• Home
  • »
  • News
  • »
  • tech
  • »
  • WhatsApp Scam: ವಿಡಿಯೋ ಲೈಕ್ ಮಾಡಿ ಲಕ್ಷ ಲಕ್ಷ ಹಣ ಗಳಿಸಿ: ಯಾಮಾರಿ ಲಿಂಕ್ ಕ್ಲಿಕ್ ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ!

WhatsApp Scam: ವಿಡಿಯೋ ಲೈಕ್ ಮಾಡಿ ಲಕ್ಷ ಲಕ್ಷ ಹಣ ಗಳಿಸಿ: ಯಾಮಾರಿ ಲಿಂಕ್ ಕ್ಲಿಕ್ ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚೆಗೆ ವಾಟ್ಸಾಪ್​ನಲ್ಲಿ ಯೂಟ್ಯೂಬ್​ ಲಿಂಕ್​ಗಳನ್ನು ಶೇರ್​ ಮಾಡಿ ಹಣ ಗಳಿಸಿ ಎಂಬ ಹೊಸ ಸ್ಕ್ಯಾಮ್​ ಆರಂಭವಾಗಿದೆ. ಉದ್ಯೋಗವಿಲ್ಲದೇ ಮನೆಯಲ್ಲಿಯೇ ಇರುವವರನ್ನು ಗುರಿಯಾಗಿಸಿಕೊಂಡು ಈ ವಂಚಕರು ಈ ಹಗರಣವನ್ನು ಪ್ರಾರಂಭಿಸಿದ್ದಾರೆ. ಹಾಗಿದ್ರೆ ಈ ಲಿಂಕ್​ ಮೂಲಕ ಯಾವ ರೀತಿ ಹಣವನ್ನು ದೋಚುತ್ತಾರೆ ಎಂದು ಈ ಲೇಖನದಲ್ಲಿ ಓದಿ.

ಮುಂದೆ ಓದಿ ...
  • Share this:

    ಸ್ಮಾರ್ಟ್​​ಫೋನ್​ಗಳ (Smartphones) ಬಳಕೆ ಇತ್ತೀಚೆಗೆ ವ್ಯಾಪಕವಾಗಿ ಹಬ್ಬಿದೆ. ಇತ್ತೀಚಿನ ದಿನದಲ್ಲಿ ಟೆಕ್ನಾಲಜಿಗಳು ಬಹಳಷ್ಟು ಅಭಿವೃದ್ಧಿಯಾಗಿವೆ ಎಂದು ಹೇಳಬಹುದು. ಅದೇ ರೀತಿ ಇದನ್ನು ಅರಿತಂತಹ ಕೆಲ ವಂಚಕರು ಆನ್​ಲೈನ್​ (Online Scam) ಮೂಲಕ ಅಮಾಯಕರನ್ನು ಹೇಗೆಲ್ಲಾ ವಂಚನೆ ಮಾಡಬಹುದೆಂದು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಎಲ್ಲಿ ಹೋದರೂ ಆನ್​ಲೈನ್​ ವಂಚನೆಯ ಸುದ್ದಿಗಳೇ ಕೇಳಿಬರುತ್ತಿದೆ. ಇದೀಗ ಹೊಸ ವಂಚನೆಯ ವಿಧಾನ ಬಂದಿದ್ದು, ಕೇವಲ ಲಿಂಕ್ ಕ್ಲಿಕ್​ ಮಾಡಿದ್ರೆ ಬ್ಯಾಂಕ್​ ಅಕೌಂಟ್​ನಲ್ಲಿದ್ದ (Bank Account) ಹಣವನ್ನು ಖಾಲಿ ಮಾಡುತ್ತಾರೆ. ಆನ್​ಲೈನ್​ನಲ್ಲಿ ಸುಲಭದಲ್ಲಿ ಹಣ ಗಳಿಸಿ ಎಂದು ಹೇಳುವ ಮೂಲಕ ವಂಚಕರು ಬಳಕೆದಾರರಿಗೆ ಯೂಟ್ಯೂಬ್ ಲಿಂಕ್​ ಅನ್ನು ಕಳುಹಿಸುತ್ತಾರೆ. ಅದರಲ್ಲಿ ನೀಡಿದ ಮಾಹಿತಿಗೆ ತಕ್ಕಂತೆ ವಿವರವನ್ನು ನೀಡಿದ್ರೆ ನಿಮ್ಮ ಖಾತೆ ಹ್ಯಾಕ್​ (Hack) ಆಗುವುದು ಗ್ಯಾರಂಟಿ.


    ಹೌದು, ಇತ್ತೀಚೆಗೆ ವಾಟ್ಸಾಪ್​ನಲ್ಲಿ ಯೂಟ್ಯೂಬ್​ ಲಿಂಕ್​ಗಳನ್ನು ಶೇರ್​ ಮಾಡಿ ಹಣ ಗಳಿಸಿ ಎಂಬ ಹೊಸ ಸ್ಕ್ಯಾಮ್​ ಆರಂಭವಾಗಿದೆ. ಉದ್ಯೋಗವಿಲ್ಲದೇ ಮನೆಯಲ್ಲಿಯೇ ಇರುವವರನ್ನು ಗುರಿಯಾಗಿಸಿಕೊಂಡು ಈ ವಂಚಕರು ಈ ಹಗರಣವನ್ನು ಪ್ರಾರಂಭಿಸಿದ್ದಾರೆ. ಹಾಗಿದ್ರೆ ಈ ಲಿಂಕ್​ ಮೂಲಕ ಯಾವ ರೀತಿ ಹಣವನ್ನು ದೋಚುತ್ತಾರೆ ಎಂದು ಈ ಲೇಖನದಲ್ಲಿ ಓದಿ.


    ಯಾವ ರೀತಿ ವಂಚಿಸುತ್ತಾರೆ?


    ವಾಟ್ಸಾಪ್​ನಲ್ಲಿ ಯೂಟ್ಯೂಬ್​ ಲಿಂಕ್​ ಕಳುಹಿಸುವ ಮೂಲಕ ವಂಚಕರು ಇದನ್ನು ಬೇರೆಯವರಿಗೆ ಶೇರ್‌ ಮಾಡಿ ಸುಲಭದಲ್ಲಿ ಹಣ ಗಳಿಸಿ ಎಂದು ಹೇಳುತ್ತಾರೆ. ಮನೆಯಲ್ಲಿಯೇ ಇರುವುದರಿಂದ ಬಳಕೆದಾರರು ಸಹ ಸುಲಭದಲ್ಲಿ ಹಣ ಗಳಿಸುವ ಉದ್ದೇಶದಿಂದ ವಂಚಕರು ಕಳುಹಿಸಿದ ಯೂಟ್ಯೂಬ್​ ಲಿಂಕ್​ಗಳನ್ನು  ಶೇರ್​ ಮಾಡುತ್ತಾರೆ. ಆದರೆ ನಂತರದ ದಿನಗಳಲ್ಲಿ ಹಣವನ್ನು ಕಳೆದುಕೊಳ್ಳುತ್ತಾರೆ.




    ಅಂದರೆ ಬಳಕೆದಾರರು ಯೂಟ್ಯೂಬ್​ ಲಿಂಕ್ ಅನ್ನು ಓಪನ್ ಮಾಡಿ ಲೈಕ್ ಮಾಡಿದ್ರೆ ಹಣ ನೀಡುವುದಾಗಿ ನಂಬಿಸುತ್ತಾರೆ. ಇದಲ್ಲದೆ ಪ್ರತೀ ಲೈಕ್​ಗೆ 50 ರೂಪಾಯಿಯನ್ನು ನೀಡುವುದಾಗಿ ಹೇಳುತ್ತಾರೆ. ಇದನ್ನು ಅರಿತ ಬಳಕೆದಾರರಿಗೆ ದಿನದಲ್ಲಿ 5 ಸಾವಿರ ರೂಪಾಯಿ ಸುಲಭದಲ್ಲಿ ಗಳಿಸಬಹುದು ಎಂದು ಆಸೆ ಹುಟ್ಟಿಸಿ ಬ್ಯಾಂಕ್​ ಡೀಟೇಲ್ಸ್​ ಅನ್ನು ಪಡೆಯುತ್ತಾರೆ.


    ಬ್ಯಾಂಕ್​ ಡೀಟೇಲ್ಸ್​ ನೀಡಿದ್ರೆ ಅಕೌಂಟ್​ ಹ್ಯಾಕ್​


    ಈ ಂಮೇಲೆ ತಿಳಿಸಿದಂತೆ ಹಣದಾಸೆಯನ್ನು ಹುಟ್ಟಿಸಿದ ವಂಚಕರು ಹಣವನ್ನು ಬಳಕೆದಾರರ ಅಕೌಂಟ್​ಗೆ ಪಾವತಿ ಮಾಡಲು ಬ್ಯಾಂಕ್​ನ ಡಿಟೇಲ್ಸ್​ ಅನ್ನು ಕೇಳುತ್ತಾರೆ. ನೀವು ಬ್ಯಾಂಕ್​ ಖಾತೆಯ ವಿವರಗಳನ್ನು ನೀಡುತ್ತಿದ್ದ ಹಾಗೆಯೇ ನಿಮ್ಮ ಅಕೌಂಟ್​ ಅನ್ನು ಹ್ಯಾಕ್ ಮಾಡುವ ಮೂಲಕ ನಿಮ್ಮ ಖಾತೆಯಲ್ಲಿದ್ದ ಹಣವನ್ನು ದೋಚುವ ಪ್ರಯತ್ನವನ್ನು ಮಾಡುತ್ತಾರೆ.


    ಸಾಂಕೇತಿಕ ಚಿತ್ರ


    ಇನ್ನೂ ಕೆಲವರು ನಿಮ್ಮ ಇತರೆ  ಡೇಟಾವನ್ನು ಸಹ ಪಡೆಯುವ ನಿಟ್ಟಿನಲ್ಲಿ ದಾರಿ ತಪ್ಪಿಸುವ ಉದ್ದೇಶದಿಂದ, ಮೊದಲಿಗೆ ಸ್ವಲ್ಪ ಹಣವನ್ನು ನಿಮ್ಮ ಖಾತೆಗೆ ಪಾವತಿಸುತ್ತಾರೆ. ನಂತರದಲ್ಲಿ ನಿಮ್ಮ ಪರ್ಸನಲ್​ ಡೇಟಾ, ಬ್ಯಾಂಕ್​ ಅಕೌಂಟ್​ ಎಲ್ಲವನ್ನೂ ವಂಚನೆ ಮಾಡಲು ಮುಂದಾಗುತ್ತಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.


    ಅಪ್ಲಿಕೇಶನ್​ ಮೂಲಕ ಮೊಬೈಲ್ ಹ್ಯಾಕ್​


    ನೀವು ಯೂಟ್ಯೂಬ್‌ ವಿಡಿಯೋಗಳನ್ನು ಲೈಕ್‌ ಮಾಡಲು ಶುರುಮಾಡಿದ ಪ್ರಾರಂಭದಲ್ಲಿ ಸಣ್ಣ ಮೊತ್ತವನ್ನು ಕಳುಹಿಸುತ್ತಾರೆ. ನಂತರ ಹೆಚ್ಚಿನ ಮೊತ್ತದ ಹಣವನ್ನು ಪಾವತಿಸಲು ಅಪ್ಲಿಕೇಶನ್‌ ಒಂದನ್ನು ಇನ್‌ಸ್ಟಾಲ್‌ ಮಾಡುವಂತೆ ಹೇಳುತ್ತಾರೆ. ಇಲ್ಲಿ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡ್ತಿದ್ದ ಹಾಗೇ ನಿಮ್ಮ ಸ್ಮಾರ್ಟ್‌ಫೋನ್​ ಟ್ರೋಜನ್ ಅಥವಾ ಮಾಲ್‌ವೇರ್‌ ಅಟ್ಯಾಕ್​ಗೆ ಒಳಗಾಗುತ್ತದೆ. ನಂತರ ನಿಮ್ಮ ಖಾತೆಯಿಂದ ಪರಿಶೀಲನೆಗಾಗಿ ಒಂದು ರೂ ಹಣ ಕಳುಹಿಸಲು ಕೇಳುತ್ತಾರೆ. ನೀವು ಹಣ ವರ್ಗಾವಣೆ ಮಾಡ್ತಿದ್ದ ಹಾಗೇ ನಿಮ್ಮ ಎಲ್ಲಾ ಡೇಟಾ ಮಾಹಿತಿಯನ್ನು ಹ್ಯಾಕರ್​ಗಳು ಕದಿಯುತ್ತಾರೆ.


    ಇದನ್ನೂ ಓದಿ: ವಿವೋ ಸ್ಮಾರ್ಟ್​​​ಫೋನ್​ ಮೇಲೆ ಭರ್ಜರಿ ಡಿಸ್ಕೌಂಟ್​! ಫೀಚರ್ಸ್​ ಹೇಗಿದೆ ಗೊತ್ತಾ?


    ಎಚ್ಚರಿಕೆ


    ವಾಟ್ಸಾಪ್ ಅಥವಾ ಇತರ ಯಾವುದೇ ಅಪ್ಲಿಕೇಶನ್​ಗಳಲ್ಲಿ ಲಿಂಕ್​ ಅನ್ನು ಶೇರ್​ ಮಾಡಿ, ಓಪನ್​ ಮಾಡಿ ಎಂದು ಸಂದೇಶಗಳು ಬಂದಾಗ ಯಾವಾಗಲು ಓಪನ್ ಮಾಡಲು ಹೋಗ್ಬಾರ್ದು. ಅದರ ಬಗ್ಗೆ ಸ್ವಲ್ಪ ವಿಶ್ಲೇಷಣೆಯನ್ನು ಮಾಡಬೇಕು.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು