Battlegrounds Mobile India: ಅಪ್ಡೇಟ್​​​ ಮಾಡಿದವರಿಗೆ ಸಿಗಲಿದೆ ಹೊಸ ಫೀಚರ್ಸ್​​!

ಬ್ಯಾಟಲ್‍ಗ್ರೌಂಡ್ಸ್ ಮೊಬೈಲ್ ಇಂಡಿಯಾದ ಜುಲೈ ಅಪ್‍ಡೇಟ್‍ನಲ್ಲಿ , ಆಟದಲ್ಲಿ ಎಮ್‍ಜಿ3 ಎಂಬ ಹೆಸರಿನ ಹೊಸ ಲೈಟ್ ಮೆಶಿನ್ ಗನ್ ಸೇರ್ಪಡೆ ಆಗಿದೆ. ಸಪ್ಲೈ ಕ್ರೇಟ್‍ನಲ್ಲಿದ್ದ ಎಮ್249 ಆಯುಧದ ಬದಲಿಗೆ ಎಮ್‍ಜಿ3ಯನ್ನು ಪರಿಚಯಿಸಲಾಗಿದ್ದು, ಅದು ವಿಶೇಷವಾಗಿ ಕೇವಲ ಸಪ್ಲೈ ಕ್ರೇಟ್‍ಗಳಲ್ಲಿ ಮಾತ್ರ ಲಭ್ಯ.

Battlegrounds mobile india

Battlegrounds mobile india

  • Share this:

ಬ್ಯಾಟಲ್‍ಗ್ರೌಂಡ್ಸ್ ಮೊಬೈಲ್ ಇಂಡಿಯಾ, ವಿಡಿಯೋ ಒಂದರ ಮೂಲಕ ತನ್ನ ಅಧಿಕೃತ ಯೂಟ್ಯೂಬ್ ಚಾನಲ್‍ನಲ್ಲಿ , ಗೇಮ್‍ಗಾಗಿ ಜುಲೈ ಪ್ಯಾಚ್‌ ನೋಟ್ಸ್ ಘೋಷಣೆ ಮಾಡಿದೆ. ಈ ಹೊಸ ಅಪ್‍ಡೆಟ್, ಹಲವಾರು ಹೊಸ ಫೀಚರ್‌ಗಳು, ಶಸ್ತ್ರಾಸ್ತ್ರಗಳು ಮತ್ತು ಬದಲಾವಣೆಗಳು ಹಾಗೂ ಗೇಮ್‍ನ ಸೀಸನ್ ಅಪ್‍ಡೇಟ್‍ಗಳನ್ನು ಹೊತ್ತು ತಂದಿದೆ. ಜುಲೈ ಆಪ್‍ಡೇಟ್‍ನಲ್ಲಿ ಕಂಡು ಬರಲಿರುವ ಬ್ಯಾಟಲ್‍ಗ್ರೌಂಡ್ಸ್ ಮೊಬೈಲ್ ಇಂಡಿಯಾದ ಬದಲಾವಣೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ಇದೀಗ ಆಟದಲ್ಲಿ ಹೊಸ ಆಯುಧ ಎಂಜಿ3 ಲಭ್ಯವಿದೆ.


ಬ್ಯಾಟಲ್‍ಗ್ರೌಂಡ್ಸ್ ಮೊಬೈಲ್ ಇಂಡಿಯಾದ ಜುಲೈ ಅಪ್‍ಡೇಟ್‍ನಲ್ಲಿ , ಆಟದಲ್ಲಿ ಎಮ್‍ಜಿ3 ಎಂಬ ಹೆಸರಿನ ಹೊಸ ಲೈಟ್ ಮೆಶಿನ್ ಗನ್ ಸೇರ್ಪಡೆ ಆಗಿದೆ. ಸಪ್ಲೈ ಕ್ರೇಟ್‍ನಲ್ಲಿದ್ದ ಎಮ್249 ಆಯುಧದ ಬದಲಿಗೆ ಎಮ್‍ಜಿ3ಯನ್ನು ಪರಿಚಯಿಸಲಾಗಿದ್ದು, ಅದು ವಿಶೇಷವಾಗಿ ಕೇವಲ ಸಪ್ಲೈ ಕ್ರೇಟ್‍ಗಳಲ್ಲಿ ಮಾತ್ರ ಲಭ್ಯ.


ಹೊಸ ಲೈಟ್ ಮೆಶಿನ್ ಗನ್, ಎಕೆಜಿ ಮತ್ತು ಎಂ249 ನಂತೆ 7.62ಎಮ್‍ಎಮ್ ಅಮ್ಮೋವನ್ನು ಮಾತ್ರ ಬಳಸುತ್ತದೆ. ಲೈಟ್ ಮೆಶಿನ್ ಗನ್ ಮುಖ್ಯ ವಿಶೇಷತೆ ಏನೆಂದರೆ, ಅದು ನಿರಂತರ ಫೈರ್ ಪವರ್ ಮತ್ತು 75 ಅಮ್ಮೋ ಮ್ಯಾಗಜೀನ್ ಹೊಂದಿದೆ.


ಎಮ್249 ಲೈಟ್ ಮೆಶಿನ್ ಗನ್ ಫೀಲ್ಡ್ ಡ್ರಾಪ್‍ನಲ್ಲಿ ಲಭ್ಯ


ಪ್ಯಾಚ್ ನೋಟ್ ವಿಡಿಯೋ ಪ್ರಕಾರ, ಬ್ಯಾಟಲ್‍ಗ್ರೌಂಡ್ಸ್ ಮೊಬೈಲ್ ಇಂಡಿಯಾದ ಎಲ್ಲಾ ಕ್ಲಾಸಿಕ್ ನಕಾಶೆಗಳಲ್ಲಿ ಲೈಟ್ ಮೆಶಿನ್ ಗನ್ ಒಂದು ಫೀಲ್ಡ್ ಡ್ರಾಪ್ ಆಗಿ ಲಭ್ಯ. ಲೈಟ್ ಮೆಶಿನ್ ಗನ್ನನ್ನು ಏರ್‌ಡ್ರಾಪ್‌ನಿಂದ ತೆಗೆಯಲಾಗಿದೆ.


ತ್ರೋ ಹೀಲಿಂಗ್ ಕನ್ಸ್ಯೂಮೇಬಲ್ ಸಾಮರ್ಥ್ಯ


ಜುಲೈ ಅಪ್‍ಡೇಟ್, ಗೇಮ್‍ನಲ್ಲಿ ತ್ರೋ ಹೀಲಿಂಗ್ ಕನ್ಸ್ಯೂಮೇಬಲ್‍ಗಳ ಸಾಮರ್ಥ್ಯದ ಲಭ್ಯತೆಯ ಬಗ್ಗೆ ಕೂಡ ತಿಳಿಸಿದೆ. ಕನ್ಸ್ಯೂಮೇಬಲ್‍ಗಳನ್ನು ಗ್ರಾನೈಡ್‍ನಂತೆ ಎಸೆದು ಅದಕ್ಕಾಗಿ ಪಥವನ್ನು ರಚಿಸಬಹುದು. ಆದರೆ ಅವುಗಳನ್ನು ತಪ್ಪಾಗಿ ಎಸೆದರೆ, ಅವು ದೂರ ಪುಟಿಯುವ ಸಾಧ್ಯತೆ ಇದೆ ಎಂದು ಪ್ಯಾಚ್ ನೋಟ್ ಎಚ್ಚರಿಕೆ ನೀಡಿದೆ.


ಹೊಸ ರ‍್ಯಾಂಕಿಂಗ್ ಸೀಸನ್


ಜುಲೈ ಅಪ್‍ಡೇಟ್‍ನಲ್ಲಿ, ರ‍್ಯಾಂಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲಾಗಿದೆ. ಏಸ್ ಮತ್ತು ಕಾಂಕ್ವರ್ ನಡುವೆ ಹೊಸ ಶ್ರೇಣಿಯನ್ನು ಪರಿಚಯಿಸಲಾಗಿದ್ದು, ಏಸ್ ಮಾಸ್ಟರ್ ಮತ್ತು ಏಸ್ ಡಾಮಿನೇಟರ್ ಎಂದು ಹೆಸರಿಸಲಾಗಿದೆ. ರ‍್ಯಾಂಕಿಂಗ್ ಸೀಸನ್‍ಗೆ ಚ್ಯಾಲೆಂಜ್ ಪಾಯಿಂಟ್ ವ್ಯವಸ್ಥೆಯನ್ನು ಸೇರಿಸಲಾಗುವುದು. ಆಟಗಾರರು ತಂಡದ ಸದಸ್ಯರನ್ನು ನಿರ್ಲಕ್ಷಿಸದೆ, ಅರ್ಧ ದಾರಿಯಲ್ಲಿ ಬಿಡದೆ ಅಥವಾ ಸ್ವಂತ ತಂಡದ ಸದಸ್ಯರ ಮೇಲೆಯೇ ಆಕ್ರಮಣ ಮಾಡದೆ ಆಟಗಳನ್ನು ಪೂರ್ಣಗೊಳಿಸಿದರೆ , ಚಾಲೆಂಜ್ ಪಾಯಿಂಟ್‍ಗಳನ್ನು ಗಳಿಸಬಹುದು. ಒಂದು ನಿರ್ದಿಷ್ಟ ಹಂತದ ನಂತರ, ಚಾಲೆಂಜ್ ಪಾಯಿಂಟ್‍ಗಳು, ಆಟಗಾರರು ಆರಂಭದಲ್ಲಿಯೇ ಆಟದಿಂದ ಹೊರ ಹಾಕಲ್ಪಟ್ಟಿದ್ದರೂ, ರ‍್ಯಾಂಕಿಂಗ್ ಪಾಯಿಂಟ್‍ಗಳ ಕಡಿತವನ್ನು ತಪ್ಪಿಸುತ್ತವೆ.


ಮಿಶನ್ ಇಗ್ನೀಶನ್ ಮೋಡ್


ಎರಾಂಗಲ್ ಮ್ಯಾಪ್‍ನಲ್ಲಿ ಇಗ್ನೀಶನ್ ಮೋಡ್ ಲಭ್ಯ ಇರುತ್ತದೆ.ಈ ಮೋಡ್ ನಕಾಶೆಯ ಹಲವಾರು ಭಾಗಗಳನ್ನು ಹೈ ಟೆಕ್ ಸ್ಥಳಗಳನ್ನಾಗಿ ಬದಲಾಯಿಸುತ್ತದೆ.


ಬದಲಾವಣೆಗೊಂಡ ಸ್ಥಳಗಳು ಇಂತಿವೆ:


ಪೊಚಿಂಕಿ - ಟ್ರಾನ್ಸಿಟ್ ಸೆಂಟರ್
ಜಾರ್ಗೋಪಾಲ್ – ಜಾರ್ಗೋಪಾಲ್ – ಜಾರ್ಗೋಪಾಲ್ ಬಂದರು
ಶಾಲೆ - ಟೆಕ್ ಸೆಂಟರ್
ಮಿಲಿಟರಿ ಬೇಸ್ -ಸೆಕ್ಯುರಿಟಿ ಸೆಂಟರ್
ಯಸ್ನಾಯ ಪೊಲ್ಯಾನ- ಲಾಜಿಸ್ಟಿಕ್ಸ್ ಏಜೆನ್ಸಿ
ಮಿಲ್ಟ ಪವರ್ – ಎನರ್ಜಿ ಸೆಂಟರ್


ಗೇಮ್ ಮೆಶಿನ್‍ಗಳಲ್ಲಿ ಬದಲಾವಣೆ


ಜುಲೈ ಅಪ್‍ಡೇಟ್ಸ್‌ನಲ್ಲಿ ಗೇಮ್ ಮೆಶಿನ್‍ಗಳಲ್ಲಿ ಕೆಲವೊಂದು ಉಪಯುಕ್ತ ಬದಲಾವಣೆಗಳನ್ನು ತರಲಾಗಿದೆ. ಹೆಚ್ಚು ಸಾಧನಗಳಿಗೆ 90ಹೆಚ್‍ಝೆಡ್ ಬೆಂಬಲ, ಗೈರೋಸ್ಕೋಪ್ ಸೆಟ್ಟಿಂಗ್‍ಗಳು, ಫೇವರಿಟ್ ಅಟ್ಯಾಚ್‌ಮೆಂಟ್‌ಗಳಿಗೆ ಆಟೋ ಪಿಕ್‍ಅಪ್, ಮೂರನೇ ವ್ಯಕ್ತಿ ವೀಕ್ಷಣೆಯ ಹೊಂದಾಣಿಕೆ ಇತ್ಯಾದಿಗಳು ಅದರಲ್ಲಿ ಕೆಲವು.


ಕಂಚಿನ ಪ್ರತಿಮೆ


ಆಟಗಾರರು ಆಟವನ್ನು ಗೆದ್ದ ಬಳಿಕ ತಮ್ಮ ಕಂಚಿನ ಪ್ರತಿಮೆಯನ್ನು ಸೇರಿಸಲು ಅವಕಾಶ ಇರುತ್ತದೆ.


ಎನ್‍ಪಿಸಿ ಮಿನಿ ಟಿವಿ ಕಿರಣ


ಲಾಬಿಯಲ್ಲಿನ ಘೋಷಣೆಗಳು ಮತ್ತು ಸಂದೇಶಗಳ ಕುರಿತು ಆಟಗಾರರಿಗೆ ಈ ಕಿರಣವು ಎಚ್ಚರಿಕೆ ನೀಡುತ್ತದೆ.

First published: