news18-kannada Updated:January 31, 2021, 9:38 AM IST
Yamah MT 15
ಯುವಕರಿಗೆ ಸ್ಕೂಟರಿಗಿಂತ ಬೈಕಿನ ಮೇಲೆ ಹೆಚ್ಚು ವ್ಯಾವೋಹ. ಅವರಲ್ಲಿ ಅನೇಕರು ಸ್ಪೋರ್ಟ್ಸ್ ಬೈಕ್ಗಳನ್ನು ಇಷ್ಟ ಪಡುತ್ತಾರೆ. ಇನ್ನು ಕೆಲವರು ಕಮ್ಮೂಟರ್, ಕ್ಲಾಸಿಕ್ ಬೈಕ್ಗಳನ್ನು ಖರೀದಿಸಿ ಸುಮ್ಮನಾಗುತ್ತಾರೆ. ಅದರಲ್ಲೂ ಕಾಲೇಜು ಹುಡುಗರಂತೂ ಹೊಸ ಬೈಕ್ ಮಾರುಕಟ್ಟೆಗೆ ಬಂದರೆ ಸಾಕು ಅದರ ಕುರಿತು ತಿಳಿದುಕೊಂಡು ಖರೀದಿಸುತ್ತಾರೆ. ಒಟ್ಟಿನಲ್ಲಿ ಹುಡುಗಿಯರಿಂತ ಹುಡುಗರಿಗೆ ಬೈಕ್ ಅಂದರೆ ತುಂಬಾ ಇಷ್ಟ.
ಅದರಂತೆ ಕಾಲೇಜು ಹುಡುಗರಿಗೆ ಇಷ್ಟವಾಗುವ ಮತ್ತು ಕೈಗೆಟಕುವ ದರದಲ್ಲಿರುವ ಬೈಕ್ಗಳ ಕುರಿತು ಮಾಹಿತಿ ಇಲ್ಲಿ ನೀಡಲಾಗಿದೆ. ವಿವಿಧ ಕಂಪನಿಗಳ ಮತ್ತು 1.5 ಲಕ್ಷ ರೂಕ್ಕಿಂತ ಕಡಿಮೆ ಬೆಲೆಗೆ ದೊರಕುವ ಬೈಕ್ಗಳ ಮಾಹಿತಿ ನೀಡಲಾಗಿದೆ.
HERO ಎಕ್ಸ್ಟ್ರಿಮ್ 160ಆರ್:
ಹಿರೋ ಕಂಪನಿಯ ಎಕ್ಸ್ಟ್ರಿಮ್ 160ಆರ್ ಬೈಕ್ ವಿ ವಿನ್ಯಾಸದ ಎಲ್ಇಡಿ ಹೆಡ್ಲ್ಯಾಂಪ್ ಹೊಂದಿದೆ. ಇದರಲ್ಲಿ ವೈಡ್ ಹ್ಯಾಂಡಲ್ಬಾರ್, ಮಸ್ಕ್ಯುಲರ್ ಪೆಟ್ರೋಲ್ ಟ್ಯಾಂಕ್, ಎಂಜಿನ್ ಬೆ, ಎಲ್ಇಡಿ ಟೈಲ್ಲೈಟ್, ಇಂಡಿಕೇಟರ್ ನೀಡಲಾಗಿದೆ. ಬಿಎಸ್6 ಎಂಜಿನ್ ಹೊಂದಿರುವ ಈ ಬೈಕ್ 15ಬಿಹೆಚ್ಪಿ ಮತ್ತು 14 ಎನ್ಎಮ್ ಪೀಕ್ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಈ ಬೈಕಿನ ಬೆಲೆ 1.05 ಲಕ್ಷ ರೂ ಆಗಿದೆ.
ರಿವೋಲ್ಟ್ ಆರ್ವಿ400:
ರಿವೋಲ್ಟ್ ಕಂಪನಿ ಆರ್ವಿ400 ಹೆಸರಿನ ಎಲೆಕ್ಟ್ರಿಕ್ ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಬೈಕ್ 3.24 ಬ್ಯಾಟರಿ ಪ್ಯಾಕ್ ಹೊಂದಿದ್ದು, 3ಕೆಎಮ್ ರೇಟೆಡ್ ಮೋಟಾರ್ ಅಳವಡಿಲಾಗಿದೆ, 170ಎನ್ಎಮ್ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ರಿವೋಲ್ಟ್ ಆರ್ವಿ400 ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡುತ್ತದೆ. 85 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಇದರಲ್ಲಿ ಡಿಜಿಟಲ್ ಇನ್ಟ್ರೂಮೆಂಟ್ ಕ್ಲಸ್ಟರ್ ಆಯ್ಕೆಯನ್ನು ನೀಡಿದೆ. ಇನ್ನು ಈ ಸ್ಕೂಟರ್ ಬೆಲೆ 1,08,999 ರೂ ಇರಲಿದೆ.
TVS ಅಪಾಚಿ ಆರ್ಟಿಆರ್ 200 4ವಿ:
ಈ ಬೈಕ್ 197.75 ಸಿಸಿ ಆಯಿಲ್-ಕೂಲ್ಡ್ ಎಂಜಿನ್ ಹೊಂದಿದ್ದು, 20.5 ಬಿಹೆಚ್ಪಿ ಮತ್ತು 17 ಎನ್ಎಮ್ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸ್ಪೋರ್ಟ್ಸ್, ಅರ್ಬನ್, ರೈನ್ ಎಂಬ ಮೂರು ಮೋಡ್ ಅನ್ನು ಇದರಲ್ಲಿ ನೀಡಲಾಗಿದೆ. ಈ ಬೈಕ್ ಬೆಲೆ 1.31 ಲಕ್ಷ ರೂ ಆಗಿದೆ.
KTM 125 ಡ್ಯೂಕ್:
ಆಸ್ಟ್ರೇಲಿಯನ್ ಕಂಪನಿ ಸಿದ್ಧಪಡಿಸಿದ ಕೆಟಿಎಮ್ 125 ಡ್ಯೂಕ್ ಬೈಕ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 14 ಬಿಹೆಚ್ಪಿ ಮತ್ತು 12 ಎನ್ಎಮ್ ಮತ್ತು ಸಿಕ್ಸ್ ಸ್ಪೀಡ್ ಟ್ರಾನ್ಸ್ಮಿಷನ್ಹೊಂದಿದೆ. ಎಲ್ಸಿಡಿ ಇನ್ಟ್ರುಮೆಂಟ್ ಕ್ಲಸ್ಟರ್ ಹೊಂದಿರುವ ಈ ಬೈಕ್ ಟೆಕ್ಮೀಟರ್, ಪೆಟ್ರೋಲ್ ಲೆವೆಲ್, ಸಮಯ ಮತ್ತು ಸ್ಪೀಡ್ ಬಗ್ಗೆ ಡಿಸ್ಪ್ಲೇಯಲ್ಲಿ ತೋರಿಸುತ್ತದೆ. ಈ ಬೈಕಿನ ಬೆಲೆ 1.42 ಲಕ್ಷ ರೂ ಆಗಿದೆ.
155ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಸಿಕ್ಸ್ ಸ್ಪೀಡ್ ಮ್ಯಾನುಯೆಲ್ ಗೇರ್ ಬಾಕ್ಸ್ ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಡ್ ಇದರಲ್ಲಿದೆ. ಈ ಬೈಕಿನ ಬೆಲೆ 1.44 ಲಕ್ಷ ರೂ ಆಗಿದೆ.
Published by:
Harshith AS
First published:
January 31, 2021, 9:38 AM IST