ಡಿಸೆಂಬರ್ 3 ರಿಂದ ಏರ್​ಟೆಲ್ ಕರೆ-ಡೇಟಾ ಪ್ಲ್ಯಾನ್ ಶೇ.42 ರಷ್ಟು ದುಬಾರಿ

ಏರ್​ಟೆಲ್​ನ ಹೊಸ ಪರಿಷ್ಕೃತ ದರದಿಂದ ಗ್ರಾಹಕರಿಗೆ ಶೇಕಡಾ 42 ರವರೆಗೆ ಪ್ಲ್ಯಾನ್​ಗಳು ದುಬಾರಿ ಆಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೊಸ ಯೋಜನೆಯ ಪ್ರಕಾರ, ಟ್ಯಾರಿಫ್​ ಪ್ಲ್ಯಾನ್​ ಶುಲ್ಕವನ್ನು ದಿನಕ್ಕೆ 50 ಪೈಸೆಯಿಂದ 2.85 ರೂ.ಗೆ ಹೆಚ್ಚಿಸಲಾಗಿದೆ.

news18-kannada
Updated:December 2, 2019, 11:40 AM IST
ಡಿಸೆಂಬರ್ 3 ರಿಂದ ಏರ್​ಟೆಲ್ ಕರೆ-ಡೇಟಾ ಪ್ಲ್ಯಾನ್ ಶೇ.42 ರಷ್ಟು ದುಬಾರಿ
ಭಾರ್ತಿ ಏರ್​ಟೆಲ್
  • Share this:
ಪ್ರಿಪೇಯ್ಡ್​ ಗ್ರಾಹಕರ ಕರೆ ಮತ್ತು ಡೇಟಾ ಪ್ಲ್ಯಾನ್ ಶುಲ್ಕವನ್ನು ಹೆಚ್ಚಿಸುವುದಾಗಿ ಭಾರ್ತಿ ಏರ್‌ಟೆಲ್ ಕಂಪೆನಿ ಭಾನುವಾರ ತಿಳಿಸಿದೆ. ಕಳೆದ ವಾರವಷ್ಟೇ ವೊಡಾಫೋನ್- ಐಡಿಯಾ ಸೇವಾ ಸುಂಕವನ್ನು ಹೆಚ್ಚಿಸುವುದಾಗಿ ತಿಳಿಸಿತ್ತು. ಇದೀಗ ಏರ್​ಟೆಲ್ ಕೂಡ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

ಏರ್​ಟೆಲ್​ನ ಹೊಸ ಪರಿಷ್ಕೃತ ದರದಿಂದ ಗ್ರಾಹಕರಿಗೆ ಶೇಕಡಾ 42 ರವರೆಗೆ ಪ್ಲ್ಯಾನ್​ಗಳು ದುಬಾರಿ ಆಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೊಸ ಯೋಜನೆಯ ಪ್ರಕಾರ, ಟ್ಯಾರಿಫ್​ ಪ್ಲ್ಯಾನ್​ ಶುಲ್ಕವನ್ನು ದಿನಕ್ಕೆ 50 ಪೈಸೆಯಿಂದ 2.85 ರೂ.ಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ಡೇಟಾ ಮತ್ತು ಕರೆಗಳ ಪ್ರಯೋಜನಗಳನ್ನು ನೀಡಲಾಗುತ್ತದೆ. ಶುಲ್ಕ ಹೆಚ್ಚಳಕ್ಕೆ ಪ್ರತಿಯಾಗಿ ಗ್ರಾಹಕರಿಗೆ ಏರ್‌ಟೆಲ್ ಥ್ಯಾಂಕ್ಸ್ ಪ್ಲಾಟ್‌ಫಾರ್ಮ್‌ನ ಪ್ರಯೋಜನವನ್ನು ನೀಡಲಿದ್ದೇವೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: Viral Video: ಹಾಡು ಮರೆತು ಇಂಗ್ಲಿಷ್ ಮಾತಾಡಿ ಮತ್ತೆ ಟ್ರೋಲ್ ಆದ ರಾನು ಮಂಡಲ್

ಹೊಸ ಟ್ಯಾರಿಫ್ ಪ್ಲ್ಯಾನ್​ನಿಂದಾಗಿ ಗ್ರಾಹಕರಿಗೆ 10,000 ಮೂವೀಸ್, ವಿಶೇಷ ಪ್ರದರ್ಶನಗಳು ಮತ್ತು 400 ಟಿವಿ ಚಾನೆಲ್‌ಗಳು, ವಿಂಕ್ ಮ್ಯೂಸಿಕ್, ಆ್ಯಂಟಿ ವೈರಸ್ ಸೇರಿದಂತೆ ಮತ್ತಷ್ಟು ಸೌಲಭ್ಯಗಳು ಉಚಿತವಾಗಿ ದೊರೆಯಲಿದೆ. ಹಾಗೆಯೇ ನೂತನ ಟ್ಯಾರಿಫ್ ಪ್ಲ್ಯಾನ್ ಮಂಗಳವಾರದಿಂದ (ಡಿಸೆಂಬರ್ 3) ಅನ್ವಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.

ಇದನ್ನೂ ಓದಿ: ಹಿಡ್ಕ ಹಿಡ್ಕ ಎಂದು ಹಾಡಿದರೂ ಒಂದು ಬಾರಿ ಕೂಡ ಅಪ್ಪಿಕೊಂಡಿಲ್ವಂತೆ..!

First published: December 1, 2019, 6:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading