ಬೆಂಗಳೂರು ರಸ್ತೆಯಲ್ಲಿ ವಿಶ್ವದ ಅತ್ಯಂತ ಉದ್ದನೆಯ ಬೈಕ್​


Updated:July 13, 2018, 4:31 PM IST
ಬೆಂಗಳೂರು ರಸ್ತೆಯಲ್ಲಿ ವಿಶ್ವದ ಅತ್ಯಂತ ಉದ್ದನೆಯ ಬೈಕ್​

Updated: July 13, 2018, 4:31 PM IST
ನ್ಯೂಸ್​ 18 ಕನ್ನಡ 

ಶರತ್  ಶರ್ಮ ಕಲಗಾರು

ಬೆಂಗಳೂರು: ನೀವು ಇಂಗ್ಲಿಷ್​ನ ಗೋಸ್ಟ್​ ರೈಡರ್​ ಅಥವಾ ಟರ್ಮಿನೇಟರ್​ ಸಿನಿಮಾ ಬರುವ ಬೈಕ್​ ನೋಡಿ ಅದರ ಫ್ಯಾನ್​ ಆಗಿದ್ದರೆ, ಇದೇ ಮಾದರಿಯ ಬೈಕ್​ವೊಂದನ್ನು ಬೆಂಗಳೂರು ಮೂಲದ ಆಂತರಿಕ ವಿನ್ಯಾಸಕ 13 ಅಡಿ ಉದ್ದದ ಬೈಕ್​ ನಿರ್ಮಿಸಿದ್ದಾರೆ.

ನಾಗರಬಾವಿ ಮೂಲದ ಝಾಕಿರ್​ ಖಾನ್​, ಈ ಬೈಕ್​ನ್ನು ನಿರ್ಮಿಸಿದ್ದು, ಬೆಂಗಳೂರಿನಂತಹ ನಗರದಲ್ಲಿ ಈ ಬೈಕ್​ ಓಡಿಸುವುದು ತುಸು ಕಷ್ಟವೇ ಆಗಿದ್ದರು ಝಾಕಿರ್​ಗೆ ಮಾತ್ರ ಇದ್ಯಾವುದರ ಚಿಂತೆಯಿಲ್ಲ. ಏಕೆಂದರೆ ಈ ಹಿಂದೆ 10 ಹಾಗೂ 11 ಅಡಿ ಉದ್ದದ ಬೈಕ್​ ನಿರ್ಮಿಸಿ ಅದರಲ್ಲೇ ಓಡಾಡಿ ಫೇಮಸ್​ ಆಗಿದ್ದರು.ಚಾಪರ್​ ಬೈಕ್​ ಎಂದು ಈ ಬೈಕ್​ಗೆ ಹೆಸರಿಟ್ಟಿರುವ ಝಾಕಿರ್​ ಇದೇ ಶನಿವಾರ ಹಾಗು ಭಾನುವಾರ ಜೆಪಿ ನಗರದ ದುರ್ಗಾ ಪರಮೇಶ್ವರಿ ಬಿಡಿಎ ಮೈದಾನದಲ್ಲಿ ಸಾರ್ವಜನಿಕರ ಪ್ರದರ್ಶನ ನೀಡಲಿದ್ದಾರೆ.

ಈ ಕುರಿತು ನ್ಯೂಸ್​ 18ನೊಂದಿಗೆ ಮಾತನಾಡಿದ ಝಾಕಿರ್​, 5.5 ಅಡಿ ಅಗಲ, ಮುಂಬಾಗದಲ್ಲಿ ಆರು ಅಡಿ ಉದ್ದದ ಫೋರ್ಕ್​ ಹಾಗೂ ಎರಡು ಸೈಲೆನ್ಸರ್​ ಈ ಬೈಕ್​ನಲ್ಲಿ ಅಳವಡಿಸಲಾಗಿದೆ. 220ಸಿಸಿ ಎಂಜಿನ್​ ಸಾಮರ್ಥ್ಯದ ಈ ಬೈಕ್​ನಲ್ಲಿ ಕನಿಷ್ಟ 120ಕಿ.ಮೀ ವೇಗದಲ್ಲಿ ಹೋಗಬಹುದಂತೆ. ಕೇವಲ ಓರ್ವ ವ್ಯಕ್ತಿ ಕುಳಿತುಕೊಳ್ಳಬಹುದಾದ ವ್ಯವಸ್ಥೆಯಿದೆ. ಬೈಕಿನ ಹಿಂಭಾಗದ ಚಕ್ರಕ್ಕೆ ಮಿನಿ ಟ್ರಕ್ಕಿನ ಟೈರ್‌ ಬಳಸಿದ್ದಾರೆ. ಒಟ್ಟಾರೆ ಈ ಬೈಕ್​ ನಿರ್ಮಾಣಕ್ಕೆ 7.5 ಲಕ್ಷ ನಿರ್ಮಿಸಲು ಒಟ್ಟಾರೆ 7.5 ಲಕ್ಷ ಕರ್ಚು ತಗುಲಿದೆ ಎಂದು ಹೇಳಿದ್ದಾರೆ.
Loading...ಈ ಬೈಕ್​ ನಿರ್ಮಾಣಕ್ಕೆ ಗೋಸ್ಟ್​ ರೈಡರ್​, ಟರ್ಮಿನೇಟರ್​ನಂತಹ ಬೈಕ್​ಗಳೇ ಸ್ಪೂರ್ತಿಯಂತೆ, ''ಈ ಬೈಕ್​ ನಿರ್ಮಾಣದ ಸಂದರ್ಭದಲ್ಲಿ ಹಲವಾರು ಬಾರಿ ವಿಫಲನಾದರೂ ಮರಳಿ ಯತ್ನ ಮಾಡಿ ಈ ಇದನ್ನು ಸಿದ್ಧ ಪಡಿಸಿದ್ದೇನೆ. ತಂದೆ ಶಫಿ ಉಲ್ಲಾ ಖಾನ್​, ಅಣ್ಣ ಮಿಸ್ಬಾ ಮುಖರಮ್​ ಕೂಡಾ ನನ್ನ ಬೆಂಬಲಕ್ಕೆ ನಿಂತರು ಎಂದು ಖಾನ್​ ತಮ್ಮ ಬೈಕ್​ ನಿರ್ಮಾಣದ ದಿನಗಳನ್ನು ನೆನೆಸಿಕೊಳ್ಳುತ್ತಾರೆ.ಇವರ ಬಳಿ ವಿಂಟೇಜ್​ ಬೈಕ್​ ಸೇರಿದಂತೆ ಹಲವು ರೀತಿಯ ಬೈಕ್​ಗಳು ಗ್ಯಾರೇಜ್​ನಲ್ಲಿದೆಯಂತೆ, ಆದರೆ ಈ ಬೈಕ್​ ನಿರ್ಮಾಣಕ್ಕಾಗಿ ಹಳೇ ಬೈಕ್​ನ್ನು ಮಾರಿರುವುದಾಗಿ ಹೇಳುತ್ತಾರೆ ಝಾಕಿರ್​.
First published:July 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...