Solar Power Bank: ಇದು ಸೋಲಾರ್​ ಪವರ್​ ಬ್ಯಾಂಕ್​ ! ವಿದ್ಯುತ್​ ಶಕ್ತಿ ಬಳಸಿ ಚಾರ್ಜ್​ ಮಾಡುವ ಅಗತ್ಯವೇ ಇಲ್ಲ

ಈ ಸೋಲಾರ್​ ಪವರ್​​ ಬ್ಯಾಂಕ್​​​ ಬಳಸಿಕೊಂಡು ನಿಮ್ಮ ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್‌ನೊಂದಿಗೆ ಇಯರ್‌ಬಡ್‌ಗಳನ್ನು ಚಾರ್ಜ್ ಮಾಡಬಹುದಾಗಿದೆ. ಆದರೆ ನೀವು ವಿದ್ಯತ್​ ಬಳಸಿ ಈ ಪವರ್ ಬ್ಯಾಂಕ್ ಅನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ.

ಸೋಲಾರ್​ ಪವರ್​ ಬ್ಯಾಂಕ್

ಸೋಲಾರ್​ ಪವರ್​ ಬ್ಯಾಂಕ್

  • Share this:
    ಪವರ್​ ಬ್ಯಾಂಕ್​ ಜೊತೆಗಿದ್ದರೆ ಸ್ಮಾರ್ಟ್​ಫೋನ್​ ಬ್ಯಾಟರಿ (Smart Phone Battery) ಖಾಲಿಯಾಗುತ್ತದೆ ಎಂಬ ಚಿಂತೆ ಇರುವುದಿಲ್ಲ. ಏಕೆಂದರೆ ಅಗತ್ಯವಿರುವ ಸಮಯದಲ್ಲಿ ಸ್ಮಾರ್ಟ್​ಫೋನ್​ ಬ್ಯಾಟರಿ ಖಾಲಿಯಾಗಿ ಕೈ ಕೊಟ್ಟರೆ ಪವರ್​ ಬ್ಯಾಂಕ್ (Power Bank)​ ಇದೆಯಲ್ಲ. ಆದರೆ ಭಾರತದಲ್ಲಿ ಗ್ರಾಹಕರು ಸುಲಭವಾಗಿ ಖರೀದಿಸಬಹುದಾದ ಹಲವು ಬ್ರಾಂಡ್‌ಗಳ ಪವರ್ ಬ್ಯಾಂಕ್‌ಗಳು ಲಭ್ಯವಿವೆ. ಆದರೆ ಅವುಗಳ ಸಮಸ್ಯೆಯೆಂದರೆ ನೀವು ಅವುಗಳನ್ನು ಚಾರ್ಜ್ ಮಾಡಲು ಮರೆತರೆ, ನಿಮಗೆ ಅಗತ್ಯವಿರುವಾಗ ಅವುಗಳನ್ನು  ಬಳಸಲಾಗುವುದಿಲ್ಲ ಮತ್ತು ನಿಮ್ಮ ಸಾಧನಗಳನ್ನು ಚಾರ್ಜ್ (Charge) ಮಾಡಲಾಗುವುದಿಲ್ಲ. ಆದರೀಗ ಮಾರುಕಟ್ಟೆಗೆ  ಸೋಲಾರ್​ ಪವರ್​ ಬ್ಯಾಂಕ್ (Solar Power Bank)​ ಬಂದಿದೆ. ಇದು ಜೊತೆಗಿದ್ದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

    ವಿದ್ಯುತ್​ ಶಕ್ತಿ ಬಳಸಿ ಪವರ್ ಬ್ಯಾಂಕ್  ಚಾರ್ಜ್​ ಮಾಡಲು ಸಾಧ್ಯ. ಆದರೆ ಪವರ್​ ಇಲ್ಲದೆ ಹೋದರೆ ಪವರ್​ ಬ್ಯಾಂಕ್​ ಕೆಲಸ ಮಾಡುವುದಿಲ್ಲ. ಮಾತ್ರವಲ್ಲದೆ ಸ್ಮಾರ್ಟ್​ಫೋನಿಗೂ ಬಳಸಲು ಸಾಧ್ಯವಾಗುದಿಲ್ಲ, ಆದರೆ ಇಂತಹ ಸಮಸ್ಯೆಗೆ ಪರಿಹಾರ ಎಂಬಂತೆ ಮಾರುಕಟ್ಟೆಯಲ್ಲಿ ಸೋಲಾರ್​ ಪವರ್​ ಬ್ಯಾಂಕ್​ ಬಂದಿದೆ. ಇದರ ಸಹಾಯದ ಮೂಲಕ ಪವರ್​ ಬ್ಯಾಂಕ್​ ಕಾರ್ಯ ನಿರ್ವಹಿಸುತ್ತದೆ ಮತ್ತು ಸ್ಮಾರ್ಟ್​ಫೋನನ್ನು ಚಾರ್ಜ್​ ಕೂಡ ಮಾಡಬಹುದಾಗಿದೆ. ಅಂದಹಾಗೆಯೇ ಇದರ ಬೆಲೆ, ವಿಶೇಷತೆಯ ಬಗ್ಗೆ ತಿಳಿಯೋಣ

    ಅಂದಹಾಗೆಯೇ, ಈ ಸೋಲಾರ್​ ಪವರ್​​ ಬ್ಯಾಂಕ್​​​ ಬಳಸಿಕೊಂಡು ನಿಮ್ಮ ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್‌ನೊಂದಿಗೆ ಇಯರ್‌ಬಡ್‌ಗಳನ್ನು ಚಾರ್ಜ್ ಮಾಡಬಹುದಾಗಿದೆ. ಆದರೆ ನೀವು ವಿದ್ಯುತ್​ ಬಳಸಿ ಈ ಪವರ್ ಬ್ಯಾಂಕ್ ಅನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ.

    ಮೊದಲೇ ಹೇಳಿದಂತೆ ನಾವು ಮಾತನಾಡುತ್ತಿರುವ ಪವರ್ ಬ್ಯಾಂಕ್ ಸಾಮಾನ್ಯ ಪವರ್ ಬ್ಯಾಂಕ್ ಅಲ್ಲ ಆದರೆ ಸೋಲಾರ್ ಪವರ್ ಬ್ಯಾಂಕ್. ಇದನ್ನು Amazon ನಲ್ಲಿ ಖರೀದಿಸಬಹುದು ಮತ್ತು ಇದನ್ನು ಚಾರ್ಜ್ ಮಾಡಬೇಕಾಗಿಲ್ಲ. ಬಿಸಿಲಿನಲ್ಲಿ ಇರಿಸಿದರೆ ಸಾಕು. ಕೆಲವು ಗಂಟೆಗಳ ನಂತರ ಸೂರ್ಯನಿಂದ ಶಕ್ತಿ ಹೀರಿಕೊಂಡು ಕಾರ್ಯ ಮಾಡುತ್ತದೆ.

    ಇದನ್ನೂ ಓದಿ: Airtel 5G: ಭಾರತದಲ್ಲಿ ಏರ್‌ಟೆಲ್ 5G ಬರೋದು ಯಾವಾಗ? ಬೆಲೆ ಎಷ್ಟಿರುತ್ತೆ? ಇಲ್ಲಿದೆ ಇನ್ನಷ್ಟು ಮಾಹಿತಿ



    ಸೌರ ಫಲಕವನ್ನು ಹೊರತುಪಡಿಸಿ, ಸಾಮಾನ್ಯ ಪವರ್ ಬ್ಯಾಂಕ್‌ಗೆ ಹೋಲಿಸಿದರೆ ಇದರಲ್ಲಿ ಹೊಸದೇನು ಇಲ್ಲ. ಆದರೆ ಇದನ್ನು ಸುಲಭವಾಗಿ ಕೊಂಡೊಯ್ಯಬಹುದು. ಮಾತ್ರವಲ್ಲದೆ, ಇದನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ. ಸೂರ್ಯನ ಬಿಸಿಲು ಬರುವ ಜಾಗದಲ್ಲಿ ಇದನ್ನು ಇರಿಸಿದರೆ ಸಾಕು.

    ಬೆಲೆ ಮತ್ತು ವೈಶಿಷ್ಟ್ಯಗಳು

    ಈ ಸೋಲಾರ್​ ಪವರ್​ ಬ್ಯಾಂಕ್​ನ  ಬೆಲೆ ಮತ್ತು ವಿಶೇಷತೆಯ ಬಗ್ಗೆ ಮಾತನಾಡುವುದಾದರೆ, ಇದು ಗಾತ್ರದಲ್ಲಿ ಸಾಮಾನ್ಯ ಪವರ್ ಬ್ಯಾಂಕ್​ನಂತೆಯೇ ಇರುತ್ತದೆ. ಆದರೆ ಇದರ ತೂಕ ಸ್ವಲ್ಪ ಹೆಚ್ಚು. ವಾಸ್ತವವಾಗಿ, ಇದರಲ್ಲಿ ಸೌರ ಫಲಕವನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಅದರ ತೂಕವು ಸ್ವಲ್ಪ ಹೆಚ್ಚಾಗುತ್ತದೆ.

    ಇದನ್ನೂ ಓದಿ: OPPO: 50 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್​ ಸ್ಮಾರ್ಟ್​ಫೋನ್​ಗಳಿವು! ಫೀಚರ್ಸ್​ ನೋಡಿದ್ರೆ ಖರೀದಿಸೋದು ಪಕ್ಕಾ

    ಇದರ ಬೆಲೆಯ ಬಗ್ಗೆ ಮಾತನಾಡುವುದಾಧರೆ. ಗ್ರಾಹಕರು ಇದನ್ನು 2,000 ರೂ.ಗೆ ಖರೀದಿಸಬಹುದು. ಏಕೆಂದರೆ ವಿದ್ಯುತ್​ ಶಕ್ತಿಯನ್ನು ಬಳಸದೇ ಇದು ಕಾರ್ಯ ನಿರ್ವಹಿಸುವ ಕಾರಣ. ಈ ಪವರ್​ ಬ್ಯಾಂಕ್​ ಬೆಲೆಯ ಬಗ್ಗೆ ಅಷ್ಟೇನು ತಲೆ ಕೆಡಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ಅಂದಹಾಗೆಯೇ ಸದ್ಯ ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳ ಪವರ್​ ಬ್ಯಾಂಕ್​​ಗಳು ಬಂದಿವೆ. ಆದರೆ ಸೋಲಾರ್​ ಪವರ್​ ಬ್ಯಾಂಕ್​ ಭಾರೀ ವಿರಳ. ಸ್ಮಾರ್ಟ್​ಫೋನ್​​ ಬಳಕೆದಾರರಿಗೆ ಇದರ ಪ್ರಯೋಜನ ಪಡೆಯಬಹುದು. ಆನ್​ಲೈನ್​ ಮಾರುಕಟ್ಟೆಯಾದ ಅಮೆಜಾನ್​ನಲ್ಲಿ ಸೋಲಾರ್​ ಪವರ್​ ಬ್ಯಾಂಕ್​ ಮಾರಾಟ ಮಾಡುತ್ತಿದೆ.

    ಗಮನಕ್ಕೆ: ಆನ್​ಲೈನ್​ನಲ್ಲಿ ಯಾವುದೇ ವಸ್ತುಗಳನ್ನು ಖರೀದಿಸುವಾಗ ಸರಿಯಾಗಿ ಗಮನಿಸಿ. ವಸ್ತುವಿನ ಬಗ್ಗೆ ಗ್ರಾಹಕರ ರಿವ್ಯೂವ್​ ಅನ್ನು ಪರಿಶೀಲಿಸಿ. ಕೆಲವೊಮ್ಮೆ ನಕಲಿ ವಸ್ತುಗಳನ್ನು ಕಂಪನಿ ಇದರಲ್ಲಿ ಮಾರಾಟ ಮಾಡುತ್ತದೆ. ಮೋಸ ಹೋಗದಂತೆ ಜಾಗೃತೆಯಿಂದ ಇರುವುದು ಉತ್ತಮ.
    Published by:Harshith AS
    First published: