HOME » NEWS » Tech » BATTRE LAUNCHES INTERNET CONNECTED E SCOOTER IOT HG

BattRE ಕಂಪೆನಿಯಿಂದ ಇಂಟರ್​ನೆಟ್​ ಸೌಲಭ್ಯವಿರುವ ಇ-ಸ್ಕೂಟರ್​​!; ಕಡಿಮೆ ಬೆಲೆ ಅತ್ಯುತ್ತಮ ಫೀಚರ್​

BattRE: ವಿಶೇಷವೆಂದರೆ Gps:ie ಸ್ಕೂಟರ್​​​ ಇಂಟರ್​ನೆಟ್​​ ಸೌಲಭ್ಯವನ್ನು ಹೊಂದಿದ್ದು, ಅದಕ್ಕಾಗಿ ಸಿಮ್​ ಕಾರ್ಡ್​ ಕೂಡ ಬಳಸಬಹುದಾಗಿದೆ. ಮಾತ್ರವಲ್ಲದೆ, ಮೊಬೈಲ್​ ಆ್ಯಪ್​ ಮೂಲಕವೇ ಸ್ಕೂಟರ್​ ಸ್ಟಾರ್ಟ್​ ಮತ್ತು ಆಫ್​​​ ಮಾಡಬಹುದಾಗಿದೆ. ಜೊತೆಗೆ ಲೈವ್​ ಲೊಕೇಶನ್​ ಟ್ರಾಕಿಂಗ್​​ಗಾಗಿ ಜಿಪಿಎಸ್​​​ ಅಳವಡಿಸಲಾಗಿದೆ. ರೈಡ್​​ ಬಿಹೇವಿಯರ್​​​ ಫೀಚರ್​ ಅನ್ನು ಇದರಲ್ಲಿ ನೀಡಲಾಗಿದೆ.

news18-kannada
Updated:May 23, 2020, 10:20 PM IST
BattRE ಕಂಪೆನಿಯಿಂದ ಇಂಟರ್​ನೆಟ್​ ಸೌಲಭ್ಯವಿರುವ ಇ-ಸ್ಕೂಟರ್​​!; ಕಡಿಮೆ ಬೆಲೆ ಅತ್ಯುತ್ತಮ ಫೀಚರ್​
Gps:ie ಸ್ಕೂಟರ್
  • Share this:
ಭಾರತ ಸರ್ಕಾರ ಎಲೆಕ್ಟ್ರಿಕ್​​ ವಾಹನಗಳ ಉತ್ಪಾದನೆಯತ್ತ ಹೆಚ್ಚು ಗಮನಹರಿಸುತ್ತಿದೆ. ಈ ನಿಟ್ಟಿನಲ್ಲಿ ಅನೇಕ ಕಂಪೆನಿ ಎಲೆಕ್ಟ್ರಿಕ್​ ವಾಹನಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಇನ್ನು ಕೆಲವು ಕಂಪೆನಿ ಎಲೆಕ್ಟ್ರಿಕ್​ ಕಾರು, ಬೈಕ್​, ಸ್ಕೂಟರ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಅದರಂತೆ  BattRE ಕಂಪೆನಿ ನೂತನ ಎಲೆಕ್ಟ್ರಿಕ್​ ಸ್ಕೂಟರ್​ ಅನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವಿಶೇಷವೆಂದರೆ Gps:ie ಸ್ಕೂಟರ್​​​ ಇಂಟರ್​ನೆಟ್​​ ಸೌಲಭ್ಯವನ್ನು ಹೊಂದಿದ್ದು, ಅದಕ್ಕಾಗಿ ಸಿಮ್​ ಕಾರ್ಡ್​ ಕೂಡ ಬಳಸಬಹುದಾಗಿದೆ. ಮಾತ್ರವಲ್ಲದೆ, ಮೊಬೈಲ್​ ಆ್ಯಪ್​ ಮೂಲಕವೇ ಸ್ಕೂಟರ್​ ಸ್ಟಾರ್ಟ್​ ಮತ್ತು ಆಫ್​​​ ಮಾಡಬಹುದಾಗಿದೆ. ಜೊತೆಗೆ ಲೈವ್​ ಲೊಕೇಶನ್​ ಟ್ರಾಕಿಂಗ್​​ಗಾಗಿ ಜಿಪಿಎಸ್​​​ ಅಳವಡಿಸಲಾಗಿದೆ. ರೈಡ್​​ ಬಿಹೇವಿಯರ್​​​ ಫೀಚರ್​ ಅನ್ನು ಇದರಲ್ಲಿ ನೀಡಲಾಗಿದೆ.

Gps:ie ಸ್ಕೂಟರ್​


ರಿಮೋಟ್​​ ಕಂಟ್ರೋಲ್​​, ಪಾರ್ಕಿಂಗ್​​​, ಕ್ರಾಶ್​​​ ಇಂಡಿಕೇಟರ್​ ಮುಂತಾದ ಹೊಸ ಫೀಚರ್​ಗಳನ್ನು ಇದರಲ್ಲಿ ನೀಡಿದೆ. ಜೊತೆಗೆ ಸ್ಕೂಟರ್​ ಮೈಲೇಜ್​​, ಚಾರ್ಜಿಂಗ್​​ ಸೇರಿದಂತೆ ಎಲ್ಲಾ ಮಾಹಿತಿಗಳು ಮೊಬೈಲ್​​​ ಆ್ಯಪ್​​ ಮೂಲಕ ಪಡೆದುಕೊಳ್ಳಬಹುದಾಗಿದೆ.

Gps:ie ಸ್ಕೂಟರ್​ಗೆ  ಹಬ್​ ಮೋಟಾರ್​ ಇಂಜಿನ್​ ಬಳಸಲಾಗಿದೆ. ಒಂದು ಬಾರಿ ಚಾರ್ಜ್​ ಮಾಡಿದರೆ 65 ಕಿ.ಮೀ ಮೈಲೇಜ್​ ನೀಡಲಿದೆ. ಇನ್ನು Gps:ie ಸ್ಕೂಟರ್​ ಬೆಲೆ 79,999 ರೂಪಾಯಿ (ಎಕ್ಸ್​ ಶೋ ರೂಂ) ಇರಲಿದೆ ಎಂದು ಅಂದಾಜಿಸಲಾಗಿದೆ.

BSNL​: ಈದ್ ಮಿಲಾದ್​​ ಸ್ಪೆಷಲ್​​​ ಆಫರ್​; 30GB ಉಚಿತ!

 

 
First published: May 23, 2020, 10:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories