ಟಿಕ್​ಟಾಕ್ ಬ್ಯಾನ್ ಆದರೆ ಏನಂತೆ: ಇಲ್ಲಿದೆ ಪರ್ಯಾಯ ಆ್ಯಪ್​ಗಳು

ಈ ಅಪ್ಲಿಕೇಶನ್ ಸಹ ಮೋಜು ಮಸ್ತಿಗೆ ಹೇಳಿ ಮಾಡಿಸಿದಂತಿದೆ. ಇದರಲ್ಲೂ ಸಹ ಆ್ಯಕ್ಟಿಂಗ್, ಸಂಗೀತ, ಲಿಪ್​ಸಿಂಕ್, ಫೇಸ್​ ಸ್ಟಿಕ್ಕರ್ ಸೇರಿದಂತೆ ಹಲವು ಫೀಚರ್​ಗಳನ್ನು ನೀಡಲಾಗಿದೆ.

zahir | news18
Updated:April 18, 2019, 7:08 PM IST
ಟಿಕ್​ಟಾಕ್ ಬ್ಯಾನ್ ಆದರೆ ಏನಂತೆ: ಇಲ್ಲಿದೆ ಪರ್ಯಾಯ ಆ್ಯಪ್​ಗಳು
smartappspro.com
  • News18
  • Last Updated: April 18, 2019, 7:08 PM IST
  • Share this:
ಭಾರತದಲ್ಲಿ ಟಿಕ್​ಟಾಕ್ ಆ್ಯಪ್​ ಡೌನ್​ಲೋಡ್ ಬ್ಯಾನ್ ಮಾಡಲಾಗಿದೆ. ಹೀಗಾಗಿ ಈ ವಿಡಿಯೋ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್​ನಿಂದ ತೆಗೆದು ಹಾಕಲಾಗಿದೆ. ಆದರೆ ಕಳೆದರೆಡು ದಿನಗಳಿಂದ ದೇಶದ ಸ್ಮಾರ್ಟ್​ಫೋನ್ ಬಳಕೆದಾರರು ಟಿಕ್​ಟಾಕ್ ಅಪ್ಲಿಕೇಶನ್ ಡೌನ್​ಲೋಡ್ ಮಾಡಿಕೊಳ್ಳುವ ದಾರಿಯ ಹುಡುಕಾಟದಲ್ಲಿದ್ದಾರೆ.

ಸರ್ಕಾರವೇ ಈ ಆ್ಯಪ್​ಗೆ ನಿಷೇಧ ಹೇರಿರುವುದರಿಂದ ಬಳಕೆದಾರರು ಪರ್ಯಾಯ ಅಪ್ಲಿಕೇಶನತ್ತ ಮುಖ ಮಾಡುವುದು ಉತ್ತಮ. ಅಂದರೆ ಟಿಕ್​ಟಾಕ್ ಮಾದರಿಯಲ್ಲೇ ಪ್ಲೇ ಸ್ಟೋರ್​ನಲ್ಲಿ ಇನ್ನು ಹಲವು ಆ್ಯಪ್​ಗಳಿವೆ. ಟಿಕ್​ಟಾಕ್​ನಲ್ಲಿ ಮಾಡುವಂತಹ ರಸವತ್ತಾದ ವಿಡಿಯೋಗಳನ್ನು ಈ ಅಪ್ಲಿಕೇಶನ್​ಗಳ ಮೂಲಕ ರೆಕಾರ್ಡ್ ಮಾಡಿಕೊಳ್ಳಬಹುದು. ಇಂತಹ ಆ್ಯಪ್​ಗಳ ಹುಡಕಾಟದಲ್ಲಿರುವವರಿಗೆ ಕೆಲ ಅಪ್ಲಿಕೇಶನ್​ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

Vigo Video- ಟಿಕ್​ಕಾಕ್ ಮಾದರಿಯಲ್ಲಿರುವ ಶಾರ್ಟ್​ ವಿಡಿಯೋ ಆ್ಯಪ್ ವಿಗೋ ವಿಡಿಯೋ. ಇದರಲ್ಲಿರುವ ಹಲವು ಫಿಲ್ಟರ್​ಗಳನ್ನು ಬಳಸಿ ಮೋಜಿನ ವಿಡಿಯೋಗಳನ್ನು ರಚಿಸಬಹುದು. 67MB ಹೊಂದಿರುವ ಈ ಅಪ್ಲಿಕೇಶನ್​ ಅನ್ನು ಈಗಾಗಲೇ 100 ಮಿಲಿಯನ್​ಗಿಂತ ಹೆಚ್ಚಿನವರು ಇನ್​ಸ್ಟಾಲ್ ಮಾಡಿಕೊಂಡಿದ್ದಾರೆ. ಇದೊಂದು ಫ್ರೀ ಆ್ಯಪ್​ ಆಗಿದ್ದು, ಪ್ಲೇ ಸ್ಟೋರ್​ ಮೂಲಕ ಡೌನ್​ಲೋಡ್ ಮಾಡಬಹುದು.

LIKE Video- ಚೀನಾ ಮೂಲದ ಬಿಗೊ ಟೆಕ್ನಾಲಜಿ ಕಂಪೆನಿಯ ಈ ಅಪ್ಲಿಕೇಶನ್ ಸಹ ಮೋಜು ಮಸ್ತಿಗೆ ಹೇಳಿ ಮಾಡಿಸಿದಂತಿದೆ. ಇದರಲ್ಲೂ ಸಹ ಆ್ಯಕ್ಟಿಂಗ್, ಸಂಗೀತ, ಲಿಪ್​ಸಿಂಕ್, ಫೇಸ್​ ಸ್ಟಿಕ್ಕರ್ ಸೇರಿದಂತೆ ಹಲವು ಫೀಚರ್​ಗಳನ್ನು ನೀಡಲಾಗಿದೆ. ಟಿಕ್​ಟಾಕ್ ಆ್ಯಪ್ ಮಾದರಿಯಲ್ಲಿರುವ ಲೈಕ್ ವಿಡಿಯೋಗೆ 100 ಮಿಲಿಯನ್​ ಬಳಕೆದಾರರಿದ್ದಾರೆ. 45MB ಗಾತ್ರದ ಈ ಲೈಕ್ ವಿಡಿಯೋ ಆ್ಯಪ್ ಐಒಎಸ್ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳಲ್ಲಿ ಬಳಸಬಹುದು.

togetU- ಮೀಡಿಯಾ ಟೆಕ್ ಇಂಡಿಯಾ ಪ್ರಸ್ತುತ ಪಡಿಸಿರುವ ಟುಗೆಟ್​ಯು ಆ್ಯಪ್​ ಕೂಡ ಟಿಕ್​ಟಾಕ್ ಮಾದರಿಯಲ್ಲಿದೆ. ಇದರಲ್ಲಿ ನೀವು ವಿಡಿಯೋವನ್ನು ಅಪ್​ಲೋಡ್ ಮಾಡಿ ಎಡಿಟ್ ಮಾಡಿಕೊಳ್ಳಬಹುದು. ಈ ಆ್ಯಪ್ ಬಳಸಿ ಟಿಕ್​ಟಾಕ್ ರೀತಿಯಲ್ಲೇ ಡ್ಯಾನ್ಸ್​, ಕಾಮಿಡಿ ಹಾಗೂ ಮನರಂಜನಾ ವಿಡಿಯೋಗಳನ್ನು ಸೃಷ್ಟಿಸಿಕೊಳ್ಳಬಹುದು. 33MB ಹೊಂದಿರುವ ಈ ಅಪ್ಲಿಕೇಶನ್​ ಅನ್ನು 10 ಮಿಲಿಯನ್​ಗಿಂತಲೂ ಅಧಿಕ ಮಂದಿ ಇನ್​ಸ್ಟಾಲ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ತಾಯಿಯ ಗರ್ಭದಲ್ಲೇ ಹೊಡೆದಾಟ: ಅವಳಿ ಮಕ್ಕಳ ವಿಡಿಯೋ ಭಾರೀ ವೈರಲ್

ಇದಲ್ಲದೆ Kwai, Funimate, Triller, Lomotif, Cheez, Firework ಆ್ಯಪ್​ಗಳೂ ಸಹ ಟಿಕ್​ಟಾಕ್ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಅಪ್ಲಿಕೇಶನ್​ಗಳನ್ನು ಡೌನ್​ಲೋಡ್​ ಮಾಡಿಕೊಂಡು ವಿಡಿಯೋಗಳನ್ನು ಸೃಷ್ಟಿಸಿ ನಿಮ್ಮ ಪ್ರತಿಭೆಯನ್ನು ತೋರ್ಪಡಿಸಬಹುದು.ಇದನ್ನೂ ಓದಿ: TikTok: ಭಾರತೀಯರಿಗೆ ಈಗ ಟಿಕ್​ಟಾಕ್ ಚಿಂತೆ: ಗೂಗಲ್​ನಲ್ಲಿ ಆ್ಯಪ್​ಗಾಗಿ ಹುಡುಕಾಟ
First published:April 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ