• Home
  • »
  • News
  • »
  • tech
  • »
  • Best Phones: ಹೊಸ ಫೋನ್​ ಖರೀದಿಸಬೇಕೆ? ಇಲ್ಲಿವೆ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಮೊಬೈಲ್​ಗಳು

Best Phones: ಹೊಸ ಫೋನ್​ ಖರೀದಿಸಬೇಕೆ? ಇಲ್ಲಿವೆ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಮೊಬೈಲ್​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Best Phones: ನಿಮ್ಮ ಬಳಿ 20,000 ರೂಪಾಯಿ ಇದ್ದು, ಅದಕ್ಕಿಂತ ಕಡಿಮೆ ಬೆಲೆ ಅಥವಾ ಅದರ ಆಸುಪಾಸಿನ ಬೆಲೆಯಲ್ಲಿ ಒಂದೊಳ್ಳೆಯ ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಬಯಸಿದರೆ, ಇಲ್ಲಿದೆ ನೋಡಿ ಅಂತಹ ಸ್ಮಾರ್ಟ್‌ಫೋನ್ ಗಳ ಬಗ್ಗೆ ವಿವರವಾದ ಮಾಹಿತಿ. 

  • Trending Desk
  • Last Updated :
  • New Delhi, India
  • Share this:

ಈಗಂತೂ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಇನ್ನೊಂದು ಅನ್ನೋ ಥರದಲ್ಲಿ ನಾನಾ ರೀತಿಯ ವೈಶಿಷ್ಟ್ಯತೆಗಳಿರುವಂತಹ ಸ್ಮಾರ್ಟ್‌ಫೋನ್ ಗಳು (Smart Phones) ಬಂದಿವೆ. ಆದರೆ ನಮ್ಮ ಬಳಿ ಹಣ (Money) ಎಷ್ಟಿದೆ ಮತ್ತು ನಾವು ಎಂತಹ ಫೋನ್ (Phones) ಅನ್ನು ಖರೀದಿಸಲು ಇಷ್ಟಪಡುತ್ತೇವೆ ಅನ್ನೋದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ ಅಂತ ಹೇಳಬಹುದು. ನಿಮ್ಮ ಬಳಿ 20,000 ರೂಪಾಯಿ ಇದ್ದು, ಅದಕ್ಕಿಂತ ಕಡಿಮೆ ಬೆಲೆ ಅಥವಾ ಅದರ ಆಸುಪಾಸಿನ ಬೆಲೆಯಲ್ಲಿ ಒಂದೊಳ್ಳೆಯ ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಬಯಸಿದರೆ, ಇಲ್ಲಿದೆ ನೋಡಿ ಅಂತಹ ಸ್ಮಾರ್ಟ್‌ಫೋನ್ ಗಳ ಬಗ್ಗೆ ವಿವರವಾದ ಮಾಹಿತಿ. ಈ ಸ್ಮಾರ್ಟ್‌ಫೋನ್ ಗಳಲ್ಲಿ ಹೆಚ್ಚಿನವು ಇಎಂಐಗೆ (EMI) ಸಹ ಲಭ್ಯವಿವೆ, ಎಂದರೆ ನಿಮ್ಮ ಜೇಬಿನಲ್ಲಿರುವ ಹಣ ಒಮ್ಮೆಲೆ ಖಾಲಿಯಾಗುವುದನ್ನು ಇದು ತಪ್ಪಿಸುತ್ತದೆ ಅಂತ ಹೇಳಬಹುದು.


20 ಸಾವಿರ ಬೆಲೆಯ ಫೋನ್​ಗಳು:


1. ಶಿಯೋಮಿ ರೆಡ್ಮಿ ನೋಟ್ 11 ಪ್ರೊ ಪ್ಲಸ್ 5ಜಿ:


ಶಿಯೋಮಿ ರೆಡ್ಮಿ ನೋಟ್ 11 ಪ್ರೊ ಪ್ಲಸ್ 5 ಜಿ ನಿಮ್ಮ ಬಜೆಟ್ ಗಿಂತಲೂ ಸ್ವಲ್ಪ ಹೆಚ್ಚು ಎಂದರೆ 20,999 ಇರಬಹುದು. ಇದು 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಅನ್ನು ಹೊಂದಿರುತ್ತದೆ ಮತ್ತು ಇದು 67ವ್ಯಾಟ್ ಫಾಸ್ಟ್ ಚಾರ್ಜರ್ ಅನ್ನು ಹೊಂದಿದ್ದು, ಇದು ನಿಮ್ಮ ಫೋನ್ ಅನ್ನು ತಕ್ಷಣವೇ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ.


ನೀವು ಮೊಬೈಲ್ ನಲ್ಲಿ ಹೆಚ್ಚಾಗಿ ಈ ಗೇಮ್ಸ್ ಗಳನ್ನು ಆಡುವವರಾಗಿದ್ದರೆ, ಮೀಡಿಯಾಟೆಕ್ ಹೆಲಿಯೋ ಜಿ 96 ಎಸ್ಒಸಿ ಉತ್ತಮ ಗೇಮಿಂಗ್ ಫೋನ್ ಆಗಿದೆ. ಇದು 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಮತ್ತು 108 ಎಂಪಿ ಎಚ್ಎಂ 2 ಸೆನ್ಸರ್, 8 ಎಂಪಿ ಅಲ್ಟ್ರಾ-ವೈಡ್ ಸೆನ್ಸರ್, 2 ಎಂಪಿ ಮ್ಯಾಕ್ರೋ ಮತ್ತು 2 ಎಂಪಿ ಡೆಪ್ತ್ ಸೆನ್ಸರ್ ಅನ್ನು ಸಹ ಹೊಂದಿದೆ.


ಇದನ್ನೂ ಓದಿ: Realme Smartphone: 20 ನಿಮಿಷಕ್ಕೆ ಫುಲ್ ಚಾರ್ಜ್ ಆಗುತ್ತೆ ಈ ಫೋನ್​, ಸೂಪರ್​ ಬ್ಯಾಟರಿ ಬ್ಯಾಕಪ್​ ಕೂಡ ಇದೆ!


2. ರಿಯಲ್ ಮಿ9 5ಜಿ ಎಸ್ಇ:


ರಿಯಲ್ ಮಿ9 5ಜಿ ಎಸ್ಇ 20,000 ರೂಪಾಯಿಯ ವ್ಯಾಪ್ತಿಯ ಮತ್ತೊಂದು ಬಜೆಟ್ ಫೋನ್ ಆಗಿದೆ. ಇದು 6.6 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ ‌ಪ್ಲೇ ಯೊಂದಿಗೆ ಬರುತ್ತದೆ, 128 ಜಿಬಿ ಸ್ಟೋರೇಜ್ ಅನ್ನು ಹೊಂದಿದೆ ಮತ್ತು 1 ಟಿಬಿವರೆಗೆ ಇದನ್ನು ವಿಸ್ತರಿಸಬಹುದು.


ಇದು ಕ್ವಾಲ್ಕಮ್ ಸ್ನ್ಯಾಪ್ ‌ಡ್ರ್ಯಾಗನ್ 778 ಜಿ ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು 6 ಜಿಬಿ ರ್ಯಾಮ್ ಅನ್ನು ಹೊಂದಿದೆ. 48 ಎಂಪಿ ರಿಯರ್ ಕ್ಯಾಮೆರಾ ನಿಮ್ಮಲ್ಲಿರುವ ಫೋಟೋಗ್ರಾಪಿ ಉತ್ಸಾಹಿಯನ್ನು ತೃಪ್ತಿಪಡಿಸುವಷ್ಟು ಉತ್ತಮವಾಗಿದೆ. ಇದು 5000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ ಮತ್ತು 30 ಡಬ್ಲ್ಯೂ ರ್ಯಾಪಿಡ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುತ್ತದೆ.


3. ವಿವೋ Y35 (ವಿವೋ ವೈ35)


19,000 ರೂಪಾಯಿಗಿಂತಲೂ ಕಡಿಮೆ ಬೆಲೆಯ ವಿವೋ Y35 8 ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಅನ್ನು ಹೊಂದಿದೆ. ಇದು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ನೊಂದಿಗೆ 50 ಎಂಪಿ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.


ಒಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 680 ಚಾಲಿತ, ವಿವೋ Y35, 5000 ಎಂಎಎಚ್ ಬ್ಯಾಟರಿಯೊಂದಿಗೆ 44 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಸಹ ನೀಡುತ್ತದೆ. ಸೈಡ್ ಫಿಂಗರ್ ಪ್ರಿಂಟ್ ಡಿಸೈನ್, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಪವರ್ ಬಟನ್ ನೊಂದಿಗೆ ಸಂಯೋಜಿಸುವುದು ಬಳಕೆದಾರರ ಸಂವಹನವನ್ನು ಸಾಕಷ್ಟು ಅನಾಯಾಸವಾಗಿ ಮಾಡುತ್ತದೆ.


ಇದನ್ನೂ ಓದಿ: Oppo New Smartphone: 108 ಮೆಗಾಫಿಕ್ಸೆಲ್ ಕ್ಯಾಮರಾ ಇರೋ ಹೊಸ ಫೋನ್​ ಬರ್ತಿದೆ! ನಿಮ್ಗೂ ಬೇಕಾ?


4. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ


19,000 ರೂಪಾಯಿಗಳ ಶ್ರೇಣಿಯಲ್ಲಿರುವ ಮತ್ತೊಂದು ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ಆಗಿದೆ. ಫೋನ್ 6 ಜಿಬಿ ಮತ್ತು 128 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇತ್ತೀಚಿನ ಆಂಡ್ರಾಯ್ಡ್ ವಿ 12.0, ಒಂದು ಯುಐ 4 ಆಪರೇಟಿಂಗ್ ಸಿಸ್ಟಂ ಅನ್ನು ಹೊಂದಿದೆ. ಇದು 6000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ33 5ಜಿ ಹೈ ರೆಸಲ್ಯೂಶನ್ 50 ಎಂಪಿ ಕ್ಯಾಮೆರಾವನ್ನು ಹೊಂದಿದೆ.


5. ಒಪ್ಪೋ ಕೆ10 5ಜಿ


ಅಮೆಜಾನ್ ನ ಎಕ್ಸ್ಚೇಂಜ್ ಆಫರ್ ಲಭ್ಯವಿದ್ದು, ಒಪ್ಪೋ ಕೆ10 5ಜಿ ಬೆಲೆ ಸುಮಾರು 19,000 ರೂಪಾಯಿಯಾಗಿದೆ. ಇದು 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸ್ಟೋರೆಜ್ ಅನ್ನು ಹೊಂದಿದ್ದು, 1 ಟಿಬಿ ವರೆಗೆ ಇದನ್ನು ವಿಸ್ತರಿಸಿಕೊಳ್ಳಬಹುದು. ಒಪ್ಪೊ ಕೆ10 5ಜಿ 48 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಸಹ ಹೊಂದಿದೆ.


ಇದು 5000 ಎಂಎಎಚ್ ಲಿಥಿಯಂ ಅಯಾನ್ ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ ಮತ್ತು ಅರ್ಧ ಗಂಟೆಯಲ್ಲಿ ಶೇಕಡಾ 53 ರಷ್ಟು ಚಾರ್ಜ್ ಮಾಡಬಹುದು. ಫೋನ್ ಸಂಪೂರ್ಣವಾಗಿ ಚಾರ್ಜ್ ಮಾಡಿದ್ದಲ್ಲಿ 20 ಗಂಟೆಗಳ ಕಾಲ ನಾವು ಕರೆಗಳಲ್ಲಿ ಮಾತಾಡಬಹುದು ಮತ್ತು ಬ್ಯಾಟರಿ ಶೇಕಡಾ 5ಕ್ಕೆ ತಲುಪಿದ ನಂತರವೂ ಸಹ ಒಂದು ಗಂಟೆಯವರೆಗೂ ವಾಟ್ಸಾಪ್ ಮಾಡಬಹುದು.

Published by:shrikrishna bhat
First published: