ಏರ್​ಟೆಲ್​ನಿಂದ ಭರ್ಜರಿ ಆಫರ್: 93 ರೂಪಾಯಿಗೆ 1GB 4ಜಿ ಡೇಟಾ ಹಾಗೂ ಅನಿಯಮಿತ ಕರೆ


Updated:December 30, 2017, 9:58 PM IST
ಏರ್​ಟೆಲ್​ನಿಂದ ಭರ್ಜರಿ ಆಫರ್: 93 ರೂಪಾಯಿಗೆ 1GB 4ಜಿ ಡೇಟಾ ಹಾಗೂ ಅನಿಯಮಿತ ಕರೆ

Updated: December 30, 2017, 9:58 PM IST
ಏರ್​ಟೆಲ್ ತನ್ನ ಗ್ರಾಹಕರಿಗಾಗಿ ಭರ್ಜರಿ ಆಫರ್ ಒಂದನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ 93 ರೂಪಾಯಿಯ ಪ್ರೀಪೇಡ್ ರೀಚಾರ್ಜ್ ಪ್ಯಾಕ್​ನ್ನು ಜಾರಿಗೊಳಿಸಿದ್ದು, ಈ ಪ್ಲಾನ್ ಅನ್ವಯ ಅನಿಯಮಿತ ಲೋಕಲ್ ಹಾಗೂ ನ್ಯಾಷನಲ್ ಕರೆ. ಇದರೊಂದಿಗೆ ಪ್ರತಿ ದಿನ 100 SMS ಗಳು ಕೂಡಾ ಉಚಿತವಾಗಿ ಕಳುಹಿಸಬಹುದಾಗಿದೆ.

1ಜಿಬಿ ಡೇಟಾ ಫ್ರೀ:

ಈ ನೂತನ ರೀಚಾರ್ಜ್​ ಪ್ಯಾಕ್​ನಲ್ಲಿ ಗ್ರಾಹಕರಿಗೆ 1ಜಿಬಿ 3G/4G ಡೇಟಾ ಕೂಡಾ ನೀಡಲಾಗುತ್ತಿದೆ. ಇನ್ನು ಇ ರೀಚಾರ್ಜ್​ ಪ್ಯಾಕ್ 10 ದಿನಗಳ​ ವ್ಯಾಲಿಡಿಟಿ ಹೊಂದಿದೆ. ಇದಕ್ಕೂ ಮೊದಲು ಏರ್​ಟೆಲ್ ತನ್ನ ಗ್ರಾಹಕರಿಗಾಗಿ 199 ರೂಪಾಯಿಯ ಪ್ರೀಪೇಡ್ ಆಫರ್ ನೀಡಿದ್ದು, ಇದರಲ್ಲಿ ಅನಿಯಮಿತ ಲೋಕಲ್ ಹಾಗೂ ಎಸ್​ಟಿಡಿ ಕರೆ, ಪ್ರತಿದಿನ 1ಜಿಬಿ 3G/4G ಡೇಟಾ ಆಫರ್ ಕೂಡಾ ನೀಡಲಾಗುತ್ತಿತ್ತು. ಆದರೆ ಈ ರೀಚಾರ್ಜ್ ಪ್ಯಾಕ್​ನ ವ್ಯಾಲಿಡಿಟಿ 28 ದಿನಗಳವರೆಗೆ ಇತ್ತು.
First published:December 30, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ