HOME » NEWS » Tech » BEST AUTOMATIC HATCHBACKS UNDER RS 10 LAKH IN 2021 STG HG

10 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಅತ್ಯುತ್ತಮ ಸ್ವಯಂಚಾಲಿತ ಹ್ಯಾಚ್‌ಬ್ಯಾಕ್ ಕಾರುಗಳ ವಿವರ ಇಲ್ಲಿದೆ

ಆಟೋ ಕಾರ್‌ ಇಂಡಿಯಾ 2021 ರ 10 ಲಕ್ಷ ರೂ.ಗಿಂತ ಕಡಿಮೆ ಎಕ್ಸ್‌ಶೋರೂಂ ಬೆಲೆ ಹೊಂದಿರುವ 6 ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ.

news18-kannada
Updated:April 12, 2021, 2:06 PM IST
10 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಅತ್ಯುತ್ತಮ ಸ್ವಯಂಚಾಲಿತ ಹ್ಯಾಚ್‌ಬ್ಯಾಕ್ ಕಾರುಗಳ ವಿವರ ಇಲ್ಲಿದೆ
ಕಾರು
  • Share this:
ಕೊರೊನಾ ಸಾಂಕ್ರಾಮಿಕ ಕಳೆದೊಂದು ವರ್ಷಕ್ಕೂ ಅಧಿಕ ಸಮಯದಿಂದ ಇಡೀ ಜಗತ್ತನ್ನೇ ಬಾಧಿಸಿದ್ದು, ಆಟೊಮೋಬೈಲ್‌ ಕ್ಷೇತ್ರದ ಮೇಲೂ ಸಾಕಷ್ಟು ಹೊಡೆತ ಬಿದ್ದಿದೆ. ಆದರೂ, ಈಗ ಸಾರ್ವಜನಿಕ ವಾಹನಗಳಲ್ಲಿ ಓಡಾಡಲು ಆತಂಕದಲ್ಲಿರುವ ಜನರು ಸ್ವಂತ ವಾಹನಗಳ ಖರೀದಿಗೆ ಮುಂದಾಗಿದೆ. ಹೆಚ್ಚು ಬೆಲೆಯ ವಾಹನ ಕೊಳ್ಳಲು ಒಲವು ತೋರುತ್ತಿಲ್ಲವಾದರೂ ಕಡಿಮೆ ಅಥವಾ ಮಧ್ಯಮ ವರ್ಗದ ಕಾರುಗಳ ಮಾರಾಟ ಹೆಚ್ಚಾಗಿದ್ದು, ಗ್ರಾಹಕರು ಈ ಮಾದರಿಯ ಕಾರುಗಳತ್ತ ಒಲವು ತೋರುತ್ತಿದ್ದಾರೆ. ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಖರೀದಿಸುವವರು ಸಾಮಾನ್ಯವಾಗಿ ವಿಶಾಲವಾದ ಮತ್ತು ನಗರಗಳಲ್ಲಿ ಓಡಾಡಲು ಅನುಕೂಲಕರವಾದ ಕಾರನ್ನು ಹುಡುಕುತ್ತಾರೆ. ಈ ಬಗ್ಗೆ ಪ್ರಸ್ತುತ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ದೊರೆಯುವ ಅತ್ಯುತ್ತಮ ಸ್ವಯಂಚಾಲಿತ ಹ್ಯಾಚ್‌ಬ್ಯಾಕ್‌ಗಳಿಗಾಗಿ ಟಾಪ್ ಆಯ್ಕೆಗಳು ಇಲ್ಲಿವೆ.

ಆಟೋ ಕಾರ್‌ ಇಂಡಿಯಾ 2021 ರ 10 ಲಕ್ಷ ರೂ.ಗಿಂತ ಕಡಿಮೆ ಎಕ್ಸ್‌ಶೋರೂಂ ಬೆಲೆ ಹೊಂದಿರುವ 6 ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ.

1. ಹ್ಯುಂಡೈ ಐ 20

ಹ್ಯುಂಡೈ ಐ 20ಯ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಶೈಲಿ ಮತ್ತು ವ್ಯಾಪಕ ವೈಶಿಷ್ಟ್ಯಗಳ ಪಟ್ಟಿಯನ್ನು ಹೊಂದಿದೆ. ಹೊಸ ಐ 20 ಉತ್ತಮವಾಗಿ ಸವಾರಿ ಮಾಡುತ್ತದೆ, ಪವರ್‌ಟ್ರೈನ್‌ಗಳು ಮತ್ತು ಆಟೋ ಗೇರ್‌ಬಾಕ್ಸ್‌ಗಳ ಆಯ್ಕೆಯನ್ನು ನೀಡುತ್ತದೆ. ಆದರೆ, ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್‌ನಿಂದ ಸುಸಜ್ಜಿತವಾಗಿರುವ ಐ20 ದುಬಾರಿಯಾಗಿದ್ದು, 10 ಲಕ್ಷ ರೂ. ಬಜೆಟ್‌ ಅನ್ನು ಮೀರುತ್ತದೆ.

ಹ್ಯುಂಡೈ ಐ 20ಯ ಆರು ಮಾಡೆಲ್‌ಗಳು ಲಭ್ಯವಿದ್ದು, ಜತೆಗೆ ಪ್ರತಿ ಮಾಡೆಲ್‌ 1.2 CVT, 1.0 iMT ಹಾಗೂ 1.0 DCT ಎಂಬ ಮೂರು ಆಯ್ಕೆಗಳನ್ನು ಹೊಂದಿದೆ. ದೆಹಲಿಯ ಎಕ್ಸ್ ಶೋ ರೂಂನಲ್ಲಿ 10 ಲಕ್ಷ ರೂ.ಗೂ ಕಡಿಮೆ ಬೆಲೆಯ ಮಾಡೆಲ್‌ಗಳನ್ನು ಇಲ್ಲಿ ನೀಡಲಾಗಿದೆ.

ಮಾಡೆಲ್ 1.2 CVT ಬೆಲೆ 1.0 iMT ಬೆಲೆಸ್ಪೋರ್ಟ್ಸ್‌ 8.60 ಲಕ್ಷ ರೂ. 8.80 ಲಕ್ಷ ರೂ
ಸ್ಪೋರ್ಟ್ಸ್‌ ಡ್ಯುಯಲ್‌ ಟೋನ್‌ 8.75 ಲಕ್ಷ ರೂ. 8.95 ಲಕ್ಷ ರೂಆ್ಯಸ್ಟಾ 9. 70 ಲಕ್ಷ ರೂ. 9. 90 ಲಕ್ಷ ರೂ
ಆ್ಯಸ್ಟಾ ಡ್ಯುಯಲ್‌ ಟೋನ್‌ 9.85 ಲಕ್ಷ ರೂ.

2. ಮಾರುತಿ ಸ್ವಿಫ್ಟ್

ಇತ್ತೀಚಿನ ಅಪ್‌ಡೇಟ್‌ನೊಂದಿಗೆ, ಮಾರುತಿ ಸ್ವಿಫ್ಟ್ ಹಳೆಯ 83 ಹೆಚ್‌ಪಿ, 1.2-ಲೀಟರ್ ಕೆ ಸರಣಿ ಎಂಜಿನ್ ಬದಲು ಹೆಚ್ಚು ಶಕ್ತಿಶಾಲಿ ಮತ್ತು ಪರಿಣಾಮಕಾರಿ 1.2-ಲೀಟರ್ ಡ್ಯುಯಲ್ ಜೆಟ್ ಮೋಟರ್‌ ಅನ್ನು ಹೊಂದಿದೆ. ಆಟೋ ಗೇರ್‌ಬಾಕ್ಸ್ ಎಎಮ್‌ಟಿಯಾಗಿದ್ದು, ಇದು ಕೆಲಸವನ್ನು ಸಮರ್ಥವಾಗಿ ಪೂರೈಸುತ್ತದೆ. ವಾಸ್ತವವಾಗಿ, ಸ್ವಿಫ್ಟ್ ಎಎಮ್‌ಟಿ ಎಆರ್‌ಎಐನ ರೇಟಿಂಗ್‌ಗಳ ಪ್ರಕಾರ ಭಾರತದಲ್ಲಿ ಮಾರಾಟವಾಗುವ ಮೂರನೇ ಅತ್ಯಂತ ಮಿತವ್ಯಯದ ಪೆಟ್ರೋಲ್ ಕಾರು ಆಗಿದೆ.

ಮಾರುತಿ ಸ್ವಿಫ್ಟ್‌ ಆಟೋಮ್ಯಾಟಿಕ್‌ ನಾಲ್ಕು ಮಾಡೆಲ್‌ಗಳಲ್ಲಿ ಬರುತ್ತಿದ್ದು, ಇವುಗಳ ದೆಹಲಿ ಎಕ್ಸ್ ಶೋರೂಂ ಬೆಲೆ ಹೀಗಿದೆ.
ಮಾಡೆಲ್‌ ಬೆಲೆ
VXI AMT 6.86 ಲಕ್ಷ ರೂ.
ZXI AMT 7.49 ಲಕ್ಷ ರೂ.
ZXI+ AMT 8.27 ಲಕ್ಷ ರೂ.
ZXI+ AMT ಡ್ಯುಯಲ್‌ ಟೋನ್‌ 8.41 ಲಕ್ಷ ರೂ.

3. ಮಾರುತಿ ಬೆಲೆನೋ / ಟೊಯೋಟಾ ಗ್ಲ್ಯಾನ್ಜಾ

ಮಾರುತಿ ಬೆಲೆನೋದ ಸ್ವಯಂಚಾಲಿತ ಆವೃತ್ತಿಗಳು - ಮತ್ತು ಅದರ ಬ್ಯಾಡ್ಜ್-ಎಂಜಿನಿಯರ್ಡ್‌ ಕಸಿನ್‌ ಟೊಯೋಟಾ ಗ್ಲ್ಯಾನ್ಜಾ - ಹಳೆಯ ಕೆ 12 ಎಂ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಆದರೂ, ಸಿವಿಟಿ ಗೇರ್‌ಬಾಕ್ಸ್‌ ಅನ್ನು ಹೊಂದಿದ್ದು, ಈ ಹಿನ್ನೆಲೆ ಎರಡೂ ಕಾರುಗಳು ಚಾಲನೆ ಮಾಡಲು ಸ್ಮೂತ್‌ ಆಗಿವೆ. ಜತೆಗೆ ಎರಡೂ ಕಾರುಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳು ವಿಶಾಲವಾಗಿದ್ದು, ಪ್ರಾಯೋಗಿಕವಾದ ಒಳಾಂಗಣಗಳನ್ನು ಹೊಂದಿದೆ. ಮತ್ತು ನೀವು ನಿರೀಕ್ಷಿಸುವ ಎಲ್ಲಾ ವಿಶಿಷ್ಟ ವೈಶಿಷ್ಟ್ಯಗಳನ್ನು ರೂಪಿಸಿವೆ.

ಮಾರುತಿ ಬೆಲೆನೋ ಬೆಲೆ ಶ್ರೇಣಿ ಕಡಿಮೆಯಿಂದ ಪ್ರಾರಂಭವಾಗುತ್ತದೆ ಮತ್ತು ಗ್ಲ್ಯಾನ್ಜಾ ಹೆಚ್ಚು ಪ್ರಮಾಣಿತ ವಾರಂಟಿಯನ್ನು ಪಡೆದಿದೆ.

ಮಾರುತಿ ಬೆಲೆನೋ ಆಟೋಮ್ಯಾಟಿಕ್‌ನಲ್ಲಿ ಡೆಲ್ಟಾ, ಝೀಟಾ, ಆಲ್ಫಾ ಎಂಬ ಮೂರು ಮಾಡೆಲ್‌ಗಳಿವೆ. ಇವುಗಳಲ್ಲಿ ಡೆಲ್ಟಾ ಮಾಡೆಲ್‌ಗೆ ದೆಹಲಿಯಲ್ಲಿ ಎಕ್ಸ್ ಶೋರೂಂ ಬೆಲೆ 7.77 ಲಕ್ಷ ರೂ. ಆಗಿದ್ದರೆ, ಝೀಟಾ ಮಾಡೆಲ್‌ಗೆ 8.38 ಲಕ್ಷ ರೂ. ಬೆಲೆ ಹೊಂದಿದೆ. ಇನ್ನು, ಆಲ್ಫಾಗೆ ದೆಹಲಿಯಲ್ಲಿ ಎಕ್ಸ್ ಶೋರೂಂ ಬೆಲೆ 9.10 ಲಕ್ಷ ರೂ. ಇದೆ.

ಇನ್ನೊಂದೆಡೆ, ಟೊಯೋಟಾ ಗ್ಲ್ಯಾನ್ಜಾ ಆಟೋಮ್ಯಾಟಿಕ್‌ ಎರಡು ಮಾಡೆಲ್‌ಗಳಲ್ಲಿ ಬರುತ್ತದೆ. G CVT ಎಂಬ ಮಾಡೆಲ್‌ಗೆ ದೆಹಲಿಯಲ್ಲಿ ಎಕ್ಸ್ ಶೋರೂಂ ಬೆಲೆ 8.39 ಲಕ್ಷ ಇದ್ದರೆ, V CVT ಮಾಡೆಲ್‌ಗೆ 9.10 ಲಕ್ಷ ರೂ. ಬೆಲೆ ಹೊಂದಿದೆ. ಸಿವಿಟಿ, ಡ್ಯುಯಲ್-ಕ್ಲಚ್ ಆಟೋ ಮತ್ತು ಸ್ವಯಂಚಾಲಿತ ಮ್ಯಾನ್ಯುಯಲ್‌ ಇದ್ದು, ಹೀಗಾಗಿ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಸಾಕಷ್ಟು ಆಯ್ಕೆಗಳನ್ನು ನಿಮಗೆ ನೀಡುತ್ತದೆ.

4. ಹ್ಯುಂಡೈ ಗ್ರ್ಯಾಂಡ್ ಐ 10 NiOS

ಹ್ಯುಂಡೈ ಗ್ರ್ಯಾಂಡ್ ಐ 10 NiOS ಉತ್ತಮವಾಗಿ ಫಿನಿಶ್‌ ಆಗಿರುವ ಮತ್ತು ದುಬಾರಿ ಕ್ಯಾಬಿನ್ ಅನ್ನು ಹೊಂದಿದೆ. ಹ್ಯುಂಡೈ ಶೈಲಿಯಲ್ಲಿ ಸಹ ಸುಸಜ್ಜಿತವಾಗಿದೆ. ಪ್ರಸ್ತಾಪದಲ್ಲಿರುವ ಸ್ವಯಂಚಾಲಿತ ಗೇರ್‌ಬಾಕ್ಸ್ ಎಎಮ್‌ಟಿ ಘಟಕವಾಗಿದ್ದರೂ - ಸಿವಿಟಿ ಅಥವಾ ಟಾರ್ಕ್ ಪರಿವರ್ತಕ ಆಟೋನಂತೆ ಸುಗಮವಾಗಿರುವುದಿಲ್ಲ. ಆದರೆ, ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್‌ನ ಇಂಧನ ದಕ್ಷತೆ ಉತ್ತಮವಾಗೇ ಇದೆ. ಇನ್ನು, NiOS ಪ್ರಸ್ತುತ ಭಾರತದಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ಡೀಸೆಲ್-ಸ್ವಯಂಚಾಲಿತ ಆಯ್ಕೆಯನ್ನು ಹೊಂದಿರುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದೆ.

ಹ್ಯುಂಡೈ ಗ್ರ್ಯಾಂಡ್ ಐ 10 NiOS ಮೂರು ಮಾಡೆಲ್‌ಗಳಲ್ಲಿ ಲಭ್ಯವಿದ್ದು, ಈ ಪೈಕಿ ಮೂರು ಮಾಡೆಲ್‌ಗಳು ಪೆಟ್ರೋಲ್‌ ಎಂಜಿನ್ ಆಯ್ಕೆ ಹೊಂದಿದ್ದರೆ, ಒಂದು ಮಾಡೆಲ್‌ ಮಾತ್ರ ಡೀಸೆಲ್‌ ಎಂಜಿನ್ ಆಯ್ಕೆ ಹೊಂದಿದೆ.

ಮ್ಯಾಗ್ನಾ ಎಎಂಟಿ ಪೆಟ್ರೋಲ್‌ ಎಂಜಿನ್‌ಗೆ ದೆಹಲಿಯ ಎಕ್ಸ್ ಶೋ ರೂಂ ಬೆಲೆ 6.57 ಲಕ್ಷ ಇದ್ದರೆ, ಸ್ಪೋರ್ಟ್ಸ್‌ ಎಎಂಟಿಗೆ 7.18 ಲಕ್ಷ ರೂ. ಬೆಲೆ ಹೊಂದಿದೆ. ಇನ್ನು, ಆ್ಯಸ್ಟಾ ಎಎಂಟಿಗೆ 7.81 ಲಕ್ಷ ರೂ. ಬೆಲೆ ಹೊಂದಿದೆ. ಡೀಸೆಲ್‌ ಎಂಜಿನ್‌ನ ಸ್ಪೋರ್ಟ್ಸ್‌ ಎಎಂಟಿಗೆ 8.27 ಲಕ್ಷ ರೂ. ಬೆಲೆ ಇದೆ.

5. ವೋಕ್ಸ್‌ವ್ಯಾಗನ್ ಪೋಲೋ

ವೋಕ್ಸ್‌ವ್ಯಾಗನ್ ಪೋಲೋ ಹಳೆಯ ಕಾರಾಗಿದ್ದರೂ, ಅದರ ಕ್ಯಾಬಿನ್ ಗುಣಮಟ್ಟ ಅತ್ಯುತ್ತಮವಾಗಿದೆ ಮತ್ತು ಹಲವು ವೈಶಿಷ್ಟ್ಯಗಳು ಅಪ್‌ಡೇಟ್‌ ಆಗಿದ್ದು, ಈ ಹಿನ್ನೆಲೆ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಹೊಸ ಟಾರ್ಕ್ ಪರಿವರ್ತಕ ಗೇರ್‌ಬಾಕ್ಸ್‌ಗೆ ಹೊಸ 1.0-ಲೀಟರ್ ಟಿಎಸ್‌ಐ ಎಂಜಿನ್ ಅನ್ನು ಪೇರ್‌ ಮಾಡಲಾಗಿದೆ. ಇದು ಶಕ್ತಿಯುತ ಮತ್ತು ಸುಗಮ ಡ್ರೈವ್ ಅನುಭವವನ್ನು ನೀಡುತ್ತದೆ, ಅದು ತೀಕ್ಷ್ಣ-ನಿರ್ವಹಣಾ ಚಾಸಿಸ್‌ಗೆ ಸೂಕ್ತವಾಗಿರುತ್ತದೆ.

ವೋಕ್ಸ್‌ವ್ಯಾಗನ್ ಪೋಲೋನ ಎರಡು ಮಾಡೆಲ್‌ಗಳು ಲಭ್ಯವಿದ್ದು, ಹೈಲೈನ್‌ ಪ್ಲಸ್‌ ಎಟಿ ಮಾಡೆಲ್‌ಗೆ ದೆಹಲಿಯ ಎಕ್ಸ್ ಶೋರೂಂ ಬೆಲೆ 9.60 ಲಕ್ಷ ರೂ. ಇದ್ದರೆ GT ಮಾಡೆಲ್‌ಗೆ ಬೆಲೆ 9.99 ಲಕ್ಷ ರೂ. ಇದೆ.
First published: April 12, 2021, 2:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories