ಕೊರಿಯ ಮೂಲದ ಪ್ಲೇಯರ್ಸ್ ಅನೌನ್ಸ್ ಬ್ಯಾಟಲ್ ಗ್ರೌಂಡ್ಸ್ (PUBG) ಬ್ಯಾನ್ ಆದ ಹಿನ್ನಲೆಯಲ್ಲಿ ಇದೀಗ ಆದಕ್ಕೆ ಪರ್ಯಾಯವಾಗಿ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆ್ಯಪ್ ಅನ್ನು ಸಿದ್ಧಪಡಿಸಲಾಗಿದೆ, ಆದರೆ ಈ ನೂತನ ಗೇಮ್ ಅನ್ನು ಪರಿಚಯಿಸಲು ಕಂಪನಿ ತುದಿಗಾಲಿನಲ್ಲಿ ನಿಂತಿದೆಯಾದರು ನಿಗದಿತ ದಿನಾಂಕವನ್ನು ಸ್ಪಷ್ಟಪಡಿಸಿಲ್ಲ. ಆದರೀಗ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆಯ ದಿನಾಂಕದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಮುಂದಿನ ತಿಂಗಳ ಮೂರನೇ ವಾರದಂದು ಬಳಕೆಗೆ ಸಿಗಲಿದೆ ಎಂದು ಹೇಳಲಾಗುತ್ತದೆ. ಪಬ್ಜಿ ಗೇಮ್ಗೆ ಪರ್ಯಾಯವಾಗಿ ಸಿದ್ಧಪಡಿಸಿದ ಈ ಗೇಮ್ ಜೂನ್ 18ರಂದು ಭಾರತೀಯರಿಗೆ ಸಿಗಲಿದೆ ಎಂದು ಹರಿದಾಡುತ್ತಿದೆ. ಅಂದಹಾಗೆಯೇ ಈಗಾಗಲೇ ಫ್ರೀ- ರಿಜಿಸ್ಟ್ರೇಶನ್ ನಡೆಸುತ್ತಿದ್ದು, ಗೂಗಲ್ ಪ್ಲೇ ಸ್ಟೋರ್ ಮೂಲಕ ನೋಂದಣೆ ಮಾಡಿಕೊಳ್ಳುವ ಅವಕಾಶ ನೀಡಿದೆ.
ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ತಂಡ ಸೊಲೊಮಿಡ್ ತರಬೇತುದಾರ ಮತ್ತು ಕಂಟೆಂಟ್ ಕ್ರಿಯೇಟರ್ ಅಭಿಜಿತ್ ಅಂಧರೆ ಅಕಾ ಘಟಕ್ ಪ್ರಕಾರ, ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಜೂನ್ ಮೂರನೇ ವಾರ ನಡೆಯಲಿದೆ. ವದಂತಿಯಂತೆ ಜೂನ್ 18ರಂದು ಪರಿಚಯಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
BATTLEGROUNDS MOBILE INDIA
Third week of June ❤️💪🏻✌🏻
— Abhijeet Andhare (@GHATAK_official) May 25, 2021
ಆದರೀಗ ಜೂನ್ 18 ರಂದು ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಭಾರತೀಯ ಗೇಮಿಂಗ್ ಪ್ರಿಯರಿಗೆ ಬಳಕೆಗೆ ಸಿಗಲಿದೆಯಾ ಎಂದು ಕಾದುನೋಡಬೇಕಿದೆ. ಪಬ್ಜಿ ಗೇಮ್ನಿಂದಾಗಿ ಭಾರತದಲ್ಲಿ ಸಾಕಷ್ಟು ಜನರು ಹಣ, ಜೀವ ಕಳೆದುಕೊಂಡಿದ್ದರು. ಮತ್ತು ಯುವಕರು ಹೆಚ್ಚು ಹೊತ್ತು ಅದರಲ್ಲೇ ತಲ್ಲೀನರಾಗಿದ್ದರು. ಮಾತ್ರವಲ್ಲದೆ ಚೀನಾ ದೇಶದೊಂದಿಗೆ ಪಬ್ಜಿ ಕಂಪನಿ ನಿಕಟ ಸಂಪರ್ಕದಲ್ಲಿತ್ತು. ಈ ಕಾರಣದಿಂದಾಗಿ ಭಾರತದಲ್ಲಿ ಪಬ್ಜಿ ಬ್ಯಾನ್ ಮಾಡಬೇಕಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ