ಈ ಆ್ಯಪ್​ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಿ

ಅಲ್ಲಿ ದೇಶಕ್ಕಾಗಿ ಮಡಿದ ಹಲವು ಸೈನಿಕರ ಭಾವಚಿತ್ರದೊಂದಿಗಿನ ಸಂಪೂರ್ಣ ವಿವರಗಳನ್ನು ಕಾಣಬಹುದು. ಇಲ್ಲಿ ನೀವು ಸಹಾಯ ಮಾಡಲು ಬಯಸಿದ ಯೋಧರ ಫೋಟೋ ಮೇಲೆ ಕ್ಲಿಕ್ ಮಾಡಿದರೆ ಅವರ ಹುದ್ದೆ, ಹುತಾತ್ಮ ದಿನಾಂಕ, ಈಗಾಗಲೇ ಅವರ ಖಾತೆಗೆ ನೀಡಲಾದ ಧನ ಸಹಾಯಕ್ಕೆ ಸಂಬಂಧಿಸಿದ ಮಾಹಿತಿಗಳು ಕಾಣಿಸುತ್ತದೆ.

zahir | news18
Updated:February 15, 2019, 5:31 PM IST
ಈ ಆ್ಯಪ್​ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗಿ
@Military Choice
  • News18
  • Last Updated: February 15, 2019, 5:31 PM IST
  • Share this:
ನಿನ್ನೆ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಭಾರತೀಯರ ರಕ್ತ ಕುದಿಯುತ್ತಿದೆ. ಒಂದೆಡೆ ನೋವು, ಮತ್ತೊಂದೆಡೆ ಪ್ರತಿಕಾರದ ಕಿಚ್ಚು. ಇದರ ನಡುವೆ ನಮ್ಮಿಂದ ಏನೂ ಮಾಡಲಾಗುತ್ತಿಲ್ಲ ಎಂಬ ಅಸಹಾಯಕ ಸ್ಥಿತಿ. ಆದರೆ ನಿಮಗೂ ಕೂಡ ದೇಶಕ್ಕಾಗಿ ಅಳಿಲು ಸೇವೆ ನೀಡುವ ಅವಕಾಶವಿದೆ. ಆ ಮೂಲಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ನೀವೇ ನೇರವಾಗಿ ಸಹಾಯ ಮಾಡಬಹುದು. ಅದು ಕೂಡ ಒಂದೇ ಆ್ಯಪ್​ ಮೂಲಕ. ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ನೆರವಾಗುವಂತಹ ವೆಬ್​ಸೈಟ್​ವೊಂದನ್ನು 2017ರಲ್ಲಿ ಸರ್ಕಾರ ಹೊರ ತಂದಿದೆ. ಈ ವೆಬ್​ ಅಥವಾ ಅಪ್ಲಿಕೇಶನ್​ ಮೂಲಕ ಸಶಸ್ತ್ರ ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಆಂತರಿಕ ಭದ್ರತಾ ಪಡೆ, ಅರೆಸೈನಿಕ ಪಡೆಯ ಹುತಾತ್ಮ ಸಿಬ್ಬಂದಿಗಳ ಕುಟುಂಬಕ್ಕೆ ನೀವು ಸಹಾಯ ಹಸ್ತ ಚಾಚಬಹುದು.

ಈ ಹಿಂದೆ ಬಾಲಿವುಡ್​ ನಟ ಅಕ್ಷಯ್ ಕುಮಾರ್ ನೀಡಿದ ಸಲಹೆ ಮೇರೆಗೆ ಕೇಂದ್ರ ಗೃಹ ಸಚಿವಾಲಯವು ಇಂತಹದೊಂದು ವೆಬ್​ಸೈಟ್​ ಮತ್ತು ಅಪ್ಲಿಕೇಶನ್​ ಅನ್ನು ಸಿದ್ಧಪಡಿಸಿದೆ. ಆನ್​ಲೈನ್​ ಮೂಲಕ ಸೇನೆಯಲ್ಲಿ ಹುತಾತ್ಮರಾದವರಿಗೆ ನೆರವಾಗುವಂತಹ ವ್ಯವಸ್ಥೆ ಮಾಡಬೇಕೆಂದು ನಟ ಅಕ್ಷಯ್ ಕೇಳಿಕೊಂಡಿದ್ದರು. ಈ ಒಂದು ಉತ್ತಮ ಸಲಹೆಯಿಂದ ಇಂದು ಅನೇಕ ಕುಟುಂಬಗಳಿಗೆ ಭಾರತೀಯರು ಮೂಲೆ ಮೂಲೆಯಿಂದ ನೆರವು ನೀಡಬಹುದಾಗಿದೆ.

ಭಾರತ್​ ಕೆ ವೀರ್ ಆ್ಯಪ್ ಮತ್ತು ವೆಬ್​ಸೈಟ್​:

ಭಾರತ್ ಕೆ ವೀರ್​ ಎಂಬ ವೆಬ್​ಸೈಟ್​ ಅಥವಾ ಅಪ್ಲಿಕೇಶನ್​ನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸಂಪೂರ್ಣ ವಿವರಗಳನ್ನು ನೀಡಲಾಗಿರುತ್ತದೆ. ಇಲ್ಲಿ ವೀರ ಶಹೀದರ ಭಾವಚಿತ್ರದೊಂದಿಗೆ ಅವರ ವಿವರ ಹಾಗೂ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನೀಡಲಾಗಿದೆ. ಈ ಖಾತೆಗಳಿಗೆ ಧನ ಸಹಾಯ ಮಾಡುವ ಮೂಲಕ ಪ್ರತಿಯೊಬ್ಬರು ಯೋಧರ ಕುಟುಂಬಗಳಿಗೆ ನೆರವಾಗಬಹುದು.

ಸಹಾಯ ಮಾಡುವುದು ಹೇಗೆ?
ವೀರ ಯೋಧರ ಕುಟುಂಬಕ್ಕೆ ಸಹಾಯ ಮಾಡಲು ಬಯಸಿದರೆ ನೀವು ಮೊದಲು bharat ke veer ಅಪ್ಲಿಕೇಶನ್​ ಅನ್ನು ಇನ್​ಸ್ಟಾಲ್​ ಮಾಡಬೇಕು. ಅಥವಾ   https://bharatkeveer.gov.in/ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಅಲ್ಲಿ ದೇಶಕ್ಕಾಗಿ ಮಡಿದ ಹಲವು ಸೈನಿಕರ ಭಾವಚಿತ್ರದೊಂದಿಗಿನ ಸಂಪೂರ್ಣ ವಿವರಗಳನ್ನು ಕಾಣಬಹುದು. ಇಲ್ಲಿ ನೀವು ಸಹಾಯ ಮಾಡಲು ಬಯಸಿದ ಯೋಧರ ಫೋಟೋ ಮೇಲೆ ಕ್ಲಿಕ್ ಮಾಡಿದರೆ ಅವರ ಹುದ್ದೆ, ಹುತಾತ್ಮ ದಿನಾಂಕ, ಈಗಾಗಲೇ ಅವರ ಖಾತೆಗೆ ನೀಡಲಾದ ಧನ ಸಹಾಯಕ್ಕೆ ಸಂಬಂಧಿಸಿದ ಮಾಹಿತಿಗಳು ಕಾಣಿಸುತ್ತದೆ. ಅದರೊಂದಿಗೆ ಅವರ ಕುಟುಂಬದ ಬ್ಯಾಂಕ್ ಖಾತೆಯ ಸಂಖ್ಯೆ ನೀಡಲಾಗಿರುತ್ತದೆ. ಈ ಖಾತೆ ಸಂಖ್ಯೆಗೆ ನೀವು ನಿಮ್ಮ ಕೈಲಾದ ಮೊತ್ತವನ್ನು ನೀಡುವ ಮೂಲಕ ಭಾರತಾಂಭೆಯ ವೀರ ಮಕ್ಕಳ ನೆರವಿಗೆ ನಿಲ್ಲಬಹುದು.

ಗರಿಷ್ಠ ಮಿತಿ 15 ಲಕ್ಷ ರೂ:ಈ ಹುತಾತ್ಮರ ಪಟ್ಟಿಯಲ್ಲಿರುವ ಸೈನಿಕರ ಖಾತೆಗಳಿಗೆ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ. ಅದರಂತೆ ಒಬ್ಬ ಯೋಧರ ಕುಟುಂಬಕ್ಕೆ 15 ಲಕ್ಷದವರೆಗೆ ಧನ ಸಹಾಯ ಮಾಡಬಹುದು. ಈ ಖಾತೆಯ ಒಟ್ಟು ಮೊತ್ತ 15 ಲಕ್ಷ ತಲುಪಿದರೆ, ಹುತಾತ್ಮರ ಕುಟುಂಬಕ್ಕೆ ಮಾಹಿತಿ ತಿಳಿಸಿ, ಸ್ವಯಂಚಾಲಿತವಾಗಿ ವೆಬ್​ಸೈಟ್​ನಿಂದ ಅವರ ಖಾತೆಯನ್ನು ತೆಗೆಯಲಾಗುತ್ತದೆ. ಇದರಿಂದ ಪ್ರತಿಯೊಬ್ಬ ಯೋಧರ ಕುಟುಂಬಕ್ಕೆ ನೆರವಾಗಲು ಸಹಾಯಕವಾಗುತ್ತದೆ.

ಆ್ಯಪ್​ ಡೌನ್​ಲೋಡ್​ ಮಾಡುವುದು ಹೇಗೆ?
ಗೂಗಲ್ ಪ್ಲೇ ಸ್ಟೋರ್​ನಲ್ಲಿ ಈ ಆ್ಯಪ್ ಲಭ್ಯವಿದೆ. ಇದರ ಮೇಲೆ 'bharat ke veer'   ಕ್ಲಿಕ್ ಮಾಡುವ ಮೂಲಕ ಆ್ಯಂಡ್ರಾಯ್ಡ್​ ಫೋನ್​ನಲ್ಲಿ ಡೌನ್​ಲೋಡ್​ ಮಾಡಿಕೊಳ್ಳಬಹುದು. ಹಾಗೆಯೇ http://bharatkeveer.gov.in/ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಕೂಡ ದೇಶಸೇವೆಗೆ ನೆರವಾಗಬಹುದು.

ಇದನ್ನೂ ಓದಿ: ಭಾರತೀಯ ಸೇನಾ ನೇಮಕಾತಿ: ಹಲವು ವಿಭಾಗಗಳ ಹುದ್ದೆಗಳಿಗೆ ಅರ್ಜಿ ಆಹ್ವಾನ
First published:February 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ