HOME » NEWS » Tech » BEST UNLIMITED PREPAID PLANS UNDER RS 500 FROM AIRTEL JIO VI AND BSNL HG

Airtel v/s Jio v/s Vi v/s BSNL: 500 ರೂ ಒಳಗಿನ ಬೆಸ್ಟ್​ ಅನಿಯಮಿತ ಪ್ರಿಪೇಯ್ಡ್​ ಪ್ಲಾನ್​​; ಯಾವುದು ಬೆಸ್ಟ್​?

Best Prepaid Plans: ಜಿಯೋ ಪ್ರಿಪೇಯ್ಡ್​ ಪ್ಲಾನ್​: ರಿಲಾಯನ್ಸ್​ ಜಿಯೋ 444 ರೂ.ವಿನ ಅನಿಯಮಿತ ಪ್ಲಾನ್​​ ಪರಿಚಯಿಸಿದೆ. ಇದರ ಮೂಲಕ ಪ್ರತಿದಿನ 2GB ಡೇಟಾ ನೀಡುತ್ತಿದೆ.

news18-kannada
Updated:November 20, 2020, 4:33 PM IST
Airtel v/s Jio v/s Vi v/s BSNL: 500 ರೂ ಒಳಗಿನ ಬೆಸ್ಟ್​ ಅನಿಯಮಿತ ಪ್ರಿಪೇಯ್ಡ್​ ಪ್ಲಾನ್​​; ಯಾವುದು ಬೆಸ್ಟ್​?
Airtel v/s Jio v/s Vi v/s BSNL
  • Share this:
ಬಿಎಸ್​​ಎನ್​ಎಲ್​​ ಪ್ರಿಪೇಯ್ಡ್​ ಪ್ಲಾನ್​: ಬಿಎಸ್​ಎನ್​ಎಲ್​ 500 ರೂ.ವಿನ ಅನಿಯಮಿತ ಪ್ರಿಯೇಯ್ಡ್​ ಪ್ಲಾನ್​​ ಮೂಲಕ ಪ್ರತಿದಿನ 3GB ಡೇಟಾ ಸಿಗಲಿದೆ. ಜೊತೆಗೆ ಪ್ರತಿದಿನ 250 ನಿಮಿಷಗಳ ಉಚಿತ ಕರೆ ಹಾಗೂ 100 ಎಸ್​ಎಮ್​ಎಸ್​ ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, 40 ದಿನಗಳ  ಬಿಎಸ್​​ಎನ್​ಎಲ್​​ ಟ್ಯೂನ್​ ಮತ್ತು ಎರೋಸ್​​ ನೌ ಚಂದಾದಾರಿಕೆ ನೀಡುತ್ತಿದೆ.

ಏರ್​ಟೆಲ್​​ ಪ್ರಿಪೇಯ್ಡ್​ ಪ್ಲಾನ್: ಏರ್​ಟೆಲ್​ 449 ರೂ.ವಿನ ಪ್ಲಾನ್​ ಮೂಲಕ ಅನಿಯಮಿತ ಕರೆ ಸೌಲಭ್ಯ ಮತ್ತು ಪ್ರತಿದಿನ 2GB ಎಫ್​ಯುಪಿ ಡೇಟಾ ಮತ್ತು 100 ಉಚಿತ ಎಸ್​​ಎಮ್​ಎಸ್​​ ನೀಡುತ್ತಿದೆ. ಈ ಪ್ಲಾನ್​ 56 ದಿನಗಳ ವ್ಯಾಲಿಡಿಟಿ ಹೊಂದಿದೆ.  ಜೊತೆಗೆ ಏರ್​ಟೆಲ್​ ಎಕ್ಸ್​ಟ್ರೀಮ್​ ಪ್ರಿಮಿಯಂ ಚಂದಾದಾರಿಕೆ ನೀಡುತ್ತಿದೆ.  ಜೊತೆಗೆ 1 ವರ್ಷದ ಶೋ ಅಕಾಡೆಮಿ, ವಿಂಕ್ ​ಮ್ಯೂಸಿಕ್​ ಆಯ್ಕೆ ನೀಡುತ್ತಿದೆ.

ಜಿಯೋ ಪ್ರಿಪೇಯ್ಡ್​ ಪ್ಲಾನ್​: ರಿಲಾಯನ್ಸ್​ ಜಿಯೋ 444 ರೂ.ವಿನ ಅನಿಯಮಿತ ಪ್ಲಾನ್​​ ಪರಿಚಯಿಸಿದೆ. ಇದರ ಮೂಲಕ ಪ್ರತಿದಿನ 2GB ಡೇಟಾ ನೀಡುತ್ತಿದೆ. ಜೊತೆಗೆ ಅನಿಯಮಿತ ಕರೆ ಮತ್ತು  ಜಿಯೋದಿಂದ ಬೇರೆ ನೆಟ್​ವರ್ಕ್​ ಕರೆಗಳ ಮೇಲೆ 2 ಸಾವಿರ ಎಫ್​ಯುಪಿ ನೀಡುತ್ತಿದೆ. ಇನ್ನು 100 ಎಸ್​ಎಮ್​ಎಸ್​ ಮತ್ತು ಜಿಯೋ ಆ್ಯಪ್​ ಚಂದಾದರಿಕೆ ನೀಡುತ್ತಿದೆ.
Youtube Video

ವಿ ಪ್ರಿಪೇಯ್ಡ್​ ಪ್ಲಾನ್​: ವಿ ಪರಿಚಯಿಸಿರುವ 449  ರೂ ಪ್ಲಾನ್​​ ಮೂಲಕ 4GB ಡೈಲಿ ಡೇಟಾ ನೀಡುತ್ತಿದೆ. ಜೊತೆಗೆ ಡಬಲ್​ ಡೇಟಾ ಆಯ್ಕೆಯನ್ನು ನೀಡಿದೆ. ಜೊತೆಗೆ ಅನಿಯಮಿತ ಕರೆ ಸೌಲಭ್ಯ ಮತ್ತು 100 ಎಸ್​ಎಮ್​ಎಸ್​ ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, ವಿ ಸಿನಿಮಾ ಮತ್ತು ಟಿವಿ ನೋಡುವ ಆಯ್ಕೆಯನ್ನು ನೀಡುತ್ತಿದೆ.
Published by: Harshith AS
First published: November 20, 2020, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories