ಸ್ಮಾರ್ಟ್ಫೋನ್ಗಳು (Smartphones) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಘೂ ಇಷ್ಟನೇ. ಆದರೆ ಪ್ರತಿಯೊಬ್ಬರು ಸ್ಮಾರ್ಟ್ಫೋನ್ಗಳನ್ನು ಖರೀದಿ ಮಾಡಬೇಕಾದರೆ ಅದರ ಫೀಚರ್ಸ್ಗಳನ್ನೇ ನೋಡಿ ಖರೀದಿ ಮಾಡುತ್ತಾರೆ. ಅದೇ ರೀತಿ ಟೆಕ್ ಕಂಪನಿಗಳು ಯಾವುದೇ ಸ್ಮಅರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುವಾಗ ಗುಣಮಟ್ಟವನ್ನು ನೋಡಿಕೊಂಡೇ ಬಿಡುಗಡೆ ಮಾಡುತ್ತದೆ. ಇತ್ತೀಚೆಗೆ ಸ್ಮಾರ್ಟ್ಫೋನ್ಗಳು ಮಾತ್ರ ಹೊಸ ಹೊಸ ರೀತಿಯ ಫೀಚರ್ಸ್ (Features)ಗಳೊಂದಿಗೆ ಬಿಡುಗಡೆಯಾಗುತ್ತಿದೆ. ಹೀಗಿರುವಾಗ ಗ್ರಾಹಕರು ಕೂಡ ಇನ್ನಷ್ಟು ಹೊಸತನವನ್ನು ಬಯಸುವುದು ಸಾಮನ್ಯ. ಇದೀಗ ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿ ಸ್ಯಾಮ್ಸಂಗ್ನ (Samsung) ಸ್ಮಾರ್ಟ್ಫೋನ್ ಅನ್ನು ಅಪ್ಡೇಟ್ ಮಾಡಲು ಹೋಗಿ ಜನರು ಪರದಾಟುತ್ತಿದ್ದಾರೆ. ಅಪ್ಡೇಟ್ (Update) ಮಾಡಲು ಹೋಗಿ ಮೊಬೈಲೇ ಗ್ಲಿಚ್ ಆಗಿದೆ.
ಇದೀಗ ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟ್ಫೋನ್ ಕೆಲ ಬಳಕೆದಾರರಿಗೆ ಮೊಬೈಲ್ ಅನ್ನು ಅಪ್ಡೇಟ್ ಮಾಡಲು ವಿನಂತಿಸಿತ್ತು. ಅದೇ ರೀತಿ ಬಳಕೆದಾರರು ಅಪ್ಡೇಟ್ ಮಾಡಿದಾಗ ನಂತರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಂಪನಿ ಫ್ಯಾಕ್ಟರಿ ರೀಸೆಟ್ ಮಾಡಬೇಕೆಂದು ಹೇಳಿದ್ದಾರೆ. ಇದರಿಂದ ಫೋಟೋ, ವಿಡಿಯೋ, ಕಾಂಟ್ಯಾಕ್ಟ್ ಫುಲ್ ಡಿಲೀಟ್ ಆಗಬಹುದು.
ಆಸ್ಟ್ರೇಲಿಯನ್ ಸ್ಯಾಮ್ಸಂಗ್ ಬಳಕೆದಾರರು
ಇತ್ತೀಚೆಗೆ ಹಲವಾರು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಸಾಫ್ಟ್ವೇರ್ ಅಪ್ಡೇಟ್ನಿಂದ ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ. ಇದೀಗ ಆಸ್ಟ್ರೇಲಿಯನ್ ಸ್ಯಾಮ್ಸಂಗ್ ಬಳಕೆದಾರರು ಸಾಫ್ಟ್ವೇರ್ ಅಪ್ಡೇಟ್ ಮಾಡುವ ಮೂಲಕ ಬಹಳ ಅಗತ್ಯವಿರುವ ಫೋಟೋಗಳನ್ನು, ವಿಡಿಯೋಗಳನ್ನು, ಮತ್ತು ಪ್ರಮುಖ ಕಾಂಟ್ಯಾಕ್ಟ್ಗಳನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ವಿಶ್ವದಲ್ಲೇ ಅತ್ಯಂತ ವೇಗದ ಚಾರ್ಜಿಂಗ್ ಫೋನ್: ಸಾಮರ್ಥ್ಯ ಊಹಿಸೋಕೂ ಸಾಧ್ಯವಿಲ್ಲ!
ಮೊಬೈಲ್ ಸ್ಕ್ರೀನ್ ಬ್ಲ್ಯಾಂಕ್
ಮೊಬೈಲ್ ಬಳಕೆದಾರರು ಕಂಪನಿಗಳು ಈ ಅಪ್ಡೇಟ್ ಅನ್ನು ವಿನಂತಿಸಿದಾಗ ತಮ್ಮ ಸಾಫ್ಟ್ವೇರ್ ಅನ್ನು ಅಪ್ಡೇಟ್ ಮಾಡಿದ್ದಾರೆ. ಆದರೆ ತದನಂತರದಲ್ಲಿ ಅವರ ಸ್ಮಾರ್ಟ್ಫೋನ್ಗಳು ಫುಲ್ ಬ್ಲ್ಯಾಂಕ್ ಆಗಿದೆಯಂತೆ. ಇದನ್ನು ತಮ್ಮ ಟೆಕ್ನಾಲಜಿ ಕಂಪನಿಗಳಲ್ಲಿ ಕೇಳಿದಾಗ ತಂತ್ರಜ್ಞರು ಕಂಪ್ಲೀಟ್ ಫ್ಯಾಕ್ಟರಿ ರೀಸೆಟ್ ಅನ್ನು ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಟೆಕ್ ಸೇವಾ ಕೇಂದ್ರಗಳಿಗೆ ಭೇಟಿ
ಕಳೆದ ವಾರ ತಮ್ಮ ಆಂಡ್ರಾಯ್ಡ್ ಸಾಧನಗಳಲ್ಲಿ ಸ್ಯಾಮ್ಸಂಗ್ ವಿನಂತಿಸಿದ ಅಪ್ಡೇಟ್ ಅನ್ನು ಬಳಕೆದಾರರು ಸ್ವೀಕರಿಸಿದ ನಂತರ ತೊಂದರೆಗೆ ಸಿಲುಕಿ ಪರದಾಡಿದ ಗ್ರಾಹಕರು ಇದಕ್ಕೆ ಕಾರಣವನ್ನು ಕೇಳುವ ನಿಟ್ಟಿನಲ್ಲಿ ಟೆಕ್ ದೈತ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.
ಎಲ್ಲಾ ಸ್ಯಾಮ್ಸಂಗ್ ಬಳಕೆದಾರರಿಗೆ, ದಯವಿಟ್ಟು ನಿಮ್ಮ ಫೋನ್ ಅನ್ನು ಯಾವುದೇ ಕಾರಣಕ್ಕೂ ಅಪ್ಡೇಟ್ ಮಾಡಬೇಡಿ. ತೀರಾ ಇತ್ತೀಚಿನ ಸಾಫ್ಟ್ವೇರ್ ಅಪ್ಡೇಟ್ ನಿಮ್ಮ ಫೋನ್ ಹ್ಯಾಂಗ್ ಆಗಲು, ಗ್ಲಿಚ್ ಆಗಲು ಕಾರಣವಾಗಬಹುದು, ”ಎಂದು ವ್ಯಕ್ತಿಯೊಬ್ಬರು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನೊಬ್ಬರು ಸ್ಯಾಮ್ಸಂಗ್ ಬಳಕೆದಾರರನ್ನು "ನಿಮ್ಮ ಫೋನ್ ಅನ್ನು ನವೀಕರಿಸಬೇಡಿ" ಅಥವಾ ಬ್ಯಾಕಪ್ ಮಾಡಲು ಹೋಗ್ಬೇಡಿ ಎಂದಿದ್ದಾರೆ.
ಇನ್ನೊಬ್ಬರು, ’ನಾನು ಇಂದು ಬೆಳಿಗ್ಗೆ ಸ್ಮಾರ್ಟ್ಫೋನ್ನ ಸಾಫ್ಟ್ವೇರ್ ಅನ್ನು ಅಪ್ಡೇಟ್ ಮಾಡಿದ್ದೇನೆ, ಈಗ ನನ್ನ ಮೊಬೈಲ್ನ ಸ್ಕ್ರೀನ್ನಲ್ಲಿ ಸ್ಯಾಮ್ಸಂಗ್ ಲೋಗೋ ಮಾತ್ರ ಕಾಣುತ್ತಿದೆ.
ಟೆಕ್ ಕಂಪನಿಯ ವರದಿ
ಟೆಕ್ ಬೆಂಬಲಕ್ಕಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತಿದ್ದ ಕೆಲವರಿಗೆ ನಿಮ್ಮ ಮೊಬೈಲ್ ಅನ್ನು ಸಂಪೂರ್ಣವಾಗಿ ಫ್ಯಾಕ್ಟರಿ ರೀಸೆಟ್ ಮಾಡುವುದು ಮಾತ್ರ ಏಕೈಕ ಆಯ್ಕೆಯಾಗಿದೆ ಎಂದು ತಳಿಸಿದ್ದಾರೆ. ಆದರೆ ಇದರಿಂದ ನಿಮ್ಮ ಮೊಬೈಲ್ನ ಫೋಟೋಗಳು, ವಿಡಿಯೋಗಳು, ಕಾಂಟ್ಯಾಕ್ಟ್ಗಳು ಹೀಗೆ ಎಲ್ಲಾ ಡಾಕ್ಯುಮೆಂಟ್ಗಳು ಡಿಲೀಟ್ ಆಗುತ್ತದೆ ಎಂಬ ಮಾಹಿತಿಯನ್ನು ನೀಡಿದೆ.
ಈ ಸಮಸ್ಯೆಯ ಬಗ್ಗೆ ಸ್ಯಾಮ್ಸಂಗ್ ಕಂಪನಿ 7ನ್ಯೂಸ್ ಎಂಬ ಸಂಸ್ಥೆಗೆ ವರದಿ ಮಾಡಿದ್ದು, ಇದರಲ್ಲಿ ಸ್ಯಾಮ್ಸಂಗ್ನ ಅಪ್ಡೇಟ್ ಸಮಸ್ಯೆಯ ಬಗ್ಗೆ ಕಂಪನಿ ಸರಿಪಡಿಸುತ್ತಿದೆ ಎಂದು ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ