FB Messenger ಇಂದ ಕಾಲ್ ಬಂದ್ರೆ ಯಾವ್ದೇ ಕಾರಣಕ್ಕೂ ರಿಸೀವ್ ಮಾಡ್ಬೇಡಿ, ಇದ್ರಲ್ಲಿ ಸಿಕ್ಕಿಸೋ ದೊಡ್ಡ ಗ್ಯಾಂಗ್ ಇದೆ, ಜೋಕೆ!

FB Messenger porn scam: ಹರ್ಯಾಣದ ಮೇವಾತ್ ಪ್ರದೇಶದಲ್ಲಿ ಇಂತಹ ಅಶ್ಲೀಲ ವಿಡಿಯೋ ಕರೆಯನ್ನು ಮಾಡಿ ಹಣ ಕೇಳುವ ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ, ಭಿವಾಡಿ, ತಿಜಾರಾ, ಕಿಶನ್‌ಗಢ್ ಬಾಸ್, ರಾಮ್‌ಗಢ್, ಅಲ್ವಾರ್‌ನ ಲಕ್ಷ್ಮಣಗಢ್ ಮತ್ತು ಭರತ್‌ಪುರದ ನಗರ, ಪಹಾಡಿ ಮತ್ತು ಗೋವಿಂದಗಢ್ ಕೂಡ ಈ ಸೈಬರ್ ದರೋಡೆಕೋರರು ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಪ್ರದೇಶಗಳಾಗಿವೆ.

ಫೇಸ್‌ಬುಕ್

ಫೇಸ್‌ಬುಕ್

 • Share this:
  FB Messenger porn scam: ದೆಹಲಿ ವಿಶ್ವವಿದ್ಯಾನಿಲಯದ 35 ವರ್ಷದ ಪ್ರಾಯದ ಪ್ರಾಧ್ಯಾಪಕರೊಬ್ಬರು ಇತ್ತೀಚೆಗೆ ಅನಾಮಧೇಯ ಸಂಖ್ಯೆಯಿಂದ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ವಿಡಿಯೋ ಕರೆ ಬರುತ್ತದೆ. ಕರೆ ಸ್ವೀಕರಿಸಿದಾಗ ಅತ್ತ ಬದಿಯಲ್ಲಿ ಹುಡುಗಿ ನಗ್ನವಾಗಿ ಇರುವುದು ಕಾಣಿಸುತ್ತದೆ. ಕೂಡಲೇ ಕರೆಯನ್ನು ಅವರು ಡಿಸ್ಕನೆಕ್ಟ್ ಮಾಡಿದರು.  ಆದರೆ ಅಷ್ಟೊತ್ತಿಗಾಗಲೇ ಪ್ರಾಧ್ಯಾಪಕರು  ಅಶ್ಲೀಲ ಕ್ಲಿಪ್ ವೀಕ್ಷಿಸಿಸಿ ವಿಡಿಯೋವನ್ನು ಸೈಬರ್​ ಅಪರಾಧಿಗಳು ರೆಕಾರ್ಡ್​ ಮಾಡಿದ್ದರು. ಬಳಿಕ ಅಶ್ಲೀಲ ವಿಡಿಯೋವನ್ನು ಇಟ್ಟುಕೊಂಡು ಪ್ರಾಧ್ಯಾಪಕರಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು.

  "ನಾನು ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಅಪರಿಚಿತ ವ್ಯಕ್ತಿಯಿಂದ ಕರೆ ಮಾಡಿದಾಗ ಸಮಯ ಸುಮಾರು 2 ಗಂಟೆಯಾಗಿತ್ತು. ನಾನು ಕರೆ ಸ್ವೀಕರಿಸಿದಾಗ, ಅತ್ತ ಕಡೆಯಿಂದ ನಗ್ನ ಹುಡುಗಿಯನ್ನು ನೋಡಿದೆ. ನಾನು ತಕ್ಷಣ ಕರೆಯನ್ನು ಕಡಿತಗೊಳಿಸಿದೆ. ಆದರೆ, ನಾನು ನಿಖರವಾಗಿ ಏನೆಂದು ಲೆಕ್ಕಾಚಾರ ಮಾಡುವ ಮೊದಲು. ಅವರು ನನ್ನ ವಿಡಿಯೋ ರೆಕಾರ್ಡ್​ ಮಾಡಿದ್ದರು, ನಂತರ ಸೈಬರ್​ ಅಪರಾಧಿಗಳು ನನ್ನ ವೀಡಿಯೊ ಕರೆಯ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಶೇರ್​ ಮಾಡಿದರು" ಎಂದು ಪ್ರೊಫೆಸರ್ ಹೇಳಿದ್ದಾರೆ.

  ‘‘ಕೂಡಲೇ ನನಗೆ ಭಯ ಆವರಿಸಿತು, ಅವರ ಖಾತೆಯನ್ನು ಬ್ಲಾಕ್​ ಮಾಡಿದೆ. ಒಂದು ಗಂಟೆಯ ನಂತರ, ಆಡಿಯೊ ಕರೆ ಬಂದಿದೆ. ಅತ್ತ ಕಡೆಯಿಂದ ವ್ಯಕ್ತಿಯೋರ್ವ ಡಿಜಿಟಲ್ ಪಾವತಿ ಅಪ್ಲಿಕೇಶನ್‌ನ ಮೂಲಕ ಐದು ನಿಮಿಷಗಳಲ್ಲಿ ರೂ 20,000 ಪಾವತಿಸುವಂತೆ ಕೇಳಿದನು. ಇಲ್ಲದಿದ್ದರೆ ಆಶ್ಲೀಲ ವಿಡಿಯೋ ಸ್ಕ್ರೀನ್‌ಶಾಟ್‌ಗಳನ್ನು ತನ್ನ ಸ್ನೇಹಿತರು ಮತ್ತು ಕುಟುಂಬ ಸಮುದಾಯ ವೀಕ್ಷಿಸುವಂತೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವೆ ಎಂದು ಹೇಳಿದನು’’

  ‘‘ಭಯಭೀತನಾಗಿದ್ದೆ ನಾನು ನನ್ನ ಫೇಸ್‌ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದೆ. ಅದೇ ದಿನ ರಾತ್ರಿ ಈ ಘಟನೆ ನನ್ನ ಚಿಂತೆಗೆ ದೂಡುವಂತೆ ಮಾಡಿತು’’ ಎಂದು ಪ್ರೊಫೆಸರ್​ ಹೇಳಿದ್ದಾರೆ.

  ಖತರ್ನಾಕ್​​ ಗ್ಯಾಗ್​ ಅನ್ನು ಪತ್ತೆ ಹಚ್ಚೋದು ಹೇಗೆ?

  WhatsApp ಮತ್ತು Facebook Messenger ನಲ್ಲಿ ಇಂತಹ ಅನಾಮಧೇಯ ವೀಡಿಯೊ ಕರೆಗಳು ಭಾರತೀಯ ಬಳಕೆದಾರರನ್ನು ಕತ್ತಲೆಗೆ ದೂಡುತ್ತಿದೆ. ಅಂತಹ ಚಟುವಟಿಕೆಗಳನ್ನು ತಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.

  ಸೈಬರ್ ತಜ್ಞರು ಹೇಳೊದೇನು?

  ಸೈಬರ್ ತಜ್ಞರ ಪ್ರಕಾರ, ಜಮ್ತಾರಾ ಮಾದರಿಯ ಮೊಬೈಲ್ ವಂಚನೆಗಳನ್ನು ನೆನಪಿಸುವಂತೆ, ಮೇವಾತ್ ಪ್ರದೇಶದ ಕುಖ್ಯಾತ ಗ್ಯಾಂಗ್‌ಗಳು ಮತ್ತೆ ಕಾಣಿಸಿಕೊಂಡಿದ್ದು. ಇಂತಹ ವಾಟ್ಸಾಪ್ ವೀಡಿಯೊ ಕರೆಗಳ ಮೂಲಕ ಜನರನ್ನು ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದಿದ್ದಾರೆ.

  ಹರ್ಯಾಣದಲ್ಲಿ ಇಂತಹ ಗ್ಯಾಂಗ್​!

  ಹರ್ಯಾಣದ ಮೇವಾತ್ ಪ್ರದೇಶದಲ್ಲಿ ಇಂತಹ ಅಶ್ಲೀಲ ವಿಡಿಯೋ ಕರೆಯನ್ನು ಮಾಡಿ ಹಣ ಕೇಳುವ ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ, ಭಿವಾಡಿ, ತಿಜಾರಾ, ಕಿಶನ್‌ಗಢ್ ಬಾಸ್, ರಾಮ್‌ಗಢ್, ಅಲ್ವಾರ್‌ನ ಲಕ್ಷ್ಮಣಗಢ್ ಮತ್ತು ಭರತ್‌ಪುರದ ನಗರ, ಪಹಾಡಿ ಮತ್ತು ಗೋವಿಂದಗಢ್ ಕೂಡ ಈ ಸೈಬರ್ ದರೋಡೆಕೋರರು ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಪ್ರದೇಶಗಳಾಗಿವೆ.

  ಅಕ್ಟೋಬರ್‌ನಲ್ಲಿ, ದೆಹಲಿ ಪೊಲೀಸ್‌ನ ಅಪರಾಧ ವಿಭಾಗವು ರಾಜಸ್ಥಾನದ ಭರತ್‌ಪುರದಿಂದ ಅಂತರರಾಜ್ಯ ಸೆಕ್ಸ್‌ಟಾರ್ಶನ್ ಗ್ಯಾಂಗ್‌ನ ಮಾಸ್ಟರ್‌ಮೈಂಡ್‌ನನ್ನು ಬಂಧಿಸಿದರು.

  ಇದನ್ನು ಓದಿ: Airtel Prepaid Plans: ನವೆಂಬರ್​ 26ರಿಂದ ದುಬಾರಿಯಾಗಲಿದೆ ಏರ್​ಟೆಲ್​ ಪ್ರಿಪೇಯ್ಡ್​ ಪ್ಲಾನ್​ಗಳು!

  ಪೊಲೀಸರ ಪ್ರಕಾರ, ನಾಸಿರ್ (25) ನೇತೃತ್ವದ ತಂಡವು ಪ್ರತಿಷ್ಠಿತ ವ್ಯಕ್ತಿಗಳಿಗೆ ಅವರ ಅಶ್ಲೀಲ ಚಿತ್ರಗಳು ಮತ್ತು ವಿಡಿಯೊಗಳೊಂದಿಗೆ ಬ್ಲ್ಯಾಕ್‌ಮೇಲ್ ಮಾಡಿ ನಂತರ ಹಣ ವಸೂಲಿ ಮಾಡುತ್ತಿದೆ ಎಂದು ಬೆಳಕಿಗೆ ಬಂದಿದೆ.

  ಪೊಲೀಸರ ಬಲೆಗೆ ಬಿದ್ದ 36 ಗ್ಯಾಂಗ್​ಗಳು!

  ಈವರೆಗೆ ಕನಿಷ್ಠ 36 ಗ್ಯಾಂಗ್‌ಗಳನ್ನು ಭೇದಿಸಲಾಗಿದೆ ಮತ್ತು 600 ಆರೋಪಿಗಳನ್ನು ಅಲ್ವಾರ್ ಪೊಲೀಸರು ಬಂಧಿಸಿದ್ದಾರೆ.

  ಕೊರೋನಾ ಸಮಯದಲ್ಲಿ ಅಂತಹ ಚಟುವಟಿಗಳು ತೀವ್ರವಾಗಿ ಬೆಳೆಯುತ್ತಿದೆ. ಸೈಬರ್ ಕ್ರಿಮಿನಲ್‌ಗಳು ರೆಕಾರ್ಡ್ ಮಾಡಿದ ಅಶ್ಲೀಲ ವೀಡಿಯೋಗಳನ್ನು ಇಟ್ಟುಕೊಂಡು ನಂತರ ವಿಡಿಯೋ ಕರೆ ಸ್ವೀಕರಿಸಿದ ವ್ಯಕ್ತಿಗೆ ಕಳುಹಿಸುತ್ತಾರೆ. ಮಾತ್ರವಲ್ಲದೆ, ಹಣ ಕೇಳುತ್ತಾರೆ. ಸುಮಾರು 10 ಸಾವಿರದಿಂದ ಲಕ್ಷದವರೆಗೆ ಹಣ ಕೇಳುತ್ತಾರೆ.

  ಪತ್ರಕರ್ತನಿಗೂ ಹೀಗೆ ಆಗಿತ್ತು!

  ದೆಹಲಿ-ಎನ್‌ಸಿಆರ್ ಮೂಲದ ಪತ್ರಕರ್ತರೊಬ್ಬರು ಇದೇ ತಿಂಗಳು ವಾಟ್ಸಾಪ್ ವೀಡಿಯೊ ಕರೆ ಸ್ವೀಕರಿಸಿದಾಗ ಮತ್ತು ನಗ್ನ ಹುಡುಗಿಯನ್ನು ನೋಡಿ ಅದೇ ಪರಿಸ್ಥಿತಿಯನ್ನು ಎದುರಿಸಿದರು. ಆಶ್ಚರ್ಯದ ಜೊತೆಗೆ ಗೊಂದಲಕ್ಕೊಳಗಾದ ಅವರು ತಕ್ಷಣ ಕರೆಯನ್ನು ಕಡಿತಗೊಳಿಸಿದರು. ನಂತರ ಅವರು ಕೆಲವು ಸ್ಕ್ರೀನ್‌ಶಾಟ್‌ಗಳು ಮತ್ತು ಅವರಿಗೆ ಕರೆ ಮಾಡಿದ ವ್ಯಕ್ತಿಯಿಂದ ರೆಕಾರ್ಡ್ ಮಾಡಿದ ವಿಡಿಯೋವನ್ನು ಪಡೆದರು.

  "ಅಶ್ಲೀಲ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರಿಗೂ ಕಳುಹಿಸುವುದಾಗಿ ಹೇಳಿದ್ದಾನೆ ಮತ್ತು ವಿಡಿಯೋವನ್ನು ಅಳಿಸಲು ತಕ್ಷಣವೇ 23,000 ರೂ. ಪಾವತಿಸಲು ನನ್ನನ್ನು ಕೇಳಿದನು. ನಾನು ಅವನನ್ನು ನಿರ್ಬಂಧಿಸಿದೆ. ನಂತರ, ನನಗೆ ಹಣವನ್ನು ವರ್ಗಾಯಿಸಲು ಕೇಳುವ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬರಲಾರಂಭಿಸಿದವು. ನಾನು ಅವರನ್ನು ನಿರ್ಬಂಧಿಸಿದೆ ಮತ್ತು ಕೆಲವು ಗಂಟೆಗಳ ಕಾಲ ನನ್ನ ಫೋನ್ ಅನ್ನು ಆಫ್ ಮಾಡಿದೆ" ಎಂದು ಪತ್ರಕರ್ತ ಹೇಳಿದ್ದಾರೆ

  ಇದನ್ನು ಓದಿ: Elon Musk: ಆದೇಶ ಪಾಲಿಸದಿದ್ರೆ ಕೆಲಸಕ್ಕೆ ರಾಜೀನಾಮೆ ನೀಡಿ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್!

  ಇಂತಹ ಘಟನೆಗಳು ದೇಶದಲ್ಲಿ ಸಾಕಷ್ಟು ಬೆಳಕಿಗೆ ಬರುತ್ತಿವೆ. ಆದರೆ ಅಶ್ಲೀಲ ವಿಡಿಯೋ ಕರೆ ಮಾಡುವ ಗ್ಯಾಂಗ್​ ಅನ್ನು ಭೇದಿಸುವ ಮೂಲಕ ಸಾಮಾಜಿಕ ಜಾಲತಾಣ ಬಳಕೆ ಮಾಡುವವರನ್ನು ರಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕೂ ಮುಖ್ಯವಾಗಿ ಅಂತಹ ಅಪರಿಚಿತರ ವಿಡಿಯೋ ಕರೆಯನ್ನು ಸ್ವೀಕರಿಸದೇ ಇರುವುದು ಮುಖ್ಯವಾಗಿದೆ. ಪರಿಚಯವಿಲ್ಲದ ಯಾವುದೇ ವ್ಯಕ್ತಿಗೆ ಮೆಸೇಜ್​ ಮಾಡುವುದು ಮತ್ತು ವಿಡಿಯೋ ಕರೆ ಸ್ವೀಕರಿಸುವ ಮೂಲಕ ಜನರು ಜೀವನ ಕತ್ತಲೆಗೆ ದೂಡು ಗ್ಯಾಂಗ್​ಗಳ ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ವಿಧಿಸಬೇಕಾಗಿದೆ.
  Published by:Harshith AS
  First published: