HOME » NEWS » Tech » BEST WIRELESS EARPHONES UNDER 5000 RS IN INDIA NOKIA VS ONEPLUS VS REALME VS OPPO COMPARISON STG SCT

Best Wireless Earphones: 5,000 ರೂ.ಗಿಂತ ಕಡಿಮೆ ಬೆಲೆಯ ಬೆಸ್ಟ್​ ವೈರ್​ಲೆಸ್​ ಇಯರ್​ಫೋನ್ ಯಾವುದು?

Best Wireless Earphones | ಇತ್ತೀಚೆಗೆ ಬಿಡುಗಡೆಯಾಗಿರುವ 5000 ರೂ.ಗಿಂತ ಕಡಿಮೆ ಬಜೆಟ್ ನಲ್ಲಿ ಅತ್ಯುತ್ತಮವಾಗಿರುವ ವೈರ್‌ಲೆಸ್‌ ಇಯರ್ ಫೋನ್‌ಗಳ ಮಾಹಿತಿ ಇಲ್ಲಿದೆ...

Trending Desk
Updated:June 3, 2021, 3:06 PM IST
Best Wireless Earphones: 5,000 ರೂ.ಗಿಂತ ಕಡಿಮೆ ಬೆಲೆಯ ಬೆಸ್ಟ್​ ವೈರ್​ಲೆಸ್​ ಇಯರ್​ಫೋನ್ ಯಾವುದು?
ವೈರ್​ಲೆಸ್ ಇಯರ್​ಫೋನ್
  • Share this:

ಹೊಸ ಹೊಸ ಉತ್ಪನ್ನಗಳು ಬಿಡುಗಡೆಯಾಗುತ್ತಿರುವುದರಿಂದ ಟ್ರೂ ವೈರ್ ಲೆಸ್ ಇಯರ್ ಪೋನ್ ಗಳ ವಲಯವು ಸದ್ಯ ಶೀಘ್ರ ಗತಿಯಲ್ಲಿ ಬದಲಾವಣೆಯಾಗುತ್ತಿದೆ. ಹೊಸ ಆವಿಷ್ಕಾರಗಳು ಬೆಲೆಗಳ ಮೇಲೂ ಪರಿಣಾಮ ಬೀರುತ್ತಿದೆ. ಕಳೆದ ಕೆಲ ತಿಂಗಳುಗಳಲ್ಲಿ 5000 ರೂ. ಗಿಂತ ಕಡಿಮೆ ಬಜೆಟ್ ನಲ್ಲಿ ಅತ್ಯುತ್ತಮವಾಗಿರುವ ಹಾಗೂ ಕೊಟ್ಟ ಹಣಕ್ಕೆ ತಕ್ಕ ಮೌಲ್ಯದ ಟ್ರೂ ವೈರ್‌ಲೆಸ್‌ ಇಯರ್ ಫೋನ್‌ಗಳನ್ನು ನಾವು ಇಲ್ಲಿ ಅವಲೋಕಿಸೋಣ.


ಸದ್ಯದ ಭಾರತೀಯ ಮಾರುಕಟ್ಟೆಯನ್ನು ಪರಿಗಣಿಸಿದರೆ 3,000 ದಿಂದ 5,000 ರೂ.ಗಳವರೆಗಿನ ಬೆಲೆಯ ಟ್ರೂ ವೈರ್ ಲೆಸ್ ಇಯರ್ ಫೋನ್ ಗಳು ಕೈಗೆಟುಕುವ ಸಾಮಾನ್ಯವಾದ ಆಯ್ಕೆಗಳಾಗಿವೆ. ಸದ್ಯ ಈ ಶ್ರೇಣಿಯಲ್ಲಿ ಲಭ್ಯವಿರುವ ನೋಕಿಯಾ ಪವರ್ ಇಯರ್ ಬಡ್ಸ್ ಲೈಟ್, ಒನ್ ಪ್ಲಸ್ ಬಡ್ಸ್ Z, ರಿಯಲ್ ಮಿ ಬಡ್ಸ್ ಏರ್ 2, ಒಪ್ಪೊ ಎನ್ಕೋ W51 ಗಳ ನಡುವೆ ಯಾವುದು ಉತ್ತಮ ಎನ್ನುವುದನ್ನು ಆಯ್ಕೆ ಮಾಡುವ ಮುನ್ನ ಈ ಲೇಖನವನ್ನು ಗಮನಿಸಬಹುದು.



ಬೆಲೆಗಳ ನಡುವಿನ ಹೋಲಿಕೆ:
ಮೇಲೆ ನೀಡಲಾದ ಆಯ್ಕೆಗಳಲ್ಲಿ ಕೈಗೆಟುಕುವ ಬೆಲೆಗೆ ಲಭ್ಯವಿರುವ ಟ್ರೂ ವೈರ್‌ಲೆಸ್‌ ಇಯರ್ ಫೋನ್ ಅಂದರೆ ಅದು ಒನ್ ಪ್ಲಸ್ ಬಡ್ಸ್ Z, ಏಕೆಂದರೆ ಇದರ ಬೆಲೆ 2,999 ರೂ. ರಿಯಲ್ ಮಿ ಬಡ್ಸ್ ಏರ್ 2 ಹಾಗೂ ನೋಕಿಯಾ ಪವರ್ ಇಯರ್ ಬಡ್ಸ್ ಲೈಟ್‌ನ ಬೆಲೆಗಳು ಕ್ರಮವಾಗಿ 3,299 ಹಾಗೂ 3,599 ಆಗಿದೆ. ಇವುಗಳ ಪೈಕಿ ದುಬಾರಿ ಅಂದರೆ ಅದು ಒಪ್ಪೊ ಎನ್ಕೋ W51 . ಇದರ ಬೆಲೆ 4,999. ಇಲ್ಲಿ ನೀಡಲಾದ ಹಣಕ್ಕಿಂತ ಕಡಿಮೆ ಮೊತ್ತಕ್ಕೆ ವಿವಿಧ ಆಫರ್ ಗಳಲ್ಲಿ ನಿಮಗೆ ಈ ಸಾಧನ ಸಿಗಬಹುದು. ಆದರೆ ಇಲ್ಲಿ ನೀಡಲಾದ ಬೆಲೆಗಿಂತ ಹೆಚ್ಚಿನ ಬೆಲೆ ಏರಿಕೆ ಸಾಮಾನ್ಯವಾಗಿ ಆಗುವುದು ಕಡಿಮೆ.


ಇದನ್ನೂ ಓದಿ: Kannada Language | ಭಾರತದ ಅತ್ಯಂತ ಕೊಳಕು ಭಾಷೆ ಕನ್ನಡ!; ಗೂಗಲ್ ವಿರುದ್ಧ ರೊಚ್ಚಿಗೆದ್ದ ಕನ್ನಡಿಗರು

ವಿನ್ಯಾಸ ಮತ್ತು ಸ್ಪೆಸಿಫಿಕೇಶನ್ ವೈವಿಧ್ಯತೆ:


ಒನ್ ಪ್ಲಸ್ , ಒಪ್ಪೊ, ರಿಯಲ್ ಮಿ, ನೋಕಿಯಾ ಟ್ರೂ ವೈರ್ ಲೆಸ್ ಇಯರ್ ಫೋನ್‌ಗಳು ಟಚ್ ಕಂಟ್ರೋಲ್ ಹೊಂದಿವೆ. ನೋಕಿಯಾ ಹಾಗೂ ಒನ್ ಪ್ಲಸ್ ಹೆಡ್ ಸೆಟ್‌ಗಳು ದೊಡ್ಡ ಹಾಗೂ ವಿಶಿಷ್ಟ ಟಚ್ ಸೆನ್ಸಿಟಿವ್ ವಲಯಗಳನ್ನು ಹೊಂದಿದ್ದು, ಒಪ್ಪೊ ಎನ್ಕೋ W51 ಹಾಗೂ ರಿಯಲ್ ಮಿ ಬಡ್ಸ್ ಏರ್ 2 ನ ಸ್ಟಾಕ್ಸ್ ನ ಮೇಲ್ಭಾಗದಲ್ಲಿರುವ ಕಿರಿದಾದ ಟಚ್ ಕಂಟ್ರೋಲ್‌ಗಿಂತ ಬಳಸಲು ತುಂಬ ಸುಲಭವಾಗಿದೆ. ಸಾಮಾನ್ಯವಾಗಿರುವಂತೆ ಎಲ್ಲ ನಾಲ್ಕರಲ್ಲೂ ಜಲ ನಿರೋಧಕವಾದ ಪ್ಲಾಸ್ಟಿಕ್ ಬಾಡಿ ಹಾಗೂ ಚಾರ್ಜಿಂಗ್ ಕೇಸ್ ಗಳಿದ್ದು, ನೋಕಿಯಾ ಪವರ್ ಇಯರ್ ಬಡ್ಸ್ ಲೈಟ್ ಇವುಗಳ ಪೈಕಿ ಉತ್ತಮವಾಗಿದ್ದು IPX7 ಜಲ ನಿರೋಧಕವನ್ನು ಹೊಂದಿದೆ. ನೋಕಿಯಾ ಪವರ್ ಇಯರ್ ಬಡ್ಸ್ ನಷ್ಟು ಉತ್ತಮವಾಗಿಲ್ಲದಿದ್ದರೂ ಉಳಿದೆಲ್ಲವೂ ಹಲವು ಹಂತಗಳ ಧೂಳು ಮತ್ತು ಜಲ ನಿರೋಧಕತೆಯನ್ನು ಹೊಂದಿವೆ.

ಈ ಎಲ್ಲ ಹೆಡ್ ಸೆಟ್ ಗಳು ತಮ್ಮದೇ ವಿಶಿಷ್ಟ ಫೀಚರ್ ಗಳನ್ನು ಹೊಂದಿದ್ದು, ಒನ್ ಪ್ಲಸ್ ಬಡ್ಸ್ Z ವೇಗವಾದ ಚಾರ್ಜಿಂಗ್ ಹಾಗೂ ಡಾಲ್ಬಿ ಅಟ್ಮೊಸ್ ಸಪೋರ್ಟ್ ಹೊಂದಿದೆ. ಅದೇ ವೇಳೆ ನೋಕಿಯಾ ಪವರ್ ಇಯರ್ ಬಡ್ಸ್ ಲೈಟ್ IPX7 ಜಲ ನಿರೋಧಕವನ್ನು ಹೊಂದಿದೆ. ರಿಯಲ್ ಮಿ ಬಡ್ಸ್ ಏರ್ 2 ತುಂಬ ಉತ್ತವಾದ ಕಂಪಾನಿಯನ್ ಆ್ಯಪ್ ಹಾಗೂ ANC ಹೊಂದಿದೆ. ಅದೇ ವೇಳೆ ಒಪ್ಪೊ ಎನ್ಕೋ W51 ವೈರ್‌ಲೆಸ್‌ ಚಾರ್ಜಿಂಗ್‌ಗಾಗಿ ಕೇಸ್ ಹಾಗೂ ANC ಹೊಂದಿದೆ.


ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ 30 ಸಾವಿರಕ್ಕೂ ಕಡಿಮೆ ಬೆಲೆಯ ಐದು ಸ್ಮಾರ್ಟ್‌ಫೋನ್‌ಗಳು ಇಲ್ಲಿದೆ

ಬ್ಯಾಟರಿ ಬಾಳಿಕೆಯ ವೈಶಿಷ್ಟ್ಯತೆಗಳು:
ನೀಡಲಾಗಿರುವ ನಾಲ್ಕು ಟ್ರೂ ವೈರ್ ಲೆಸ್ ಹೆಡ್ ಸೆಟ್‌ಗಳ ಪೈಕಿ ನೋಕಿಯಾ ಪವರ್ ಇಯರ್ ಬಡ್ ಲೈಟ್ ಮಾತ್ರ ಕಂಪಾನಿಯನ್ ಆ್ಯಪ್ ಹೊಂದಿಲ್ಲ. ಒನ್ ಪ್ಲಸ್ ಬಡ್ಸ್ Z, ರಿಯಲ್ ಮಿ ಬಡ್ಸ್ ಏರ್ 2, ಒಪ್ಪೊ ಎನ್ಕೋ W51 ಬೇಸಿಕ್ ಕಂಟ್ರೋಲ್ ಗಳು ಹಾಗೂ ಕಸ್ಟಮೈಸೇಶನ್‌ಗಳಿಗೆ ಕೆಲವು ವಿಧದ ಆಪ್ ಗಳನ್ನು ಸಪೋರ್ಟ್ ಮಾಡುತ್ತದೆ.


ಬಜೆಟ್ ಟ್ರೂ ವೈರ್ ಲೆಸ್ ಹೆಡ್ ಸೆಟ್ ಗಳ ಬ್ಯಾಟರಿ ಜೀವಿತಾವಧಿ ನಿರೀಕ್ಷಿತ ಪ್ರಮಾಣದಲ್ಲೇ ಇರುತ್ತದೆ. ಒನ್ ಪ್ಲಸ್ ಬಡ್ಸ್ Z ಮತ್ತು ನೋಕಿಯಾ ಪವರ್ ಇಯರ್ ಬಡ್ ಬ್ಯಾಟರಿಗಳು ನಾಲ್ಕು ಗಂಟೆಗಳ ಕಾಲ ಬಾಳಿಕೆ ಬರುತ್ತದೆ. ಅದೇ ವೇಳೆ ಒನ್ ಪ್ಲಸ್ ಬಡ್ಸ್ Z ಹಾಗೂ ರಿಯಲ್ ಮಿ ಬಡ್ಸ್ ಏರ್ 2 ಗಳ ಬ್ಯಾಟರಿ ಮೂರು ಗಂಟೆಗಳ ಕಾಲ ಮಾತ್ರ ಬಾಳಿಕೆ ಬರುತ್ತದೆ.


ನಿರ್ವಹಣೆಯಲ್ಲಿ ಯಾವುದು ಬೆಸ್ಟ್?
ಇಲ್ಲಿ ನೀಡಲಾದವುಗಳ ಪೈಕಿ ದುಬಾರಿಯಾಗಿರುವುದರಿಂದ ಧ್ವನಿ ಗುಣಮಟ್ಟದ ವಿಚಾರಕ್ಕೆ ಬಂದರೆ ಒಪ್ಪೊ ಎನ್ಕೋ W51 ಉತ್ತಮವಾಗಿದೆ. ಕೈಗೆಟಕುವ ಬೆಲೆಯ ಒನ್ ಪ್ಲಸ್ ಬಡ್ಸ್ Z ನ ಧ್ವನಿ ಕೂಡ ಆನಂದಿಸಬಹುದು. ಒನ್ ಪ್ಲಸ್ ಕೂಡ ಗುಣಮಟ್ಟದ ಕೇಳುವಿಕೆಯ ಅನುಭವ ನೀಡುತ್ತದೆ. ನೋಕಿಯಾ ಪವರ್ ಇಯರ್ ಬಡ್ ಧ್ವನಿ ಗುಣಮಟ್ಟವನ್ನೂ ನಿರ್ಲಕ್ಷಿಸುವಂತಿಲ್ಲ.


Published by: Sushma Chakre
First published: June 3, 2021, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories