news18-kannada Updated:February 19, 2021, 9:25 AM IST
ಸ್ಯಾಮ್ಸಂಗ್ ಗ್ಯಾಲಕ್ಸಿ M02
ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳು ಪರಿಚಯಿಸಿರುವ ಸ್ಮಾರ್ಟ್ಫೋನ್ಗಳಿವೆ. ಒಂದಕ್ಕಿಂದು ಒಂದು ವಿಶೇಷ ಫೀಚರ್ಸ್ ಒಳಗೊಂಡಿದೆ. ಪೊಕೊ, ರಿಯಲ್ಮಿ, ಸ್ಮಾಮ್ಸಂಗ್, ರೆಡ್ಮಿ ಹೀಗೆ ಕಂಪೆನಿಗಳು ಬಜೆಟ್ ಬೆಲೆಯ ಸ್ಮಾರ್ಟ್ಫೊನ್ಗಳಿಂದ ಹಿಡಿದು ಅಧಿಕ ಬೆಲೆ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಾ ಬಂದಿದೆ. ಅದರಂತೆ ಸದ್ಯ ಮಾರುಕಟ್ಟೆಯಲ್ಲಿರುವ 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ದೊರೆಯುವ ಸ್ಮಾರ್ಟ್ಫೋನ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
Poco X3:ಪೊಕೊ ಎಕ್ಸ್3 ಸ್ಮಾರ್ಟ್ಫೋನ್ 6.67 ಇಂವಿನ ಫುಲ್ಹೆಚ್ಡಿ+ ಡಿಸ್ಪ್ಲೇ ಹೊಂದಿದ್ದು, ಸ್ನಾಪ್ಡ್ರಾಗನ್ 732ಜಿ ಚಿಪ್ಸೆಪ್ ಇದರಲ್ಲಿ ಅಳವಡಿಸಲಾಗಿದೆ. ಧೀರ್ಘ ಕಾಲದ ಬಾಳಿಕೆಗಾಗಿ 6 ಸಾವಿರ ಎಮ್ಎಹೆಚ್ ಬ್ಯಾಟರಿ ಅಳವಡಿಸಲಾಗಿದೆ. ಸದ್ಯ ಗ್ರಾಹಕರಿಗೆ ಈ ಸ್ಮಾರ್ಟ್ಫೋನ್ 20,000 ಬೆಲೆಗೆ ಸಿಗುತ್ತಿದೆ.
Realme 6 Pro:
ರಿಯಲ್ಮಿ 6 ಪ್ರೊ ಸ್ಮಾರ್ಟ್ಫೋನ್ 6.6 ಇಂಚಿನ ಡಿಸ್ಪ್ಲೇ ಜೊತೆಗೆ ಡುಯೆಲ್ ಕ್ಯಾಮೆರಾ ಪಂಚ್ ಹೋಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸ್ನಾಪ್ಡ್ರಾಗನ್ 720ಜಿ ಚಿಪ್ಸೆಟ್ ಅಳವಡಿಸಿಕೊಂಡಿರುವ ಈ ಸ್ಮಾರ್ಟ್ಫೊನ್ 19,999 ರೂ.ಗೆ ಗ್ರಾಹಕರ ಖರೀದಿಗೆ ಸಿಗಲಿದೆ.
Realme 7 Pro:
ರಿಯಲ್ಮಿ ಸಂಸ್ಥೆ ಪರಿಚಯಿಸಿರುವ 7 ಪ್ರೊ ಸ್ಮಾಟ್ಫೋನ್ ಅಮೋಲ್ಡ್ ಡಿಸ್ಪ್ಲೇ, ಸ್ಟಿರಿಯೊ ಸ್ಪೀಕರ್ ಮತ್ತು 65ವ್ಯಾಟ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಸ್ನಾಪ್ಡ್ರಾಗನ್ 720ಜಿ ಚಿಪ್ಸೆಟ್ ಇದರಲ್ಲಿ ಅಳವಡಿಸಲಾಗಿದೆ. ಧೀರ್ಘ ಕಾಲದ ಬಾಳಿಕೆಗಾಗಿ 4500ಎಮ್ಎಹೆಚ್ ಬ್ಯಾಟರಿ ಹೊಂದಿದೆ.ಇನ್ನು ಸ್ಮಾರ್ಟ್ಫೋನಿನಲ್ಲಿ 64 ಮೆಗಾಫಿಕ್ಸೆಲ್ ಸೋನಿ ಐಎಮ್ಎಕ್ಸ್682 ಶೂಟರ್ ಅಳವಡಿಸಲಾಗಿದೆ, 8 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್ ಮತ್ತು 2 ಮೆಗಾಫಿಕ್ಸೆಲ್ ಮಾಕ್ರೊ ಕ್ಯಾಮೆರಾ ನೀಡಲಾಗಿದೆ. ಸದ್ಯ ಈ ಸ್ಮಾರ್ಟ್ಫೋನ್ 19,999 ರೂ.ಗೆ ಗ್ರಾಹಕರ ಖರೀದಿಗೆ ಸಿಗಲಿದೆ.
Samsung Galaxy M31s:
ಈ ಸ್ಮಾರ್ಟ್ಫೋನ್ 6.5 ಇಂಚಿನ 0 ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. ಧೀರ್ಘ ಕಾಲದ ಬಾಳಿಕೆಗಾಗಿ 6 ಸಾವಿರ ಎಮ್ಎಹೆಚ್ ಬ್ಯಾಟರಿ ಜೊತೆಗೆ 25ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಅಂದಹಾಗೆಯೇ ಕ್ವಾಡ್ ಕ್ಯಾಮೆರಾ ಸೆಟಪ್ ಜೊತೆಗೆ 64 ಮೆಗಾಫಿಕ್ಸೆಲ್ ಪ್ರೈಮರಿ ಸೆನ್ಸಾರ್ ನೀಡಲಾಗಿದೆ. ಗ್ರಾಹಕರಿಗಾಗಿ ಈ ಸ್ಮಾಟ್ಫೋನ್ 19,499 ರೂ.ಗೆ ಖರೀದಿಗೆ ಸಿಗಲಿದೆ.
Redmi Note 9 Pro Max:
ಈ ಸ್ಮಾರ್ಟ್ಫೋನ್ ಟಾಪ್-ಎಂಡ್ ಮಾಡೆಲ್ ಆಗಿದ್ದು, 6.67 ಇಂಚಿನ ಡಿಸ್ಪ್ಲೇ ಜೊತೆಗೆ ಪಂಚ್ ಹೋಲ್ ಡಿಸ್ಪ್ಲೇ ಅಳವಡಿಸಲಾಗಿದೆ. ಅಂದಹಾಗೆಯೇ ಸ್ನಾಪ್ಡ್ರಾಗನ್ 720ಜಿ ಚಿಪ್ಸೆಟ್ ಹೊಂದಿರುವ ಈ ಸ್ಮಾರ್ಟ್ಫೋನ್ ಗ್ರಾಹಕರಿಗೆ 15,999 ರೂ.ಗೆ ಖರೀದಿಗೆ ಸಿಗಲಿದೆ.
Published by:
Harshith AS
First published:
February 19, 2021, 9:20 AM IST