ಸೆಲ್ಫಿ ಕ್ರೇಜ್​ನಿಂದ ಬ್ಯಾಂಕ್​ ಹಣ ಗುಳುಂ, ಐಪಿಎಸ್​ ರೂಪಾ ಶೇರ್​ ಮಾಡಿದ ವಿಡಿಯೋದಲ್ಲೇನಿದೆ?

news18
Updated:July 3, 2018, 2:35 PM IST
ಸೆಲ್ಫಿ ಕ್ರೇಜ್​ನಿಂದ ಬ್ಯಾಂಕ್​ ಹಣ ಗುಳುಂ,  ಐಪಿಎಸ್​ ರೂಪಾ ಶೇರ್​ ಮಾಡಿದ ವಿಡಿಯೋದಲ್ಲೇನಿದೆ?
news18
Updated: July 3, 2018, 2:35 PM IST
ನ್ಯೂಸ್​ 18 ಕನ್ನಡ

ಮಧುಶ್ರೀ ಮುಖುಡ್

ಸೆಲ್ಫೀ ಕ್ರೇಜ್ ಯಾರಿಗಿಲ್ಲ, ಪ್ರತಿಯೊಬ್ಬರಿಗೂ ಸೆಲ್ಫೀ ತೆಗೆದುಕೊಳ್ಳೋದು ಅಂದ್ರೆ ಬಹಳಾನೇ ಇಷ್ಟ. ಅದರಲ್ಲೂ ಸೆಲ್ಫೀ ತೆಗೆದುಕೊಳ್ಳುವಾಗ ಸಿಂಬಲ್ ಗಳನ್ನ ತೋರಿಸೋ ಕ್ರೇಜ್ ಇತ್ತೀಚೆಗೆ ಹೆಚ್ಚಾಗಿದೆ. ಸೆಲ್ಫೀ ತೆಗೆದುಕೊಳ್ಳುವಾಗ ನೀವೂ ಥಮ್ಸ್ ಅಪ್, ವಿಕ್ಟರಿ, ಹಾಯ್, ಸೂಪರ್ ಅಂತಾ ಸಿಂಬಲ್ ತೋರಿಸ್ತೀರಾ? ಹಾಗಿದ್ರೆ ಜೋಕೆ! ಯಾಕಂದ್ರೆ ನಿಮ್ಮ ಬೆರಳಚ್ಚಿನಿಂದ ನಿಮ್ಮ ಅಕೌಂಟ್ ಗಳನ್ನ ಹ್ಯಾಕ್ ಮಾಡಬಹುದಂತೆ.

ಹೆಚ್ಚಿನ ಸಾಮಾಜಿಕ ಜಾಲತಣಾದ ಬಳಕೇದಾರರು ತಮಗೆ ಬೆಸ್ಟ್ ಎನಿಸಿದ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡ್ತಾರೆ. ಆದರೆ ನೀವೆನಾದರೂ ಥಮ್ಸ್ ಅಪ್ ಮಾಡಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರೆ, ನಿಮ್ಮ ಎಲ್ಲಾ ಪರ್ಸನಲ್ ಡೀಟೆಲ್ಸ್ ಬಯಲಾಗಬಹುದು. ಏಕೆಂದರೆ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿ ಅಡಕವಾಗಿರೋದು ನಿಮ್ಮ ಬೆರಳ ತುದಿಯಲ್ಲೇ. ಹೀಗಾಗಿ ಬೆರಳಚ್ಚುಗಳನ್ನ ಸೆಲ್ಫಿಯಿಂದ ಕ್ಲಿಯರ್ ಆಗಿ ಕಾಪಿ ಮಾಡಬಹುದಾಗಿದೆ. ಆ ಬೆರಳಚ್ಚಿನ ಕಾಪಿ ಇದ್ದರೇ ಸಾಕು ನಿಮ್ಮ ಮಾಹಿತಿಯನ್ನ ಸುಲಭವಾಗಿ ಎನ್ ಕ್ಯಾಶ್ ಮಾಡಬಹುದಾಗಿದೆ.

ನಿಮ್ಮ ಸೆಲ್ಫೀಯಿಂದ ನಿಮ್ಮ ಬೆರಳಚ್ಚುಗಳನ್ನ ಕದಿಯೋ ತಂತ್ರಜ್ಞಾನ ಚಾಲ್ತಿಯಲ್ಲಿದೆ. ಅದನ್ನ ಬಳಸಿಕೊಂಡು ನಿಮ್ಮ ವೈಯಕ್ತಿಕ ಮಾಹಿತಿ, ದಾಖಲೆಗಳನ್ನ ಕದಿಯೋ ಕಿಡಿಗೇಡುಗಳ ತಂಡವೂ ಜಗತ್ತಿನಲ್ಲಿದೆ. ಅಂತರ್ಜಾಲ ಚೋರರು ನಿಮ್ಮ ಕ್ವಾಲಿಟಿ ಫೋಟೋಗಳನ್ನ ಹಿಡಿದು, ಅದರಲ್ಲಿರೋ ನಿಮ್ಮ ಬೆರಳಚ್ಚನ್ನ ಸಲೀಸಾಗಿ ಕದ್ದು ಬಿಡೋ ಆಸಾಮಿಗಳು. ಒಂದು ವೇಳೆ ನಿಮ್ಮ ಫೋಟೋ ಕ್ಲ್ಯಾರಿಟಿ ಇಲ್ಲದೇ ಇದ್ದರೂ ಈ ಅಂತರ್ಜಾಲದ ಕಳ್ಳರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಮ್ಮ ಫೋಟೋದಲ್ಲಿರೋ ಬೆರಳಚ್ಚನ್ನ ಪಡೆಯುತ್ತಾರೆ.

ಈ ಮಾಹಿತಿಯನ್ನು ಕಲೆ ಹಾಕಿದ ಬಳಿಕ ಇದನ್ನು ಬಳಸಿಕೊಂಡು ನಿಮ್ಮ ಬ್ಯಾಂಕ್ ಅಕೌಂಟ್​ಗೆ ನೇರವಾಗಿ ಕನ್ನ ಹಾಕುತ್ತಾರೆ. ಅದು ಹೇಗೆಂದರೆ ನೀವೂ ಆಧಾರ್ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ ನಿಮ್ಮ ಕೈ ಬೆರಳುಗಳಚ್ಚನ್ನು ನೀಡಿರುತ್ತೀರಿ. ಅಲ್ಲಿಂದ ನಿಮ್ಮ ಪಾಸಾಪೋರ್ಟ್, ಸಿಮ್ ಕಾರ್ಡ್, ಪಾನ್ ಕಾರ್ಡ್​ವರೆಗೂ ಡೀಟೆಲ್ಸ್ ಕಲೆ ಹಾಕಬಹುದು.

ಹೀಗಾಗಿ ನಿಮ್ಮ ಬ್ಯಾಂಕ್ ಮಾಹಿತಿ ಸಿಕ್ಕಿದ್ರೆ ಸಾಕು ಕೆಲವೇ ಕ್ಷಣಗಳ್ಲಿ ನಿಮ್ಮ ಅಕೌಂಟ್ ಹ್ಯಾಕ್ ಮಾಡಿ ಅಲ್ಲಿದ್ದ ಕಂಪ್ಲೀಟ್ ಹಣ ಗುಳುಂ. ಮಾಡಲೂ ಬಹುದು.
Loading...
ಇದರಿಂದ ರಕ್ಷಿಸಿಕೊಳ್ಳುವುದು ಹೇಗೆ?

ಬೆರಳ್ ತೋರಿಸಿದ್ರೆ ಬರ್ಬಾದ್ ಆಗ್ತೀರಿ ಅನ್ನೋ ಜಾಗೃತಿಯನ್ನ ಮೂಡಿಸಿದ್ದು ಯಾರು ಗೊತ್ತಾ..? ಐಜಿಪಿ ರೂಪಾ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಜಾಲದ ಬಗ್ಗೆ ಒಂದು ಪೋಸ್ಟ್ ಮಾಡಿದ್ದು, ಅಂತರ್ಜಾಲದಲ್ಲಿ ಸೆಲ್ಫೀಯಲ್ಲಿ ತೋರಿಸಿದ ಫಿಂಗರ್ ಪ್ರಿಂಟ್ ಇಟ್ಕೊಂಡು ಹ್ಯಾಕ್ ಮಾಡುವ ಜಾಲ ವಿದೇಶದಲ್ಲಿ ಸಕ್ರಿಯವಾಗಿದೆ ಅನ್ನೋದನ್ನ ತಿಳಿಸಿದ್ದಾರೆ. ಅಲ್ಲದೇ ಈ ಹ್ಯಾಕಿಂಗ್ ಬಗ್ಗೆ ಸುಮಾರು 45 ಸೆಕೆಂಡ್ ನ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ.

ಇದಕ್ಕೆ ಪರಿಹಾರವಾಗಿ ವಿದೇಶಿ ಸಂಸ್ಥೆ ಒಂದು ಕೆಮಿಕಲ್ ಲೇಪನವನ್ನು ಕಂಡು ಹಿಡಿದಿದೆ. ಈ ಸಂಸ್ಥೆ ತಯಾರಿಸ್ತಿರೋ ಲೇಪನ ಇನ್ನೇರೆಡು ವರ್ಷದಲ್ಲೇ ಜನರಿಗೆ ದೊರಯುವ ನಿರೀಕ್ಷೆ ಇದೆ. ಕೆಮಿಕಲ್ ಲಿಕ್ವಿಡ್ ಅನ್ನ ಸೆಲ್ಫೀ ತೆಗೆದುಕೊಳ್ಳೋ ಪ್ರತಿಯೊಬ್ಬರು ತಮ್ಮ ಬೆರಳಿಗೆ ಹಚ್ಚಿಕೊಂಡು ಸೆಲ್ಫೀ ಕ್ಲಿಕ್ಕಿಸೋದ್ರಿಂದ ಯಾವುದೇ ರೀತಿ ಅಪಾಯವಿಲ್ಲ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...