• Home
 • »
 • News
 • »
 • tech
 • »
 • BBK8: ಅರವಿಂದ್, ದಿವ್ಯಾ ವೈಯಕ್ತಿಕ ಫೋಟೋಗಳು ಲೀಕ್? ಕೋರ್ಟ್ ಮೊರೆ ಹೋದ ಸ್ಪರ್ಧಿ

BBK8: ಅರವಿಂದ್, ದಿವ್ಯಾ ವೈಯಕ್ತಿಕ ಫೋಟೋಗಳು ಲೀಕ್? ಕೋರ್ಟ್ ಮೊರೆ ಹೋದ ಸ್ಪರ್ಧಿ

ಅರವಿಂದ್​-ದಿವ್ಯಾ

ಅರವಿಂದ್​-ದಿವ್ಯಾ

arvind kp and divya uruduga : ಬಿಗ್​ಬಾಸ್​​ನಲ್ಲಿ ಈಗ ಉಳಿದುಕೊಂಡಿರು ಇತರೆ ಸ್ಪರ್ಧಿಗಳ ಬೆಂಬಲಿಗರು ಈ ರೀತಿ ಫೋಟೋಗಳನ್ನು ಹರಿಬಿಟ್ಟು ದಿವ್ಯಾ, ಅರವಿಂದ್ ಗೆಲುವಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. 

 • Share this:

  ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಬಿಗ್‌ಬಾಸ್ ಸೀಸನ್ 8 ರಲ್ಲಿ ಹೆಚ್ಚು ಮನೆಮಾತಾಗಿರುವ ಸ್ಪರ್ಧಿಗಳು. ಬಿಗ್‌ಬಾಸ್ ಅಭಿಮಾನಿಗಳು ಈ ಜೋಡಿಯನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇವರ ಜೋಡಿ ತುಂಬಾ ಹಿಟ್ ಎನ್ನಿಸಿದ್ದು ಇವರನ್ನು ಜೊತೆಯಾಗಿ ನೋಡುವುದೇ ಸಂಭ್ರಮ ಎಂಬುದು ಇವರ ಅಭಿಮಾನಿಗಳ ವಲಯದಲ್ಲಿ ಕೇಳಿಬಂದಿರುವ ಮಾತಾಗಿದೆ. ಇತರೆ ಸ್ಪರ್ಧಿಗಳಿಗೆ ಹೋಲಿಸಿದಾಗ ಇವರ ಅಭಿಮಾನಿ ಬೆಂಬಲ ತುಸು ಹೆಚ್ಚಾಗಿಯೇ ಇದೆ. ವಿರಾಟ್​​-ಅನುಷ್ಕಾ ಹೆಸರು ಸೇರಿಸಿ ಅವರ ಅಭಿಮಾನಿಗಳು ವಿರುಷ್ಕಾ ಎನ್ನುವಂತೆ,  ಅರವಿಂದ್​-ದಿವ್ಯಾ ಹೆಸರನ್ನು ಸೇರಿಸಿ ಆರ್​​ವಿಯಾ ಎಂದು ವೀಕ್ಷಕರು ನೇಮ್​ ಕ್ರಿಯೇಟ್​ ಮಾಡಿದ್ದಾರೆ.  ಆರ್‌ವಿಯಾ ಎಂಬ ಫ್ಯಾನ್ ಪೇಜ್ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಸದ್ದುಮಾಡಿದೆ.


  ಬಿಗ್‌ಬಾಸ್ ಮನೆಯನ್ನು ಪ್ರವೇಶಿಸುವ ಪ್ರತಿಯೊಬ್ಬ ಸ್ಪರ್ಧಿ ಕೂಡ ತಮ್ಮದೇ ಆದ ವೈಯಕ್ತಿಕ ಜೀವನ ಹಾಗೂ ಹಿಂದಿನ ಘಟನೆಗಳನ್ನು ಹೊಂದಿರುತ್ತಾರೆ.ಕೆಲ ಸ್ಪರ್ಧಿಗಳು ಮನೆಯಲ್ಲಿ ಪರಿಚಿತರಾಗಿ ಸ್ಪರ್ಧೆ ಮುಗಿದ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೂ ಇದೆ. ಈಗ ಅರವಿಂದ್ ಹಾಗೂ ದಿವ್ಯಾ ನಡುವೆ ಕೂಡ ಇದೇ ರೀತಿಯ ಗಾಸಿಪ್ ಕಳೆಗಟ್ಟಿದ್ದು ಇವರಿಬ್ಬರೂ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ಬಿಗ್​ಬಾಸ್​ ಫಿನಾಲೆಗೆ ಕೆಲವೇ ದಿನಗಳ ಬಾಕಿ ಇರುವಾಗ ಅರವಿಂದ್​​-ದಿವ್ಯಾ ಹೊಸ ವಿವಾದಕ್ಕೆ ಒಳಗಾಗಿದ್ದಾರೆ.


  ಅರವಿಂದ್ ಹಾಗೂ ದಿವ್ಯಾ ಅವರ ಮಾಜಿ ಪ್ರೇಮಿಗಳ ಜೊತೆ ಇದ್ದಾರೆ ಎನ್ನಲಾಗುತ್ತಿರುವ ಫೋಟೋಗಳನ್ನು ಲೀಕ್ ಮಾಡಲಾಗಿದ್ದು, ಇದೀಗ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿ ಪ್ರಚಾರ ಪಡೆದುಕೊಳ್ಳುತ್ತಿದೆ. ಅರವಿಂದ ಹಾಗೂ ದಿವ್ಯಾ ಅವರ ಅಭಿಮಾನಿಗಳು ಈ ಫೋಟೋಗಳನ್ನು ಅಳಿಸುವಂತೆ ವಿನಂತಿಸಿದ್ದು ಫೋಟೋ ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡಿದವರಿಗೆ ಛೀಮಾರಿ ಹಾಕಿದ್ದಾರೆ. ಇತರರ ಅನುಮತಿಯಿಲ್ಲದೆ ಅವರ ವೈಯಕ್ತಿಕ ಫೋಟೋಗಳನ್ನು ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡುವುದು ಅಪರಾಧ ಎಂಬುದು ಇವರಿಗೆ ಗೊತ್ತಿಲ್ಲವೇನೋ ಎಂಬ ಕಾಮೆಂಟ್ ಕೂಡ ಅಭಿಮಾನಿ ಬಳಗದಲ್ಲಿ ಹರಿದಾಡುತ್ತಿದೆ.


  ಇದಕ್ಕೆ ದಿವ್ಯಾ ಪರ ವಕೀಲರು ಕೋರ್ಟ್​​ ಮೊರೆ ಹೋಗಿ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಇವರ ಕೋರಿಕೆ ಅಂಗೀಕರಿಸಿ ಕೋರ್ಟ್​ ಆದೇಶ ನೀಡಿದರೆ ದಿವ್ಯಾ ಅವರ ಫೋಟೋಗಳನ್ನು ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎನ್ನಲಾಗುತ್ತಿದೆ. ಬಿಗ್​ಬಾಸ್​​ನಲ್ಲಿ ಈಗ ಉಳಿದುಕೊಂಡಿರು ಇತರೆ ಸ್ಪರ್ಧಿಗಳ ಬೆಂಬಲಿಗರು ಈ ರೀತಿ ಫೋಟೋಗಳನ್ನು ಹರಿಬಿಟ್ಟು ದಿವ್ಯಾ, ಅರವಿಂದ್ ಗೆಲುವಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.  ಇನ್ನು ದಿವ್ಯ ಹಾಗೂ ಅರವಿಂದ ದೊಡ್ಮನೆಯಲ್ಲಿ ಕ್ಲೋಸ್ ಆಗಿರುವುದು ಇತರ ಸ್ಪರ್ಧಿಗಳಿಗೆ ಕಿರಿಕಿರಿಯನ್ನುಂಟು ಮಾಡಿದೆ. ಬಿಗ್‌ಬಾಸ್ ಮನೆಯಲ್ಲಿ ಸಮಯ ಸಿಕ್ಕಾಗಲೆಲ್ಲಾ ಇವರು ಒಟ್ಟಿಗೆ ಇರುತ್ತಾರೆ ಎಂಬುದು ಸ್ಪರ್ಧಿಗಳ ಅಭಿಪ್ರಾಯವಾಗಿದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ದಿವ್ಯಾ ಅವರಿಗೆ ಬರೋಬ್ಬರಿ ಐದು ಲಕ್ಷ ಫಾಲೋವರ್ಸ್ ಕೂಡ ಇರುವುದಾಗಿ ತಿಳಿದುಬಂದಿದ್ದು ಅಭಿಮಾನಿ ಬಳಗ ಹೆಚ್ಚಾಗುತ್ತಿರುವುದಕ್ಕೆ ದಿವ್ಯಾ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ಸಾಮಾಜಿಕ ತಾಣದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾದಂತೆ ವೋಟ್‌ಗಳು ಕೂಡ ಸಿಕ್ಕಾಪಟ್ಟೆ ದೊರೆಯುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.  ದಿವ್ಯಾ ಹಾಗೂ ಅರವಿಂದ ಅವರ ಒಡನಾಟ ಅವರ ಅಭಿಮಾನಿಗಳಿಗೆ ರಸದೌತಣವಾಗಿದ್ದರೆ ಇನ್ನು ಕೆಲವರು ಫೈನಲ್ ಸುತ್ತಿನ ಸಮಯದಲ್ಲೇ ಇವರ ಅನ್ಯೋನ್ಯತೆಯನ್ನು ಹಾಳುಮಾಡಲು ನೋಡುತ್ತಿದ್ದಾರೆ. ಸ್ಪರ್ಧಿಗಳ ವೈಯಕ್ತಿಕ ಫೋಟೋವನ್ನು ಅವರ ಒಪ್ಪಿಗೆ ಇಲ್ಲದೆ ಅಪ್‌ಲೋಡ್ ಮಾಡುವುದು ಕಾನೂನು ಬಾಹಿರವಾಗಿದ್ದರೂ ಸ್ಪರ್ಧೆಯಲ್ಲಿ ಇವರು ಗೆಲ್ಲಬಾರದು ಎಂಬ ಹುನ್ನಾರ ಇದಾಗಿರಬಹುದೇ ಎಂಬ ಅನುಮಾನ ಮೂಡುವುದು ಸಹಜವೇ ಆಗಿದೆ. ಅಂತೂ ದಿವ್ಯಾ ಹಾಗೂ ಅರವಿಂದ್ ಜೋಡಿ ಶೀಘ್ರ ವಿವಾಹವಾಗುವುದನ್ನು ಅವರ ಅಭಿಮಾನಿಗಳು ಕಾಯುತ್ತಿದ್ದು ಬಿಗ್‌ಬಾಸ್ ಸ್ಪರ್ಧೆ ಮುಗಿದ ನಂತರ ತಕ್ಕ ಉತ್ತರ ನಮಗೆ ದೊರೆಯಲಿದೆ.

  First published: