ಇತ್ತೀಚಿನ ಕಾಲಮಾನದಲ್ಲಿ ಎಲ್ಲವೂ ಆನ್ಲೈನ್ (Online Shopping) ಮೂಲಕವೇ ಶಾಪಿಂಗ್ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅದರಲ್ಲಿರುವಂತಹ ಆಫರ್ಸ್ಗಳಾಗಿರಬಹುದು, ಪ್ರೊಡಕ್ಟ್ನ ಬೆಲೆಯಾಗಿರಬಹುದು. ಜನಪ್ರಿಯ ಇಕಾಮರ್ಸ್ ವೆಬ್ಸೈಟ್ ಆಗಿರುವ ಅಮೆಜಾನ್ (Amazon) ತನ್ನ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಏನಾದರೊಂದು ವಿಶೇಷ ಸೇಲ್ ಅನ್ನು ಆರಂಭಿಸುತ್ತಲೇ ಇರುತ್ತದೆ. ಅದ್ರಲ್ಲೂ ಹಬ್ಬಗಳು ಬಂದಾಗ ಕೇಳೋದೇ ಬೇಡ. ಇಕಾಮರ್ಸ್ ವೆಬ್ಸೈಟ್ಗಳಲ್ಲೂ (E-Commerse Websites) ಹಬ್ಬವೋ ಹಬ್ಬ. ಇನ್ನೇನೋ ಕೆಲವೇ ದಿನಗಳಲ್ಲಿ ಸಂಕ್ರಾಂತಿ ಹಬ್ಬ ಬಂದೇ ಬಿಡುತ್ತೆ. ಇದೀಗ ಅಮೆಜಾನ್ ಈ ಹಿನ್ನಲೆಯಲ್ಲಿ ಗ್ಯಾಜೆಟ್ಸ್ಗಳ (Gadgets) ಮೇಲೆ ಭಾರೀ ಡಿಸ್ಕೌಂಟ್ ಆಫರ್ ಅನ್ನು ಘೋಷಿಸಿದೆ.
ಇದೀಗ ಪ್ರಸಿದ್ಧ ಇಕಾಮರ್ಸ್ ಕಂಪೆನಿಯಾಗಿರುವ ಅಮೆಜಾನ್ ’ಪೊಂಗಲ್ ಮತ್ತು ಸಂಕ್ರಾಂತಿ ಶಾಪಿಂಗ್ ಸ್ಟೋರ್’ ಎಂಬ ಆಫರ್ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್ನಲ್ಲಿ ಗ್ರಾಹಕರು ಗ್ಯಾಜೆಟ್ಸ್ಗಳನ್ನು ಅಗ್ಗದ ಬೆಲೆಯಲ್ಲಿ ಹೊಂದಬಹುದು. ಇನ್ನು ಈ ಸೇಲ್ ಜನವರಿ 18, 2023ರವರೆಗೆ ಲಭ್ಯವಿರುತ್ತದೆ.
ಯಾವೆಲ್ಲಾ ಕಂಪೆನಿಗಳ ಗ್ಯಾಜೆಟ್ಗಳ ಮೇಲೆ ಆಫರ್?
ಅಮೆಜಾನ್ ಇದೀಗ ಪೊಂಗಲ್ ಮತ್ತು ಸಂಕ್ರಾಂತಿ ಶಾಪಿಂಗ್ ಸ್ಟೋರ್ ಅನ್ನು ಆರಂಭಿಸಿದ್ದು ಇದು ಇದೇ ಜನವರಿ 18, 2023ರವರೆಗೆ ಲಭ್ಯವಿರುತ್ತದೆ. ಇನ್ನು ಈ ಸೇಲ್ನಲ್ಲಿ ಫಿಲಿಪ್ಸ್, ಸ್ಕೈಬ್ಯಾಗ್ಸ್, ಸಫಾರಿ, ಕ್ಯಾಡ್ಬರಿ, ಒನ್ಪ್ಲಸ್, ಅಸುಸ್ ಹಾಗೂ ಇನ್ನೂ ಹಲವಾರು ಬ್ರಾಂಡ್ಗಳ ಮೇಲೆ ಆಫರ್ ಅನ್ನು ಘೋಷಿಸಿದೆ. ಅವುಗಳ ಕಂಪ್ಲೀಟ್ ಮಾಹಿತಿ ಈ ಕೆಳಗಿನ ಲೇಖನದಲ್ಲಿ ತಿಳೀಸಲಾಗಿದೆ.
ಇದನ್ನೂ ಓದಿ: ಈ ರೀಚಾರ್ಜ್ ಪ್ಲ್ಯಾನ್ ಮೂಲಕ ಅನ್ಲಿಮಿಟೆಡ್ ಡೇಟಾ ಪ್ರಯೋಜನ ಪಡೆಯಿರಿ! ಬೆಲೆ ಎಷ್ಟು?
ರೆಡ್ಮಿ ಸ್ಮಾರ್ಟ್ಟಿವಿ
32 ಇಂಚಿನ ರೆಡ್ಮಿ ಸ್ಮಾರ್ಟ್ಟಿವಿಯನ್ನು ಈ ಸೇಲ್ನಲ್ಲಿ ಕೇವಲ 13,999 ರೂಪಾಯಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್ಟಿವಿಯ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು ಕ್ವಾಡ್ಕೋರ್ ಪ್ರೊಸೆಸರ್ನೊಂದಿಗೆ , ಆಂಡ್ರಾಯ್ಡ್ 11 ರಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಈ ಟಿವಿಯು ಡ್ಯುಯಲ್ ಬ್ಯಾಂಡ್ ವೈಫೈ ಅನ್ನು ಸಹ ಬೆಂಬಲಿಸುತ್ತದೆ.
ಅಸುಸ್ ವಿವೋ ಬುಕ್ ಪ್ರೋ 16
ಅಸುಸ್ ವಿವೋಬುಕ್ ಪ್ರೋ 16 ಅನ್ನು 99,990 ರೂಪಾಯಿಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಲ್ಯಾಪ್ಟಾಪ್ ಇಂಟೆಲ್ ಕೋರ್ i9-11900H 11 ಜನ್ ಪ್ರೊಸೆಸರ್ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದ ಲ್ಯಾಪ್ಟಾಪ್ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಒನ್ಪ್ಲಸ್ ನಾರ್ಡ್ ಸಿಇ 2 ಲೈಟ್ 5ಜಿ ಸ್ಮಾರ್ಟ್ಫೋನ್
ಒನ್ಪ್ಲಸ್ ನಾರ್ಡ್ ಸಿಇ 2 ಲೈಟ್ ಸ್ಮಾರ್ಟ್ಫೋನ್ 5ಜಿ ನೆಟ್ವರ್ಕ್ ಅನ್ನು ಬೆಂಬಲಿಸುತ್ತದೆ. ಇನ್ನು 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ ಸ್ಮಾರ್ಟ್ಫೋನ್ ಅನ್ನು ಇದೀಗ ಅಮೆಜಾನ್ನಲ್ಲಿ ಆಫರ್ನಲ್ಲಿ ಕೇವಲ 18,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ ಆಕ್ಸಿಜನ್ ಓಎಸ್ 12.1 ನ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಬಹಳಷ್ಟು ವೇಗದ ಕಾರ್ಯಕ್ಷಮತೆಯನ್ನು ಸಹ ಒಳಗೊಂಡಿದೆ.
ಬೌಲ್ಟ್ ಡೈವ್+ ಸ್ಮಾರ್ಟ್ವಾಚ್
ಬೌಲ್ಟ್ ಡೈವ್+ ಸ್ಮಾರ್ಟ್ವಾಚ್ ವಿಶೇಷವಾಗಿ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇನ್ನು ಬೌಲ್ಟ್ ಕಂಪನಿಯ ಈ ಸ್ಮಾರ್ಟ್ವಾಚ್ ಅನ್ನು ಅಮೆಜಾನ್ನಲ್ಲಿ 1,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಇದರ ಫೀಚರ್ಸ್ ಬಗ್ಗೆ ಹೇಳುವುದಾದರೆ ಇದು 1.85 ಇಂಚಿನ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿದೆ. ಜೊತೆಗೆ 500 ನಿಟ್ಸ್ ಬ್ರೈಟ್ನೆಸ್ ಆಯ್ಕೆಯೊಂದಿಗೆ ಈ ಡಿಸ್ಪ್ಲೇಯು ಬರುತ್ತದೆ. ಇನ್ನು ಈ ಸ್ಮಾರ್ಟ್ವಾಚ್ 150 ಕ್ಕೂ ಹೆಚ್ಚು ವಾಚ್ ಫೇಸ್ಗಳನ್ನು ಒಳಗೊಂಡಿದೆ.
ಇದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಮೆಜಾನ್ ಗ್ಯಾಜೆಟ್ಗಳ ಮೇಲೆ ನೀಡುತ್ತಿರುವ ವಿಶೇಷ ರಿಯಾಯಿತಿಗಳಾಗಿವೆ. ಇನ್ನೂ ಹಲವಾರು ಆಫರ್ಸ್ಗಳು ಇದರಲ್ಲಿ ಲಭ್ಯವಿದ್ದು, ಹೊಸ ಹೊಸ ಟೆಕ್ ಡಿವೈಸ್ಗಳನ್ನು ಖರೀದಿಸಬೇಕೆನ್ನುವ ಯೋಜನೆಯಲ್ಲಿರುವವರಿಗೆ ಇದು ಉತ್ತಮ ಸಮಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ