ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ (Telecom Companies). ಅದರಲ್ಲಿ ದೇಶದ ಎರಡನೇ ದೊಡ್ಡ ಟೆಲಿಕಾಂ ಕಂಪೆನಿಯೆಂದು ಗುರುತಿಸಿಕೊಂಡಿರುವ ಏರ್‌ಟೆಲ್b (Airtel) ತನ್ನ ಗ್ರಾಹಕರನ್ನು ಆಕರಷಿಸuವ ಉದ್ದೇಶದಿಂದ ಪ್ರತೀ ಬಾರಿ ಏನಾದರೊಂದು ವಿಶೇಷ ರೀತಿಯಲ್ಲಿ ರೀಚಾರ್ಜ್ ಯೋಜನೆಗಳನ್ನು (Recharge Plans) ಪರಿಚಯಿಸುತ್ತಿರುತ್ತದೆ. ಅದರಲ್ಲು ಈ ಕಂಪೆನಿ ಪರಿಚಯಿಸುವಂತಹ ಪ್ರೀಪೇಯ್ಡ್ ಪ್ಲ್ಯಾನ್ಗಳು ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಗ್ರಾಹಕರಿಗೆ ಲಭ್ಯವಿದೆ. ಇನ್ನು ಜಿಯೋ ಕಂಪೆನಿಗೆ ನೇರ ಸ್ಪರ್ಧೆಯನ್ನು ನೀಡುವ ಉದ್ದೇಶದಿಂದ ಹೊಸ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇನ್ನು ಏರ್ಟೆಲ್ನ ಕೆಲವೊಂದು ಪ್ಲ್ಯಾನ್ಗಳು ಕಡಿಮೆ ವ್ಯಾಲಿಡಿಟಿ ಹೊಂದಿದ್ದು, ಉತ್ತಮ ಡೇಟಾ ಸೌಲಭ್ಯವನ್ನು ನೀಡುತ್ತದೆ.
ಅಧಿಕ ಡೇಟಾ ಸೌಲಭ್ಯವನ್ನು ಬಯಸುವ ಗ್ರಾಹಕರಿಗೆ ಏರ್‌ಟೆಲ್ ಕಂಪೆನಿ ಹೊಸ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯ, ಉಚಿತವಾಗಿ ಎಸ್ಎಮ್ಎಸ್ ಮಾಡುವ ಸೌಲಭ್ಯಗಳು ದೊರೆಯುತ್ತದೆ.
ಏರ್ಟೆಲ್ನ 549 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 549 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2ಜಿಬಿ ಡೇಟಾವನ್ನು ಬಳಸಿಕೊಳ್ಳಬಹುದಾಗಿದೆ. ಹಾಗೆಯೇ ಅನಿಯಮಿತ ವಾಯ್ಸ್ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್ ಉಚಿತವಾಗಿ ಮಾಡಬಹುದಾಗಿದೆ. ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್, ಉಚಿತ ಹೆಲೋ ಟ್ಯೂನ್ ಪ್ರಯೋಜನ ಸಿಗಲಿದೆ. ಜೊತೆಗೆ ಫಾಸ್ಟ್‌ಟ್ಯಾಗ್ ನಲ್ಲಿ 100 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್ ಸಹ ಲಭ್ಯವಾಗಲಿದೆ.
ಇದನ್ನೂ ಓದಿ: ಈ ಆ್ಯಪ್ ಮೂಲಕ ಯಾವುದೇ ದೇವಾಲಯದ ದರ್ಶನ ಸುಲಭದಲ್ಲಿ ಮಾಡ್ಬಹುದು! ಸಾಕಷ್ಟು ಪ್ರಯೋಜನಗಳು ಸಹ ಲಭ್ಯ
ಏರ್ಟೆಲ್ನ 666 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಪರಿಚಯಿಸಿರುವಂತಹ 666 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 77 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರು ಪ್ರತಿದಿನ 1.5 ಜಿಬಿ ಡೇಟಾ ಪ್ರಯೋಜನ ಪಡೆಯುತ್ತಾರೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಮಾಡಬಹುದು. ಇದರೊಂದಿಗೆ ಅನಿಯಮಿತ ವಾಯ್ಸ್ ಕರೆಗಳ ಸೌಲಭ್ಯ ಸಿಗಲಿದೆ.
ಇನ್ನು ಈ ಯೋಜನೆಯ ವ್ಯಾಲಿಡಿಟಿ ಅವಧಿ ಮುಗಿಯುವ ಹೊತ್ತಿಗೆ ಒಟ್ಟು 128 ಜಿಬಿ ಡೇಟಾ ಬಳಕೆ ಮಾಡಬಹುದು. ಹೆಚ್ಚುವರಿಯಾಗಿ ಏರ್‌ಟೆಲ್ ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ಉಚಿತ ಹೆಲೋ ಟ್ಯೂನ್ ಸೌಲಭ್ಯ ದೊರೆಯುತ್ತದೆ.
ಏರ್ಟೆಲ್ನ 699 ರೂಪಾಯಿ ಪ್ರೀಪೇಯ್ಡ್ ಯೋಜನೆ
ಏರ್‌ಟೆಲ್ ಟೆಲಿಕಾಂನ 699 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 3ಜಿಬಿ ಡೇಟಾವನ್ನು ಬಳಕೆ ಮಾಡಬಹುದಾಗಿದೆ. ಹಾಗೆಯೇ ಅನಿಯಮಿತ ವಾಯ್ಸ್ ಕರೆಗಳ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಮಾಡುವ ಸೌಲಭ್ಯ ದೊರೆಯುತ್ತದೆ. ಇನ್ನು ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಪ್ರಯೋಜನ ಸಿಗಲಿದೆ. ಇದರೊಂದಿಗೆ ಫಾಸ್ಟ್‌ಟ್ಯಾಗ್ ರೀಚಾರ್ಜ್‌ನಲ್ಲಿ 100 ರೂಪಾಯಿ ಕ್ಯಾಶ್‌ಬ್ಯಾಕ್ ಲಭ್ಯ ಆಗಲಿದೆ.
ಏರ್‌ಟೆಲ್ ಕಂಪೆನಿಯ 839 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಕಂಪೆನಿ ಪರಿಚಯಿಸಿರುವಂತಹ 839 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿರುತ್ತದೆ. ಈ ಸಮಯದಲ್ಲಿ ಗ್ರಾಹಕರು ದೈನಂದಿನ 2ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಜೊತೆಗೆ ಪ್ರತಿದಿನ 100 ಉಚಿತವಾಗಿ ಎಸ್ಎಮ್ಎಸ್ ಮಾಡಬಹುದಾಗಿದೆ. ಇದರೊಂದಿಗೆ ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯ್ಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್ ಕೊಡುಗೆ ಸಿಗಲಿದೆ.
ಇದು ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಪರಿಚಯಿಸರುವಂತಹ ಪ್ರೀಪೇಯ್ಡ್ ಯೋಜನೆಗಳಾಗಿದ್ದು ಅಧಿಕ ಡೇಟಾ ಸೌಲಭ್ಯ ಬೇಕಾದವರಿಗೆ ಈ ಯೋಜನೆಗಳು ಉತ್ತಮವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ