news18-kannada Updated:January 23, 2021, 1:59 PM IST
Beeper
ಹೊಸ ವಿನ್ಯಾಸ, ಫೀಚರ್ಸ್ ಅಳವಡಿಸಕೊಂಡ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದು ಒಂದೆಡೆಯಾದರೆ. ಇತ್ತ ಅಪ್ಲಿಕೇಶನ್ಗಳಲ್ಲೂ ವ್ಯಾಪಕ ಬದಲಾವಣೆ ತರಲಾಗುತ್ತಿದೆ. ದಿನದಿಂದ ದಿನಕ್ಕೆ ಅಪ್ಲಿಕೇಶನ್ಗಳು ನಾವಿನ್ಯತೆ ಹೊಂದಿ ಜನಪ್ರಿಯ ವಾಗುತ್ತಿದೆ. ಮಾತ್ರವಲ್ಲದೆ, ಮೆಸೇಜಿಂಗ್ ಆ್ಯಪ್ಗಳ ಸಂಖ್ಯೆ ಕೂಡ ವೃದ್ಧಿಸುತ್ತಿದೆ. ಇದರ ಪರಿಣಾಮ ಸ್ಮಾರ್ಟ್ಫೋನ್ಗಳ ಸ್ಟೊರೇಜ್ ಸಂಗ್ರಹ ಸಾಮರ್ಥ್ಯ ಪ್ರಮುಖ ಸಮಸ್ಯೆಯಾಗಿ ಕಂಡುಬರುತ್ತಿದೆ. ಹಾಗಾಗಿ ಇಂತಹ ಸಮಸ್ಯೆಗಳನ್ನು ಮನಗಂಡು ಕಂಪನಿಯೊಂದು ಬೀಪರ್ ಎಂಬ ಅಪ್ಲಿಕೇಶನ್ ಸಿದ್ಧಪಡಿಸಿದೆ. ಇದರಲ್ಲಿ 13 ಜನಪ್ರಿಯ ಆ್ಯಪ್ ಅನ್ನು ನೀಡುತ್ತಿದೆ.
ಸದ್ಯ ಅನೇಕರು ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಂ, ಸಿಗ್ನಲ್, ಟೆಲಿಗ್ರಾಂ ಸೇರಿದಂತೆ ಅನೇಕ ಆ್ಯಪ್ಗಳನ್ನು ಒಂದೊಂದೆಯಾಗಿ ಡೌನ್ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ. ಆದರೆ ಬೀಪರ್ ಆ್ಯಪ್ ಒಂದನ್ನು ಡೌನ್ಲೋಡ್ ಮಾಡಿದರೆ ಸಾಕು ಸುಮಾರು 13 ಆ್ಯಪ್ಗಳು ಇದರಲ್ಲಿ ಬಳಕೆಗೆ ಸಿಗುತ್ತದೆ. ಅಂದಹಾಗೆಯೇ ವಾಟ್ಸ್ಆ್ಯಪ್, ಇನ್ಸ್ಟಾಗ್ರಾ ಸೇರಿದಂತೆ ನಾನಾ ಆ್ಯಪ್ಗಳು ಬೀಪರ್ ಅಪ್ಲಿಕೇಶನ್ನಲ್ಲಿದೆ.
ಬೀಪರ್ ಆ್ಯಪ್ ಪ್ಲೇಸ್ಟೋರ್ ಮತ್ತು ಆ್ಯಪಲ್ ಸ್ಟೋರ್ನಲ್ಲಿ ಲಭ್ಯವಿದೆ. ಪೆಬಲ್ ಸಿಇಒ ಮತ್ತು ಸಹಸಂಸ್ಥಾಪಕ ಎರಿಕ್ ಮಿಗಿಕೋವಸ್ಕಿ ಈ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ಬೀಪರ್ ಆ್ಯಪ್ ಮೂಲಕ ಐ-ಮೆಸೇಜ್, ವಾಟ್ಸ್ಆ್ಯಪ್ ಸೇರಿದಂತೆ 13 ಆ್ಯಪ್ಲಿಕೇಶನ್ಗಳು ಇದರಲ್ಲಿದೆ. ಬಳಕೆದಾರರು ಬೀಪರ್ ಅನ್ನು ಡೌನ್ಲೋಡ್ ಮಾಡಿಕೊಂಡು ಉಳಿದೆಲ್ಲಾ ಅಪ್ಲಿಕೇಶನ್ ಅನ್ನು ಬಳಸಬಹುದು ಎಂದು ತಿಳಿಸಿದ್ದಾರೆ.
ಅಂದಹಾಗೆಯೇ ಬೀಪರ್ ಅಪ್ಲಿಕೇಶನ್ ಚಂದಾದಾರಿಕೆಯ ಆ್ಯಪ್ ಆಗಿದೆ. ಹಾಗಾಗಿ ಬಳಕೆದಾರರು ಹಣವನ್ನು ನೀಡಿ ಡೌನ್ಲೋಡ್ ಮಾಡಿಕೊಂಡು ಬಳಸಬಹುದಾಗಿದೆ.
ಇನ್ನು ಬೀಪರ್ ಅಪ್ಲಿಕೇಶನ್ನಲ್ಲಿ ವಾಟ್ಸ್ಆ್ಯಪ್, ಫೇಸ್ಬುಕ್, ಟೆಲಿಗ್ರಾಂ, ಟ್ವಿಟ್ಟರ್, ಸ್ಲ್ಯಾಕ್, ಹ್ಯಾಂಗ್ಔಟ್, ಇನ್ಸ್ಟಾಗ್ರಾಂ, ಸ್ಕೈಪ್, ಸಿಗ್ನಲ್,ಐಆರ್ಸಿ, ಮ್ಯಾಟ್ರಿಕ್ಸ್, ಡಿಸ್ ಕಾರ್ಡ್, ಆ್ಯಂಡ್ರಾಯ್ಡ್ ಮೆಸೇಜ್ ಅಪ್ಲಿಕೇಶನ್ ಇದರಲ್ಲಿದೆ.
ಕಳೆದ ಎರಡು ವರ್ಷಗಳಿಂದ ಬೀಪರ್ ಆ್ಯಪ್ ಅನ್ನು ಪರೀಕ್ಷೆಗೆ ಒಳಪಡಿಸಿತ್ತು. ಆದರೀಗ ಎಲ್ಲಾ ಬಳಕೆದಾರರಿಗೆ ಸಿಗುವಂತೆ ವಿನ್ಯಾಸಗೊಳಿಸಿ ಬಿಡುಗಡೆ ಮಾಡಿದ್ದಾರೆ.
Published by:
Harshith AS
First published:
January 23, 2021, 1:59 PM IST