• Home
 • »
 • News
 • »
 • tech
 • »
 • Fake App: ಪ್ಲೇ ಸ್ಟೋರ್​ನಲ್ಲಿ ನಿಮ್ಮನ್ನು ಕದಿಯುವ ಕಳ್ಳರಿದ್ದಾರೆ ಎಚ್ಚರ!

Fake App: ಪ್ಲೇ ಸ್ಟೋರ್​ನಲ್ಲಿ ನಿಮ್ಮನ್ನು ಕದಿಯುವ ಕಳ್ಳರಿದ್ದಾರೆ ಎಚ್ಚರ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೆಲವೊಂದು ಸಂಶೋದಕರು ತಿಳಿಸಿದ ಪ್ರಕಾರ ಸ್ಮಾರ್ಟ್ ಫೋನ್ ಬಳಕೆದಾರರನ್ನು ಗುರಿಯಾಗಿರಿಸಿ. ಹೆಚ್ಚಿನ ಮೊಸ, ಸುಳಿಗೆ, ದರೋಡೆಗಳನ್ನು ಮಾಡುವಂತಹ ಜನರು ಕಣ್ಣಮುಂದೆ ಇದುವರೆಗೆ ಇದ್ದರು. ಅದರೆ ಈಗ ನಾವು ಬಳಸುವ ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಇರುವ ಕೆಲವೊಂದು ಆ್ಯಪ್ ನಲ್ಲಿ ಕಾಣ ಸಿಗುತ್ತಿದ್ದಾರೆ ಹುಷಾರ್.

ಮುಂದೆ ಓದಿ ...
 • Share this:

  ಕೆಲವೊಂದು ಸಂಶೋದಕರು (Scientist) ತಿಳಿಸಿದ ಪ್ರಕಾರ ಸ್ಮಾರ್ಟ್ ಫೋನ್ (Smart Phone) ಬಳಕೆದಾರರನ್ನು ಗುರಿಯಾಗಿರಿಸಿದೆ. ಹೆಚ್ಚಿನ  ವಂಚನೆ (Yogurt), ಸುಳಿಗೆ (Vortex), ದರೋಡೆಗಳನ್ನು(Robbery) ಮಾಡುವಂತಹ ಜನರು ಕಣ್ಣಮುಂದೆ ಇದುವರೆಗೆ ಇದ್ದರು. ಅದರೆ ಈಗ ನಾವು ಬಳಸುವ ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಇರುವ ಕೆಲವೊಂದು ಆ್ಯಪ್ ನಲ್ಲಿ (App) ಕಾಣ ಸಿಗುತ್ತಿದ್ದಾರೆ. ಯಾರು ಈ ಖಧೀಮರು ಅನ್ನುವದನ್ನ ನೀವು ಖಂಡಿತವಾಗಿ ತಿಳಿಯಲೇ ಬೇಕು. ಇಲ್ಲದಿದ್ದಲ್ಲಿ  ಮುಂದೊಂದು ದಿನ ನಿಮ್ಮನ್ನು ಕದಿಯುವ ಕಳ್ಳರು ನಿಮ್ಮ ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಸೇರ್ಪಡೆ ಆಗುವುದಂತೂ ಪಕ್ಕಾ. ಹುಷಾರಾಗಿರಿ.


  ಕೆಲ ಹೊಸ ಆ್ಯಪ್​ಗಳು ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಕೆದಾರ  ಲಾಗಿನ್ ಮಾಹಿತಿ, ಅಕೌಂಟ್ ನಂಬರ್ ಹಾಗೂ ನಿಮ್ಮ ಹಣದ ವಿವರವನ್ನು ಕದಿಯುತ್ತದೆ ಎಂದು ಹೇಳಿದೆ.


  ವಿಶ್ವದಲ್ಲಿ ಇಂದು 5 ಬಿಲಿಯನ್ ಜನರು ಸ್ಮಾರ್ಟ್​ಫೋನನ್ನು (Smartphones) ಉಪಯೋಗಿಸುತ್ತಿದ್ದಾರೆ. ಇದರಲ್ಲಿ ಬಹುಪಾಲು ಆಂಡ್ರಾಯ್ಡ್ ಮೊಬೈಲ್​ಗಳೇ ಆಗಿವೆ. ಹೀಗಾಗಿ ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಬಳಕೆದಾರರು ಉಪಯೋಗಿಸುತ್ತಿರುವ  ಗೂಗಲ್      ಪ್ಲೇ ಸ್ಟೋರ್​ನಲ್ಲಿ (Play Store) ನಕಲಿ ಆ್ಯಪ್​ಗಳ ಹಾವಳಿ ಹೆಚ್ಚಾಗುತ್ತಿದೆ. ಈ ಕಾರಣದಿಂದ ಜನರು ಮೊಸ ಹೊಗುತ್ತಿದ್ದಾರೆ. ಅಪಾಯಕಾರಿ ವೈರಸ್​ಗಳನ್ನು ಗುರುತಿಸಿ ಗೂಗಲ್ ಕಿತ್ತೆಸೆದರೂ ಪುನಃ ಹೊಸ ಮಾಲ್ವೇರ್​ಗಳು ಹುಟ್ಟಿಕೊಳ್ಳುತ್ತಿವೆ. ಇತ್ತೀಚೆಗಷ್ಟೆ ಡ್ರಿನಿಕ್ (Drinik) ಎಂಬ ಮಾಲ್ವೆರ್ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ ಕಂಡುಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಪುನಃ ಹಣ ಕದಿಯುವ ಮತ್ತೊಂದಿಷ್ಟು ಅಪಾಯಕಾರಿ ಆ್ಯಪ್​ಗಳು ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ನಲ್ಲಿರುವ ಪ್ಲೇಸ್ಟೋರ್​ನಲ್ಲಿ ಪತ್ತೆಯಾಗಿದೆ. ಹಾಗಾಗಿ ನೀವು ಇಂತಹ ಆ್ಯಪ್ ಬಳಸುವಾಗ ಎಚ್ಚರವಾಗಿರಬೇಕು.


  ಇದನ್ನೂ ಓದಿ: Wikipedia: ವಿಕಿಪೀಡಿಯಾದಲ್ಲಿ ಕನ್ನಡ  ಭಾಷೆಯ ನಿರ್ಲಕ್ಷ್ಯ- ಕನ್ನಡಿಗರ ಆಕ್ರೋಶ


  ನೀವು  ಇಂತಹ ಆ್ಯಪ್  ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ. ಇಲ್ಲಿದೆ ನೋಡಿ ಹಣ ಕದಿಯುವ ಐದು ಡೇಂಜರಸ್ ಆ್ಯಪ್​ಗಳು.


  Beware of thieves who steal from you in Play Store
  ಸಂಕೇತಿಕ ಚಿತ್ರ


  • File Manager Small, Lite

  • My Finances Tracker

  • Zetter Authentication

  • Codice Fiscale 2022

  • Recover Audio, Images & Videos


  ಈ ಆ್ಯಪ್ ಗಳು ಡೇಂಜರಸ್ ಆ್ಯಪ್​ಗಳು ಅಂದ್ರೆ ತಪ್ಪಗಲ್ಲಾ ನಿಮ್ಮಲ್ಲಿ ಈ ಆ್ಯಪ್ ಗಳಿದ್ದರೆ ಈ ಸಮಯದಲ್ಲೆ ಡಿಲೀಟ್ ಮಾಡಿ.


  ಭಾರತದ ಬ್ಯಾಂಕ್​ಗಳನ್ನು ಲೂಟಿ ಮಾಡಲಿದೆ ಈ ಡೇಂಜರ್ ಆ್ಯಪ್


  ಕಳೆದ ವಾರವಷ್ಟೆ ಕಂಡುಬಂದತಹ ಡ್ರಿನಿಕ್ ವೈರಸ್ ಎಂಬ ವೈರಲ್ ಆದಾಯ ತೆರಿಗೆ ಮರುಪಾವತಿಯ ಹೆಸರಿನಲ್ಲಿ ಬಳಕೆದಾರರ ನಿಗೂಡ ಡೇಟಾವನ್ನು ಕದಿಯುತ್ತದೆ. ಅಲ್ಲದೆ ಭಾರತೀಯ ಬಳಕೆದಾರರ 18 ಬ್ಯಾಂಕ್‌ಗಳನ್ನು ಇದು ಟಾರ್ಗೆಟ್ ಮಾಡಿದೆಯಂತೆ ಎನ್ನುವ ಸುದ್ದಿ ಕೇಳಿಬಂದಿದೆ. ಪ್ರಸ್ತುತ, ಈ ಬ್ಯಾಂಕ್‌ಗಳ ಸಾಲಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಇದೆ ಎಂದು ಹೇಳಲಾಗಿದೆ. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾತೆ ಹೊಂದಿದ್ದರೆ ಎಚ್ಚರ ವಹಿಸಿ.


  ಇದನ್ನೂ ಓದಿ: Oneplus and Oppo Smartphone: ನೀವು ವನ್‌ಪ್ಲಸ್‌, ಒಪ್ಪೋ ಗ್ರಾಹಕರೇ? ಹಾಗಿದ್ರೆ ಈ ವಿಷಯ ತಿಳಿಯಲೇಬೇಕು


  ಕೇವಲ ಒಂದು ಬ್ಯಾಂಕ್ ಮಾತ್ರವಲ್ಲದೆ ಭಾರತದಲ್ಲಿರುವ ಒಟ್ಟು 27 ಬ್ಯಾಂಕಿಂಗ್ ಸಂಸ್ಥೆಗಳನ್ನು ಈ ವೈರಸ್ ಟಾರ್ಗೆಟ್ ಮಾಡಿಕೊಂಡಿದೆ. ಡ್ರಿನಿಕ್ ವೈರಸ್‌ನ ಹೊಸ ಆವೃತ್ತಿಯು ಬಳಕೆದಾರರನ್ನು ಫಿಶಿಂಗ್‌ ಪೇಜ್‌ಗೆ ಕರೆದೊಯ್ಯುತ್ತದೆ ಮತ್ತು ಬಳಕೆದಾರರ ಎಲ್ಲ ಮಾಹಿತಿಯನ್ನು ಕದಿಯುತ್ತದೆ. ಈ ಮಾಲ್ವೇರ್ ಅಭಿವೃದ್ಧಿಪಡಿಸಿದವರು ಪೂರ್ತಿಯಾಗಿ ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಆಗಿ ರೂಪಿಸಿದ್ದಾರೆ ಎಂದು ಹೇಳಲಾಗಿದೆ.


  ಡ್ರಿನಿಕ್ ಮಾಲ್‌ವೇರ್‌ APK ಫೈಲ್‌ನೊಂದಿಗೆ ಮಸೇಜ್ ಕಳುಹಿಸುವ ಮೂಲಕ ಬಳಕೆದಾರರನ್ನು ಗುರುತಿಸುತ್ತದೆ ಮತ್ತು ಹುಡುಕಿಕೊಂಡು ಬರುತ್ತದೆ ಅಂತೆ. iAssist ಎಂಬ ಅಪ್ಲಿಕೇಶನ್‌ನೊಂದಿಗೆ  ಇದು ಬಳಕೆದಾರರ ಕ್ರೆಡಿಟ್ ಕಾರ್ಡ್ CVV, PIN ಮತ್ತು ಪ್ರಮುಖ ವಿವರಗಳನ್ನು ಕದಿಯಬಹುದು. ನಿಮಗೆ ತಿಳಿಯದೆ ನಿಮ್ಮ ಸ್ಮಾರ್ಟ್​ಫೋನ್ ಒಳಗೆ ಪ್ರವೇಶ ಪಡೆದು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತದೆ. ನೀವು ಬ್ಯಾಂಕಿಂಗ್‌ಗೆ ಸಂಬಂಧಿಸಿದ ಯಾವುದೇ ಲಿಂಕ್ ಅನ್ನು ಎಸ್​ಎಮ್​ಎಸ್​ ಮೂಲಕ ಅಥವಾ ಇಮೇಲ್ ಮೂಲಕ ಪಡೆದರೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಎರಡು ಬಾರಿ ಪರಿಶೀಲಿಸಬೇಕು. ಯಾವುದೇ ಮೂರನೇ ವ್ಯಕ್ತಿ ಕಳುಹಿಸದ ಮೆಸೇಜ್ ಅನ್ನು ನಿಜ ಅಂದುಕೊಂಡು ಮರುಳಾಗಬೇಡಿ.

  First published: