ಈ ಆ್ಯಪ್ ಬಳಸಿ; ಬೆಂಗಳೂರಿನಲ್ಲಿ ಎಲ್ಲಿಬೇಕೊ ಅಲ್ಲಿ ಪಾರ್ಕಿಂಗ್ ಮಾಡಿ

news18
Updated:March 30, 2019, 4:12 PM IST
ಈ ಆ್ಯಪ್ ಬಳಸಿ; ಬೆಂಗಳೂರಿನಲ್ಲಿ ಎಲ್ಲಿಬೇಕೊ ಅಲ್ಲಿ ಪಾರ್ಕಿಂಗ್ ಮಾಡಿ
ಸ್ಮಾರ್ಟ್​ ಪಾರ್ಕಿಂಗ್
news18
Updated: March 30, 2019, 4:12 PM IST
ಬೆಂಗಳೂರು ನಗರದಾದ್ಯಂತ ವಾಹನ ದಟ್ಟನೆ ವಿಪರೀತವಾಗಿದ್ದು, ವಾಹನ ಸವಾರರು ಪಾರ್ಕಿಂಗ್​ ಪರದಾಟವನ್ನು ಹೋಗಲಾಡಿಸುವ ಸಲುವಾಗಿ ಬೆಂಗಳೂರು ಬೃಹತ್​ ಮಹಾನಗರ ಪಾಲಿಕೆ ಹೊಸ ಯೋಜನೆಯೊಂದನ್ನು ಬಿಡುಗಡೆಮಾಡಿತ್ತು. ನಗರದ 85 ರಸ್ತೆಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಪಾರ್ಕಿಂಗ್​ ಪಚೀತಿಯನ್ನು ಹೋಗಲಾಡಿಸಲು ಬಿಬಿಎಂಪಿ ‘ಸ್ಮಾರ್ಟ್​ ಪಾರ್ಕಿಂಗ್‘​ ಯೋಜನೆಯನ್ನು ತಂದಿತ್ತು.  ಇದೀಗ ಜನರಿಗೆ ಮತ್ತಷ್ಟು ಸುಲಭವಾಗುವಂತೆ ಬಿಬಿಎಂಪಿ ಹೊಸದಾದ ಮೊಬೈಲ್​ ಆಪ್​ವೊಂದನ್ನು ಪರಿಚಯಿಸಲು ಮುಂದಾಗಿದೆ.

ಬೆಂಗಳೂರು ನಗರದಲ್ಲಿ ಪಾರ್ಕಿಂಗ್​ ಸಮಸ್ಯೆಯ ಪರದಾಟವನ್ನು ತಪ್ಪಿಸಲು ಬಿಬಿಎಂಪಿ ಹೊಸ ಆ್ಯಪ್​ ಅನ್ನು ಕಾರ್ಯರೂಪಕ್ಕೆ ತರುತ್ತಿದೆ. ಲೋಕಸಭೆ ಚುನಾವಣೆ ಮುಗಿದ ನಂತರ ‘ಸ್ಮಾರ್ಟ್​ ಪಾರ್ಕಿಂಗ್‘​ ಕಾಮಗಾರಿ ನಡೆಯಲಿದ್ದು, ಇದರ ಬೆನ್ನಲ್ಲೇ ಪಾರ್ಕಿಂಗ್​ ನಿರ್ವಹಣೆಗಾಗಿ ಪ್ರತ್ಯೇಕ ಮೊಬೈಲ್​ ಅಪ್ಲಿಕೇಷನ್​ ಸಿದ್ಧಪಡಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೇವೇಗೌಡರ ಬಗ್ಗೆ ಗೌರವವಿದೆಯೇ ವಿನಃ ನಂಬಿಕೆಯಿಲ್ಲ; ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್​

 ಹೇಗಿದೆ ‘ಸ್ಮಾರ್ಟ್​ಫೋನ್​‘ ಪಾರ್ಕಿಂಗ್​ ಆ್ಯಪ್​

  • ಬಿಬಿಎಂಪಿ ಸಿದ್ಧಪಡಿಸುತ್ತಿರುವ ಸ್ಮಾರ್ಟ್​ಫೋನ್​ ಆ್ಯಪ್​ನಲ್ಲಿ ಪಾರ್ಕಿಂಗ್​ಗೆ ಸೂಕ್ತವಾದ ಜಾಗವನ್ನು ಹುಡುಕಬಹುದಾಗಿದೆ. ಯಾವ ರಸ್ತೆಯಲ್ಲಿ ಎಷ್ಟು ವಾಹನ ನಿಲುಗಡೆಯಾಗಿದೆ ಎಂಬ ಮಾಹಿತಿಯನ್ನು ಈ ಆ್ಯಪ್​ ಒದಗಿಸುತ್ತದೆ.

  • Loading...

  • ಎಷ್ಟು ಅವಧಿಯವರೆಗೆ ವಾಹನ ನಿಲುಗಡೆ ಮಾಡಬಹುದು ? ಪಾರ್ಕಿಂಗ್​ಗೆ ತಗಲುವ ಶುಲ್ಕವೆಷ್ಟು? ಎಂಬ ಮಾಹಿತಿ  ತಿಳಿಸುತ್ತದೆ

  • ಬೆಂಗಳೂರು ನಗರದಲ್ಲಿನ ವಾಹನ ದಟ್ಟನೆಯನ್ನು ಗಮನಹರಿಸಿ ಎಂಜಿ ರಸ್ತೆ, ಬ್ರಿಗೇಡ್​ ರಸ್ತೆ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಮಲ್ಯ ರಸ್ತೆ,  ಸೇರಿದಂತೆ 85 ರಸ್ತೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.


First published:March 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...