Smartphones: ಉತ್ತಮ ಗುಣಮಟ್ಟದ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಖರೀದಿಸಬೇಕೇ..? ಹಾಗಾದರೆ ಇಲ್ಲಿವೆ ನೋಡಿ

Top Camera Phones: ಅತ್ಯುತ್ತಮ ಕ್ಯಾಮೆರಾ ಗುಣಮಟ್ಟವು ನಿಮಗೆ ಅತ್ಯಂತ ಮುಖ್ಯವಾಗಿದ್ದರೆ ಮತ್ತು ಹಣದ ಸಮಸ್ಯೆಯಿಲ್ಲದಿದ್ದರೆ ನೀವು ಯಾವ ಫೋನ್ ಖರೀದಿಸುವುದು ಒಳ್ಳೆಯದು..? ಅತ್ಯುತ್ತಮ ಕ್ಯಾಮೆರಾ ಕಾರ್ಯಕ್ಷಮತೆಯನ್ನು ಹೊಂದಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಖರೀದಿಗೆ ಹೋಗುವ ಮುನ್ನ ಇದನ್ನು ಒಮ್ಮೆ ಓದಿ.

.

.

  • Share this:
    ಈಗಂತೂ ಸಾಲು ಸಾಲಾಗಿರುವ ದಸರಾ ಮತ್ತು ದೀಪಾವಳಿ ನಂತರ ಕ್ರಿಸ್‌‌ಮಸ್ ಹಬ್ಬಕ್ಕೆ ನಮ್ಮ ನೆಚ್ಚಿನ ಮೊಬೈಲ್ ಫೋನ್‌ ಕಂಪನಿಗಳು ತನ್ನ ಗ್ರಾಹಕರಿಗಾಗಿ ಅನೇಕ ರೀತಿಯ ಆಫರ್‌ಗಳನ್ನು ನೀಡುವುದನ್ನೇ ಮೊಬೈಲ್ ಪ್ರಿಯರು ಕಾತುರತೆಯಿಂದ ಕಾಯುತ್ತಿರುತ್ತಾರೆ.ನಮ್ಮಲ್ಲಿ ಅನೇಕ ಜನರು ಈ ಹಬ್ಬಗಳ ಸಮಯದಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿರುತ್ತಾರೆ. ಅದರಲ್ಲೂ ಬಹುತೇಕರು ತಾವು ಖರೀದಿಸುವ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಗುಣಮಟ್ಟವು ಚೆನ್ನಾಗಿರಬೇಕು ಮತ್ತು ಹಬ್ಬಕ್ಕೆ ಅದರಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರೆ ಅದೊಂದು ಸುಮಧುರ ಕ್ಷಣವಾಗಿ ಸದಾ ನಮ್ಮೊಂದಿಗೆ ಫೋಟೋ ರೂಪದಲ್ಲಿರಬೇಕು ಎಂದು ಹಂಬಲಿಸುತ್ತಾರೆ.ಆದರೆ ಅತ್ಯುತ್ತಮ ಕ್ಯಾಮೆರಾ ಗುಣಮಟ್ಟವು ನಿಮಗೆ ಅತ್ಯಂತ ಮುಖ್ಯವಾಗಿದ್ದರೆ ಮತ್ತು ಹಣದ ಸಮಸ್ಯೆಯಿಲ್ಲದಿದ್ದರೆ ನೀವು ಯಾವ ಫೋನ್ ಖರೀದಿಸುವುದು ಒಳ್ಳೆಯದು..? ಅತ್ಯುತ್ತಮ ಕ್ಯಾಮೆರಾ ಕಾರ್ಯಕ್ಷಮತೆಯನ್ನು ಹೊಂದಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಖರೀದಿಗೆ ಹೋಗುವ ಮುನ್ನ ಇದನ್ನು ಒಮ್ಮೆ ಓದಿ.

    ಸ್ಯಾಮ್‌ಸಂಗ್ ಗ್ಯಾಲಕ್ಸಿS21 ಸಿರೀಸ್

    ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸಿರೀಸ್ ಈ ಸಮಯದಲ್ಲಿ ಉನ್ನತ ಮಟ್ಟದ ಸ್ಮಾರ್ಟ್‌ಫೋನ್‌ಗಳಾಗಿದ್ದು ಮತ್ತು ಅವು ಅತ್ಯುತ್ತಮ ಕ್ಯಾಮೆರಾಗಳನ್ನು ಹೊಂದಿವೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಸಿರೀಸ್ ಮತ್ತು S21+ ಹಿಂಭಾಗದಲ್ಲಿ 12 ಮೆಗಾಫಿಕ್ಸೆಲ್ +12 ಮೆಗಾಫಿಕ್ಸೆಲ್ +64 ಮೆಗಾಫಿಕ್ಸೆಲ್ ಕ್ಯಾಮೆರಾ ಸೆಟಪ್ ಒದಗಿಸುತ್ತವೆ. ಆದರೂ, ಕ್ಯಾಮೆರಾ ಕಾರ್ಯಕ್ಷಮತೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಾದರೆ ನೀವು S21 ಅಲ್ಟ್ರಾವನ್ನು ಪರಿಗಣಿಸಬಹುದು.

    ಐಫೋನ್ 13 ಪ್ರೋ ಮ್ಯಾಕ್ಸ್ / ಐಫೋನ್ 13 ಪ್ರೋ

    ಐಫೋನ್ ಇಲ್ಲದೆ ಯಾವುದೇ ಅತ್ಯುತ್ತಮ ಕ್ಯಾಮೆರಾ ಪಟ್ಟಿ ಇಲ್ಲವೇ ಇಲ್ಲ ಮತ್ತು ಐಫೋನ್ 13 ಸಿರೀಸ್ ಪ್ರೋ ಮಾದರಿಗಳು ಇಲ್ಲಿವೆ. ಇನ್ನೂ ಟ್ರಿಪಲ್ 12 ಮೆಗಾಫಿಕ್ಸೆಲ್ ಕ್ಯಾಮೆರಾ ಸೆಟಪ್ ಹೊಂದಿರುವ ಐಫೋನ್ 13 ಸಿರೀಸ್ ಸೆನ್ಸರ್-ಶಿಫ್ಟ್, ಮ್ಯಾಕ್ರೋ ಮೋಡ್ ಮತ್ತು ಹೊಸ ಸಿನಿಮ್ಯಾಟಿಕ್ ಮೋಡ್‌ನಂತಹ ವೈಶಿಷ್ಟ್ಯಗಳೊಂದಿಗೆ ಉತ್ತಮ ಕ್ಯಾಮೆರಾ ಅನುಭವ ನೀಡುತ್ತದೆ.

    ಶಿಯೋಮಿ ಎಂಐ 11 ಅಲ್ಟ್ರಾ

    ಶಿಯೋಮಿ ಎಂಐ 11 ಅಲ್ಟ್ರಾ ಫೋನ್‌ನ ಕ್ಯಾಮೆರಾ ಕಾರ್ಯಕ್ಷಮತೆಯೂ ತುಂಬಾ ಚೆನ್ನಾಗಿದ್ದು, ಇದು 50 ಮೆಗಾಫಿಕ್ಸೆಲ್ + 48 ಮೆಗಾಫಿಕ್ಸೆಲ್ + 48 ಮೆಗಾಫಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಅನೇಕ ಸಾಫ್ಟ್‌ವೇರ್‌ ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್ ಒಳ್ಳೆಯ ಆಯ್ಕೆಯಾಗಿದೆ.

    ಒನ್‌ಪ್ಲಸ್ 9 ಪ್ರೋ

    ಒನ್‌ಪ್ಲಸ್ 9 ಪ್ರೋ ಹ್ಯಾಸೆಲ್‌ಬ್ಲಾಡ್ ಕಂಪೆನಿಯ ಪಾಲುದಾರಿಕೆಯಲ್ಲಿ ಉತ್ತಮ ಕ್ಯಾಮೆರಾ ಬ್ರ್ಯಾಂಡ್ ಅನ್ನು ಹೊಂದಿದೆ. ಇದು 48 ಮೆಗಾಫಿಕ್ಸೆಲ್ +50 ಮೆಗಾಫಿಕ್ಸೆಲ್ +8 ಮೆಗಾಫಿಕ್ಸೆಲ್ ಸೆಟಪ್ ಹೊಂದಿಸಲು ಸಾಫ್ಟ್‌ವೇರ್ ಸಹ ಹೊಂದಿದ್ದು, ಇದರಿಂದ ಉತ್ತಮ ಗುಣಮಟ್ಟದ ಫೋಟೋಗಳನ್ನು ನೀವು ಪಡೆಯಬಹುದು.

    Read Also: WhatsApp ಬಳಕೆದಾರರೇ… ಗೂಗಲ್ ಕಡೆಯಿಂದ ನಿಮಗಿದೆ ಆಘಾತಕಾರಿ ಸುದ್ದಿ!

    ವಿವೋX70 ಪ್ರೋ+

    ವಿವೋದ ಎಕ್ಸ್-ಸರಣಿಯು ಕ್ಯಾಮೆರಾ ಆಧಾರಿತ ಸ್ಮಾರ್ಟ್‌ಫೋನ್ ಆಗಿದ್ದು, X70 ಸಿರೀಸ್ ಹೊಸ ಸೇರ್ಪಡೆಯಾಗಿದೆ. ಇದರಲ್ಲಿ OIS ಹೊಂದಿದ್ದು, ಹಲವಾರು ಸಾಫ್ಟ್‌ವೇರ್ ಚಾಲಿತ ವೈಶಿಷ್ಟ್ಯಗಳೊಂದಿಗೆ ಉತ್ತಮ ಫೋಟೋಗಳನ್ನು ಮತ್ತು ವಿಡಿಯೋವನ್ನು ನೀವು ಸೆರೆ ಹಿಡಿಯಬಹುದು.
    First published: