ಸ್ವಾತಂತ್ರ್ಯ ದಿನಾಚರಣೆ: ಈ ಮೊಬೈಲ್​ಗಳ ಮೇಲೆ ಇದೆ ಭರ್ಜರಿ ಆಫರ್​


Updated:August 11, 2018, 10:43 AM IST
ಸ್ವಾತಂತ್ರ್ಯ ದಿನಾಚರಣೆ: ಈ ಮೊಬೈಲ್​ಗಳ ಮೇಲೆ ಇದೆ ಭರ್ಜರಿ ಆಫರ್​

Updated: August 11, 2018, 10:43 AM IST
ದೇಶದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇ ಕಾಮರ್ಸ್​ ಸಂಸ್ಥೆಗಳಾದ ಅಮೆಜಾನ್​, ಫ್ಲಿಪ್​ಕಾರ್ಟ್​ ಮತ್ತು ಪೇಟಿಎಂ ಭರ್ಜರಿ ಆಫರ್​ಗಳನ್ನು ನೀಡಿದೆ. ಕಳೆದ ಒಂದು ವಾರದಿಂದ ಈ ಮಾರಾಟ ನಡೆಯುತ್ತಿದ್ದು, ಅಮೆಜಾನ್​​ನ ಫ್ರೀಡಂ ಸೇಲ್​ ಭಾನುವಾರ ಆ.12ರಂದು ಅಂತ್ಯಗೊಳ್ಳಲಿದೆ. ಹೀಗಾಗಿ ಅಮೆಜಾನ್ ಇಂಡಿಯಾ ಮೂರು ದಿನಗಳಿಂದ ಬರ್ಜರಿ ಆಫರ್​ಗಳನ್ನು ನೀಡುತ್ತಲೇ ಬಂದಿದೆ. ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​, ಕಂಪ್ಯೂಟರ್​, ಟಿವಿ ಹೀಗೆ ಹಲವು ವಸ್ತುಗಳ ಮೇಲೆ ಆಪರ್​ ನೀಡಿರುವ ಅಮೆಜಾನ್​, ಎಸ್​ಬಿಐ ಕಾರ್ಡ್​ ಬಳಕೇದಾರರಿಗೆ ವಿಶೇಷ 10% ಕ್ಯಾಶ್​ಬ್ಯಾಕ್​ ಆಫರ್​ ನೀಡಿದೆ.

ಇಂದು ನಾವು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದದ ಹಾಗೂ ಉತ್ತಮ ಫೀಚರ್​ಗಳನ್ನು ಹೊಂದಿರುವ ಫೋನ್​ಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದೇವೆ.

ಅಮೆಜಾನ್​ನಲ್ಲಿರುವ ಬೆಸ್ಟ್​ ಮೊಬೈಲ್​ಗಳ ಡೀಲ್​

ಒನ್​ಪ್ಲಸ್​ 6

ಫ್ರೀಡಂ ಮಾರಾಟದಲ್ಲಿರುವ ಅತ್ಯಂತ ಜನಪ್ರಿಯ ಬ್ರಾಂಡೆಡ್​ ವಸ್ತುಗಳಲ್ಲಿ ಒನ್​ ಪ್ಲಸ್​ 6 ಮೊಬೈಲ್​ ಕೂಡ ಒಂದು, ಹಳೇಯ ಫೋನ್​ಗಳೊಂದಿಗೆ ರೂ.10,000 ವರೆಗೂ ಎಕ್ಸ್​ಚೇಂಜ್​ ಆಫರ್​ ದೊರಕಲಿದೆ. ಇನ್ನು ಈ ಫ್ರೀಡಂ ಸೇಲ್​ನಲ್ಲಿ ಮೊಬೈಲ್ ಖರೀದಿಸಿದರೆ ಆರು ತಿಂಗಳ ಇಎಂಐ ಮೇಲೆ ಯಾವುದೇ ಹೆಚ್ಚಿನ ಬಡ್ಡಿ ಬೀಳುವುದಿಲ್ಲ. 6.28 ಇಂಚಿನ ನೋಚ್​ ಡಿಸ್​ಪ್ಲೇ ಹೊಂದಿರುವ ಒನ್​ಪ್ಲಸ್​ 6 ಕ್ವಾಲ್ಕಂ ಸ್ನಾಪ್​ಡ್ರಾಗನ್​ 845 ಪ್ರೊಸೆಸರ್​ ಹೊಂದಿದೆ. 6ಜಿಬಿ ಹಾಗೂ 8ಜಿಬಿ RAM ವ್ಯವಸ್ಥೆಯಿರುವ ಈ ಮೊಬೈಲ್​ 64GB, 128GB ಮತ್ತು 256 GB ಮೆಮೊರಿ ವ್ಯವಸ್ಥೆಯಲ್ಲಿ ಲಭ್ಯವಿರಲಿದೆ.

ಹಾನರ್​ 7 ಎಕ್ಸ್​
64ಜಿಬಿ ಆಂತರಿಕ ಮೆಮೊರಿ ಹೊಂದಿರುವ ಹಾನರ್​ 7ಎಕ್ಸ್​​ ಮೊಬೈಲ್​ 10,990ಕ್ಕೆ ಲಭ್ಯವಿದೆ. ಇದು ಫ್ರೀಡಂ ಆಫರ್​ನಲ್ಲಿ ಮಾತ್ರಾ ದೊರಕುತ್ತಿದ್ದ ಉಳಿದ ದಿನಗಳಲ್ಲಿ ಈ ಮೊಬೈಲ್​ನ ಮೂಲ ಬೆಲೆ 16,999ಕ್ಕೆ ಮಾರಾಟವಾಗುತ್ತದೆ. ಹಿಸಿಲಿಕಾನ್​ ಕಿರಿನ್​ 659 ಪ್ರೊಸೆಸರ್​ ಹೊಂದಿರುವ ಈ ಮೊಬೈಲ್​ ಕಳೆದ ಡಿಸೆಂಬರ್​ ಅಂತ್ಯದಲ್ಲಿ ಬಿಡುಗಡೆ ಹೊಂದಿತ್ತು. 32ಜಿಬಿ, 64ಜಿಬಿ ಮತ್ತು 128 ಜಿಬಿ ಆಂತರಿಕ ಮೆಮೊರಿ ವ್ಯವಸ್ಥೆಯಿಂದ ಕೂಡಿರುವ ಈ ಮೊಬೈಲ್​ 256 ಜಿಬಿ ವರೆಗೂ ಈ ಮೆಮೊರಿ ವಿಸ್ತರಣೆಗೆ ಅವಕಾಶ ನೀಡಿದೆ.
Loading...

ಫ್ಲಿಪ್​ಕಾರ್ಟ್​ನಲ್ಲಿರು ಬೆಸ್ಟ್​ ಆಫರ್​

ವಿವೋ ವಿ9
ಫ್ಲಿಪ್​ಕಾರ್ಟ್​ ಆರಂಭಿಸಿರುವ ಬಿಗ್​ ಫ್ರೀಡಂ ಸೇಲ್​ 2018ರಲ್ಲಿ ವಿವೋದವರ ವಿ9 ಮೊಬೈಲ್​ಗೆ 3000 ರೂ. ಕಡಿತಗೊಳಿಸಿ ಮಾರಾಟ ಮಾಡಲಾಗುತ್ತದೆ. 20,990ಕ್ಕೆ ಮಾರಾಟವಾಗುವ ವಿ9 ಮೊಬೈಲ್​ ಆಫರ್​ನಲ್ಲಿ 17,150ಕ್ಕೆ ದೊರಕಲಿದೆ. ಇದರೊಂದಿಗೆ ಎಕ್ಸ್​ಚೇಂಜ್​ ಆಫರ್​ ಕೂಡಾ ಗ್ರಾಹಕರಿಗೆ ಸಿಗಲಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್​ 626 ಪ್ರೊಸೆಸರ್​ ಹೊಂದಿರುವ ವಿ9 ಮೊಬೈಲ್​ಗೆ 4GB RAMನ ಬೆಂಬಲ ನೀಡಲಾಗಿದೆ. 6.3 ಇಂಚುಗಳ ಐಪಿಎಸ್​ ಎಲ್​ಸಿಡಿ ಪರದೆ ಹೊಂದಿದ್ದು ಕರತಕ ಬುದ್ಧಿಮತ್ತೆಯ ಮೂಲಕ ಫೇಸ್​ ಆಕ್ಸೆಸ್​ ಹೊಂದಿದೆ.

ಶಿಯೋಮಿ ರೆಡ್​ಮಿ ನೋಟ್​ 5 ಪ್ರೊ
ಶಿಯೋಮಿಯವರ ಅತ್ಯಂತ ಹೆಚ್ಚು ಮಾರಾಟವಾದ ಮೊಬೈಲ್​ಗಳಲ್ಲಿ 5 ಪ್ರೊ ಕುಡಾ ಒಂದು, ಈ ಬಾರಿ 5 ಪ್ರೊ ಮೊಬೈಲ್​ನ್ನು ಅತ್ಯಂತ ಕಡಿಮೆ ಬೆಲೆ ರೂ.9999ಗೆ ಮಾರಾಟ ಮಾಡಲಾಗುತ್ತದೆ. ಭಾರತದಲ್ಲಿ ಈ ಮೊಬೈಲ್​ನ ಮೂಲ ಬೆಲೆ 14,999 ಇದ್ದು 4GBRAM ಮತ್ತು 64 ಜಿಬಿಗಳ ಆಂತರಿಕ ಮೆಮೊರಿ ಹೊಂದಿದೆ.

ಈ ಮೊಬೈಲ್​ನ್ನು ರೂ.9999ಕ್ಕೆ ಪಡೆದುಕೊಳ್ಳಲು ನಿಮ್ಮ ಹಳೇಯ ರೆಡ್​ ಮಿ ನೋಟ್​​ 4ನ್ನು ರೆಡ್​ಮಿ 5 ಪ್ರೊಗೆ ಎಕ್ಸ್​ಚೇಂಜ್​ ಮಾಡಿಕೊಂಡರೆ ನಿಮಗೆ 5 ಪ್ರೊ 10,999ಕ್ಕೆ ದೊರಕುತ್ತದೆ. ಇನ್ನು ನಿಮ್ಮ ಬಳಿ ಸಿಟಿ ಬ್ಯಾಂಕ್​ ಕ್ರೆಡಿಟ್​ ಕಾರ್ಡ್​ ಇದ್ದರೆ ನಿಮಗೆ ಮತ್ತೆ 1,000 ರೂ. ಬೆಲೆ ಕಡಿತಗೊಳ್ಳುತ್ತದೆ. ಈ ಮೂಲಕ ನೀವು ರೆಡ್​ಮಿ 5ಪ್ರೊವನ್ನು ರೂ.9999ಕ್ಕೆ ಪಡೆಯಬಹುದು.

ಪೇಟಿಂನಲ್ಲಿರುವ ಬೆಸ್ಟ್​ ಡೀಲ್​

ಐಫೋನ್​ ಎಕ್ಸ್​​
ಭಾರತದಲ್ಲಿ ಐಫೋನ್​ ಎಕ್ಸ್​ನ್ನು 89,000ಕ್ಕೆ ಬಿಡುಗಡೆ ಮಾಡಲಾಗಿದೆ. ಇದೀಗ ಪೇಟಿಎಂ ಮಾಲ್​ ಐಫೋನ್​ ಎಕ್ಸ್​ (64ಜಿಬಿ ಮೆಮೊರಿ) ಮೊಬೈಲ್​ಗೆ 10,000 ರೂ.ಗಳ ಕ್ಯಾಶ್​ಬ್ಯಾಕ್​ ಆಫರ್​ ನೀಡಿದೆ. ಹೀಗಾಗಿ ಈ ಮೊಬೈಲ್​ ನಿಮಗೆ 82,798 ರೂ. ಪೇಟಿಎಂ ಮಾಲ್​ನಲ್ಲಿ ದೊರಕುತ್ತದೆ. ಐಸಿಐಸಿಐ ಬ್ಯಾಂಕ್​ನ ಗ್ರಾಹಕರು ಇನ್ನೂ 1,250 ರೂ ಕ್ಯಾಶ್​ಬ್ಯಾಕ್​ ಆಫರ್​ ಪಡೆಯಬಹುದು. ಇದಲ್ಲದೆ ಐಫೋನ್​ ಎಕ್ಸ್​​ ಖರೀದಿ ಸಂದರ್ಭದಲ್ಲಿ ಹಳೇಯ ಮೊಬೈಲ್​ ಮಾರಿದರೆ 14,250 ರೂ ವರೆಗೂ ಕ್ಯಾಶ್​ಬ್ಯಾಕ್​ ಪಡೆಯಬಹುದು. ಹೀಗಾಗಿ ನಿಮಗೆ ಈ ಮೊಬೈಲ್​ 67,298 ರೂ.ನಲ್ಲಿ ಲಭ್ಯವಿರುತ್ತದೆ.

5.8 ಇಂಚುಗಳ ಡಿಸ್​ಪ್ಲೇ ಹೊಂದಿರುವ ಐಫೋನ್​ ಎಕ್ಸ್​​ ಅತ್ಯಂತ ಪವರ್​ಫುಲ್​ ಪ್ರೊಸೆಸರ್​ A11 Bionic ಹೊಂದಿದೆ, 12 ಎಂಪಿಗಳ ಎರಡು ಕ್ಯಾಮೆರಾ ಹೊಂದಿರುವ ಮೊಬೈಲ್​ಗಳನ್ನು ಐಫೋನ್​ ಎಕ್ಸ್​ ಹೊಂದಿದೆ. ಸೆಲ್ಫಿಗಾಗಿ 7ಎಂಪಿ ಕ್ಯಾಮೆರಾ ಹೊಂದಿದೆ.
First published:August 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...