HOME » NEWS » Tech » BEST BUY NOW PAY LATER APPS IN INDIA TO MANAGE CASH CRUNCH DURING COVID HG

ಈಗ ಖರೀದಿಸಿ ನಂತರ ಪಾವತಿಸಿ!; ಕೊರೊನಾ ಸಮಯದಲ್ಲಿ ಸಾಲ ನೀಡುತ್ತವೆ ಈ ಆ್ಯಪ್​​ಗಳು!

LazyPay: ಲೇಝಿಪೇ 15 ದಿನಗಳ ಪಾವತಿ ಜ್ನಾಪನೆ ಸಂದೇಶ ಕಳುಹಿಸುತ್ತದೆ. ಪ್ರತಿ ತಿಂಗಳ 3 ಮತ್ತು 18ರಂದು ಪಾವತಿ ಕುರಿತಾಗಿ ಜ್ಞಾಪನೆ ಸಂದೇಶ ಸ್ಮಾರ್ಟ್​ಫೋನ್​ಗೆ ಬರುತ್ತದೆ.

news18-kannada
Updated:June 6, 2021, 2:54 PM IST
ಈಗ ಖರೀದಿಸಿ ನಂತರ ಪಾವತಿಸಿ!; ಕೊರೊನಾ ಸಮಯದಲ್ಲಿ ಸಾಲ ನೀಡುತ್ತವೆ ಈ ಆ್ಯಪ್​​ಗಳು!
LazyPay
  • Share this:
ಕೊರೊನಾ ಸಮಯದಲ್ಲಿ ಬಹುತೇಕರು ಆರ್ಥಿಕವಾಗಿ ಕುಗ್ಗಿಹೋಗಿದ್ದಾರೆ. ಇನ್ನು ಕೆಲವರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಹಣವಿಲ್ಲದೆ, ಆಹಾರ ಇನ್ನಿತರ ಬೇಕಾಗುವ ಸಾಮಾಗ್ರಿ ಖರೀದಿಸಲು ಕಷ್ಟಪಡುತ್ತಿದ್ದಾರೆ. ಅಂತವರ ಸಮಸ್ಯೆಗೆ ಸ್ಪಂದಿಸುವ ‘ಈಗ ಖರೀದಿಸಿ, ನಂತರ ಪಾವತಿಸಿ’ ಎಂಬ ಆ್ಯಪ್​ಗಳಿವೆ. ಅದರ ಮೂಲಕ ಹಣವನ್ನು ಸಾಲದ ರೂಪವಾಗಿ ಅಥವಾ ಅಗತ್ಯ ಸಾಮಾಗ್ರಿಯನ್ನ ಖರೀದಿಸಬಹುದಾಗಿದೆ. ಆದರೆ ನಿರ್ದಿಷ್ಟ ಅವಧಿಯವೊಳಗೆ ಸಾಲ ಮರುಪಾವತಿ ಮಾಡಬೇಕಿದೆ.

LazyPay

ಲೇಝಿಪೇ ಮೂರು ವಿಭಿನ್ನ ಹಣ ಸಂಗ್ರಹ ತಂತ್ರಗಳಿಗೆ ಇದು ಹೆಸರುವಾಸಿಯಾಗಿದೆ. ಲೇಝಿಪೇ ಸಾಲವನ್ನು ಖಾತೆಗೆ ಜಮಾ ಮಾಡಿದ ನಂತರ ಬಳಕೆದಾರನಿಗೆ ಮೂರು ಆಯ್ಕೆಯನ್ನು ನೀಡುತ್ತದೆ. ಅದರಲ್ಲಿ 1) ತಕ್ಷಣ ಪಾವತಿಸಿ 2) ಸಂಪೂರ್ಣ ಮೊತ್ತವನ್ನು ನಿಗದಿತ ಸಮಯದಲ್ಲಿ ಪಾವತಿಸಿ 3) ಇಎಮ್​ಐಗಾಗಿ ಸೈನ್​ ಮಾಡಿ ಎಂಬ ಆಯ್ಕೆ ನೀಡುತ್ತದೆ.

ಇಎಮ್​ಐ ಮೂಲಕ ಪಾವತಿಸುವುದಾದರೆ ಪಾನ್ ಮತ್ತು ಆಧಾರ್​ ಸಂಖ್ಯೆಯೊಂದಗೆ ಸೈನ್​ ಅಪ್​ ಮಾಡಬೇಕು. ಆ ಬಳಿಕ ಕಂಪನಿ ಕ್ರೆಡಿಟ್​ ಮಿತಿಯನ್ನು ನೀಡುತ್ತದೆ. ಇದರಲ್ಲಿ 250ಕ್ಕೂ ಹೆಚ್ಚು ವಿಭಿನ್ನ ಆನ್​ಲೈನ್​ ಅಂಗಡಿಗಳಿಂದ ಖರೀದಿ ಮಾಡಲು ಬಳಸಬಹುದಾಗಿದೆ.

ಲೇಝಿಪೇ 15 ದಿನಗಳ ಪಾವತಿ ಜ್ನಾಪನೆ ಸಂದೇಶ ಕಳುಹಿಸುತ್ತದೆ. ಪ್ರತಿ ತಿಂಗಳ 3 ಮತ್ತು 18ರಂದು ಪಾವತಿ ಕುರಿತಾಗಿ ಜ್ಞಾಪನೆ ಸಂದೇಶ ಸ್ಮಾರ್ಟ್​ಫೋನ್​ಗೆ ಬರುತ್ತದೆ.

Simpl

ಸಿಂಪಲ್​ ಆ್ಯಪ್​ ಮೂಲಕ ಈಗ ಖರೀದಿಸಿ ನಂತರ ಪಾವತಿ ಆಯ್ಕೆಯನ್ನು ಪಡೆಯಬಹುದು. ಅಂದರೆ ಗ್ರಾಹಕರಿಗೆ ಸಾಲದ ರೂಪದಲ್ಲಿ ಹಣ ಸಿಗುತ್ತದೆ. ಅದರಿಂದ ಬೇಕಾದ ವಸ್ತುಗಳನ್ನು ಖರೀದಿಸಬಹುದು. ಆದರೆ ಸೂಚನೆಯಂತೆ ಅಥವಾ ಇಎಮ್​ಐ ಆಯ್ಕೆಯಂತೆ ಮರುಪಾವತಿಸುವ ಪ್ರಕ್ರಿಯೆ ಇದಾಗಿದೆ.ಸಿಂಪಲ್​ ಆ್ಯಪ್​ ಬಳಕೆದಾರರು 15 ದಿನದ ಒಳಗೆ ಸಾಲವನ್ನು ಮರು ಪಾವತಿಸಬೇಕಿದೆ. ಆನ್​ಲೈನ್​ ಮೂಲಕ ಫುಡ್​ ಅನ್ನು ಇದರ ಸಹಾಯದಿಂದ ಆರ್ಡರ್​ ಮಾಡಬಹುದಾಗಿದೆ.ಜೊಮಾಟೊ, ಬಿಗ್​ಬಾಸ್ಕೆಟ್​, ಫ್ರೆಶ್​2ಹೋಮ್​, ಸ್ಲೀಪಿ ಓವ್ಲ್​ ಕಾಫಿ ಇನ್ನಿತರ ಫ್ಲಾಟ್​ಫಾಮ್​ಗಳಿಂದ ಆಹಾರ ಆರ್ಡರ್​ ಮಾಡಬಹುದಾಗಿದೆ.
Published by: Harshith AS
First published: June 6, 2021, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories