Adventure Bikes: ಲಾಂಗ್​ ರೈಡ್​ಗೆ ಸೂಕ್ತವಾದ ಬೆಸ್ಟ್​ ಅಡ್ವೆಂಚರ್​ ಬೈಕ್​ಗಳಿವು

ರಾಯಲ್ ಎನ್​ಫೀಲ್ಡ್​​ ​ಹಿಮಾಲಯ (ಬಿಎಸ್​6)

ರಾಯಲ್ ಎನ್​ಫೀಲ್ಡ್​​ ​ಹಿಮಾಲಯ (ಬಿಎಸ್​6)

ಅತಿ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯವರೆಗೆ ಸಿಗುವ ಅಡ್ವೆಂಚರ್​ ಬೈಕ್​ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

  • Share this:

    ಪ್ರಯಾಣ ಮಾಡಬೇಕು ಎಂಬುದು ಬಹುತೇಕರ ಕನಸಾಗಿರುತ್ತದೆ. ಅದರಲ್ಲೂ ಕೆಲವರದ್ದು, ಬೈಕಿನಲ್ಲಿ ಪ್ರಯಾಣ ಮಾಡಬೇಕು ಎಂಬ ಆಸೆಯಿರುತ್ತದೆ. ಹಾಗಾಗಿ ಸೂಕ್ತವಾದ ಮತ್ತು ಲಾಂಗ್​ ರೈಡ್​ಗೆ ಹೇಳಿ ಮಾಡಿಸಿದಂತಹ ಅಡ್ವೆಂಚರ್​ ಬೈಕ್​ ಖರೀದಿಸುತ್ತಾರೆ. ಬೆಂಗಳೂರಿನಿಂದ ಹಿಮಾಲಯ, ಲಡಾಕ್​ ಪ್ರದೇಶಗಳಿಗೆ ಬೈಕ್​​ನಲ್ಲಿ ಸಂಚರಿಸುವವರು ಇದ್ದಾರೆ. ಅಷ್ಟೇ ಏಕೆ ವಿದೇಶಗಳಿಗೂ ಹೋಗುವವರಿದ್ದಾರೆ.


    ಅನೇಕರಿಗೆ ಬೈಕ್​ನಲ್ಲಿ ದೇಶ ಸುತ್ತಬೇಕು ಎಂಬ ಮಹದಾಸೆ ಇರುತ್ತದೆ. ಆದರೆ ಅದಕ್ಕೆ ಸೂಕ್ತವಾದ ಬೈಕ್​ ಯಾವುದು ಎಂಬ ಬಗ್ಗೆ ತಿಳಿದಿರುವುದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಅಡ್ವೆಂಚರ್​ ಬೈಕ್​ಗಳಿವೆ, ಡಾಂಬರು ರಸ್ತೆ ಮತ್ತು ಗುಡ್ಡಗಾಡಿನಲ್ಲೂ ಚಲಾಯಿಸಬಹುದಾದ ಬೈಕ್​ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆಪರಿಚಯಿಸುತ್ತಿದೆ. ಅದರಂತೆ ಅತಿ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯವರೆಗೆ ಸಿಗುವ ಅಡ್ವೆಂಚರ್​ ಬೈಕ್​ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.


    ರಾಯಲ್ ಎನ್ಫೀಲ್ಡ್​​ ​ಹಿಮಾಲಯ (ಬಿಎಸ್​6)




    ರಾಯಲ್ ಎನ್​ಫೀಲ್ಡ್​​ ​ಹಿಮಾಲಯ (ಬಿಎಸ್​6) ಎಂಜಿನ್​​ ಹೊಂದಿರುವ ಬೈಕ್​  411ಸಿಸಿ ಎಂಜಿನ್​ ಹೊಂದಿದ್ದು, 24.31ಪಿಎಸ್​ ಪವರ್​ 32 ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ. ಡಬಲ್​ ಡಿಸ್ಕ್​ ಹೊಂದಿರುವ ಈ ಬೈಕ್​ ಡುಯೆಲ್​ ಚಾನೆಲ್​​​ ಹೊಂದಿದೆ. ಅಷ್ಟೇ ಅಲ್ಲದೆ, ಇದರಲ್ಲಿ ಜಿಪಿಎಸ್​​ ಕನೆಕ್ಷನ್​, ಡಿಜಿಟಲ್​ ಕಂಪಾಸ್​​, ಟೆಂಪರೇಚರ್​ ರೇಡ್​ಔಟ್​​, ಗೇರ್​ ಪೊಷಿಶನ್​ ಇಂಡಿಕೇಟರ್​, ಫ್ಯುಯೆಲ್​​ ಗೇಜ್​, ಟಚ್​ಮೀಟರ್​, ಸ್ಪೀಡ್​ ಮೀಟರ್​ ಇದರಲ್ಲಿದೆ. ಹಿಮಾಲಯ ಬಿಎಸ್​6 ಎಂಜಿನ್ ಬೈಕ್​ ಬೆಲೆ 2,01,314 ರೂ ಆಗಿದೆ


    ಹೀರೋ BS​6 ಎಕ್ಸ್ಪಲ್ಸ್​ 200T:


    ಇತ್ತೀಚೆಗೆ ಬಿಡುಗಡೆಗೊಂಡ ಈ ಬೈಕ್​ 17.8 ಹೆಚ್​ಪಿ ಪವರ್​ ಮತ್ತು 16.15 ಎನ್​ಎಂ ಟಾರ್ಕ್​ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 8500 ಆರ್​ಪಿಎಂ​ ಮೇಲೆ 13.3ಕೆಡಬ್ಲ್ಯು/18.1ಪಿಎಸ್​ ಗರಿಷ್ಟ ಪವರ್​ ಉತ್ಪಾದಿಸುತ್ತದೆ.  16.15 ಎನ್​ಎಮ್​@ 6500 ಆರ್​ಪಿಎಂ ಗರಿಷ್ಟ ಟಾರ್ಕ್​ ಅನ್ನು ಉತ್ಪಾದಿಸುತ್ತದೆ. ಆಫ್​ ರೋಡಿಗೆ ಈ ಬೈಕ್​ ಹೇಳಿದ ಮಾಡಿಸಿದ ಹಾಗಿದೆ.


    ಹೀರೋ ಎಕ್ಸ್​ಪಲ್ಸ್​ 200ಟಿ ಬೈಕ್​ ಸೆಲ್ಫ್​​​​ ಹಾಗೂ ಕಿಕ್​ ಸ್ಟಾರ್ಟಿಂಗ್​ ಹೊಂದಿದೆ. 5 ಸ್ಪೀಡ್​​ ಕಾಂಸ್ಟಂಟ್​​ ಮೆಶ್​ ಗಿಯರ್​ ಬಾಕ್ಸ್​​ ಇದರಲ್ಲಿದೆ. ಮುಂಭಾಗದಲ್ಲಿ ಆಂಟಿ ಫಿಕ್ಸನ್​ಬುಶ್​ ಜೊತೆಗೆ ಟೆಲಿಸ್ಕಾಪಿಕ್​, ರಿಯರ್​-7 ಸ್ಟೆಪ್​ ರೈಡರ್​ ಅಡೆಸ್ಟೆಬಲ್​​ ಮೊನೊಶಾಕ್​ ಸಸ್ಪೆಂಶನ್​​ ನೀಡಿದೆ.


    ಬೈಕಿನ ಫಂಟ್​​ ಸಿಂಗಲ್​​ ಚಾನೆಲ್​ ಎಬಿಎಸ್​​ 276ಎಮ್​ಎಮ್​ ಡಿಸ್ಕ್​​​​, ರಿಯರ್​-220ಎಮ್​ಎಮ್​ ಡಿಸ್ಕ್​​ ಬ್ರೆಕ್ಸ್​ ಹೊಂದಿದೆ. ನೂತನ ಬೈಕಿನ ಬೆಲೆ 1,12,800 ರೂ ನಿಗದಿಪಡಿಸಿದೆ. ಬಿಎಸ್​4 ಎಂಜಿನ್​ ಹೊಂದಿರುವ ಹೀರೋ ಎಕ್ಸ್​ಪಲ್ಸ್​ ಬೆಲೆ 95,500 ರೂ. ಆಗಿದ್ದು, ಬಿಎಸ್​6 ಎಕ್ಸ್​ಪಲ್ಸ್​ ಬೆಲೆ 17,300 ರೂ ಹೆಚ್ಚಳವಾಗಿದ್ದನ್ನು ಕಾಣಬಹುದಾಗಿದೆ. ಈ ಬೈಕ್​ ಕೆಂಪು, ಪ್ಯಾಂಥರ್​ ಬ್ಲ್ಯಾಕ್​ ಮತ್ತು ಮ್ಯಾಟಿಯೊ ಶೀಲ್ಡ್​ಗೋಲ್ಡ್​ ಬಣ್ಣದಲ್ಲಿ ಖರೀದಿಸಲು ಸಿಗಲಿದೆ.


    BMW G 310 GS:




    ಲಾಂಗ್​ ರೈಡ್​ಗೆ ಹೇಳಿ ಮಾಡಿಸಿದಂತೆ ಈ ಬೈಕ್​ ಅನ್ನು ಸಿದ್ಧಪಡಿಸಲಾಗಿದೆ. 313ಸಿಸಿ ಎಂಜಿನ್​ ಹೊಂದಿರುವ ಈ ಬೈಕ್​ 28 ಎನ್​ಎಮ್​ ಟಾರ್ಕ್​ ಮತ್ತು 32ಪಿಎಸ್​​ ಪವರ್​ ಉತ್ಪಾದಿಸುತ್ತದೆ. 1 ಲೀಟರ್​ಗೆ 29.26 ಕಿಮೀ ಮೈಲೇಜ್​ ನೀಡುತ್ತದೆ. ಡಬಲ್​ ಡಿಸ್ಕೌಂಟ್​ ಹೊಂದಿರುವ BMW G 310 GS ಟ್ಯೂಬ್​ಲೆಸ್​ ಟಯರ್​ ಹೊಂದಿದೆ. ಅಂದಹಾಗೆಯೇ ಇದರ ಬೆಲೆ 3.25 ಲಕ್ಷರೂ ಇದೆ.


    ಕೆಟಿಎಂ 390 ಅಡ್ವೆಂಚರ್​;


    ಈ ಬೈಕ್​ 373.2 ಸಿಸಿ ಎಂಜಿನ್​ ಹೊಂದಿದ್ದು, 37 ಎನ್​ಎಂ ಟಾರ್ಕ್​ ಮತ್ತು 43.5ಪಿಎಸ್​ ಪವರ್​ ಉತ್ಪಾದಿಸುತ್ತದೆ. 27.90 ಮೈಲೇಜ್​ ನೀಡುವ ಕೆಟಿಎಂ 390 ಅಡ್ವೆಂಚರ್ ಬೈಕ್​​ ಡಬಲ್​ ಡಿಸ್ಕ್​​ ಹೊಂದಿದ್ದು, ಟ್ಯೂಬ್​ಲೆಸ್​ ಟಯರ್​ ಇದರಲ್ಲಿ. ಗ್ರಾಹಕರಿಗಾಗಿ 3.10 ಲಕ್ಷರೂ ಗೆ ಮಾರಾಟ ಮಾಡುತ್ತಿದೆ.


    ಹೋಂಡಾ ಸಂಸ್ಥೆ CB500X


    ಹೋಂಡಾ ಎಲ್ಲಾ ತರಹದ ಬೈಕ್​ಗಳನ್ನು ಉತ್ಪಾದಿಸುತ್ತಾ ಬಂದಿದೆ. ಅದರ ಜೊತೆಗೆ ಅಡ್ವೆಂಚರ್​ ಬೈಕ್​ಗಳನ್ನು ತಯಾರಿಸುತ್ತಿದೆ. ನೂತನ CB500X ಬೈಕ್​ ಅಫ್​ ರೋಡ್​ಗೆ ಹೇಳಿ ಮಾಡಿಸಿದಂತಿದ್ದು, ಸೂಪರ್​​ ಲುಕ್​ನಲ್ಲಿ ಪರಿಚಯಿಸಿದೆ.


    ಹೋಂಡಾ CB500X ಬೈಕ್​  471ಸಿಸಿ ಇದ್ದು,  ಸಂಪೂರ್ಣ ಎಲ್​​ಇಡಿ ಲೈಟ್​ ಅಳವಡಿಸಲಾಗಿದೆ. 181 ಎಂಎಂ ಗ್ರೌಂಡ್​ ಕ್ಲೀಯರೆನ್ಸ್​ ನೀಡಲಾಗಿದೆ. ಜೊತೆಗೆ ಎಬಿಎಸ್​ ಬ್ರೇಕಿಂಗ್​ ಸಿಸ್ಟಂ ನೀಡಲಾಗಿದೆ. ಲಾಂಗ್​ ರೈಡ್​ಗೆ ಹೇಳಿಮಾಡಿಸಿದಂತಿರುವ ಈ ಬೈಕ್​ ಡಾಂಬರ್​ ರಸ್ತೆ ಮತ್ತು ಎತ್ತರದ ಗುಡ್ಡಗಾಡಿನಲ್ಲಿ ಚಲಿಸಲು ಯೋಗ್ಯವಾಗುವಂತೆ ಸಿದ್ಧಪಡಿಸಲಾಗಿದೆ. ಅದಕ್ಕಾಗಿ ಗ್ರೌಂಡ್​ ಕ್ಲೀಯರೆನ್ಸ್​ ಹೆಚ್ಚಿಸಲಾಗಿದೆ.


    ಹೋಂಡಾ CB500X ಬೈಕಿನ ಬೆಲೆ 6.87 ಲಕ್ಷ ರೂ ಆಗಿದೆ. ಆನ್​ರೋಡ್​ಗೆ ಬೆಲೆ 8 ಲಕ್ಷ ರೂ ತಲುಪಲಿದೆ. ಬೈಕ್ ಪ್ರಿಯರಿಗೆ ​ CB500X ಬೈಕ್​ ಇಷ್ಟವಾಗಿದೆ. ಆದರೆ ಬೆಲೆ ವಿಚಾರದಲ್ಲಿ ಕೊಂಚ ಅಸಮಾಧಾನ ಹೊರಹಾಕಿದ್ದಾರೆ.


    CB500X ಬೈಕಿನ ಬೆಲೆಗೆ ಬೆನೆಲ್ಲಿ ಟಿಆರ್​ಕೆ 502 ಕೊಂಡುಕೊಳ್ಳಬಹುದು ಎಂದು ಮಾತನಾಡುತ್ತಿದ್ದಾರೆ. ಇನ್ನು ಕೆಲವರು 7 ಸಾವಿರ ರೂ ಹೆಚ್ಚು ನೀಡಿದರೆ ಕವಾಸಕಿ versys 650 ಖರೀದಿಸಬಹುದಾಗಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹೋಂಡಾದ CB500X ಬೈಕ್​ ಮಾರುಕಟ್ಟೆ ಪ್ರವೇಶಿಸಿದೆ. ಮೇಲ್ನೋಟಕ್ಕೆ ಹೋಂಡಾ ಕಂಪೆನಿ ಸರ್ವಿಸ್ ಮತ್ತು​​ ಸೇವೆಗಳನ್ನು ಗಮನಿಸಿದಾಗ ಉಳಿದೆಲ್ಲ ಬೈಕ್​ಗಳಿಂತ ಕಡಿಮೆ ಇರಲಿದೆ. ಆ ನಿಟ್ಟಿನಲ್ಲಿ ಬೈಕ್​ ಖರೀದಿಸಲು ಯೋಗ್ಯವಾಗಿದೆ.


    Triumph Tiger 900:




    ಅಡ್ವೆಂಚರ್​ ಬೈಕ್​ಗಳಲ್ಲಿ ಒಂದಾದ Triumph Tiger 900 ಬೈಕ್​ 888ಸಿಸಿ ಎಂಜಿನ್​ ಜೊತೆಗೆ 87ಎಮ್​ಎಂ ಟಾರ್ಕ್​ ಮತ್ತು 95.2 ಪಿಎಸ್​ ಪವರ್​ ಉತ್ಪಾದಿಸುತ್ತದೆ. ಡುಯೆಲ್​ ಎಬಿಎಸ್​ ಜೊತೆಗೆ ಡಬಲ್​ ಡಿಸ್ಕ್​​ ಹೊಂದಿರುವ ಬೈಕ್​ ಬೆಲೆ 13.70 ಲಕ್ಷದಿಂದ 15.50 ಲಕ್ಷದವರೆಗೆ ಇದೆ.


    BMW R 1250 GS:




    ಈ ಬೈಕ್​ 1254ಸಿಸಿ ಎಂಜಿನ್ ಹೊಂದಿದ್ದುಮ 143ಎನ್​​ಎಂ ಟಾರ್ಕ್​ ಮತ್ತು 136ಪಿಎಸ್​ ಪವರ್​ ಉತ್ಪಾದಿಸುತ್ತದೆ. 15 ಕಿ.ಮೀ ಮೈಲೇಜ್​ ನೀಡುವ ಈ ಬೈಕ್​ ಡಬಲ್ ಡಿಸ್ಕ್​​ ಜೊತೆಗೆ ಟ್ಯೂಬ್ಲೆಸ್​ ಟಯರ್​ ಹೊಂದಿದೆ. BMW R 1250 GS ಬೈಕ್​ ಬೆಲೆ 20.45 ಲಕ್ಷ ರೂ ಆಗಿದೆ.

    Published by:Harshith AS
    First published: