BRATA ಮಾಲ್‌ವೇರ್ ಬಗ್ಗೆ ಎಚ್ಚರ! ನಿಮ್ಮ ಬ್ಯಾಂಕ್ ಅಪ್ಲಿಕೇಶನ್‌ಗಳಿಂದ ಹಣವನ್ನು ಕದಿಯಬಹುದು

BRATA Malware: ಘಿಮಾಬ್, ಬ್ಲ್ಯಾಕ್‌ರಾಕ್‌ ಮತ್ತು X ಹೆಲ್ಪರ್‌ನಂತಹ ಮಾಲ್‌ವೇರ್‌ಗಳು ವರ್ಷಗಳಿಂದ ಸಾವಿರಾರು ಆ್ಯಂಡ್ರಾಯ್ಡ್ ಸಾಧನಗಳ ಮೇಲೆ ಪರಿಣಾಮ ಬೀರಿವೆ. ಬಳಕೆದಾರರಿಗೆ ತೀರ ಅಪಾಯವನ್ನು ಉಂಟು ಮಾಡುತ್ತಿರುವ ಮಾಲ್‌ವೇರ್‌ಗಳಲ್ಲಿ ಒಂದು BRATA (ಬ್ರೆಜಿಲಿಯನ್ ರಿಮೋಟ್ ಆಕ್ಸೆಸ್ ಟೂಲ್ ಆ್ಯಂಡ್ರಾಯ್ಡ್). 2019ರಲ್ಲಿ, BRATA ಮಾಲ್‌ವೇರ್ ಅನ್ನು ಗುರುತಿಸಲಾಗಿದ್ದು ಇದರ ಹೊಸ ರೂಪಾಂತರವು ಈಗಷ್ಟೇ ಹೊರಹೊಮ್ಮಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

    85%ಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳು (Smartphones) ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ (Android Operating System) ಕಾರ್ಯನಿರ್ವಹಿಸುತ್ತವೆ. Appleನ iOS ಆಪರೇಟಿಂಗ್ ಸಿಸ್ಟಮ್‌ಗೆ ಹೋಲಿಸಿದರೆ, ಆ್ಯಂಡ್ರಾಯ್ಡ್ ಓಪನ್ ಸೋರ್ಸ್ ಸಾಫ್ಟ್‌ವೇರ್ (Android Open Source Software) ಅನ್ನು ಆಧರಿಸಿದ್ದು ಬಳಕೆದಾರರಿಗೆ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು (Third Party Application) ಇನ್​ಸ್ಟಾಲ್ (Install) ಮಾಡಲು ಅನುಮತಿ ನೀಡುವುದರ ಜೊತೆಗೆ ಅವರನ್ನು ಸುಲಭವಾಗಿ ಸೈಬರ್‌ದಾಳಿಗೆ ಗುರಿಯಾಗುವಂತೆ ಮಾಡುತ್ತದೆ. ಫೋನ್‌ಗಳನ್ನು ಸೋಂಕಿಗೆ ಒಳಪಡಿಸುವ ಮಾಲ್‌ವೇರ್‌ಗಳ (Malware) ಕುರಿತು ಗೂಗಲ್ (Google) ಜನರಿಗೆ ಎಚ್ಚರಿಕೆ ನೀಡುತ್ತಿದೆ.


    ಘಿಮಾಬ್, ಬ್ಲ್ಯಾಕ್‌ರಾಕ್‌ ಮತ್ತು X ಹೆಲ್ಪರ್‌ನಂತಹ ಮಾಲ್‌ವೇರ್‌ಗಳು ವರ್ಷಗಳಿಂದ ಸಾವಿರಾರು ಆ್ಯಂಡ್ರಾಯ್ಡ್ ಸಾಧನಗಳ ಮೇಲೆ ಪರಿಣಾಮ ಬೀರಿವೆ. ಬಳಕೆದಾರರಿಗೆ ತೀರ ಅಪಾಯವನ್ನು ಉಂಟು ಮಾಡುತ್ತಿರುವ ಮಾಲ್‌ವೇರ್‌ಗಳಲ್ಲಿ ಒಂದು BRATA (ಬ್ರೆಜಿಲಿಯನ್ ರಿಮೋಟ್ ಆಕ್ಸೆಸ್ ಟೂಲ್, ಆ್ಯಂಡ್ರಾಯ್ಡ್). 2019ರಲ್ಲಿ, BRATA ಮಾಲ್‌ವೇರ್ ಅನ್ನು ಗುರುತಿಸಲಾಗಿದ್ದು ಇದರ ಹೊಸ ರೂಪಾಂತರವು ಈಗಷ್ಟೇ ಹೊರಹೊಮ್ಮಿದೆ. ಅದು ಬ್ಯಾಂಕ್ ಅಪ್ಲಿಕೇಶನ್‌ಗಳಿಂದ ಹಣವನ್ನು ಕದಿಯುವುದರ ಜೊತೆಗೆ ಆ್ಯಂಡ್ರಾಯ್ಡ್ ಸಾಧನಗಳಿಂದ ಡೇಟಾವನ್ನು ಕೂಡ ಅಳಿಸಲು ಶಕ್ತವಾಗಿದೆ. ಮಾಲ್‌ವೇರ್‌ನ ಹೊಸ ರೂಪಾಂತರವು ಹ್ಯಾಕ್ ಮಾಡಲ್ಪಟ್ಟ ಉಪಕರಣದಲ್ಲಿ ಫ್ಯಾಕ್ಟರಿ ರೀಸೆಟ್ ಮಾಡುವ ಸಾಮರ್ಥ್ಯವನ್ನು ಕೂಡ ಹೊಂದಿರುತ್ತದ. ಬಳಕೆದಾರನ ಒಪ್ಪಿಗೆಯಿಲ್ಲದೆ ಅವರ ಉಪಕರಣದಲ್ಲಿನ ಎಲ್ಲಾ ಮಾಹಿತಿಯನ್ನು ಅಳಿಸಿ ಹಾಕಬಲ್ಲದು ಎಂದು ಸಂಶೋಧಕರು ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.


    ಸೈಬರ್ ಭದ್ರತಾ ಸಂಸ್ಥೆ ಕ್ಲೀಫಿ ಇತ್ತೀಚೆಗೆ BRATA ಮಾಲ್‌ವೇರ್ ಕುರಿತು ವರದಿಯೊಂದನ್ನು ಪ್ರಕಟಿಸಿದೆ. ಈ ವರದಿಯಲ್ಲಿ, BRATA ಅನ್ನು ಬ್ಯಾಂಕಿಂಗ್ ಟ್ರೋಜನ್ ಎಂದು ವಿವರಿಸಲಾಗಿದೆ. ಅದು ಆ್ಯಂಡ್ರಾಯ್ಡ್ ಸಾಧನಗಳನ್ನು ರಿಮೋಟ್ ಆಗಿ ಪ್ರವೇಶಿಸಿ ಬ್ಯಾಂಕ್ ಅಪ್ಲಿಕೇಶನ್‌ಗಳ ಮೂಲಕ ಬಳಕೆದಾರರ ಹಣವನ್ನು ಕದಿಯಬಹುದು.


    ಪ್ರೋಗ್ರಾಂನ ಇತ್ತೀಚಿನ ಆವೃತ್ತಿಯಲ್ಲಿ, ಆಕ್ರಮಣಕಾರರು ದುರುದ್ದೇಶಪೂರಿತ ಚಟುವಟಿಕೆಯ ನಂತರ ಆ್ಯಂಡ್ರಾಯ್ಡ್ ಸಾಧನವನ್ನು ರಿಮೋಟ್ ಆಗಿ ಫ್ಯಾಕ್ಟರಿ ಸೆಟ್ಟಿಂಗ್‌ಗೆ ಮರುಹೊಂದಿಸಲು ಸಾಧ್ಯವಾಗುತ್ತದೆ. ನಕಲಿ ಲಾಗಿನ್ ಪುಟಗಳನ್ನು ಬಳಸಿಕೊಂಡು, ಮಾಲ್‌ವೇರ್ ಬ್ಯಾಂಕಿಂಗ್ ರುಜುವಾತುಗಳಂತಹ ಬಳಕೆದಾರರ ಅತಿ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸಿ ಹಣವನ್ನು ಕದಿಯಬಲ್ಲದು.


    ಇದನ್ನು ಓದಿ: Facebook‌ನಲ್ಲಿ ಸೀಕ್ರೇಟ್ ಡೇಟಿಂಗ್ ಪ್ರೊಫೈಲ್.. ನಿಮ್ಮ ಸೀಕ್ರೇಟ್ ಪೋಷಕರಿಗೆ, ಸ್ನೇಹಿತರಿಗೆ ಗೊತ್ತಾಗುತ್ತಾ?

    ಕ್ಲೀಫಿ ಪ್ರಕಾರ, ಆಕ್ರಮಣಕಾರರು BRATA ಮಾಲ್‌ವೇರ್ ಅನ್ನು ಬಳಕೆದಾರರ ಸಾಧನಕ್ಕೆ ನಕಲಿ ಲಾಗಿನ್ ಪುಟಗಳನ್ನು ತಲುಪಿಸಲು ಬಳಸಬಹುದು. ಇದು ಬಳಕೆದಾರರ ಇ-ಬ್ಯಾಂಕಿಂಗ್ ಮಾಹಿತಿಯನ್ನು ಪ್ರವೇಶಿಸಲು ಪ್ರೋಗ್ರಾಂ ಅನ್ನು ಅನುಮತಿಸುತ್ತದೆ ಮತ್ತು ಬಳಕೆದಾರರಿಗೆ ಅರಿವಿಲ್ಲದೆ ಹಣವನ್ನು ಕದಿಯುತ್ತದೆ. ಹೆಚ್ಚುವರಿಯಾಗಿ, ಅದರ ಹೊಸ ಫ್ಯಾಕ್ಟರಿ ರೀಸೆಟ್ ದಾಳಿಕೋರರನ್ನು ಆ್ಯಂಡ್ರಾಯ್ಡ್ ಸಾಧನದಲ್ಲಿ ಮಾಲ್‌ವೇರ್‌ನ ಯಾವುದೇ ಪುರಾವೆಗಳನ್ನು ರಿಮೋಟ್ ಆಗಿ ಅಳಿಸಿಹಾಕಲು ಶಕ್ತಗೊಳಿಸುತ್ತದೆ. ಬಳಕೆದಾರರು ತಾವು ದರೋಡೆಗೆ ಒಳಪಟ್ಟಿದ್ದಾರೆ ಎಂಬುವುದನ್ನು ತಿಳಿದುಕೊಳ್ಳುವ ಹೊತ್ತಿಗೆ ದಾಳಿಕೋರರು ತಾವು ಗಳಿಸಿದ ಮಾಹಿತಿಗಳೊಂದಿಗೆ ಸುಲಭವಾಗಿ ತಪ್ಪಿಸಿಕೊಂಡಿರುತ್ತಾರೆ.


    BRATA ಮಾಲ್‌ವೇರ್‌ನಿಂದ ನಿಮ್ಮ ಸಾಧನವನ್ನು ನೀವು ಹೇಗೆ ರಕ್ಷಿಸಬಹುದು..?


    ನೀವು ಆ್ಯಂಡ್ರಾಯ್ಡ್ ಬಳಕೆದಾರರಾಗಿದ್ದರೆ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಸ್ಟೋರ್‌ಗಳಿಂದ ಅಪ್ಲಿಕೇಶನ್‌ಗಳನ್ನು ಇನ್ಸ್ಟಾಲ್ ಮಾಡುವುದನ್ನು ತಪ್ಪಿಸಿ. ಪ್ಲೇ ಸ್ಟೋರ್‌ನಿಂದ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು ಅಪ್ಲಿಕೇಶನ್ ಕೇಳುವ ಅನುಮತಿಗಳನ್ನು ಪರಿಶೀಲಿಸಿ.


    ನಿಮ್ಮ ಫೋನ್‌ನಲ್ಲಿ ವಿಶ್ವಾಸಾರ್ಹ ಆ್ಯಂಟಿ-ಮಾಲ್‌ವೇರ್ ಸಾಫ್ಟ್‌ವೇರ್ ಅನ್ನು ಬಳಸುವುದನ್ನು ಮರೆಯದಿರಿ. ಪರಿಣಾಮವಾಗಿ, ನಿಮ್ಮ ಸಾಧನವು ಅಪ್-ಟು-ಡೇಟ್ ಆಗಿರುತ್ತದೆ ಮತ್ತು ಯಾವುದೇ ಥ್ರೆಟ್‌ಗಳಿಗಾಗಿ ನಿಯಮಿತವಾಗಿ ಸ್ಕ್ಯಾನ್ ಆಗುತ್ತದೆ.


    ಇದನ್ನು ಓದಿ: Free Wi-Fi: ಸಾರ್ವಜನಿಕ ಉಚಿತ ವೈ-ಫೈ ಬಳಸಬೇಡಿ! ನಿಮ್ಮನ್ನ ಇವೆರಡು ವಿಧಾನದ ಮೂಲಕ ಹ್ಯಾಕ್ ಮಾಡ್ತಾರೆ… ಹುಷಾರ್!

    ನೆನಪಿರಲಿ, ಮಾಲ್‌ವೇರ್‌ ವಿರೋಧಿ ಸಾಫ್ಟ್‌ವೇರ್ ಯಾವಾಗಲೂ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುವುದೆಂಬ ಭರವಸೆ ಇಲ್ಲ. ಆದ್ದರಿಂದ ನೀವು ಯಾವುದೇ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸದೆ ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ. ಈ ದ್ವಿಮುಖ ವಿಧಾನದಿಂದ ನೀವು ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸುವುದರ ಜೊತೆಗೆ ನಿಮ್ಮ ಆ್ಯಂಡ್ರಾಯ್ಡ್ ಸಾಧನಗಳನ್ನು ಸುರಕ್ಷಿತವಾಗಿಡಬಹುದು.


    Published by:Harshith AS
    First published: