ಸ್ಮಾಟ್​ಫೋನ್​​ ಅವಾಂತರ; ಬೆಂಗಳೂರು ಮಕ್ಕಳಲ್ಲಿ ಪ್ರಾರಂಭವಾಗಿದೆ ಹೊಸ ಮಾನಸಿಕ ಸಮಸ್ಯೆ

ಮೊಬೈಲ್ ನೆಟ್​​ವರ್ಕ್​ಎಷ್ಟು ಚೆನ್ನಾಗಿರುತ್ತೋ ಅದನ್ನು ಬಳಸೋ ಜನರ ಮನಸ್ಥಿತಿನೂ ಅಷ್ಟೇ ಚೆನ್ನಾಗಿರುತ್ತೆ. ನೆಟ್​​ವರ್ಕ್​ ಸ್ಲೋ ಆದರೆ, ಇವರ ತಲೆ ಕೆಟ್ಟುಹೋಗುತ್ತದೆ.

news18-kannada
Updated:September 10, 2019, 9:23 AM IST
ಸ್ಮಾಟ್​ಫೋನ್​​ ಅವಾಂತರ; ಬೆಂಗಳೂರು ಮಕ್ಕಳಲ್ಲಿ ಪ್ರಾರಂಭವಾಗಿದೆ ಹೊಸ ಮಾನಸಿಕ ಸಮಸ್ಯೆ
ಪ್ರಾತಿನಿಧಿಕ ಚಿತ್ರ
  • Share this:
ಸ್ಮಾರ್ಟ್​ಫೋನ್​​ನಲ್ಲಿ  ಯಾವುದಾದರು ಫೋಟೋ ಅಥವಾ ವಿಡಿಯೋ ಡೌನ್ಲೋಡ್ ಆಗೋಕೆ ಟೈಮ್  ಆಗ್ತಿದೆ ಅಂದರೆ ಅದೆಷ್ಟು ಕಿರಿಕಿರಿ ಆಗುತ್ತಲ್ವಾ? ನೆಟ್​​ವರ್ಕ್​ ಕಂಪೆನಿಯವರನ್ನು  ಬಾಯಿಗೆ ಬಂದಹಾಗೆ ಬೈಕೊಂಡಿರ್ತೀರಾ... ಇದು ನಿಮ್ಮೊಬ್ಬರದ್ದೇ ಸಮಸ್ಯೆಯಲ್ಲ... ಹೆಚ್ಚಾಗಿ ಮಕ್ಕಳು ಮತ್ತು ಟೀನೇಜರ್ಸ್ ಈ ಸ್ಲೋ ನೆಟ್​​​​​ವರ್ಕ್​ ಸಮಸ್ಯೆಯಿಂದ ಕಂಗೆಟ್ಟಿದ್ದಾರಂತೆ... ಎಷ್ಟರಮಟ್ಟಿಗೆ ಅಂದರೆ ಸಿಕ್ಕಾಪಟ್ಟೆ ಅಗ್ರೆಸಿವ್ ಆಗಿ ಬದಲಾಗೋ ಇವರನ್ನ ಇವರ ತಂದೆ- ತಾಯಿ ಬೇರೆ ದಾರಿ ಕಾಣದೇ ನಿಮ್ಹಾನ್ಸ್ ಕರೆತರ್ತಿದ್ದಾರೆ... ಸ್ಲೋ ಇಂಟರ್​​ನೆಟ್​​ನಿಂದಲೂ  ಮಾನಸಿಕ ಸಮಸ್ಯೆ ಎದುರಿಸುತ್ತಿರುವವರ ವಿಚಿತ್ರ ವಿಚಾರ ಇದಾಗಿದೆ.

ಹೌದು, ಮೊಬೈಲ್ ನೆಟ್​​​ವರ್ಕ್​ ಎಷ್ಟು  ಚೆನ್ನಾಗಿರುತ್ತೋ ಅದನ್ನು ಬಳಸೋ ಜನರ ಮನಸ್ಥಿತಿನೂ ಅಷ್ಟೇ ಚೆನ್ನಾಗಿರುತ್ತೆ. ನೆಟ್​ವರ್ಕ್​ ಸ್ಲೋ ಆದರೆ, ಇವರ ತಲೆ ಕೆಟ್ಟುಹೋಗುತ್ತದೆ. ಮನೆಮಂದಿಯ ಮೇಲೆ ಕೂಗಾಡೋಕೆ ಶುರುಮಾಡ್ತಾರೆ. ಸಣ್ಣ ಸಣ್ಣ ವಿಚಾರಕ್ಕೂ ಸಿಡುಕು ಶುರುವಾಗುತ್ತೆ. ವಿದ್ಯಾರ್ಥಿಗಳಿಗೆ ಓದು, ಆಟೋಟಗಳ ಮೇಲೆ ಆಸಕ್ತಿ ಕಡಿಮೆಯಾಗುತ್ತೆ. ಮೊದಲೇ ಮೊಬೈಲ್ ಫೋನ್, ಇಂಟರ್ನೆಟ್​​​ನಿಂದ ಅಡಿಕ್ಟ್ ಆಗಿರೋ ಈ ವರ್ಗ ಈ ಸ್ಲೋ ಇಂಟರ್ನೆಟ್​ ತಡೆದುಕೊಳ್ಳೋಕಾಗಲ್ವಂತೆ. 15 ರಿಂದ 21 ವರ್ಷ ವಯಸ್ಸಿನವರಲ್ಲಿ  ಈ ನಡವಳಿಕೆ ಹೆಚ್ಚಾಗಿದೆ ಅಂತಾರೆ ನಿಮ್ಹಾನ್ಸ್ ತಜ್ಞರು ಹೇಳಿದ್ದಾರೆ.

ಮೊದಲೆಲ್ಲಾ ಮನೆಯಲ್ಲಿ ಮಕ್ಕಳು ಮೊಬೈಲ್ ಫೋನ್​​ಗಳಿಗೆ ಅಂಟಿಕೊಂಡಿರ್ತಾರೆ ಅಂತ ಪೋಷಕರು ಬೈಯುತ್ತಿದ್ದರು. ಆದರೆ ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಇಂಟರ್ನೆಟ್​​​ ಸ್ಪೀಡ್​​​ನಿಂದಾಗಿ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ.

ಅತ್ತ ತಮ್ಮ ಕೈಯಲ್ಲಿ ಇರದ ಇಂಟರ್ನೆಟ್ ಸ್ಪೀಡ್, ಇತ್ತ ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೂಗಾಡುತ್ತಿರೋ ಮಕ್ಕಳು.ಇದರಿಂದಾಗಿ ಪೋಷಕರು ನೊಂದು ಹೋಗಿದ್ದಾರೆ. ತಿಂಗಳಿಗೆ ಕನಿಷ್ಟ 10 ಹೊಸಾ ರೋಗಿಗಳು ಸ್ಲೋ ಇಂಟರ್ನೆಟ್​ನಿಂದ ಮನೆ ಮನಸ್ಸಿನ ನೆಮ್ಮದಿ ಕಳೆದುಕೊಂಡು ಮನಶಾಸ್ತ್ರಜ್ಞರ ಬಳಿ ಹೋಗುತ್ತಿದ್ದಾರೆ.

ಮೊಬೈಲ್ ಫೋನ್, ಇಂಟರ್ನೆಟ್  ಸೇವೆ ಅನಿವಾರ್ಯ ಎನ್ನುವಂಥಾ ಈ ಯುಗದಲ್ಲಿ ಅದೇ ದೊಡ್ಡ ಸಮಸ್ಯೆಯಾಗಿರೋದು ವಿಪರ್ಯಾಸ. ಕೌನ್ಸಲಿಂಗ್ ಮೂಲಕ ಇವರ ಸಮಸ್ಯೆಗೆ ಸಮಾಧಾನ ನೀಡೋ ಕೆಲಸವನ್ನೇನೋ ಮಾಡುತ್ತಿದ್ದಾರೆ. ಆದರೆ ಒಂದಷ್ಟು ದಿನ ಸ್ವಲ್ಪ ಹತೋಟಿಗೆ ಬಂದಿದೆ ಎನಿಸೋ ಈ ಸಮಸ್ಯೆ ಮತ್ತೆ ಕೈಗೆ ಫೋನ್ ಬಂದಾಗ ಮರುಕಳಿಸುತ್ತೆ. ಹಾಗಾಗೀ, ಈ ಸಮಸ್ಯೆಗೆ  ದೀರ್ಘಕಾಲದ ಕೌನ್ಸಲಿಂಗ್ ಮತ್ತು ಚಿಕಿತ್ಸೆ ಅವಶ್ಯಕ ಎಂದು ಮನಶಾಸ್ತ್ರಜ್ನರು ಹೇಳುತ್ತಿದ್ದಾರೆ.

ಆರಂಭದಿಂದಲೇ ಮಕ್ಕಳ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಬಳಕೆಯ ಮೇಲೆ ಕಣ್ಣಿಟ್ಟು, ಅದನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಆಗ ಇಂಥಾ ಸಮಸ್ಯೆಯಿಂದ ದೂರ ಇರಬಹುದು. ಈ ವಿಚಾರದಲ್ಲಿ ಪೋಷಕರು ಮತ್ತು ಮಕ್ಕಳು ಇಬ್ಬರ ಪಾತ್ರವೂ ಸಮನಾಗಿರುತ್ತದೆ. ಇಂಟರ್ನೆಟ್ ಸ್ಲೋ ಆದಾಗೆಲ್ಲಾ ಫೋನ್ ಬದಿಗಿಟ್ಟು ಆ ಸಮಯವನ್ನ ರಿಲ್ಯಾಕ್ಸ್ ಮಾಡೋಕೆ, ಕುಟುಂಬದ ಜೊತೆ ಕಳೆಯೋಕೆ ಅಭ್ಯಾಸ ಮಾಡಿಕೊಳ್ಳೋದು ಎಲ್ಲಕಿಂತ ಒಳ್ಳೆ ಉಪಾಯ ಅನ್ನೋದು ವೈದ್ಯರ ಅನಿಸಿಕೆ.

 ಸೌಮ್ಯ ಕಳಸ
First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ