ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ (Indian Mobile Market) ಹೊಸ ಹೊಸ ಸಾಧನಗಳು ಬಿಡುಗಡೆಯಾಗುತ್ತಿರುತ್ತದೆ. ಸ್ಮಾರ್ಟ್ಫೋನ್ಗಳಂತೂ ಈಗಿನ ಕಾಲಮಾನದಲ್ಲಿ ಪ್ರತಿಯೊಬ್ಬರಿಗೂ ಅಗತ್ಯ ಸಾಧನವಾಗಿಬಿಟ್ಟಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಕಂಪೆನಿಗಳು ಮೊಬೈಲ್ಗಳನ್ನು ಪರಿಚಯಿಸುತ್ತಿರುತ್ತದೆ. ಅದ್ರಲ್ಲೂ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಯಾವುದೇ ಒಂದು ಸ್ಮಾರ್ಟ್ಫೋನ್ (Smartphones) ಖರೀದಿ ಮಾಡಬೇಕಾದರೆ ಅದರ ಫೀಚರ್ಸ್ಗಳನ್ನು ನೋಡಿಯೇ ನಂತರ ಬೆಲೆಯನ್ನು ಅಂದಾಜು ಮಾಡುತ್ತಾರೆ. ಅದರಲ್ಲಿ ಮುಖ್ಯವಾಗಿ ಉತ್ತಮ ಕ್ಯಾಮೆರಾ ಹೊಂದಿರುವ ಮೊಬೈಲ್ಗಳನ್ನೇ ಜನರು ನೋಡುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ 108 ಮೆಗಾಪಿಕ್ಸೆಲ್ (108 Megapixel) ಸೆನ್ಸಾರ್ನ ಕ್ಯಾಮೆರಾ ಹೊಂದಿದ ಸ್ಮಾರ್ಟ್ಫೋನ್ಗಳು 20 ಸಾವಿರ ರೂಪಾಯಿಯ ಅಡಿಯಲ್ಲಿ ಲಭ್ಯವಿದೆ.
ಭಾರತದ ಮಾರುಕಟ್ಟೆಯಲ್ಲಿ ಹಲವಾರು ಗುಣಮಟ್ಟದ ಸ್ಮಾರ್ಟ್ಫೋನ್ಗಳು ಲಭ್ಯವಿದೆ. ಅದ್ರಲ್ಲೂ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದ ಸ್ಮಾರ್ಟ್ಫೋನ್ಗಳಿಗೆ ತುಂಬಾನೇ ಬೇಡಿಕೆಯಿದೆ. ಹಾಗಿದ್ರೆ ಮಾರುಕಟ್ಟೆಯಲ್ಲಿ 20 ಸಾವಿರ ರೂಪಾಯಿ ಒಳಗಿನ, ಉತ್ತಮ ಫೀಚರ್ಸ್ ಹೊಂದಿರು ಸ್ಮಾರ್ಟ್ಫೋನ್ಗಳು ಯಾವುದೆಲ್ಲಾ ಇದೆ ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
108 ಮೆಗಾಪಿಕ್ಸೆಲ್ ಮತ್ತು 20000 ರೂ. ಒಳಗಿನ ಸ್ಮಾರ್ಟ್ಫೋನ್ಗಳು:
ಮೊಟೊ ಜಿ60
ಮೊಟೊ ಜಿ60 ಸ್ಮಾರ್ಟ್ಫೋನ್ ಬಜೆಟ್ ಬೆಲೆಯಲ್ಲಿ ಖರೀದಿಸುವ ಪ್ಲ್ಯಾನ್ನಲ್ಲಿದ್ದವರಿಗೆ ಉತ್ತಮ ಆಯ್ಕೆಯಾಗಿದೆ. ಇನ್ನು ಈ ಸ್ಮಾರ್ಟ್ಫೋನ್ 6.8 ಇಂಚಿನ ಫುಲ್ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಆಕ್ಟಾಕೋರ್ ಸ್ನಾಪ್ಡ್ರಾಗನ್ 732ಜಿ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಆಂಡ್ರಾಯ್ಡ್ 11 ಮೂಲಕ ಈ ಸ್ಮಾರ್ಟ್ಫೋನ್ ಕಾರ್ಯನಿರ್ವಹಿಸುತ್ತದೆ.
ಮೊಟೊ ಜಿ60 ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ವಿಶೇಷವಾಗಿ ಇದರ ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದರೆ 108 ಮೆಗಾಫಿಕ್ಸೆಲ್ನ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಇದರಲ್ಲಿ 8 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ನ ಕ್ಯಾಮೆರಾ ಕೂಡ ಇದೆ. ಇನ್ನು 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ರೆಡ್ಮಿ ನೋಟ್ 10 ಪ್ರೋ ಮ್ಯಾಕ್ಸ್
ರೆಡ್ಮಿ ನೋಟ್ 10 ಪ್ರೋ ಮ್ಯಾಕ್ಸ್ ಸ್ಮಾರ್ಟ್ಫೋನ್ ಕೂಡ 6.67 ಇಂಚಿನ ಫುಲ್ ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಇದು ಅಕ್ಟಾಕೋರ್ ಸ್ನಾಪ್ಡ್ರಾಗನ್ 732ಜಿ 8nm ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ 11 ಅಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸುತ್ತದೆ.
ರೆಡ್ಮಿ ಕಂಪೆನಿಯ ಈ ಸ್ಮಾರ್ಟ್ಫೋನ್ 5020mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ನ 108 ಮೆಗಾಪಿಕ್ಸೆಲ್ನ ಕ್ಯಾಮೆರಾವನ್ನು ಹೊಂದಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಮತ್ತು 2+5 ಮೆಗಾಪಿಕ್ಸೆಲ್ನ ಕ್ಯಾಮೆರಾgಳನ್ನು ಅಳವಡಿಸಲಾಗಿದೆ. ಇನ್ನು ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್ಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರವನ್ನು ಅಳವಡಿಸಿದ್ದಾರೆ. ಇದರ ಬೆಲೆ 19,999 ರೂಪಾಯಿಯಾಗಿದೆ.
ರಿಯಲ್ಮಿ 9 ಸ್ಮಾರ್ಟ್ಫೋನ್
ರಿಯಲ್ಮಿ 9 ಸ್ಮಾರ್ಟ್ಫೋನ್ನ ಡಿಸ್ಪ್ಲೇ ವಿನ್ಯಾಸದಲ್ಲಿ ಇದು 6.4 ಇಂಚಿನ ಫುಲ್ ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಈ ಮೊಬೈಲ್ ಅಕ್ಟಾಕೋರ್ ಸ್ನಾಪ್ಡ್ರಾಗನ್ 680 6nm ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಇದು ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ರಿಯಲ್ಮಿ 9 ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ.
ಇನ್ನು ಈ ಸ್ಮಾರ್ಟ್ಫೋನ್ನ ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದರೆ ಈ ಸ್ಮಾರ್ಟ್ಫೋನ್ನಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಮತ್ತು 2+2 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಅನ್ನು ಸಹ ಹೊಂದಿದೆ. ಇನ್ನು ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಯಲ್ಲಿ 18,999 ರೂಪಾಯಿಗೆ ಖರೀದಿ ಮಾಡಬಹುದು.
ರೆಡ್ಮಿ ನೋಟ್ 10ಎಸ್ ಸ್ಮಾರ್ಟ್ಫೋನ್
ರೆಡ್ಮಿ ನೋಟ್ 10ಎಸ್ ಸ್ಮಾರ್ಟ್ಫೋನ್ 6.43 ಇಂಚಿನ ಫುಲ್ ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. ಈ ಸ್ಮಾರ್ಟ್ಫೋನ್ ಆಕ್ಟಾಕೋರ್ ಮೀಡಿಯಾ ಟೆಕ್ ಹೀಲಿಯೊ ಜಿ96 12nm ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಇದು ಆಂಡ್ರಾಯ್ಡ್ 11 ಮೂಲಕ ಕಾರ್ಯನಿರ್ವಹಿಸುತ್ತದೆ. ರೆಡ್ಮಿ ನೋಟ್ 10ಎಸ್ ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ.
ಇದನ್ನೂ ಓದಿ: ಫ್ಲಿಪ್ಕಾರ್ಟ್ನಲ್ಲಿ ಪೋಕೋ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ರಿಯಾಯಿತಿ!
ಈ ಸ್ಮಾರ್ಟ್ಫೋನ್ನ ಕ್ಯಾಮೆರಾ ಫೀಚರ್ಸ್ ಅನ್ನು ನೋಡುವುದಾದರೆ, ಇದು 108 ಮೆಗಾಪಿಕ್ಸೆಲ್ನ ಕ್ಯಾಮೆರಾವನ್ನು ಒಳಗೊಂಡಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಮತ್ತು 2+2 ಮೆಗಾಪಿಕ್ಸೆಲ್ನ 3 ಕ್ಯಾಮೆರಾಗಳು ಕೂಡ ಇದೆ. ಸೆಲ್ಫಿಗಾಗಿ ಇದರಲ್ಲಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್ಫೋನ್ನ ಬೆಲೆ 17,499 ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ