ದೇಶಿಯ ಮಾರುಕಟ್ಟೆಗೆ ಒಂದಕ್ಕಿಂತ ಒಂದು ವಿಶೇಷತೆಯಿಂದ ಕೂಡಿದ ಸ್ಮಾರ್ಟ್ಫೋನ್ಗಳು ಧಾವಿಸುತ್ತಿರುತ್ತದೆ. ಕಡಿಮೆ ಬೆಲೆಯಿಂದ ಹಿಡಿದು ಅಧಿಕ ಬೆಲೆ ಸ್ಮಾರ್ಟ್ಫೋನ್ಗಳು ಬರುತ್ತಿರುತ್ತವೆ. ಅದರಂತೆ ಸದ್ಯ 5ಜಿ ಸ್ಮಾರ್ಟ್ಫೋನ್ಗಳ ಹವಾ ಜೋರಾಗಿದೆ. ನಾನಾ ವಿಶೇಷತೆಯನ್ನು ಹೊಂದಿರುವ ಬಜೆಟ್ ಬೆಲೆಯ 5ಜಿ ಸ್ಮಾರ್ಟ್ಫೊನ್ಗಳು ಮಾರುಕಟ್ಟೆಯಲ್ಲಿದೆ. ಹಾಗಾಗಿ ಗ್ರಾಹಕರಿಗೆ ಕೈಗೆಕುವ ದರದಲ್ಲಿ ಸಿಗವ 5ಜಿ ಸ್ಮಾರ್ಟ್ಫೋನ್ಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.
Realme narzo 30 proರಿಯಲ್ಮಿ ನಾರ್ಜೋ 30 ಪ್ರೊ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ನೂತನ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಧಾವಿಸಿ 2 ದಿನ ಕಳೆದಿದೆ. ಈಗಾಗಲೇ ಗ್ರಾಹಕರಿಗೆ ಮೆಚ್ಚುಗೆಯಾಗಿದೆ. ಅಂದಹಾಗೆಯೇ, ರಿಯಲ್ಮಿ ನಾರ್ಜೋ 30 ಪ್ರೊ ಸ್ಮಾರ್ಟ್ಫೋನ್ 5ಜಿ ಸ್ಮಾರ್ಟ್ಫೋನ್ ಆಗಿದ್ದು, 6,5 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಡಿಮೆನ್ಸಿಟಿ 800ಯು ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇನ್ನು ಸ್ಮಾರ್ಟ್ಫೋನ್ ಮುಂಭಾಗದಲ್ಲಿ 16 ಮೆಗಾಫಿಕ್ಸೆಲ್ ಡ್ಯುಯೆಲ್ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್ ಕ್ಯಾಮೆರಾ ಇದರಲ್ಲಿದೆ. ರಿಯಲ್ಮಿ ನಾರ್ಜೋ 30 ಪ್ರೊ ಸ್ಮಾರ್ಟ್ಫೋನ್ ಬೆಲೆ 16,999 ರೂ ಆಗಿದ್ದು, 6 ಸಾವಿರ ಎಮ್ಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಮದಿದೆ.
Xiaomi mi 10i
ಶಿಯೋಮಿ ಮಿ 10ಐ ಸ್ಮಾರ್ಟ್ಫೋನ್ 5ಜಿ ನೆಟ್ವರ್ಕ್ನಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್ಫೋನ್ 6.67 ಇಂಚಿನ ಫುಲ್ ಹೆಚ್ಡಿ+ ಡಿಸ್ಪ್ಲೇ ಜೊತೆಗೆ ಒಕ್ಟಾಕೋರ್ ಸ್ನಾಪ್ಡ್ರಾಗನ್ 750ಜಿ ಎಸ್ಒಸಿ ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ಆ್ಯಂಡ್ರೋನೊ 619 ಬೆಂಬಲ ಪಡೆದಿದೆ.
ಅಂದಹಾಗೆಯೇ ಈ ಸ್ಮಾರ್ಟ್ಫೋನ್ 6ಜಿಬಿ+ 64ಜಿಬಿ ಮತ್ತು 128ಜಿಬಿ ಸ್ಟೊರೇಜ್ ಆಯ್ಕೆಯಲ್ಲಿ ಪರಿಚಯಿಸಿದೆ. ಜೊತೆಗೆ 8ಜಿಬಿ ರ್ಯಾಮ್+ 128ಜಿಬಿ ಆಯ್ಕೆಯಲ್ಲಿ ನೀಡುತ್ತಿದೆ. ಶಿಯೋಮಿ ಮಿ 10ಐ ಸ್ಮಾರ್ಟ್ಫೋನ್ 5ಜಿ ಬೆಲೆ 20,999 ರೂ ನಿಂದ ಪ್ರಾರಂಬವಾಗಿದೆ.
Motorola G 5G
ಮೊಟೊರೊಲಾ G 5G ಹೆಸರಿನ ಕ್ವಾಲ್ಕ್ಯಾಂ ಸ್ನಾಪ್ಡ್ರಾಗನ್ 750G ಚಿಪ್ಸೆಟ್ ಅಳವಡಿಸಿಕೊಂಡಿದ್ದು, 5 ಸಾವಿರ mAh ಬ್ಯಾಟರಿಯನ್ನು ಹೊಂದಿದೆ. ತ್ರಿವಳಿ ಕ್ಯಾಮೆರಾವಿರುವ ನೂತನ ಸ್ಮಾರ್ಟ್ಫೋನ್ ಬೆಲೆಗೆ ತಕ್ಕಂತೆ ಫೀಚರ್ ಇದರಲ್ಲಿ ನೀಡಲಾಗಿದೆ.
ಮೊಟೊರೊಲಾ G 5G ಸ್ಮಾರ್ಟ್ಫೊನ್ 6.7 ಇಂಚಿನ ಫುಲ್ಹೆಚ್ಡಿ+ ಡಿಸ್ಪ್ಲೇ ಜೊತೆಗೆ 394ಪಿಪಿಐ ಪಿಕ್ಸೆಲ್ ಡೆನ್ಸಿಟಿ ಹೊಂದಿದ್ದು, ಕ್ವಾಲ್ಕ್ಯಾಂ ಸ್ನಾಪ್ಡ್ರಾಗನ್ 750ಜಿ ಚಿಪ್ಸೆಟ್ ಅಳವಡಿಸಲಾಗಿದೆ. 4GB RAM ಮತ್ತು 64GB ಸ್ಟೊರೇಜ್ ಆಯ್ಕೆಯಲ್ಲಿ ಪರಿಚಯಿಸಿದೆ. ಇನ್ನು 1TB ತನಕ ಮೆಎರೊಯನ್ನು ವೃದ್ಧಿಸುವ ಆಯ್ಕೆಯನ್ನು ಇದರಲ್ಲಿ ನೀಡಿದೆ.
ಮೊಟೊರೊಲಾ G 5G ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್ ಕ್ಯಾಮೆರಾ, 8 ಮೆಗಾಫಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಜೊತೆಗೆ ವೈಡ್ ಆ್ಯಂಗಲ್ ಶೂಟರ್, 2 ಮೆಗಾಫಿಕ್ಸೆಲ್ ಮ್ಯಾಕ್ರೊ ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.
ಇನ್ನು 5 ಸಾವಿರ mAh ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್ಫೋನ್ 20 ವ್ಯಾಟ್ ಚಾರ್ಜಿಂಗ್ ಸಪೋರ್ಟ್ ಇದರಲ್ಲಿ ನೀಡಲಾಗಿದೆ. 5G, ಎನ್ಎಫ್ಸಿ, ಬ್ಲೂಟೂತ್ 5.1, ವೈ-ಫೈ, ಯುಎಸ್ಬಿ ಟೈಪ್ ಸಿ ಪೊರ್ಟ್, ಜಿಪಿಎಸ್ ಆಯ್ಕೆ ಇದರಲ್ಲಿದೆ. ಈ ಸ್ಮಾರ್ಟ್ಫೋನ್ ಬೆಲೆ 19,999 ರೂ ಆಗಿದೆ.
Oneplus Nord
ಒನ್ಪ್ಲಸ್ ನೋರ್ಡ್ ಸ್ಮಾರ್ಟ್ಫೊನ್ 6.5 ಇಂಚಿನ ಡಿಸ್ಪ್ಳೆ ಹೊಂದಿದ್ದು, ಸ್ನಾಪ್ಡ್ರಾಗ್ಯನ್ 765ಜಿ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ಫೊನ್ನಲ್ಲಿ 48 ಮೆಗಾಫಿಕ್ಸೆಲ್, 8 ಮೆಗಾಫಿಕ್ಸೆಲ್ ಅಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್ ಮತ್ತು 8 ಮೆಗಾಫಿಕ್ಸೆಲ್ ಹೊಂದಿದೆ. ಮುಂಬಾಗದಲ್ಲಿ ಎರಡು ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ ಬೆಲೆ 27,999 ರೂ ಆಗಿದೆ