ಆ್ಯಂಡ್ರಾಯ್ಡ್​ ಬಳಕೇದಾರರಿಗೆ ಹೊಸ ವೈರಸ್​ ಕಾಟ


Updated:June 13, 2018, 1:18 PM IST
ಆ್ಯಂಡ್ರಾಯ್ಡ್​ ಬಳಕೇದಾರರಿಗೆ ಹೊಸ ವೈರಸ್​ ಕಾಟ

Updated: June 13, 2018, 1:18 PM IST
ನವದೆಹಲಿ​: ಅಂತರ್ಜಾಲ ಬೆಳೆದಂತೆ ಹ್ಯಾಕರ್ಸ್​​ಗಳ ಸಂಖ್ಯೆಯೂ ಬೆಳೆಯುತ್ತಲೇ ಇದೆ, ಕೆಲದಿನಗಳ ಹಿಂದೆ ಸದ್ದು ಮಾಡಿದ್ದ ರ‍್ಯಾನ್ಸಮ್​ವೇರ್​ನಿಂದ ತತ್ತರಿಸಿದ ಜನಕ್ಕೆ ಇದೀಗ ಹೊಸ ವೈರಸ್​ಗಳ ಕಾಟ ಆರಂಭವಾಗಿದೆ.

ಹೌದು! ಟೆಕ್​ ತಜ್ಞರ ಪ್ರಕಾರ ಕಳೆದ ಕೆಲ ದಿನಗಳ ಹಿಂದೆ ಹ್ಯಾಕರ್​ಗಳು "Android.Marcher.C" ಮತ್ತು "Android.Asacub.T" ಎರಡು ಹೊಸ ಟ್ರೊಜನ್​ಗಳನ್ನು ಆ್ಯಂಡ್ರಾಯ್ಡ್​ಗೆ ಬಿಟ್ಟಿದ್ದು, ಈ ಟ್ರೊಜನ್​ ವೈರಸ್​ಗಳು ನಿಮ್ಮ ಖಾಸಾಗಿ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​, ವಾಟ್ಸಾಪ್​ ಸಂದೇಶದಿಂದ ಪಡೆದಕೊಳ್ಳುತ್ತದೆ.

ಈ ಕುರಿತು ಎಚ್ಚರಿಕೆ ನೀಡಿರುವ ಕ್ವಿಕ್​ ಹೀಲ್​ ಸಂಸ್ಥೆ, ತರ್ಡ್​ ಪಾರ್ಟಿ ಅಪ್ಲಿಕೇಶನ್​ಗಳ ಬಳಕೆಯಿಂದ ಈ ಟ್ರೋಜನ್​ ವೈರಸ್​ಗಲು ಮೊಬೈಲ್​ ಸೇರುತ್ತದೆ ಎಂದಿದ್ದಾರೆ. ಆ್ಯಂಡ್ರಾಯ್ಡ್​ ಸ್ಟೋರ್​ ಬಿಟ್ಟು ಗೂಗಲ್ ಅಥವಾ ಹೊರಗಿನಿಂದ ಅಪ್ಲಿಕೇಶ್​ನ್ನು ಡೌನ್​ಲೊಡ್​ ಮಾಡಿಕೊಳ್ಳುವ ಮೂಲಕ ಈ "Android.Marcher.C" ಮತ್ತು "Android.Asacub.T" ವೈರಸ್​​ಗಳು ಮೊಬೈಲ್​ ಪ್ರವೇಶಿಸುತ್ತದೆ. ಬಳಿಕ ಇದು ನಿಮ್ಮ ಬ್ಯಾಂಕ್​ ಖಾತೆ ಸೇರಿದಂತೆ ಖಾಸಗಿ ಮಾಹಿತಿಯನ್ನು ಕಲೆ ಹಾಕುತ್ತದೆ ಎಂದು ಹೇಳಿದ್ದಾರೆ.

ತಜ್ಞರ ಪ್ರಕಾರ, "Android.Marcher.C" ಅಡೋಬ್ ಫ್ಲಾಶ್​ ಪ್ಲೆಯರ್​ ಐಕಾನ್​ ರೀತಿಯಲ್ಲೇ ಇದ್ದು, ಯಾರಿಗೂ ಗುರುತು ಹಚ್ಚಲು ಅಸಾಧ್ಯ, ಇನ್ನು "Android.Asacub.T" ಆ್ಯಂಡ್ರಾಯ್ಡ್​ ಅಪ್​ಡೇಟ್​ನ ಐಕಾನ್​ ಬಳಸುತ್ತದೆ. ಹೀಗಾಗಿ ಸುಲಭದಲ್ಲಿ ಇದನ್ನು ಪತ್ತೆ ಹಚ್ಚಲು ಅಸಾಧ್ಯ. ಈ ಎರಡು ವೈರಸ್​ ಬಳಸಿ ಹ್ಯಾಕರ್ಸ್​ ಒಟಿಪಿಯನ್ನು ಪಡೆಯದೇ ನಿಮ್ಮ ಬ್ಯಾಂಕ್​ ಖಾತೆಯಿಂದ ಹಣವನ್ನು ಲಪಟಾಯಿಸಬಹುದು.

ಒಟ್ಟಾರೆ ಕ್ವಿಕ್​ ಹೀಲ್​ ಮೂರು ಟ್ರೋಜನ್​ ಪತ್ತೆ ಹಚ್ಚಿದ್ದು, ಹೆಚ್ಚಿನ ಹ್ಯಾಕರ್ಸ್​ಗಳು ಮೊಬೈಲ್​ಗಳನ್ನು ಫೋಕಸ್​ ಮಾಡ ತೊಡಗಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇಂತಹ ಹ್ಯಾಕ್​​ಗಳಿಗೆ ಒಳಪಡದಂತೆ ನಿಮ್ಮ ಖಾತೆಯನ್ನು ಕಾಪಾಡಲು ನೀವು 'Unknown Sources' ಆಯ್ಕೆಯನ್ನು ಡಿಸೇಬಲ್​ ಮಾಡಿಡಬೇಕು. ಅಲ್ಲದೇ ಯಾವುದೇ ಕಾರಣಕ್ಕೂ ನೀವು ಡೌನ್​ಲೋಡ್​ ಮಾಡಿರವ ಅಪ್ಲಿಕೇಶನ್​ ಸೂಕ್ತ ವಾಗಿ ಪರಿಶೀಲಿಸಬೇಕು.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...