ಒಂದಕೊಂದು ವಿಭಿನ್ನವಾದ ಹಾಗೂ ಆಕರ್ಷಕವಾದ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಧಾವಿಸುತ್ತಿವೆ. ಗ್ರಾಹಕರ ಗಮನ ಸೆಳೆಯುವ ಮೂಲಕ ಕೊಂಡುಕೊಳ್ಳುವಂತೆ ಮಾಡುತ್ತಿದೆ. ಒಪ್ಪೊ, ಸ್ಯಾಮ್ಸಂಗ್, ಒನ್ಪ್ಲಸ್, ರಿಯಲ್ಮಿ ಹೀಗೆ ನಾನಾ ಕಂಪನಿಗಳು 5ಜಿ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದ್ದು, ಅದರ ಜತೆಗೆ ಅಲ್ಟ್ರಾ ಫಾಸ್ಟ್ ಸಾಮರ್ಥ್ಯದಲ್ಲಿ ಬಿಡುಗಡೆ ಮಾಡುತ್ತಿದೆ. ಅದರಂತೆ ಇದೀಗ ಗ್ರಾಹಕರು ಖರೀದಿಸಬಹುದಾದ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ವಿವರಗಳು ಇಲ್ಲಿದೆ.
Moto G60: ಮೊಟೊರೊಲಾ ಮೊಟೊ ಜಿ60 ಸ್ಪೋರ್ಟ್ಸ್ 6.8 ಇಂಚಿನ ಫುಲ್ ಹೆಚ್ಡಿ+ ಐಪಿಎಸ್ ಡಿಸ್ಪ್ಲೇ ಜತೆಗೆ 120ಹೆಚ್ಝೆಡ್ ರಿಫ್ರೆಶ್ ರೇಟ್ ಒಳಗೊಂಡಿದೆ. ಆ್ಯಂಡ್ರಾಯ್ಡ್ 11ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ಫೋನ್ ಒಕ್ಟಾಕೋರ್ ಕ್ವಾಲ್ಕ್ಯಾಮ್ ಸ್ನಾಪ್ಡ್ರಾಗನ್ 732 ಎಸ್ಒಸಿ ಪ್ರೊಸೆಸರ್ ಒಳಗೊಂಡಿದೆ. ಜತೆಗೆ 108 ಮೆಗಾಫಿಕ್ಸೆಲ್ ಪ್ರೈಮರಿ 6 ಸಾವಿರ ಎಮ್ಎಹೆಚ್ ಬ್ಯಾರಿ ಇದರಲ್ಲಿದ್ದು, ಟರ್ಬೊ ಪವರ್ 20 ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ.ಇದರ ಬೆಲೆ 18 ಸಾವಿರ ರೂ ಆಗಿದೆ.
iQ Z 3 5G: ಈ ಸ್ಮಾರ್ಟ್ಫೋನ್ 6.58 ಇಂಚಿನ ಫೂಲ್ ಹೆಚ್ಡಿ ಎಲ್ಸಿಡಿ ಡಿಸ್ಪ್ಲೇ ಜತೆಗೆ ಒಕ್ಟಾ ಕೋರ್-ಕ್ವಾಲ್ಕ್ಯಾಮ್ ಸ್ನಾಪ್ಡ್ರಾಗನ್ 768ಜಿ ಪ್ರೊಸೆಸರ್ ಹೊಂದಿದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 64 ಮೆಗಾಫಿಕ್ಸೆಲ್ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ. ಇದರ ಬೆಲೆ 19,990 ರೂ ಆಗಿದೆ.
Realme 8 5G: ಈ ಸ್ಮಾರ್ಟ್ಫೋನ್ ಕೇವಲ 15 ಸಾವಿರಕ್ಕೆ ಗ್ರಾಹಕರ ಖರೀದಿಗೆ ಸಿಗುತ್ತಿದೆ. 6.5 ಇಂಚಿನ ಫುಲ್ ಹೆಚ್ಡಿ+ ಡಿಸ್ಪ್ಲೇ ಜತೆಗೆ ಮೀಡಿಯಾಟೆಕ್ ಡೈಮೆನ್ಸಿಟಿ 700 ಎಸ್ಒಸಿ ಮತ್ತು 48 ಮೆಗಾಫಿಕ್ಸೆಲ್ ಪ್ರೈಮರಿ ಕ್ಯಾಮೆರಾ ಅಳವಡಿಸಿದೆ, 5 ಸಾವಿರ ಎಮ್ಎಹೆಚ್ ಬ್ಯಾಟರಿ ಒಳಗೊಂಡಿದೆ.
Redmi Note 10T 5G: ಶಿಯೋಮಿ ಉಪ ಬ್ರಾಂಡ್ ಆಗಿರುವ ರೆಡ್ಮಿ ಇತ್ತೀಚೆಗೆ 5ಜಿ ನೋಟ್ ಸಿರೀಸ್ ಅನ್ನು ಪರಿಚಯಿಸಿತು. ಅದರಲ್ಲಿ ಪರಿಚಯಿಸಿದೆ ರೆಡ್ಮಿ ನೋಟ್ 10ಟಿ 5ಜಿ ಸ್ಮಾಟ್ಫೋನ್ 6.5 ಇಂಚಿನ ಫುಲ್ ಹೆಚ್ಡಿ+ ಸ್ಕ್ರೀನ್ ಜತೆಗೆ 90ಹೆಚ್ಝೆಡ್ ರಿಫ್ರೆಶ್ ರೇಟ್ ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 700 ಎಸ್ಒಸಿ ಮತ್ತು 48 ಮೆಗಾಫಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದರಲ್ಲಿದೆ. ದೀರ್ಘ ಕಾಲದ ಬಾಳಿಗೆಗಾಗಿ 5 ಸಾವಿರ ಎಮ್ಎಹೆಚ್ ಬ್ಯಾಟರಿ ಜತೆಗೆ 18 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. ಇದರ ಬೆಲೆ 13,999 ರೂ ಆಗಿದೆ.
POCO M3 5G: 6.53 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 700 ಎಸ್ಒಸಿ ಒಳಗೊಂಡಿದೆ. 6GB RAM ಹೊಂದಿರುವ ಈ ಸ್ಮಾರ್ಟ್ಫೋನ್ 48 ಮೆಗಾಫಿಕ್ಸೆಲ್ ತ್ರಿವಳಿ ಕ್ಯಾಮೆರಾ ಅಳವಡಿಸಿದೆ. 5 ಸಾವಿರ ಎಮ್ಎಹೆಚ್ ಬ್ಯಾಟರಿ ಇದರಲ್ಲಿ. ಪೊಕೊ ಎಮ್3 5ಜಿ ಬೆಲೆ 13,999 ರೂ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ