5,000 ರೂ. ಒಳಗಿನ ಬೆಲೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸ್ಪೀಕರ್‌ಗಳಿವು..

ಬ್ಲೂಟೂತ್ ಸ್ಪೀಕರ್‌ಗಳನ್ನು ನೀವು 5,000 ರೂಗಳ ಒಳಗೆ ಖರೀದಿಸಬಹುದಾಗಿದ್ದು ಗುಣಮಟ್ಟದ ಪ್ರಾಡಕ್ಟ್‌ಗಳನ್ನು ಖರೀದಿಸಿದ ತೃಪ್ತಿ ಕೂಡ ನಿಮಗಾಗುವುದು ಖಂಡಿತ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪೋರ್ಟೇಬಲ್ ಬ್ಲ್ಯೂಟೂತ್ ಸ್ಪೀಕರ್‌ಗಳು (Bluetooth speakers) ಉತ್ತಮ ಧ್ವನಿ ನೀಡುವುದರೊಂದಿಗೆ ನೀವು ಅದನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು ಹಾಗೂ ಮನರಂಜನೆ (Entertained) ಪಡೆದುಕೊಳ್ಳಬಹುದು. ಹೆಚ್ಚಿನ ಪೋರ್ಟೇಬಲ್ ಸ್ಪೀಕರ್‌ಗಳು ಅಥವಾ ಬ್ಲೂಟೂತ್ ಸಕ್ರಿಯಗೊಳಿಸಿದ ಸ್ಪೀಕರ್‌ಗಳು ಬ್ಯಾಗ್‌ನಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತವೆ. ಅದೇ ರೀತಿ ನೀವು ಪ್ರಯಾಣಿಸುತ್ತಿರುವಾಗ (Traveling)  ಕೂಡ ನಿಮ್ಮ ಮೆಚ್ಚಿನ(Favorite) ಹಾಡುಗಳನ್ನು ಆಲಿಸಬಹುದು. ನೀವು ಕೆಲಸ ಮಾಡುತ್ತಿದ್ದಾಗ ಫೋನ್ ಕರೆಗಳನ್ನು ಸ್ವೀಕರಿಸಲು ಇದು ಇನ್‌ಬಿಲ್ಟ್ ಮೈಕ್ರೋಫೋನ್ (Microphone)ಅನ್ನೂ ಒಳಗೊಂಡಿದೆ.

ಈ ಕೆಳಗಿನ ಬ್ಲೂಟೂತ್ ಸ್ಪೀಕರ್‌ಗಳನ್ನು ನೀವು 5,000 ರೂಗಳ ಒಳಗೆ ಖರೀದಿಸಬಹುದಾಗಿದ್ದು ಗುಣಮಟ್ಟದ ಪ್ರಾಡಕ್ಟ್‌ಗಳನ್ನು ಖರೀದಿಸಿದ ತೃಪ್ತಿ ಕೂಡ ನಿಮಗಾಗುವುದು ಖಂಡಿತ. ಹಾಗಿದ್ದರೆ ಈ ಸ್ಪೀಕರ್‌ಗಳ ವಿಶೇಷತೆ ಹಾಗೂ ಬೆಲೆಗಳನ್ನು ಇಲ್ಲಿ ತಿಳಿದುಕೊಳ್ಳೋಣ.

ಇದನ್ನೂ ಓದಿ: ಸ್ಮಾರ್ಟ್​ಫೋನ್ ಮೂಲಕ ನಿಯಂತ್ರಿಸಬಹುದಾದ ಸ್ಮಾರ್ಟ್​ಬಲ್ಬ್​​ಗಳು! ಮನೆ ಬೆಳಗಿಸಲು ಯಾವ ಬಲ್ಬ್ ಬೆಸ್ಟ್?

ಇನ್ಫಿನಿಟಿ (JBL) Clubz 750 (ಅಂದಾಜು ಬೆಲೆ 4,800 ರೂ) Infinity (JBL) Clubz 750:

ಜೆಬಿಎಲ್‌ನ ಇನ್ಫಿನಿಟಿ (JBL) Clubz 750 ಯನ್ನು ನೀವು 4,790 ರೂ. ಗೆ ರಿಲಯನ್ಸ್ ಡಿಜಿಟಲ್‌ನಲ್ಲಿ ಖರೀದಿಸಬಹುದಾಗಿದೆ. ಡ್ಯುಯಲ್ ಈಕ್ವಲೈಜರ್‌ಗಳೊಂದಿಗೆ ಈ ಸ್ಪೀಕರ್ ಬಂದಿದ್ದು 20 ವ್ಯಾಟ್ ಔಟ್‌ಪುಟ್ ಅನ್ನು ಒದಗಿಸುತ್ತದೆ. IPX7 ಜಲ ಪ್ರತಿರೋಧಕ ಸಾಮರ್ಥ್ಯವನ್ನು ಹೊಂದಿದ್ದು 10 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ. ಹೊಂದಿಸಬಹುದಾದ ಬೇಸ್‌ನೊಂದಿಗೆ ಸ್ಪೀಕರ್ ಬಂದಿದ್ದು ಬ್ಲೂಟೂತ್ 5.0 ಕನೆಕ್ಟಿವಿಟಿ ಹೊಂದಿದೆ.

ಜೆಬ್-ಮ್ಯೂಸಿಕ್ ಬಾಂಬ್ (3,199 ರೂ) Zeb-Music Bomb:

ಜೆಬ್ರಾನಿಕ್ಸ್‌ನ ಜೆಬ್-ಮ್ಯೂಸಿಕ್ ಬಾಂಬ್ UE ವಂಡರ್‌ಬೂಮ್‌ ಅನ್ನೇ ಹೋಲುತ್ತಿದ್ದು IPX5 ಜಲಪ್ರತಿರೋಧಕ ರೇಟಿಂಗ್ ಅನ್ನು ಹೊಂದಿದೆ. ಬ್ಲೂಟೂತ್, ಯುಎಸ್‌ಬಿ, ಆಕ್ಸ್ ಹೀಗೆ ಬಹು ಕನೆಕ್ಟಿವಿಟಿ ಆಯ್ಕೆಗಳನ್ನು ನೀಡುತ್ತದೆ ಹಾಗೂ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಪೂರ್ಣ ಚಾರ್ಜ್‌ನೊಂದಿಗೆ 10 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಹಾಗೂ ಕಾಲ್ ಫಂಕ್ಶನ್ ಬಟನ್ ಅನ್ನು ಇದು ಹೊಂದಿದೆ.

ಸೋನಿ ಎಸ್‌ಆರ್‌ಎಸ್-ಎಕ್ಸ್‌ಬಿ13 (ಅಂದಾಜು ಬೆಲೆ 3,990 ರೂ) Sony SRS-XB13:

ಸೋನಿ ಎಸ್‌ಆರ್‌ಎಸ್-ಎಕ್ಸ್‌ಬಿ13 ನೀರು ಹಾಗೂ ಧೂಳು ಪ್ರತಿರೋಧಕ IP67 ರೇಟಿಂಗ್ ಪಡೆದುಕೊಂಡಿದ್ದು ಇದನ್ನು ಹೊರಾಂಗಣ ಅಂದರೆ ಯಾವುದೇ ಪಾರ್ಟಿ, ಪ್ರವಾಸಿ ತಾಣಗಳಲ್ಲಿ ಕೂಡ ಬಳಸಬಹುದಾಗಿದೆ. ಬಾಸ್-ಸ್ನೇಹಿ ಸೋನಿಕ್ ಸಿಗ್ನೇಚರ್ ಉತ್ಪಾದಿಸಲು ಸಹಾಯ ಮಾಡುವ ಪ್ಯಾಸೀವ್ ರೇಡಿಯೇಟರ್ ಸಹ ಇದೆ. ಪೋರ್ಟಬಲ್ ಸ್ಪೀಕರ್ SBC ಮತ್ತು AAC ಬ್ಲೂಟೂತ್ ಕೊಡೆಕ್‌ಗಳಿಗೆ ಬೆಂಬಲದೊಂದಿಗೆ ಸಂಪರ್ಕಕ್ಕಾಗಿ ಬ್ಲೂಟೂತ್ v4.2 ಬಳಸುತ್ತದೆ. ಇದು 20,000Hzವರೆಗಿನ ಆವರ್ತನ ಪ್ರತಿಕ್ರಿಯೆ ಶ್ರೇಣಿಯನ್ನು ಮತ್ತು ಒಂದು ಬಾರಿಯ ಚಾರ್ಜಿಂಗ್‌ನಲ್ಲಿ 16 ಗಂಟೆಗಳವರೆಗೆ ಬ್ಯಾಟರಿ ನೀಡುತ್ತದೆ. ಕರೆಗಳನ್ನು ಸ್ವೀಕರಿಸಲು ಅಂತರ್ಗತ ಮೈಕ್ರೋಫೋನ್ ಅನ್ನು ಈ ಸ್ಪೀಕರ್ ಹೊಂದಿದೆ.

ಆ್ಯಂಕರ್ ಸೌಂಡ್‌ಕೋರ್ ಸ್ಪೋರ್ಟ್ ಎಕ್ಸ್‌ಎಲ್ (ಅಂದಾಜು ಬೆಲೆ 4,729 ರೂ) Anker SoundCore Sport XL:

ಆಂಕರ್ ಸೌಂಡ್‌ಕೋರ್ ಸ್ಪೋರ್ಟ್ ಎಕ್ಸ್‌ಎಲ್ ಸ್ಟೈಲಿಶ್ ಲುಕ್ ಹೊಂದಿದ್ದು 16 ವ್ಯಾಟ್ ಆಡಿಯೋ ಔಟ್‌ಪುಟ್ ಒದಗಿಸುತ್ತದೆ. ಇದು 15 ಗಂಟೆಗಳವರೆಗೆ ಬ್ಯಾಟರಿ ನೀಡುತ್ತದೆ. ಶಾಕ್ ನಿರೋಧಕ ಗುಣವನ್ನು ಇದು ಹೊಂದಿದೆ. ಸೋನಿ ಸ್ಪೀಕರ್‌ಗಳನ್ನು ಹೋಲುವ ಆಂಕರ್ ಸೌಂಡ್‌ಕೋರ್ ಸ್ಪೋರ್ಟ್ ಎಕ್ಸ್‌ಎಲ್ ನೀರು ಹಾಗೂ ಧೂಳು ಪ್ರತಿರೋಧಕ ಸಾಮರ್ಥ್ಯ IP67 ರೇಟಿಂಗ್ ಪಡೆದುಕೊಂಡಿದೆ.

ಬೋಟ್ ಸ್ಟೋನ್ 1400 (ಅಂದಾಜು ಬೆಲೆ 4,999 ರೂ) Boat Stone 1400:

ಇದು 30 ವ್ಯಾಟ್ ಧ್ವನಿ ಔಟ್‌ಪುಟ್‌ ಒದಗಿಸುತ್ತದೆ ಹಾಗೂ ಈ ಬೆಲೆ ಶ್ರೇಣಿಯಲ್ಲಿ ನೀವು ಖರೀದಿಸಬಹುದಾದ ಅತ್ಯಂತ ಉಚ್ಚ ಸ್ವರದ ಧ್ವನಿವರ್ಧಕಗಳಲ್ಲಿ ಇದು ಒಂದಾಗಿದೆ. ಸ್ಪೀಕರ್ 70mm ಪ್ರೈಮರ್ ಡ್ರೈವರ್ ಹಾಗೂ 30mm ಸೆಕೆಂಡರಿ ಡ್ರೈವರ್ ಪಡೆದುಕೊಂಡಿದೆ. ಆಕ್ಸ್ ಪೋರ್ಟ್ ಹಾಗೂ ಯುಎಸ್‌ಬಿ ಪೋರ್ಟ್ ಲಭ್ಯತೆಯೊಂದಿಗೆ ಬ್ಲೂಟೂತ್ 4.2 ಅನ್ನು ಬಳಸುತ್ತದೆ. ಇದು ನೀರು ಹಾಗೂ ಧೂಳು ಪ್ರತಿರೋಧಕ ಸಾಮರ್ಥ್ಯವನ್ನು ಹೊಂದಿದ್ದು IPX5ರೇಟಿಂಗ್ ಪಡೆದುಕೊಂಡಿದೆ. ನೀವು ಇದನ್ನು ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಒಂದೇ ಚಾರ್ಜ್‌ನಲ್ಲಿ ಏಳು ಗಂಟೆಗಳ ಮನರಂಜನೆ ನೀಡುತ್ತದೆ.

ಯುಇ ವಂಡರ್‌ಬೂಮ್ (ಅಂದಾಜು ದರ: 3,995 ರೂ) UE Wonderboom:

ಇದನ್ನೂ ಓದಿ: Bluetooth Speakers: ಸಖತ್ತಾಗಿ ಸೌಂಡ್​ ಮಾಡುತ್ತೆ ಈ 8 ಬ್ಲೂಟೂತ್​ ಸ್ಪೀಕರ್​ಗಳು​! ಆನ್​ಲೈನ್​ನಲ್ಲೂ ಖರೀದಿಸಬಹುದು

ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡರೂ ವೃತ್ತಾಕಾರದ ವಿನ್ಯಾಸವನ್ನು ಸ್ಟ್ರಾಪ್‌ನೊಂದಿಗೆ ಪಡೆದುಕೊಂಡಿದೆ. ಇದು 10 ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ 20,000KHz ಆವರ್ತನ ಶ್ರೇಣಿಯನ್ನು ಒದಗಿಸುತ್ತದೆ. ಜಲನಿರೋಧಕ ಸಾಮರ್ಥ್ಯವನ್ನು ಈ ಸ್ಪೀಕರ್ ಹೊಂದಿದ್ದು ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಮೈಕ್ರೋಫೋನ್ ಇಲ್ಲದೆ ಡ್ಯುಯಲ್-ಸ್ಪೀಕರ್ ವ್ಯವಸ್ಥೆಯನ್ನು ಹೊಂದಿದೆ.
Published by:vanithasanjevani vanithasanjevani
First published: