ಇದು ಡಿಜಿಟಲ್ ಯುಗ. ಯಾವುದೇ ಕೆಲಸ ಆಗ್ಬೇಕಾದ್ರೂ ಮೊಬೈಲ್, ಲ್ಯಾಪ್‌ಟಾಪ್ ಬಳಸಿ ಕ್ಷಣಮಾತ್ರದಲ್ಲಿ ಮಾಡಿ ಮುಗಿಸಬಹುದು. ಆದರೆ ಈ ಡಿಜಿಟಲ್ ಡಿವೈಸ್ಗಳ (Digital Device) ಬಳಕೆ ಹೆಚ್ಚಾದಂತೆ ಹ್ಯಾಕರ್ಸ್ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮೊಬೈಲ್ ಬಳಕೆದಾರರ ಡೇಟಾವನ್ನು ಹ್ಯಾಕ್ ಮಾಡೋ ಉದ್ದೇಶದಿಂದ ಹ್ಯಾಕರ್ಸ್ಗಳು ಹೊಸ ಹೊಸ ಮಾರ್ಗವನ್ನು ಹುಡುಕುತ್ತಿದ್ದಾರೆ. ಇದುವರೆಗೆ ಓಟಿಪಿ, ಎಸ್ಎಮ್ಎಸ್, ಕರೆ ಮಾಡುವ ಮೂಲಕ ಬಳಕೆದಾರರ ವೈಯಕ್ತಿಕ ಡೇಟಾವನ್ನು ಪಡೆಯುತ್ತಿದ್ದರು. ಆದರೆ ಈಗ ಗೂಗಲ್ ಪೇ (Google Pay), ಫೋನ್ ಪೇ (Phone Pe) ಮೂಲಕ ಹಣವನ್ನು ದೋಚಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಆದ್ರೆ ಅಷ್ಟು ಸುಲಭವಾಗಿ ಫೋನ್ಪೇ ಮತ್ತು ಗೂಗಲ್ಪೇ ಮೂಲಕ ಹಾಗೆಲ್ಲಾ ಸಾರ್ವಜನಿಕರ ಮಾಹಿತಿ ಪಡೆಯುವುದು ಸಾಧ್ಯವಿಲ್ಲ. ಅದಕ್ಕಾಗಿ ಕೆಲವೊಂದು ಬ್ಯಾಂಕಿನವರು (Bank Account Hack) ಸಹ ಎಚ್ಚರಿಕೆಯನ್ನು ನೀಡಿದ್ದಾರೆ.
ಜನಪ್ರಿಯ ಡಿಜಿಟಲ್ ಪೇಮೆಂಟ್ ಆ್ಯಪ್ಗಳಲ್ಲಿ ಗೂಗಲ್ ಪೇ ಮತ್ತು ಫೋನ್ ಪೇ ಸಹ ಒಂದು. ಈ ಅಪ್ಲಿಕೇಶನ್ಗಳು ಇತ್ತೀಚೆಗೆ ಬಹಳಷ್ಟು ಬಳಕೆದಾರರನ್ನು ಹೊಂದಿದೆ. ಆದರೆ ಅದೇ ರೀತಿ ವಂಚನೆಯೂ ಆಗುತ್ತಿದೆ ಎಂದಿದ್ದಾರೆ. ಇದಕ್ಕೆ ಮುಂಬೈ ನಗರವೇ ಸಾಕ್ಷಿ.
ಹೆಚ್ಚುತ್ತಿದೆ ಬಳಕೆದಾರರ ಸಂಖ್ಯೆ
ಹೌದು, ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಮಾಡುವ ಅಪ್ಲಿಕೇಶನ್ ಅನ್ನೇ ಜನರು ಹೆಚ್ಚು ಅವಲಂಬಿಸಿದ್ದಾರೆ. ಅದ್ರಲ್ಲೂ ಆನ್ಲೈನ್ ಪೇಮೆಂಟ್ ಮಾಡುವುದು ಭಾರತದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿದೆ. ದೊಡ್ಡ ಸಾಧನದಿಂದ ಸಣ್ಣ ವಸ್ತುವನ್ನು ಖರೀದಿಸಬೇಕಂದ್ರು ಈ ಯುಪಿಐ ಪೇಮೆಂಟ್ ಅನ್ನೇ ಬಳಸುತ್ತಾರೆ. ಇನ್ನು ಫೆಬ್ರವರಿ 2022ರ ವರದಿಯ ಪ್ರಕಾರ, ಯುಪಿಐ ಅಪ್ಲಿಕೇಶನ್ ಮೂಲಕ ದೈನಂದಿನ ವಹಿವಾಟುಗಳು 24 ಕೋಟಿಯಿಂದ 36 ಕೋಟಿಗೆ ದಾಟಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಈ ಒಂದು ಹಳ್ಳಿಯಲ್ಲಿ ಸೈರನ್ ಮೊಳಗಿದ್ರೆ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಎಲ್ಲವೂ ಸ್ವಿಚ್ ಆಫ್!
ವಂಚನೆಯ ಸಂಖ್ಯೆಯಲ್ಲೂ ಏರಿಕೆ
ಇನ್ಜು ದಿನ ಕಳೆದಂತೆ ಆನ್ಲೈನ್ ಪೇಮೆಂಟ್ ಮಾಡುವ ಅಪ್ಲಿಕೇಶನ್ಗಳನ್ನು ಬಳಸುವವರು ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನೇ ಗುರಿಯಾಗಿಸಿಕೊಂಡು ಕೆಲ ಕಿಡಿಗೇಡಿಗಳು ಬಳಕೆದಾರರ ಬ್ಯಾಂಕ್ ಹಣವನ್ನು ದೋಚುವ ಉದ್ದೇಶದಿಂದ ಹ್ಯಾಕ್ ಮಾಡಲು ಮುಂದಾಗಿದ್ದಾರೆ. ಅದೇ ರೀತಿ 2022 ರಿಂದ 2023ರವರೆಗೆ ಬರೋಬ್ಬರಿ 95 ಸಾವಿರಕ್ಕೂ ಹೆಚ್ಚು ವಂಚನೆಗಳು ನಡೆದಿವೆ ಎಂದು ವರದಿಯಾಗಿದೆ. ಆದ್ದರಿಂದ ಕೆಲವ ಬ್ಯಾಂಕಿನವರು ಸಹ ಎಚ್ಚರಿಕೆಯಿಂದಿರಿ ಎಂದು ಹೇಳಿದ್ದಾರೆ.
ಮುಂಬೈ ನಗರದಲ್ಲಿ 1 ಕೋಟಿ ವಂಚನೆ
ಇತ್ತೀಚೆಗೆ ಮುಂಬೈಯಲ್ಲಿ ಸಹ ಆನ್ಲೈನ್ ಪೇಮೆಂಟ್ ಮಾಡುವ ಅಪ್ಲಿಕೇಶನ್ ಬಳಕೆ ಮಾಡುವವರು ಹೆಚ್ಚಿದ್ದು, ಇದರಲ್ಲಿ 81 ಮಂದಿಯಿಂದ ಬರೋಬ್ಬರಿ 1 ಕೋಟಿಗೂ ಹೆಚ್ಚು ಹಣವನ್ನು ಹ್ಯಾಕರ್ಸ್ಗಳು ದೋಚಿದ್ದಾರೆ ಎಂದು ವರದಿಯಾಗಿದೆ. ಇದ್ರಲ್ಲೂ ಗೂಗಲ್ ಪೇ ಬಳಕೆದಾರರಿಂದಲೇ ಹೆಚ್ಚಿನ ಹಣವನ್ನು ದೋಚಿರುವುದು ಅಚ್ಚರಿಯ ಸಂಗತಿಯಾಗಿದೆ.
ಮೊದಲಿಗೆ ಹ್ಯಾಕರ್ಸ್ಗಳು ಬಳಕೆದಾರರ ಅಕೌಂಟ್ಗೆ ಒಂದಿಷ್ಟು ಹಣವನ್ನು ಸೆಂಡ್ ಮಾಡುತ್ತಾರೆ. ನಂತರ ಅವರೇ ಮೆಸೇಜ್ ಹಾಕೋ ಮೂಲಕ ತಪ್ಪಿ ಹಣ ಬಂದಿದೆ ರೀಸೆಂಡ್ ಮಾಡಿ ಎಂದು ಹೇಳುತ್ತಾರೆ. ಬ ಳಕೆದಾರರು ಅದನ್ನೇ ನಂಬಿ ಒಂದು ವೇಳೆ ಹಣ ಕಳುಹಿಸಿದರೆ, ಅವರ ಮೊಬೈಲ್ನಲ್ಲಿ ಗೊತ್ತಿಲ್ಲದ ಹಾಗೆಯೇ ಮಾಲ್ವೇರ್ಗೆ ಸಂಬಂಧಿಸಿದ ಆ್ಯಪ್ ಒಂದು ಡೌನ್ಲೋಡ್ ಆಗುತ್ತದೆ. ಇದು ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿರುವಂತಹ ಹಣವನ್ನು ಖಾಲಿ ಮಾಡುತ್ತದೆ.
ಎಚ್ಚರಿಕೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ