ಜನಪ್ರಿಯ ಇಕಾಮರ್ಸ್ ವೆಬ್ಸೈಟ್ (E-commerse Website) ಆಗಿರುವ ಅಮೆಜಾನ್ ತನ್ನ ಗ್ರಾಹಕರಿಗಾಗಿ ಅಮೆಜಾನ್ ಸ್ಮಾರ್ಟ್ಫೋನ್ ಅಪ್ಗ್ರೇಡ್ ಡೇಸ್ ಸೇಲ್ (Amazon Smartphone Upgrade Days Sale) ಅನ್ನು ಪ್ರಾರಂಭಿಸಿದೆ. ಈ ಆಫರ್ಸ್ ಅಮೆಜಾನ್ನಲ್ಲಿ ಡಿಸೆಂಬರ್ 10 ರಂದು ಪ್ರಾರಂಭವಾಗಿ ಡಿಸೆಂಬರ್ 14 ರವರೆಗೆ ಮಾತ್ರ ಇರುತ್ತದೆ. ಈ ಆಫರ್ಸ್ನಲ್ಲಿ ಅಮೆಜಾನ್ ಮಾರುಕಟ್ಟೆಯಲ್ಲಿ ಗುಣಮಟ್ಟದ ಸ್ಮಾರ್ಟ್ಫೋನ್ ಬ್ರಾಂಡ್ಗಳ ಮೇಲೆ ಬಹಳಷ್ಡು ರಿಯಾಯಿತಿಯೊಂದಿಗೆ ಮಾರಾಟಮಾಡುತ್ತಿದೆ. ಇತ್ತೀಚೆಗೆ ಸ್ಮಾರ್ಟ್ಫೋನ್ಗಳು ಬಹಳಷ್ಟು ಮಾರಾಟವಾಗುತ್ತಿದೆ. ಅದ್ರಲ್ಲೂ ಜನಪ್ರಿಯ ಬ್ರಾಂಡ್ಗಳಾದ ರೆಡ್ಮಿ (Redmi), ಸ್ಯಾಮ್ಸಂಗ್ (Samsung), ರಿಯಲ್ಮಿ (Realme) ಸ್ಮಾರ್ಟ್ಫೋನ್ಗಳ ಮೇಲೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಗಳಿವೆ.
ಇದೀಗ ಅಮೆಜಾನ್ ಸ್ಮಾರ್ಟ್ಫೋನ್ ಅಪ್ಗ್ರೇಡ್ ಡೇಸ್ ಸೇಲ್ನಲ್ಲಿ ರೆಡ್ಮಿ ಸ್ಮಾರ್ಟ್ಫೋನ್ಗಳ ಮೇಲೆ ಬಹಳಷ್ಡು ಆಫರ್ಸ್ನೊಂದಿಗೆ ಮಾರಾಟಮಾಡುತ್ತಿದೆ. ಹಾಗಿದ್ರೆ ಆಫರ್ಸ್ನಲ್ಲಿರುವ ಆ 3 ರೆಡ್ಮಿ ಮೊಬೈಲ್ಗಳು ಯಾವುದೆಲ್ಲಾ ಎಂಬುದನ್ನು ಇಲ್ಲಿ ತಿಳಿಯೋಣ.
ರೆಡ್ಮಿ 11 ಪ್ರೈಮ್ 5ಜಿ ಸ್ಮಾರ್ಟ್ಫೋನ್
ಅಮೆಜಾನ್ ಸ್ಮಾರ್ಟ್ಫೋನ್ ಅಪ್ಗ್ರೇಡ್ ಡೇಸ್ ಸೇಲ್ನೊಂದಿಗೆ ರೆಡ್ಮಿ ಪ್ರೈಮ್ 5ಜಿ ಸ್ಮಾರ್ಟ್ಫೋನ್ ಅನ್ನು ಬ್ಯಾಂಕ್ಗಳ ರಿಯಾಯಿತಿಯೊಂದಿಗೆ ಕೇವಲ 11,999 ರೂಪಾಯಿಗೆ ಖರೀದಿ ಮಾಡುವ ಅವಕಾಶವಿದೆ. ಇನ್ನು ರೆಡ್ಮಿ 11 ಪ್ರೈಮ್ 5ಜಿ ಸ್ಮಾರ್ಟ್ಫೋನ್ 6.58 ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ: ವಿವೋದಿಂದ ಬಿಡುಗಡೆಯಾಗುತ್ತಿದೆ ಹೊಸ ಸ್ಮಾರ್ಟ್ಫೋನ್! ಬೆಲೆ, ಫೀಚರ್ಸ್ ಮಾಹಿತಿ ಇಲ್ಲಿದೆ
ಇನ್ನು ಈ ಸ್ಮಾರ್ಟ್ಫೋನ್ ಆಕ್ಟಾ-ಕೋರ್ 7nm ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೊರೇಜ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.y
ರೆಡ್ಮಿ ಎ1 ಸ್ಮಾರ್ಟ್ಫೋನ್
ಅಮೆಜಾನ್ ಸ್ಮಾರ್ಟ್ಫೋನ್ ಅಪ್ಗ್ರೇಡ್ ಡೇಸ್ ಸೇಲ್ ಮಾರಾಟದಲ್ಲಿ ರೆಡ್ಮಿ ಎ1 ಸ್ಮಾರ್ಟ್ಫೋನ್ ಅನ್ನು 5,579 ರೂಪಾಯಿಗೆ ಹೆಚ್ಡಿಎಫ್ಸಿ ಬ್ಯಾಂಕ್ ಆಫರ್ನೊಂದಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಇದರ ಫೀಚರ್ಸ್ ಬಗ್ಗೆ ಹೇಳುವುದಾದರೆ, ರೆಡ್ಮಿ ಎ1 1600 × 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52 ಇಂಚಿನ ಫುಲ್ ಹೆಚ್ಡಿ + ಸ್ಕ್ರ್ಯಾಚ್ ರೆಸಿಸ್ಟೆನ್ಸ್ ಮಾದರಿಯ ಡಿಸ್ಪ್ಲೇಯನ್ನು ಹೊಂದಿದೆ.
ಇನ್ನು ಈ ಫೋನ್ ಮೀಡಿಯಾ ಟೆಕ್ ಹಿಲಿಯೋ A22 ಚಿಪ್ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನ ಬೆಂಬಲವನ್ನು ಪಡೆಯುತ್ತದೆ. ಹಾಗೆಯೇ ಈ ಫೋನ್ ಸಿಂಗಲ್ ವೇರಿಯಂಟ್ ಮಾದರಿಯನ್ನು ಒಳಗೊಂಡಿದ್ದು, 2 GB RAM + 32 GB ಇಂಟರ್ನ್ಲ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿವೆ. ಈ ಸ್ಮಾರ್ಟ್ಫೋನ್ 5000 mAh ಬ್ಯಾಟರಿಯನ್ನು ಒಳಗೊಂಡಿದೆ. ಈ ಸ್ಮಾರ್ಟ್ಫೋನ್ 10W ವೇಗದಲ್ಲಿ ಚಾರ್ಜ್ ಆಗುತ್ತದೆ.
ರೆಡ್ಮಿ 10 ಎ ಸ್ಮಾರ್ಟ್ಫೋನ್
ಅಮೆಜಾನ್ ಈ ಆಫರ್ಸ್ ಸೇಲ್ನಲ್ಲಿ ರೆಡ್ಮಿ 10 ಎ ಸ್ಮಾರ್ಟ್ಫೋನ್ ಅನ್ನು ಕೇವಲ 7,469 ರೂಪಾಯಿನಲ್ಲಿ ಖರೀದಿ ಮಾಡಬಹುದು. ಆದರೆ ಇದು ಬ್ಯಾಂಕ್ಗಳ ಆಫರ್ಸ್ನಲ್ಲಿ ಇಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು.
ರೆಡ್ಮಿ 10A ಸ್ಮಾರ್ಟ್ಫೋನ್ 720 × 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.53 ಇಂಚಿನ HD+ LCD ಡಿಸ್ಪ್ಲೇ ಹೊಂದಿದೆ. ಇದು ಆಕ್ಟಾ ಕೋರ್ ಮೀಡಿಯಾಟೆಕ್ ಹಿಲಿಯೋ G25SoC ಪ್ರೊಸೆಸರ್ನಿಂ.ದ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಈ ಫೋನ್ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ ಸ್ಮಾರ್ಟ್ಫೋನ್ 5,000 mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯವನ್ನು ಹೊಂದಿದ್ದು, ಇದಕ್ಕೆ ಸರಿಯಾಗಿ 10W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ