Mobile phone users ALERT: ಮೊಬೈಲ್ ಸಿಮ್ ಖರೀದಿ ನಿಯಮದಲ್ಲಿ ದೊಡ್ಡ ಬದಲಾವಣೆ ತಂದ ಸರ್ಕಾರ.. ಏನದು?

ಗ್ರಾಹಕರೇ ನೇರವಾಗಿ ಆನ್‍ಲೈನ್ ನಲ್ಲಿ ಕೆವೈಸಿ ಭರ್ತಿ ಮಾಡಬಹುದಾಗಿದೆ. ಹೊಸ ನಿಯಮಗಳ ಪ್ರಕಾರ, ಬಳಕೆದಾರರು ಕೆವೈಸಿ ಮಾಡಲು ಕೇವಲ 1 ರೂ. ಮಾತ್ರ ಪಾವತಿಸಬೇಕು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ(pm modi govt) ಮೊಬೈಲ್ ಬಳಕೆದಾರರಿಗೆ(Mobile phone users) ಗುಡ್ ನ್ಯೂಸ್ ನೀಡಿದೆ. ಸಿಮ್ ಕಾರ್ಡ್ ಗಳಿಗೆ(sim card) ಸಂಬಂಧಿಸಿದ ನಿಯಮಗಳಲ್ಲಿ ಬಹುದೊಡ್ಡ ಬದಲಾವಣೆಗಳನ್ನು ತಂದಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಅನುಕೂಲ ಮಾಡಿದೆ. ಮೊಬೈಲ್ ಕನೆಕ್ಷನ್ ಅಥವಾ ಹೊಸ ಸಿಮ್ ಖರೀದಿ ಅಥವಾ ಪ್ರಿಪೇಯ್ಡ್ ನಿಂದ ಪೋಸ್ಟ್ ಪೇಡ್ ಗೆ ಬದಲಿಸಿಕೊಳ್ಳುವ ಪ್ರಕ್ರಿಯೆ ಮತ್ತಷ್ಟು ಸರಳೀಕೃತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇಂದು ಮೊಬೈಲ್ ಇಲ್ಲದ ಕ್ಷಣಗಳನ್ನ ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ರೆ ಕೆಲವೊಮ್ಮೆ ಸಿಮ್ ನೆಟ್‍ವರ್ಕ್ ಗೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ರೀಟೈಲ್ ಸ್ಟೋರ್ ಗೆ ತೆರಳಿ ದಾಖಲೆಗಳನ್ನು ಸಲ್ಲಿಸಬೇಕಿತ್ತು. ಈಗ ಸರ್ಕಾರ ಈ ಪ್ರಕ್ರಿಯೆಯನ್ನ ಡಿಜಟಲೀಕರಣಗೊಳಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ಬಳಿಕ ಗ್ರಾಹಕರು ಮನೆಯಲ್ಲಿಯೇ ಕುಳಿತು ಕೆವೈಸಿ(KYC- Know Your Customer)ಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದಾಗಿದೆ. ಹೊಸ ಸಿಮ್ ಕಾರ್ಡ್ ಖರೀದಿಸಲು ಡಿಜಿಟಲ್ ಮೋಡ್ ನಲ್ಲಿಯೇ ಕೆವೈಸಿ ಫಿಲ್ ಮಾಡಬೇಕು. ಇದರ ಜೊತೆಗೆ ಸಿಮ್ ಪೋರ್ಟ್ (ನೆಟ್‍ವರ್ಕ್ ಬದಲಾವಣೆ)ಗೂ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ.

ಆನ್‍ಲೈನ್ ನಲ್ಲಿ ಕೆವೈಸಿ ಭರ್ತಿ ಮಾಡುವುದು ಹೇಗೆ?

ಗ್ರಾಹಕರೇ ನೇರವಾಗಿ ಆನ್‍ಲೈನ್ ನಲ್ಲಿ ಕೆವೈಸಿ ಭರ್ತಿ ಮಾಡಬಹುದಾಗಿದೆ. ಹೊಸ ನಿಯಮಗಳ ಪ್ರಕಾರ, ಬಳಕೆದಾರರು ಕೆವೈಸಿ ಮಾಡಲು ಕೇವಲ 1 ರೂ. ಮಾತ್ರ ಪಾವತಿಸಬೇಕು. ಆನ್‍ಲೈನ್ ಕೆವೈಸಿಯನ್ನು  ಇ-ಕೆವೈಸಿ ಅಂತಾ ಸಹ ಕರೆಯಲಾಗುತ್ತದೆ. ಈ ಮೊದಲು ಪ್ರಿಪೇಡ್ ನಂಬರ್ ನ್ನು  ಪೋಸ್ಟ್ ಪೇಯ್ಡ್ ಅಥವಾ ಪೋರ್ಟ್ ಮಾಡಲು ಪ್ರತಿಬಾರಿ ಕೆವೈಸಿ ದಾಖಲೆಯನ್ನು ಸಮೀಪದ ಮಳಿಗೆಯಲ್ಲಿ ಸಲ್ಲಿಸಬೇಕಿತ್ತು. ಆದ್ರೆ ಈಗ ಒಂದು ಬಾರಿ ಮಾತ್ರ ಕೆವೈಸಿ ಭರ್ತಿ ಮಾಡಬೇಕು.

ಕೇವಲ 1 ರೂಪಾಯಿ..!  

ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ಕೇಂದ್ರ ಸಂವಹನ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnav), ಕೆವೈಸಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ನಿರ್ಧರಿಸಲಾಗಿದೆ. ಇಡೀ ಕೆವೈಸಿ ಪ್ರಕ್ರಿಯೆ ಕಾಗದ ರಹಿತವಾಗಿ ಆಧಾರ್ ಆಧಾರಿತ, ಎಲೆಕ್ಟ್ರಾನಿಕ್, ಗ್ರಾಹಕ ಕೇಂದ್ರಿಕೃತವಾಗುತ್ತದೆ. ಈ ಸೇವೆಗಾಗಿ ಯುಐಡಿಎಐ (UIDAI) 1 ರೂ.ಯನ್ನು ಚಾರ್ಜ್ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ. ಪೋಸ್ಟ್ ಪೇಡ್ ನಿಂದ ಪ್ರಿಪೇಡ್ ಅಥವಾ ಯಾವುದೇ ಸಿಮ್ ಗೆ ಸಂಬಂಧಿಸಿದ ಪ್ರಕ್ರಿಯೆ ನಡೆಸುವಾಗ ಒಟಿಪಿ (OTP) ನಿಮಗೆ ಸಿಗಲಿದೆ.

ಇದನ್ನೂ ಓದಿ: Mobile SIM: ಇನ್ಮುಂದೆ ಮನೆ ಬಾಗಿಲಿಗೆ ಬಂದು ತಲುಪಲಿದೆ ಸಿಮ್ ಕಾರ್ಡ್!

ಹೊಸ ಸಿಮ್ ಖರೀದಿಸಲು ಗ್ರಾಹಕರು ರೀಟೈಲ್ ಶಾಪ್ ತೆರಳುವ ಅವಶ್ಯಕತೆ ಇಲ್ಲ. ಸೆಲ್ಫ್ ಕೆವೈಸಿ ಮೂಲಕ ಸಿಮ್ ಕಾರ್ಡ್ ಗೆ ಅಪ್ಲೈ ಮಾಡಬಹುದು. ನಂತರ ಸಿಮ್ ನೇರವಾಗಿ ನಿಮ್ಮ ಮನೆಗೆ ಕಳುಹಿಸಲಾಗುತ್ತದೆ. ಸಿಮ್ ಖರೀದಿ ವೇಳೆ ಇ-ದಾಖಲೆಗಳು ಯುಐಡಿಎಈ ಮತ್ತು ಡಿಜಿಲಾಕರ್ ನಿಂದ ವೆರಿಫೈ ಮಾಡಿರಬೇಕು. (2015ರಲ್ಲಿ ದಾಖಲೆಗಳ ಸಂಗ್ರಹಕ್ಕೆ ಪ್ರಧಾನಿ ಮೋದಿ ಸರ್ಕಾರ ಡಿಜಿ ಲಾಕರ್ ವ್ಯವಸ್ಥೆಯನ್ನು ಪರಿಚಯಿಸಿತ್ತು) ಗ್ರಾಹಕರು ಡಿಜಿ ಲಾಕರ್ ನಲ್ಲಿ ವೋಟರ್ ಐಡಿ, ಪಾನ್ ಕಾರ್ಡ್, ಪಾಲಿಸಿ ಡಾಕ್ಯೂಮೆಂಟ್ಸ್ ಸೇರಿದಂತೆ ಇನ್ನಿತರ ಮಹತ್ವದ ದಾಖಲೆಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ.

ವರದಿ: ಮೊಹ್ಮದ್​ ರಫೀಕ್​ ಕೆ.
Published by:Kavya V
First published: