ಪ್ರಯಾಣ ಮಾಡಬೇಕು ಎಂಬುದು ಬಹುತೇಕರ ಕನಸಾಗಿರುತ್ತದೆ. ಅದರಲ್ಲೂ ಕೆಲವರದ್ದು, ಬೈಕಿನಲ್ಲಿ ಪ್ರಯಾಣ ಮಾಡಬೇಕು ಎಂಬ ಆಸೆಯಿರುತ್ತದೆ. ಹಾಗಾಗಿ ಸೂಕ್ತವಾದ ಮತ್ತು ಲಾಂಗ್ ರೈಡ್ಗೆ ಹೇಳಿ ಮಾಡಿಸಿದಂತಹ ಅಡ್ವೆಂಚರ್ ಬೈಕ್ ಖರೀದಿಸುತ್ತಾರೆ. ಬೆಂಗಳೂರಿನಿಂದ ಹಿಮಾಲಯ, ಲಡಾಕ್ ಪ್ರದೇಶಗಳಿಗೆ ಬೈಕ್ನಲ್ಲಿ ಸಂಚರಿಸುವವರು ಇದ್ದಾರೆ. ಅಷ್ಟೇ ಏಕೆ ವಿದೇಶಗಳಿಗೂ ಹೋಗುವವರಿದ್ದಾರೆ.
ಅನೇಕರಿಗೆ ಬೈಕ್ನಲ್ಲಿ ದೇಶ ಸುತ್ತಬೇಕು ಎಂಬ ಮಹದಾಸೆ ಇರುತ್ತದೆ. ಆದರೆ ಅದಕ್ಕೆ ಸೂಕ್ತವಾದ ಬೈಕ್ ಯಾವುದು ಎಂಬ ಬಗ್ಗೆ ತಿಳಿದಿರುವುದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಅಡ್ವೆಂಚರ್ ಬೈಕ್ಗಳಿವೆ, ಡಾಂಬರು ರಸ್ತೆ ಮತ್ತು ಗುಡ್ಡಗಾಡಿನಲ್ಲೂ ಚಲಾಯಿಸಬಹುದಾದ ಬೈಕ್ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆಪರಿಚಯಿಸುತ್ತಿದೆ. ಅದರಂತೆ ಅತಿ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯವರೆಗೆ ಸಿಗುವ ಅಡ್ವೆಂಚರ್ ಬೈಕ್ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.
ರಾಯಲ್ ಎನ್ಫೀಲ್ಡ್ ಹಿಮಾಲಯ (ಬಿಎಸ್6)
ರಾಯಲ್ ಎನ್ಫೀಲ್ಡ್ ಹಿಮಾಲಯ (ಬಿಎಸ್6) ಎಂಜಿನ್ ಹೊಂದಿರುವ ಬೈಕ್ 411ಸಿಸಿ ಎಂಜಿನ್ ಹೊಂದಿದ್ದು, 24.31ಪಿಎಸ್ ಪವರ್ 32 ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ. ಡಬಲ್ ಡಿಸ್ಕ್ ಹೊಂದಿರುವ ಈ ಬೈಕ್ ಡುಯೆಲ್ ಚಾನೆಲ್ ಹೊಂದಿದೆ. ಅಷ್ಟೇ ಅಲ್ಲದೆ, ಇದರಲ್ಲಿ ಜಿಪಿಎಸ್ ಕನೆಕ್ಷನ್, ಡಿಜಿಟಲ್ ಕಂಪಾಸ್, ಟೆಂಪರೇಚರ್ ರೇಡ್ಔಟ್, ಗೇರ್ ಪೊಷಿಶನ್ ಇಂಡಿಕೇಟರ್, ಫ್ಯುಯೆಲ್ ಗೇಜ್, ಟಚ್ಮೀಟರ್, ಸ್ಪೀಡ್ ಮೀಟರ್ ಇದರಲ್ಲಿದೆ. ಹಿಮಾಲಯ ಬಿಎಸ್6 ಎಂಜಿನ್ ಬೈಕ್ ಬೆಲೆ 2,01,314 ರೂ ಆಗಿದೆ
ಹೀರೋ BS6 ಎಕ್ಸ್ಪಲ್ಸ್ 200T:
ಇತ್ತೀಚೆಗೆ ಬಿಡುಗಡೆಗೊಂಡ ಈ ಬೈಕ್ 17.8 ಹೆಚ್ಪಿ ಪವರ್ ಮತ್ತು 16.15 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 8500 ಆರ್ಪಿಎಂ ಮೇಲೆ 13.3ಕೆಡಬ್ಲ್ಯು/18.1ಪಿಎಸ್ ಗರಿಷ್ಟ ಪವರ್ ಉತ್ಪಾದಿಸುತ್ತದೆ. 16.15 ಎನ್ಎಮ್@ 6500 ಆರ್ಪಿಎಂ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆಫ್ ರೋಡಿಗೆ ಈ ಬೈಕ್ ಹೇಳಿದ ಮಾಡಿಸಿದ ಹಾಗಿದೆ.
ಹೀರೋ ಎಕ್ಸ್ಪಲ್ಸ್ 200ಟಿ ಬೈಕ್ ಸೆಲ್ಫ್ ಹಾಗೂ ಕಿಕ್ ಸ್ಟಾರ್ಟಿಂಗ್ ಹೊಂದಿದೆ. 5 ಸ್ಪೀಡ್ ಕಾಂಸ್ಟಂಟ್ ಮೆಶ್ ಗಿಯರ್ ಬಾಕ್ಸ್ ಇದರಲ್ಲಿದೆ. ಮುಂಭಾಗದಲ್ಲಿ ಆಂಟಿ ಫಿಕ್ಸನ್ಬುಶ್ ಜೊತೆಗೆ ಟೆಲಿಸ್ಕಾಪಿಕ್, ರಿಯರ್-7 ಸ್ಟೆಪ್ ರೈಡರ್ ಅಡೆಸ್ಟೆಬಲ್ ಮೊನೊಶಾಕ್ ಸಸ್ಪೆಂಶನ್ ನೀಡಿದೆ.
ಬೈಕಿನ ಫಂಟ್ ಸಿಂಗಲ್ ಚಾನೆಲ್ ಎಬಿಎಸ್ 276ಎಮ್ಎಮ್ ಡಿಸ್ಕ್, ರಿಯರ್-220ಎಮ್ಎಮ್ ಡಿಸ್ಕ್ ಬ್ರೆಕ್ಸ್ ಹೊಂದಿದೆ. ನೂತನ ಬೈಕಿನ ಬೆಲೆ 1,12,800 ರೂ ನಿಗದಿಪಡಿಸಿದೆ. ಬಿಎಸ್4 ಎಂಜಿನ್ ಹೊಂದಿರುವ ಹೀರೋ ಎಕ್ಸ್ಪಲ್ಸ್ ಬೆಲೆ 95,500 ರೂ. ಆಗಿದ್ದು, ಬಿಎಸ್6 ಎಕ್ಸ್ಪಲ್ಸ್ ಬೆಲೆ 17,300 ರೂ ಹೆಚ್ಚಳವಾಗಿದ್ದನ್ನು ಕಾಣಬಹುದಾಗಿದೆ. ಈ ಬೈಕ್ ಕೆಂಪು, ಪ್ಯಾಂಥರ್ ಬ್ಲ್ಯಾಕ್ ಮತ್ತು ಮ್ಯಾಟಿಯೊ ಶೀಲ್ಡ್ಗೋಲ್ಡ್ ಬಣ್ಣದಲ್ಲಿ ಖರೀದಿಸಲು ಸಿಗಲಿದೆ.
BMW G 310 GS:
ಲಾಂಗ್ ರೈಡ್ಗೆ ಹೇಳಿ ಮಾಡಿಸಿದಂತೆ ಈ ಬೈಕ್ ಅನ್ನು ಸಿದ್ಧಪಡಿಸಲಾಗಿದೆ. 313ಸಿಸಿ ಎಂಜಿನ್ ಹೊಂದಿರುವ ಈ ಬೈಕ್ 28 ಎನ್ಎಮ್ ಟಾರ್ಕ್ ಮತ್ತು 32ಪಿಎಸ್ ಪವರ್ ಉತ್ಪಾದಿಸುತ್ತದೆ. 1 ಲೀಟರ್ಗೆ 29.26 ಕಿಮೀ ಮೈಲೇಜ್ ನೀಡುತ್ತದೆ. ಡಬಲ್ ಡಿಸ್ಕೌಂಟ್ ಹೊಂದಿರುವ BMW G 310 GS ಟ್ಯೂಬ್ಲೆಸ್ ಟಯರ್ ಹೊಂದಿದೆ. ಅಂದಹಾಗೆಯೇ ಇದರ ಬೆಲೆ 3.25 ಲಕ್ಷರೂ ಇದೆ.
ಕೆಟಿಎಂ 390 ಅಡ್ವೆಂಚರ್;
ಈ ಬೈಕ್ 373.2 ಸಿಸಿ ಎಂಜಿನ್ ಹೊಂದಿದ್ದು, 37 ಎನ್ಎಂ ಟಾರ್ಕ್ ಮತ್ತು 43.5ಪಿಎಸ್ ಪವರ್ ಉತ್ಪಾದಿಸುತ್ತದೆ. 27.90 ಮೈಲೇಜ್ ನೀಡುವ ಕೆಟಿಎಂ 390 ಅಡ್ವೆಂಚರ್ ಬೈಕ್ ಡಬಲ್ ಡಿಸ್ಕ್ ಹೊಂದಿದ್ದು, ಟ್ಯೂಬ್ಲೆಸ್ ಟಯರ್ ಇದರಲ್ಲಿ. ಗ್ರಾಹಕರಿಗಾಗಿ 3.10 ಲಕ್ಷರೂ ಗೆ ಮಾರಾಟ ಮಾಡುತ್ತಿದೆ.
ಹೋಂಡಾ ಸಂಸ್ಥೆ CB500X
ಹೋಂಡಾ ಎಲ್ಲಾ ತರಹದ ಬೈಕ್ಗಳನ್ನು ಉತ್ಪಾದಿಸುತ್ತಾ ಬಂದಿದೆ. ಅದರ ಜೊತೆಗೆ ಅಡ್ವೆಂಚರ್ ಬೈಕ್ಗಳನ್ನು ತಯಾರಿಸುತ್ತಿದೆ. ನೂತನ CB500X ಬೈಕ್ ಅಫ್ ರೋಡ್ಗೆ ಹೇಳಿ ಮಾಡಿಸಿದಂತಿದ್ದು, ಸೂಪರ್ ಲುಕ್ನಲ್ಲಿ ಪರಿಚಯಿಸಿದೆ.
ಹೋಂಡಾ CB500X ಬೈಕ್ 471ಸಿಸಿ ಇದ್ದು, ಸಂಪೂರ್ಣ ಎಲ್ಇಡಿ ಲೈಟ್ ಅಳವಡಿಸಲಾಗಿದೆ. 181 ಎಂಎಂ ಗ್ರೌಂಡ್ ಕ್ಲೀಯರೆನ್ಸ್ ನೀಡಲಾಗಿದೆ. ಜೊತೆಗೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ನೀಡಲಾಗಿದೆ. ಲಾಂಗ್ ರೈಡ್ಗೆ ಹೇಳಿಮಾಡಿಸಿದಂತಿರುವ ಈ ಬೈಕ್ ಡಾಂಬರ್ ರಸ್ತೆ ಮತ್ತು ಎತ್ತರದ ಗುಡ್ಡಗಾಡಿನಲ್ಲಿ ಚಲಿಸಲು ಯೋಗ್ಯವಾಗುವಂತೆ ಸಿದ್ಧಪಡಿಸಲಾಗಿದೆ. ಅದಕ್ಕಾಗಿ ಗ್ರೌಂಡ್ ಕ್ಲೀಯರೆನ್ಸ್ ಹೆಚ್ಚಿಸಲಾಗಿದೆ.
ಹೋಂಡಾ CB500X ಬೈಕಿನ ಬೆಲೆ 6.87 ಲಕ್ಷ ರೂ ಆಗಿದೆ. ಆನ್ರೋಡ್ಗೆ ಬೆಲೆ 8 ಲಕ್ಷ ರೂ ತಲುಪಲಿದೆ. ಬೈಕ್ ಪ್ರಿಯರಿಗೆ CB500X ಬೈಕ್ ಇಷ್ಟವಾಗಿದೆ. ಆದರೆ ಬೆಲೆ ವಿಚಾರದಲ್ಲಿ ಕೊಂಚ ಅಸಮಾಧಾನ ಹೊರಹಾಕಿದ್ದಾರೆ.
CB500X ಬೈಕಿನ ಬೆಲೆಗೆ ಬೆನೆಲ್ಲಿ ಟಿಆರ್ಕೆ 502 ಕೊಂಡುಕೊಳ್ಳಬಹುದು ಎಂದು ಮಾತನಾಡುತ್ತಿದ್ದಾರೆ. ಇನ್ನು ಕೆಲವರು 7 ಸಾವಿರ ರೂ ಹೆಚ್ಚು ನೀಡಿದರೆ ಕವಾಸಕಿ versys 650 ಖರೀದಿಸಬಹುದಾಗಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹೋಂಡಾದ CB500X ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಮೇಲ್ನೋಟಕ್ಕೆ ಹೋಂಡಾ ಕಂಪೆನಿ ಸರ್ವಿಸ್ ಮತ್ತು ಸೇವೆಗಳನ್ನು ಗಮನಿಸಿದಾಗ ಉಳಿದೆಲ್ಲ ಬೈಕ್ಗಳಿಂತ ಕಡಿಮೆ ಇರಲಿದೆ. ಆ ನಿಟ್ಟಿನಲ್ಲಿ ಬೈಕ್ ಖರೀದಿಸಲು ಯೋಗ್ಯವಾಗಿದೆ.
Triumph Tiger 900:
ಅಡ್ವೆಂಚರ್ ಬೈಕ್ಗಳಲ್ಲಿ ಒಂದಾದ Triumph Tiger 900 ಬೈಕ್ 888ಸಿಸಿ ಎಂಜಿನ್ ಜೊತೆಗೆ 87ಎಮ್ಎಂ ಟಾರ್ಕ್ ಮತ್ತು 95.2 ಪಿಎಸ್ ಪವರ್ ಉತ್ಪಾದಿಸುತ್ತದೆ. ಡುಯೆಲ್ ಎಬಿಎಸ್ ಜೊತೆಗೆ ಡಬಲ್ ಡಿಸ್ಕ್ ಹೊಂದಿರುವ ಬೈಕ್ ಬೆಲೆ 13.70 ಲಕ್ಷದಿಂದ 15.50 ಲಕ್ಷದವರೆಗೆ ಇದೆ.
BMW R 1250 GS:
ಈ ಬೈಕ್ 1254ಸಿಸಿ ಎಂಜಿನ್ ಹೊಂದಿದ್ದುಮ 143ಎನ್ಎಂ ಟಾರ್ಕ್ ಮತ್ತು 136ಪಿಎಸ್ ಪವರ್ ಉತ್ಪಾದಿಸುತ್ತದೆ. 15 ಕಿ.ಮೀ ಮೈಲೇಜ್ ನೀಡುವ ಈ ಬೈಕ್ ಡಬಲ್ ಡಿಸ್ಕ್ ಜೊತೆಗೆ ಟ್ಯೂಬ್ಲೆಸ್ ಟಯರ್ ಹೊಂದಿದೆ. BMW R 1250 GS ಬೈಕ್ ಬೆಲೆ 20.45 ಲಕ್ಷ ರೂ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ