Best Parenting Apps: ಪೋಷಕರೇ, ಮಕ್ಕಳ ಪಾಲನೆಯ ಬಗ್ಗೆ ಚಿಂತೆ ಮಾಡ್ಬೇಡಿ? ಈ 5 ಅಪ್ಲಿಕೇಶನ್‌ಗಳು ನಿಮಗೆ ಸಹಾಯ ಮಾಡುತ್ತೆ ನೋಡಿ

ಇತ್ತೀಚಿನ ಕ್ರಿಯಾತ್ಮಕ ಜಗತ್ತಿನಲ್ಲಿ, ನಿರಂತರ ಕಾಯಿಲೆಗಳು, ಶಿಕ್ಷಣದ ಸ್ವರೂಪ ಬದಲಾಗುತ್ತಿದೆ. ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ನೋಡಿಕೊಳ್ಳುವಾಗ ಪರೀಕ್ಷೆಗೆ ಒಳಗಾಗುತ್ತಾರೆ. ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ? ಅವರಿಗೆ ಏನು ಬೇಕು ಅಥವಾ ಬೇಡ ಎಂಬುದನ್ನು ನೋಡುವುದು ಹೇಗೆ? ಅವರಿಗೆ ಏನು ಮಾಡಬೇಕು? ಏನು ಮಾಡಬಾರದು? ಇಂತಹ ಹಲವು ಪ್ರಶ್ನೆಗಳು ಪೋಷಕರನ್ನು ಕಾಡುತ್ತವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನರು ಕೆಲಸದಲ್ಲಿ (Work) ನಿರತರಾಗಿರುವುದರಿಂದ ಅವರು ತಮಗಾಗಿ ಮತ್ತು ತಮ್ಮ ಕುಟುಂಬಕ್ಕೆ (Family) ಸರಿಯಾಗಿ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಮೊದಲು, ಮಹಿಳೆಯರು ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿಯೇ ಇರುತ್ತಿದ್ದರು ಮತ್ತು ಪುರುಷರು ಜೀವನಕ್ಕಾಗಿ ದುಡಿಯುತ್ತಿದ್ದರು. ಆದರೆ ಈಗ ಮಹಿಳೆಯರು (Womens) ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಆದರೀಗ ತಾಯಿ ಮತ್ತು ತಂದೆ ಇಬ್ಬರೂ ಉದ್ಯೋಗದಲ್ಲಿರುವುದರಿಂದ ಶಿಶುವನ್ನು (infant) ನೋಡಿಕೊಳ್ಳುವುದು ದೊಡ್ಡ ಸವಾಲಾಗಿದೆ.

    ಇತ್ತೀಚಿನ ಕ್ರಿಯಾತ್ಮಕ ಜಗತ್ತಿನಲ್ಲಿ, ನಿರಂತರ ಕಾಯಿಲೆಗಳು, ಶಿಕ್ಷಣದ ಸ್ವರೂಪ ಬದಲಾಗುತ್ತಿದೆ. ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ನೋಡಿಕೊಳ್ಳುವಾಗ ಪರೀಕ್ಷೆಗೆ ಒಳಗಾಗುತ್ತಾರೆ. ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ? ಅವರಿಗೆ ಏನು ಬೇಕು ಅಥವಾ ಬೇಡ ಎಂಬುದನ್ನು ನೋಡುವುದು ಹೇಗೆ? ಅವರಿಗೆ ಏನು ಮಾಡಬೇಕು? ಏನು ಮಾಡಬಾರದು? ಇಂತಹ ಹಲವು ಪ್ರಶ್ನೆಗಳು ಪೋಷಕರನ್ನು ಕಾಡುತ್ತವೆ. ಹಾಗಾಗಿ ಮಕ್ಕಳ ಉನ್ನತಿಗೆ ಏನು ಮಾಡಬಹುದು ಎಂದು ಪೋಷಕರು ಯೋಚಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ, ಮಕ್ಕಳನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ತಿಳಿಸುವ ಮೊಬೈಲ್ ಅಪ್ಲಿಕೇಶನ್‌ಗಳು ಪೋಷಕರಿಗೆ ಸಹಾಯ ಮಾಡಬಹುದು.

    ನಿಮ್ಮ ಮಕ್ಕಳ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಈ ಪೋಷಕರ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನೀವು ಅಂತಹ ಹಲವಾರು ಅಪ್ಲಿಕೇಶನ್‌ಗಳನ್ನು ಕಾಣಬಹುದು. ಕೆಲವು ನಿರ್ದಿಷ್ಟ ಅಪ್ಲಿಕೇಶನ್ ವಿವರಗಳನ್ನು ನೋಡೋಣ.

    Healofy:

    ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೇಗೆ ಕಾಳಜಿ ವಹಿಸಬೇಕು ಎಂಬುದರಿಂದ ಹುಟ್ಟಿದ ನಂತರ ಮಗುವನ್ನು ಹೇಗೆ ಕಾಳಜಿ ವಹಿಸಬೇಕು, ಯಾವ ಉತ್ಪನ್ನಗಳನ್ನು ಬಳಸಬೇಕು, ಈ ಅಪ್ಲಿಕೇಶನ್‌ನಲ್ಲಿ ನೀವು ಹಲವಾರು ವಿಷಯಗಳನ್ನು ನೋಡಬಹುದು. ಈ ಆ್ಯಪ್ 4.6 ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದು, 1 ಕೋಟಿಗೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

    Google family link:

    ಈ Google ಅಪ್ಲಿಕೇಶನ್ ಪೋಷಕರಿಗೆ ತಮ್ಮ ಮಕ್ಕಳನ್ನು ಹೇಗೆ ಕಾಳಜಿ ವಹಿಸಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ 4.3 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. 5 ಕೋಟಿಗೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: Kids care: ಶಾಲೆಗೆ ಹೋಗುವ ಮಕ್ಕಳ ಆರೋಗ್ಯದ ಬಗ್ಗೆ ಇರಲಿ ಗಮನ, ಪದೇ ಪದೇ ಆರೋಗ್ಯ ಹದಗೆಡದಂತೆ ಈ ರೀತಿ ಮಾಡಿ

    The Happy Child parenting App:

    ಮಕ್ಕಳನ್ನು ಸಂತೋಷವಾಗಿಡಲು ಈ ಅಪ್ಲಿಕೇಶನ್ ಉಪಯುಕ್ತವಾಗಿದೆ. ಈ ಆ್ಯಪ್ ಕೂಡ 4.9 ಸ್ಟಾರ್ ಪಡೆದುಕೊಂಡಿದ್ದು, 5 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: Paytm: ನೀವು ಪೇಟಿಎಂ ಷೇರುಗಳನ್ನು ಖರೀದಿಸಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ಗುಡ್​ ನ್ಯೂಸ್​!

    Growth chart, Development Milestones App:

    ಮಕ್ಕಳು ಬೆಳೆದಂತೆ ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ತಿಳಿಸುವ ಈ ಆ್ಯಪ್ ಅನ್ನು 1 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ.

    Famisafe-Screen time Control:

    ಈ ಪೇರೆಂಟಿಂಗ್ ಆಪ್ ಅನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಈ ಅಪ್ಲಿಕೇಶನ್ 4.9 ರೇಟಿಂಗ್ ಅನ್ನು ಪಡೆದುಕೊಂಡಿದೆ.

    ಬಹುತೇಕರು ಪೋಷಕರು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಗೊಂದಲ್ಲದಲ್ಲಿರುತ್ತಾರೆ. ಅವರ ಬೇಕು- ಬೇಡಗಳನ್ನು ಅರ್ಥೈಸಿಕೊಳ್ಳುವ ವಿಚಾರದಲ್ಲಿ ವಿಫಲರಾಗುತ್ತಾರೆ. ಪೋಷಕರು ದುಡಿಮೆಯತ್ತ ಹೆಚ್ಚು ಚಿಂತೆ ಮಾಡುವ ವಿಚಾರದಿಂದಾಗಿ, ಮಕ್ಕಳು ಪೋಷಕರ ಪ್ರೀತಿಯಿಂದ ವಂಚಿತರಾಗುವುದು ಇದೆ.
    Published by:Harshith AS
    First published: