Smart Phones: 30 ಸಾವಿರ ರೂಪಾಯಿಯೊಳಗಿರುವ ಬೆಸ್ಟ್ ಫೋನುಗಳು ಇವು

ಬಜೆಟ್ ಕೈಗೆಟುಕುವಂತಿರಬೇಕು ಹಾಗೂ ಸಮಗ್ರ ಫೀಚರ್ಗಳನ್ನು ಸಹ ಫೋನ್ ಹೊಂದಿರಬೇಕು ಎಂಬುದು ಎಲ್ಲರ ಆಸೆ. ಹಾಗಾಗಿ ಜನರು ಕೈಗೆಟುಕುವ ದರದ ಫೋನುಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಹಾಗಾದರೆ, ಸದ್ಯದ ಸಮಯದಲ್ಲಿ ನಿಮಗೆ 30 ಸಾವಿರ ರೂಪಾಯಿಯೊಳಗಿರುವ ಅದ್ಭುತ ಸ್ಮಾರ್ಟ್ ಫೋನುಗಳು ಯಾವುವು ಎಂಬುದನ್ನು ನಾವು ಇಲ್ಲಿ ತಿಳಿಸಿದ್ದೇವೆ. ಆ ಬಗ್ಗೆ ತಿಳಿದುಕೊಳ್ಳಿ ಹಾಗೂ ನಿಮಗಿಷ್ಟವಾದ ಫೋನ್ ಖರೀದಿ ಮಾಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಸ್ಮಾರ್ಟ್ ಮೊಬೈಲ್ ಫೋನುಗಳೆಂದರೆ (Mobile Phone) ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಪ್ರತಿನಿತ್ಯ ನೂರಾರು ಜನರು ಫೋನ್ ಗಳನ್ನು ಖರೀದಿಸುತ್ತಲೇ ಇರುತ್ತಾರೆ. ಮೊಬೈಲ್ ಫೋನ್ ಎಂಬುದು ಈಗ ಕೇವಲ ಮಾತನಾಡುವ ಫೋನಾಗಿ ಉಳಿದಿಲ್ಲ, ಬದಲಾಗಿ ಇದು ಅಂಗೈನಲ್ಲೇ ಪ್ರಪಂಚ (World) ಇದ್ದ ಹಾಗೆ. ನ್ಯೂಸ್ (News) ಆಗಲಿ, ಮನರಂಜನೆಯಾಗಲಿ (Entertainment) ಅಥವಾ ವಿಡಿಯೋ (Video) ಮಾಡುವುದಾಗಲಿ ಎಲ್ಲದಕ್ಕೂ ಮೊಬೈಲ್ ಫೋನ್ ಉತ್ತರವಾಗಿದೆ. ಮನುಷ್ಯನ ನಿತ್ಯದ ಚಟುವಟಿಕೆಯ ಹಲವು ಅವಶ್ಯಕತೆಗಳನ್ನು ಸ್ಮಾರ್ಟ್ ಫೋನ್ (Smart Phone) ಪೂರೈಸುವುದರಿಂದ ಪ್ರತಿಯೊಬ್ಬರಿಗೂ ಹೊಸ ಹೊಸ ಫೋನ್ ಖರೀದಿಸುವ ಆಸೆ ಇದ್ದೇ ಇರುತ್ತದೆ.

ಜನರ ಕೈಗೆಟಕುವ ದರದ ಫೋನುಗಳು
ಇನ್ನು, ಗ್ರಾಹಕರ ಬೇಕು ಬೇಡಗಳಿಗೆ ತಕ್ಕುದಾಗಿ ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡುಗಳು ತಮ್ಮ ತಮ್ಮ ವಿಶಿಷ್ಟ ಸ್ಮಾರ್ಟ್ ಫೋನುಗಳನ್ನು ಬಿಡುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಬಹುತೇಕ ಜನರಿಗೆ ಫೋನ್ ಕೊಳ್ಳುವಾಗ ಮುಖ್ಯವಾಗಿ ಕಂಡುಬರುವ ಅಂಶವೆಂದರೆ ಅದರ ಬಜೆಟ್. ಬಜೆಟ್ ಕೈಗೆಟುಕುವಂತಿರಬೇಕು ಹಾಗೂ ಸಮಗ್ರ ಫೀಚರ್ಗಳನ್ನು ಸಹ ಫೋನ್ ಹೊಂದಿರಬೇಕು ಎಂಬುದು ಎಲ್ಲರ ಆಸೆ. ಹಾಗಾಗಿ ಜನರು ಕೈಗೆಟುಕುವ ದರದ ಫೋನುಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.

ಹಾಗಾದರೆ, ಸದ್ಯದ ಸಮಯದಲ್ಲಿ ನಿಮಗೆ 30 ಸಾವಿರ ರೂಪಾಯಿಯೊಳಗಿರುವ ಅದ್ಭುತ ಸ್ಮಾರ್ಟ್ ಫೋನುಗಳು ಯಾವುವು ಎಂಬುದನ್ನು ನಾವು ಇಲ್ಲಿ ತಿಳಿಸಿದ್ದೇವೆ. ಆ ಬಗ್ಗೆ ತಿಳಿದುಕೊಳ್ಳಿ ಹಾಗೂ ನಿಮಗಿಷ್ಟವಾದ ಫೋನ್ ಖರೀದಿ ಮಾಡಿ.

1. ಒಪ್ಪೊ F21 ಪ್ರೊ
ಸದ್ಯ ಮಾರುಕಟ್ಟೆಯಲ್ಲಿರುವ ಸನ್ಸೆಟ್ ಆರೆಂಜ್ ಬಣ್ಣದಿಂದ ಕಂಗೊಳಿಸುವ ಈ ಅದ್ಭುತವಾದ ಸ್ಮಾರ್ಟ್ ಫೋನ್ ಕೇವಲ ರೂ. 22,999 ಕ್ಕೆ ಲಭ್ಯವಿದೆ. ಈ ಬೆಲೆಯಲ್ಲಿ ಬರುವ ಈ ಫೋನ್ 8 ಜಿಬಿ ರ್‍ಯಾಮ್ ಹಾಗೂ 128 ಜಿಬಿ ಸ್ಟೋರೇಜ್ ಸೌಲಭ್ಯವನ್ನು ಹೊಂದಿದೆ. ಈ ಫೋನ್ ಹಿಂಭಾಗದಲ್ಲಿ 64MP+2MP+2MP ಮೈಕ್ರೋಲೆನ್ಸುಗಳೊಂದಿಗೆ ಮೂರು ಲೆನ್ಸ್ ಹೊಂದಿದ್ದು ಮುಂಭಾಗದಲ್ಲಿ 32MP ಕ್ಲ್ಯಾರಿಟಿಯ ಲೆನ್ಸ್ ಅನ್ನು ಹೊಂದಿದೆ.

ಇದನ್ನೂ ಓದಿ: Apple: ದೈತ್ಯ ಮೈಕ್ರೋಸಾಫ್ಟ್ ಮತ್ತು ನಿಂಟೆಂಡೊವನ್ನು ಹಿಂದಿಕ್ಕಿದ ಆ್ಯಪಲ್, ಅಡ್ಡ ಸಿಕ್ಕವರೆಲ್ಲಾ ಧೂಳಿಪಟ!

6.43 ಇಂಚುಗಳಷ್ಟು ಪರದೆಯನ್ನು ಹೊಂದಿರುವ ಈ ಫೋನ್ FHD+AMOLED ಪಂಚ್ ಹೋಲ್ ಡಿಸ್ಪ್ಲೇ ಸಾಮರ್ಥ್ಯದೊಂದಿಗೆ 3,500 mAh ಬ್ಯಾಟರಿ ಹೊಂದಿದೆ. ಸ್ನ್ಯಾಪ್ ಡ್ರ್ಯಾಗನ್ 6nm ಪ್ರೊಸೆಸ್ಸರ್ ಹೊಂದಿರುವ ಈ ಫೋನು 33 ವಾಟ್ ಸೂಪರ್ ವೂಕ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

2. ಶಿಯೊಮಿ 11i ಹೈಪರ್ಚೆಂಜ್
120 ವಾಟ್ ಸಾಮರ್ಥ್ಯದ ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿರುವ ಈ ಫೋನು ಅತ್ಯುತ್ತಮ ಗ್ಲಾಸ್ ಬ್ಯಾಕ್ ವಿನ್ಯಾಸ ಹೊಂದಿದ್ದು IP53 ರೇಟಿಂಗ್ ಪಡೆದಿದೆ. 6.67 ಇಂಚಿನ ಅಮೊಲೆಡ್ ಸ್ಕ್ರೀನ್ ಇರುವ ಈ ಫೋನು 120 Hz ರಿಫ್ರೆಶ್ ರೇಟ್ ಪಡೆದಿದ್ದು ಡೈಮೆನ್ಸಿಟಿ 920 ಚಾಲಿತವಾಗಿದೆ. ಇನ್ನು ಕ್ಯಾಮೆರಾ ವಿಷಯದಲ್ಲಿ ಈ ಫೋನ್ ಹಿಂಭಾಗದಲ್ಲಿ 108MP ಸಾಮರ್ಥ್ಯದ ಮೂರು ಲೆನ್ಸುಗಳನ್ನು ಹೊಂದಿದೆ. 6GB/128GB ನಿರ್ದಿಷ್ಟತೆಗಳನ್ನು ಹೊಂದಿರುವ ಫೋನಿನ ಬೆಲೆ ರೂ. 26,999 ಆಗಿದ್ದರೆ 8GB/128GB ನಿರ್ದಿಷ್ಟತೆಗಳನ್ನು ಹೊಂದಿರುವ ಫೋನಿನ ಬೆಲೆ ರೂ. 28,999 ಆಗಿದೆ.

3. ರಿಯಲ್ ಮಿ 9 ಪ್ರೊ ಪ್ಲಸ್
ಮಿಡಿಯಾಟೆಕ್ ಡೈಮೆನ್ಸಿಟಿ 920 ಚಾಲಿತ 6.4 ಇಂಚಿನ ಸ್ಕ್ರೀನ್, 90Hz ಅಮೊಲೆಡ್ ಡಿಸ್ಪ್ಲೇ, 4,500 mAh ಬ್ಯಾಟರಿ ಹಾಗೂ 60 ವಾಟ್ ವೇಗದ ಚಾರ್ಜಿಂಗ್ ವೈಶಿಷ್ಠ್ಯಗಳನ್ನು ಹೊಂದಿದೆ. ಈ ಫೋನು 50MP+8MP+2MP ಸಂಯೋಜನೆಯ ಮೂರು ಕ್ಯಾಮೆರ ಲೆನ್ಸುಗಳನ್ನು ಹಿಂಭಾದಲ್ಲಿ ಹೊಂದಿದ್ದರೆ 16MP ಕಾಮೆರಾವನ್ನು ಮುಂಭಾಗದಲ್ಲಿ ಹೊಂದಿದೆ. 6GB/128GB ನಿರ್ದಿಷ್ಟತೆಗಳನ್ನು ಹೊಂದಿರುವ ಫೋನಿನ ಬೆಲೆ ರೂ. 26,999 ಆಗಿದ್ದರೆ 8GB/128GB ನಿರ್ದಿಷ್ಟತೆಗಳನ್ನು ಹೊಂದಿರುವ ಫೋನಿನ ಬೆಲೆ ರೂ. 28,999 ಆಗಿದೆ.

4. ಸ್ಯಾಮ್ಸಂಗ್ ಗ್ಯಾಲಕ್ಸಿ M53
ಉತ್ತಮವಾದ ಡಿಸೈನ್ ಹಾಗೂ ನಾಲ್ಕು ಕ್ಯಾಮೆರಾಗಳ ಸಂಯೋಜನೆಯೊಂದಿಗೆ ಬರುವ ಈ ಜನಪ್ರೀಯ ಬ್ರ್ಯಾಂಡಿನ ಸ್ಮಾರ್ಟ್ ಫೋನ್ ಖರೀದಿಯೋಗ್ಯ ಉತ್ಪನ್ನ ಎಂತಲೇ ಹೇಳಬಹುದು. ಮಿಡಿಯಾಟೆಕ್ ಡೈಮೆನ್ಸಿಟಿ 900 ಚಿಪ್ಸೆಟ್ ಚಾಲಿತವಾಗಿದ್ದು 6.7 ಇಂಚಿನ ಸ್ಕ್ರೀನ್, 120Hz ರಿಫ್ರೆಶ್ ರೇಟ್ ಹಾಗೂ ಅದ್ಭುತವಾದ ಅಮೊಲೆಡ್ ಡಿಸ್ಪ್ಲೇ ಹೊಂದಿದೆ. ಇದರ ಬ್ಯಾಟತರಿ ದೊಡ್ಡದಾಗಿದ್ದು 5000 mAh ಸಾಮರ್ಥ್ಯ ಹೊಂದಿದೆ. 6GB/128GB ನಿರ್ದಿಷ್ಟತೆಗಳನ್ನು ಹೊಂದಿರುವ ಫೋನಿನ ಬೆಲೆ ರೂ. 26,499 ಆಗಿದ್ದರೆ 8GB/128GB ನಿರ್ದಿಷ್ಟತೆಗಳನ್ನು ಹೊಂದಿರುವ ಫೋನಿನ ಬೆಲೆ ರೂ. 28,499 ಆಗಿದೆ.

5. iQOO ನಿಯೋ 6
ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ಈ ಬ್ರ್ಯಾಂಡಿನ ಫೋನು ವಿಶೇಷವಾಗಿ ಗೇಮಿಂಗ್ ಗೆಂದೇ ವಿನ್ಯಾಸಪಡಿಸಲಾದ ಫೋನ್ ಆಗಿದ್ದು ಅದ್ಭುತ ಕ್ಲ್ಯಾರಿಟಿಯ ಕ್ಯಾಮೆರಾ ಲೆನ್ಸುಗಳನ್ನು ಸಹ ಹೊಂದಿದೆ. ಸ್ನ್ಯಾಪ್ ಡ್ರ್ಯಾಗನ್ 820 ಚಿಪ್ಸೆಟ್ ಹೊಂದಿರುವ ಈ ಫೋನು 6.62 ಇಂಚ್ ಸ್ಕ್ರೀನ್, E4 ಅಮೊಲೆಡ್ ಡಿಸ್ಪ್ಲೇ ಹಾಗೂ 120Hz ರಿಫ್ರೆಶ್ ರೇಟ್ ಹೊಂದಿದೆ.

ಇದನ್ನೂ ಓದಿ: Reliance Jio: ಈ ಅಗ್ಗದ ಪ್ಲಾನ್​ನಲ್ಲಿ ಸಿಗುತ್ತೆ ಪ್ರತಿದಿನ 1GB ಡೇಟಾ, ಅನಿಯಮಿತ ಕರೆ ಸೌಲಭ್ಯ!

80 ವಾಟ್ ವೇಗದ ಚಾರ್ಜಿಂಗ್ ಪೋರ್ಟ್ ಇದ್ದು ಇದರ ಬ್ಯಾಟರಿ ಸಾಮರ್ಥ್ಯ 4,700 mAh ಆಗಿದೆ. 64MP OIS ಮುಖ್ಯ ಕ್ಯಾಮೆರಾ ಹೊಂದಿರುವ ಈ ಫೋನು GW1P ಸೆನ್ಸರ್ ನೊಂದಿಗೆ 8MP ವೈಡ್ ಆದ ಹಾಗೂ 2MP ಮ್ಯಕ್ರೋ ಕ್ಯಾಮೆರಾ ಸಹ ಹೊಂದಿದೆ. 8GB/128GB ನಿರ್ದಿಷ್ಟತೆಗಳನ್ನು ಹೊಂದಿರುವ ಫೋನಿನ ಬೆಲೆ ರೂ. 29,999 ಆಗಿದೆ.
Published by:Ashwini Prabhu
First published: